Asianet Suvarna News Asianet Suvarna News

ಅಪರ್ಣಾ ಬಾಲಮುರಳಿಗೆ ಕಾಟ ಕೊಟ್ಟ ವಿದ್ಯಾರ್ಥಿ ಸಸ್ಪೆಂಡ್‌, ನಟಿ ಕ್ಷಮೆ ಕೇಳಿದ ಕೇರಳದ ಕಾಲೇಜ್‌ ಯೂನಿಯನ್‌

ತಮಿಳಿನ ರಾಷ್ಟ್ರ ಪ್ರಶಸ್ತಿ ವಿಜೇತ ನಟಿ ಅಪರ್ಣಾ ಬಾಲಮುರಳಿ ಬಳಿ ಕೇರಳದ ಕಾಲೇಜ್ ಯೂನಿಯನ್ ಕ್ಷಮೆ ಕೇಳಿದೆ. ಇತ್ತೀಚಿಗೆ ನಡೆದ ಇವೆಂಟ್‌ನಲ್ಲಿ ಕೇರಳದ ಕಾಲೇಜೊಂದರ ವಿದ್ಯಾರ್ಥಿ ಅಪರ್ಣಾ ಜೊತೆ ನಡೆದುಕೊಂಡ ರೀತಿಗೆ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವಿರೋಧ ವ್ಯಕ್ತವಾಗಿತ್ತು. 

Student who missbehaved with actress Aparna suspended
Author
First Published Jan 21, 2023, 2:58 PM IST

ನಿನ್ನೆ ಸೋಷಿಯಲ್‌ ಮೀಡಿಯಾದಲ್ಲಿ ಕೇರಳದ ಕಾಲೇಜೊಂದರಲ್ಲಿ ನಡೆದ ಸಿನಿಮಾ ಈವೆಂಟ್‌ ಕುರಿತಾಗಿ ಬಿರುಸಿನ ಚರ್ಚೆ ನಡೆದಿತ್ತು. ಅದು ಹನ್‌ಕಮ್‌ ಅನ್ನೋ ಸಿನಿಮಾ ಬಗೆಗಿನ ಪ್ರಚಾರ ಸಭೆ. ಇದರಲ್ಲಿ ರಾಷ್ಟ್ರಪ್ರಶಸ್ತಿ ಪುರಸ್ಕೃತ ನಟಿ ಅಪರ್ಣಾ ಬಾಲಮುರಳಿ ಭಾಗವಹಿಸಿದ್ದರು. ಅವರ ಜೊತೆಗೆ ಇಡೀ ಸಿನಿಮಾ ತಂಡವಿತ್ತು. ಕಾಲೇಜ್ ಹುಡುಗ್ರು ಅಂದಮೇಲೆ ಜೋಶ್, ಅತ್ಯುತ್ಸಾಹ ಎಲ್ಲ ಇದ್ದಿದ್ದೇ. ಆದರೆ ಅದು ಅತಿರೇಕಕ್ಕೆ ಹೋದರೆ ಏನಾಗುತ್ತೆ ಅನ್ನೋದಕ್ಕೆ ನಿನ್ನೆಯ ಘಟನೆ ಸಾಕ್ಷಿ ಆಯ್ತು. ಅಪರ್ಣಾ ಅವರು ಈ ಸಿನಿಮಾದ ಈವೆಂಟ್‌ನಲ್ಲಿ ವೇದಿಕೆ ಮೇಲೆ ಕೂತಿದ್ದರು. ಆ ಹೊತ್ತಿಗೆ ಸಭಿಕರ ಸಾಲಲ್ಲಿ ನಿಂತಿದ್ದ ವಿದ್ಯಾರ್ಥಿಯೊಬ್ಬ ಏಕಾಏಕಿಸ ಸ್ಟೇಜ್‌ ಮೇಲೇರಿ ಬಂದ. ನಟಿ ನೋಡು ನೋಡುತ್ತಿದ್ದಂತೆ ಆಕೆಗೆ ಹೂವು ನೀಡಿದ. ಅಪರ್ಣಾ ನಗುತ್ತಲೇ ಹೂವು ಪಡೆದುಕೊಂಡರು. ಅಷ್ಟೇ ಆಗಿದ್ದರೆ ಅದೊಂದು ಕ್ಯಾಶ್ಯುವಲ್‌ ಮ್ಯಾನರ್ ಅನ್ನಬಹುದು.

ಆ ಹುಡುಗ ಅಪರ್ಣಾ ಅವರನ್ನು ಕೈ ಹಿಡಿದು ಎದ್ದು ನಿಲ್ಲಿಸಿದ. ಕಕ್ಕಾಬಿಕ್ಕಿಯಾಗಿ ನಟಿ ನಿಲ್ಲುತ್ತಿದ್ದಂತೆ ಆಕೆಯ ಹೆಗಲ ಮೇಲೆ ಕೈ ಹಾಕಿದ್ದಾನೆ. ಈ ಫೋಸ್‌ನಲ್ಲಿ ಫೋಟೋ ತೆಗೆಸಿಕೊಳ್ಳಲು ಮುಂದಾಗಿದ್ದಾನೆ. ಅದಕ್ಕೆ ಅಪರ್ಣಾ ಹಿಂದೇಟು ಹಾಕಿದ್ದಾರೆ. ನಯವಾಗಿಯೇ ಆತನಿಂದ ಕಳಚಿಕೊಂಡು ಮತ್ತೆ ತಮ್ಮ ಸೀಟಿನಲ್ಲಿ ಆಸೀನರಾಗಿದ್ದಾರೆ. ಹೆಣ್ಣುಮಗಳ ಮೇಲೆ ಹೀಗೆ ಕನಿಷ್ಠ ಸೌಜನ್ಯವೂ ಇಲ್ಲದೇ ವರ್ತಿಸಿದ್ದನ್ನು ಅಲ್ಲಿ ಯಾರೂ ವಿರೋಧಿಸಲಿಲ್ಲ. ಬದಲಿಗೆ ಆ ಹುಡುಗನ ನಡೆಯನ್ನು ಪ್ರೋತ್ಸಾಹಿಸುವಂತೆ ಅಲ್ಲಿ ನೆರೆದಿದ್ದವರ ಪ್ರತಿಕ್ರಿಯೆ ಇತ್ತು. ಮತ್ತೆ ಆ ವಿದ್ಯಾರ್ಥಿ ಕ್ಷಮೆ ಕೇಳಲು ಬಂದು ಹ್ಯಾಂಡ್‌ಶೇಕ್ ಕೊಡಲು ಬಂದಾಗ ಅಪರ್ಣಾ ಅವರು ಹಿಂದೇಟು ಹಾಕಿದ್ದಾರೆ. ಆದಾದರೆ ಈ ವೀಡಿಯೋ ಮರುಕ್ಷಣದಲ್ಲಿ ಸೋಷಿಯಲ್‌ ಮೀಡಿಯಾಕ್ಕೆ ಅಪ್‌ಲೋಡ್‌ ಆಗಿದೆ. ಅಲ್ಲಿ ನೆಟಿಜನ್ಸ್ ವಿದ್ಯಾರ್ಥಿಯ ಈ ವರ್ತನೆಯನ್ನು ಖಂಡಿಸಿದ್ದಾರೆ. ಆ ಹುಡುಗನಿಗೆ, ಆತನನ್ನು ಬೆಂಬಲಿಸಿದ ಕಾಲೇಜ್‌ ಹುಡುಗರನ್ನು ಹಿಗ್ಗಾಮುಗ್ಗ ಝಾಡಿಸಿದ್ದಾರೆ. ಕೊನೆಗೆ ಆತನನ್ನು ಸಸ್ಪೆಂಡ್ ಮಾಡಲಾಗಿದೆ.

29 ವರ್ಷದ ಅಂಕಲ್‌ನಿಂದ ಲೈಂಗಿಕ ಕಿರುಕುಳಕ್ಕೆ ಒಳಗಾದ ನಟಿ ಕುಬ್ರಾ ಸೇಠ್; ಇಟ್ಟಿಗೆ ಎಸೆದು ಹಲ್ಲೆ

ಇಲ್ಲಿ ನಟಿ ನಡೆದುಕೊಂಡ ರೀತಿಯನ್ನು ಜನ ಮೆಚ್ಚಿಕೊಂಡಿದ್ದಾರೆ. 'ಆತನಿಗೆ ಸರಿಯಾಗಿ ಬುದ್ಧಿ ಕಲಿಸಿದ್ದೀರಿ. ಅವನ ಸ್ಥಾನ ಏನು ಎಂದು ತೋರಿಸಿಕೊಟ್ಟಿದ್ದೀರಿ. ಸೆಲೆಬ್ರಿಟಿ ಎಂದಮಾತ್ರಕ್ಕೆ ಹೇಗೆ ಬೇಕೋ ಹಾಗೆ ನಡೆದುಕೊಳ್ಳಲಾಗೋದಿಲ್ಲ' ಎಂದು ಕಾಮೆಂಟ್ ಮಾಡಿದ್ದಾರೆ. ಈ ಬಗ್ಗೆ ಬಹಳಷ್ಟು ಚರ್ಚೆ ನಡೆದಿದೆ. ಕೊನೆಗೂ ಈ ಚರ್ಚೆ ವೈರಲ್‌ ಆಗುತ್ತಿರುವುದನ್ನು ಗಮನಸಿದ ಆ ಕಾಲೇಜ್ ಯುನಿಯನ್ ಸೋಶಿಯಲ್ ಮೀಡಿಯಾ ಪೋಸ್ಟ್ ಹಾಕಿದೆ. 'ನಟಿ ಅಪರ್ಣಾ ಅವರ ಮನಸ್ಸಿಗೆ ಬೇಸರವನ್ನುಂಟು ಮಾಡಿದ್ದಕ್ಕೆ, ಏನು ನಡೆಯಬಾರದಿತ್ತೋ ಅದು ನಡೆದಿರುವುದಕ್ಕೆ ಕ್ಷಮೆ ಕೇಳುತ್ತೇವೆ' ಎಂದು ಕಾಲೇಜ್ ಯುನಿಯನ್ ಹೇಳಿದೆ. ಈ ಇವೆಂಟ್‌ನಲ್ಲಿ ಅಪರ್ಣಾ ಜೊತೆ ವಿನೀತ್ ಶ್ರೀನಿವಾಸನ್ ಕೂಡ ಇದ್ದರು. ಅವರು ಆ ಕ್ಷಣಕ್ಕೆ ಏನೂ ಮಾಡಲಾಗದೆ ಕುಳಿತಿದ್ದರು. ಸಹೀದ್ ಅರಾಫತ್ ನಿರ್ದೇಶನದ ಈ ಚಿತ್ರವು ಜನವರಿ 15ರಂದು ಅದ್ದೂರಿಯಾಗಿ ರಿಲೀಸ್ ಆಗಲಿದೆ. ಸೂರ್ಯ ನಟನೆಯ 'ಸೂರರೈ ಪೋಟ್ರು' ಚಿತ್ರದ ಬೊಮ್ಮಿ ಪಾತ್ರದಲ್ಲಿ ಅದ್ಭುತವಾಗಿ ನಟಿಸಿದ್ದ ಅಪರ್ಣಾ ಬಾಲಮುರಳಿ ಅವರಿಗೆ ಉತ್ತಮ ನಟಿ ಎಂದು ರಾಷ್ಟ್ರ ಪ್ರಶಸ್ತಿ ಸಿಕ್ಕಿತ್ತು.

ಅಪರ್ಣ ಈಗ ವಿಜಯ್ ಕಿರಗಂದೂರು ಅವರು ನಿರ್ಮಿಸುತ್ತಿರುವ 'ಧೂಮಂ' ಚಿತ್ರದಲ್ಲಿ ನಟಿಸುತ್ತಿದ್ದಾರೆ. ಫಹಾದ್ ಫಾಸಿಲ್ ಈ ಚಿತ್ರದ ನಾಯಕರಾಗಿದ್ದು, 'ಲೂಸಿಯಾ' ಪವನ್ ನಿರ್ದೇಶನ ಮಾಡುತ್ತಿದ್ದಾರೆ. ಈ ಕಾಂಬಿನೇಶನ್ ಭಾರೀ ಕುತೂಹಲ ಮೂಡಿಸಿದೆ. ಇದರ ಜೊತೆಗೆ ನಟ ನಟಿಯರು ಪಬ್ಲಿಕ್‌ ಫಿಗರ್ ಆಗಿರಬಹುದು. ಹಾಗಂತ ಅವರ ಜೊತೆ ಅತಿರೇಕದ ವರ್ತನೆ ಸಲ್ಲದು ಅನ್ನೋದು ಈ ಘಟನೆಯಿಂದ ಪ್ರೂವ್ ಆದಂತಾಗಿದೆ.

ಈ ಸಿನಿಮಾಗಾಗಿ ಎಲ್ಲಾ ಆಸ್ತಿ ಅಡ ಇಟ್ಟೆ, ಇದು ನನಗೆ ಪುನರ್ಜನ್ಮ...: ನಟಿ ಕಂಗನಾ ರಣಾವತ್

Follow Us:
Download App:
  • android
  • ios