ಸುಶಾಂತ್ ಸಿಂಗ್ ಸಾವಿನ ನಂತರ ಎನ್‌ಸಿಬಿ ಬಾಲಿವುಡ್ ಡ್ರಗ್ಸ್ ಮಾಫಿಯಾ ಬಗ್ಗೆ ತನಿಖೆ ಮಾಡುತ್ತಿದ್ದು, ಇದೀಗ ಪ್ರಕರಣಕ್ಕೆ ಸಂಬಂಧಿಸಿ ಪ್ರಮುಖ ವ್ಯಕ್ತಿಯನ್ನು ಬಂಧಿಸಲಾಗಿದೆ.

ಬಾಲಿವುಡ್‌ ಮತ್ತು ಇತರ ಟಾಪ್ ಸೆಲೆಬ್ರಿಟಗಳ ಜೊತೆ ನಿಕಟ ಸಂಪರ್ಕ ಇರುವ ವ್ಯಕ್ತಿಯನ್ನು ಎನ್‌ಸಿಬಿ ಬಂಧಿಸಿದೆ. ಪ್ರಾದೇಶಿಕ ನಿರ್ದೇಶಕ ಸಮೀರ್ ವಾಂಕೇಡ್ ವರ್ಸೋವಾದಿಂದ ರಾಹಿಲ್ ವಿಶ್ರಮ್ ಎಂಬಾತನನ್ನು ಬಂಧಿಸಿದ್ದಾರೆ.

ಈಗ ಮತ್ತೊಬ್ಬ ಸ್ಟಾರ್ ನಟನಿಗೆ ಡ್ರಗ್ಸ್ ಸಂಕಷ್ಟ..?

900 ಗ್ರಾಂ ಚಾರಸ್ ಎಂಬ ಮಾದಕವಸ್ತುವನ್ನು ವಶಪಡಿಸಲಾಗಿದೆ. ಆತನಲ್ಲಿದ್ದ 4.5 ಲಕ್ಷ ರೂಪಾಯಿಯನ್ನು ಎನ್‌ಸಿಬಿ ಸೀಜ್ ಮಾಡಿದೆ. ಸುಶಾಂತ್‌ಗೆ ಡ್ರಗ್ಸ್ ಸಪ್ಲೈ ಮಾಡುತ್ತಿದ್ದ ಅನುಜ್ ಕೇಶ್ವಾನಿ ವಿಚಾರಣೆಯ ಸಂದರ್ಭ ರಾಹಿಲ್ ವಿಶ್ರಮ್ ಹೆಸರು ಎನ್‌ಸಿಬಿಗೆ ತಿಳಿದುಬಂದಿದೆ. ಬಾಲಿವುಡ್ ನಟ ಸುಶಾಂತ್ ಜೂ.14ರಂದು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾದ್ದರು.

ಡ್ರಗ್ಸ್ ವಿಚಾರದಲ್ಲಿ ರಾಕುಲ್ ಹೆಸರು: PCI ಸೇರಿ ಪ್ರಮುಖ ಮಾಧ್ಯಮ ಸಂಸ್ಥೆಗಳಿಗೆ ನೋಟಿಸ್

ರಾಹಿಲ್ ಬಾಲಿವುಡ್ ಸೆಲೆಬ್ರಟಿಗಳಿಗೆ ಡ್ರಗ್ಸ್ ಸಪ್ಲೈ ಮಾಡುತ್ತಿದ್ದೆ ಎಂದು ಒಪ್ಪಿಕೊಂಡಿದ್ದಾನೆ. ಹಾಗೆಯೇ ಆತನ ಮೇಲಿರುವ ವ್ಯಕ್ತಿಯ ಹೆಸರನ್ನು ಹೇಳಿದ್ದಾನೆ ಎನ್ನಲಾಗಿದೆ. ಇದೀಗ ಇವರಿಂದ ಡ್ರಗ್ಸ್ ಖರೀದಿಸುತ್ತಿದ್ದ ಸೆಲೆಬ್ರಿಗಳ ಹೆಸರನ್ನು ಎನ್‌ಸಿಬಿ ಲಿಸ್ಟ್ ಮಾಡಿದೆ.