Asianet Suvarna News Asianet Suvarna News

ಯಶಸ್ಸಿನ ಗುಟ್ಟು ತಿಳಿಸಿದ ಖ್ಯಾತ ನಿರ್ದೇಶಕ SS Rajamouli

ಯಶಸ್ವಿಯ ನಿರ್ದೇಶಕ ಎಸ್​.ಎಸ್​.ರಾಜಮೌಳಿ ಅವರು ತಮ್ಮ ಚಿತ್ರಗಳನ್ನು ತಾವು ಹೇಗೆ ಜಡ್ಜ್​ ಮಾಡುತ್ತೇವೆ, ಅದು ಹಿಟ್​ ಆಗಲು ಕಾರಣವೇನು ಎಂಬ ಬಗ್ಗೆ ಮಾತನಾಡಿದ್ದಾರೆ. ಅವರು ಹೇಳಿದ್ದೇನು?
 

SS Rajamouli reveals how judges his films
Author
First Published Feb 18, 2023, 4:04 PM IST | Last Updated Feb 18, 2023, 4:04 PM IST

ಎಸ್.ಎಸ್ ರಾಜಮೌಳಿ (SS Rajamouli) ಅವರ ಹೆಸರು ಯಾರಿಗೆ ತಾನೆ ಗೊತ್ತಿಲ್ಲ? ಕರ್ನಾಟಕದ ರಾಯಚೂರಿನಲ್ಲಿ ಹುಟ್ಟಿರುವ ಇವರು ತೆಲುಗು ಇಂಡಸ್ಟ್ರಿಯ ಖ್ಯಾತ ನಿರ್ದೇಶಕರಾಗಿ ಮಿಂಚುತ್ತಿದ್ದಾರೆ. ಇವರು ಕೊಟ್ಟಿರುವಷ್ಟು ಬ್ಲಾಕ್​ಬಸ್ಟರ್​ ಚಿತ್ರ ಬೇರೆ ನಿರ್ದೇಶಕರು. ಬಾಹುಬಲಿಯಿಂದ ತ್ರಿಬಲ್ ಆರ್ ತನಕ ಅವರ ಸಿನಿಮಾಗಳು (Cinema) ಹಿಟ್ ಆಗಿವೆ. ಇತ್ತೀಚೆಗೆ ಇವರು ಬಹಳ ಸುದ್ದಿಯಲ್ಲಿದ್ದುದು ಇವರ ಆರ್​ಆರ್​ಆರ್​ ಸಿನಿಮಾದಲ್ಲಿನ ನಾಟು ನಾಟು (Natu natu) ಹಾಡು ಗೋಲ್ಡನ್ ಗ್ಲೋಬ್ಸ್ ಅವಾರ್ಡ್ (Golden Globs Award) ಪಡೆದ ಕಾರಣದಿಂದ. ಇದರಿಂದ ರಾಜಮೌಳಿ ಅವರು ಜಗದ್ವಿಖ್ಯಾತಿ ಹೊಂದಿದರು. ಹಾಲಿವುಡ್‌ನಲ್ಲಿ ‘ಮಾಸ್ಟರ್ ಆಫ್ ಸ್ಟೋರಿ ಟೇಲಿಂಗ್’ ಎಂದೇ ಖ್ಯಾತರಾಗಿರುವ ನಿರ್ದೇಶಕ ಸ್ಟೀವನ್ ಸ್ಪೀಲ್‌ಬರ್ಗ್ (Steven Steelberg) ಅವರೂ ರಾಜಮೌಳಿ ಅವರನ್ನು ಹಾಡಿ‌ಹೊಗಳಿದ್ದರು. 

ನಿರ್ದೇಶಕ ಸ್ಟೀವನ್ ಸ್ಪೀಲ್‌ಬರ್ಗ್ (Steven Steelberg) ಅವರ ‘ದಿ ಫೇಬಲ್‌ಮ್ಯಾನ್ಸ್’ (The Fabelmans) ಚಿತ್ರ ಅತ್ಯುತ್ತಮ ಚಿತ್ರವಾಗಿ ಆಸ್ಕರ್‌ಗೆ ನಾಮ ನಿರ್ದೇಶನಗೊಂಡಿದೆ. ಈ ಚಿತ್ರ ಭಾರತದಲ್ಲಿ ಬಿಡುಗಡೆ ಆಗಿದೆ. ಈ ಹಿನ್ನೆಲೆಯಲ್ಲಿ ಸ್ಟೀವನ್ ಸ್ಪೀಲ್‌ಬರ್ಗ್‌ ಹಾಗೂ ರಾಜಮೌಳಿ ಆನ್‌ಲೈನ್ ಮಾತುಕತೆ ನಡೆಸಿದ್ದರು. ಈ ವೇಳೆ, 1976ರಲ್ಲಿ ತೆರೆಕಂಡ ‘ಕ್ಲೋಸ್ ಎನ್‌ಕೌಂಟರ್ಸ್ ಆಫ್ ದ ಥರ್ಡ್ ಕೈಂಡ್’ ಸಿನಿಮಾದ ಶೂಟಿಂಗ್‌ಗಾಗಿ (Shooting) ಭಾರತಕ್ಕೆ ಬಂದಿದ್ದನ್ನು ಸ್ಪೀಲ್‌ಬರ್ಗ್ ನೆನಪಿಸಿಕೊಂಡರು. ಮುಂಬೈನಲ್ಲಿ (Mumbai) ಚಿತ್ರೀಕರಣ ನಡೆಸಿದ್ದೆ ಎಂದು ಕೂಡ ತಿಳಿಸಿದ್ದರು. ಈ ಸಂದರ್ಭದಲ್ಲಿ ರಾಜಮೌಳಿ ಅವರನ್ನು ಹಾಡಿ ಹೊಗಳಿದ್ದರು. ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದ  ರಾಜಮೌಳಿ ಅವರು, ಸ್ಟೀವನ್ ಸ್ಪೀಲ್‌ಬರ್ಗ್ ಮೆಚ್ಚುಗೆ ವ್ಯಕ್ತಪಡಿಸಿರುವುದು ಎದ್ದು ಕುಣಿಯುವಷ್ಟು ಸಂತಸವಾಗಿದೆ. ಸ್ಟೀವನ್ ಸ್ಪೀಲ್‌ಬರ್ಗ್ ಅವರೊಂದಿಗೆ ಮಾತನಾಡುವುದೇ ಒಂದು ಗೌರವ  ಎಂದಿದ್ದರು.  

Shehzada vs Pathaan: ಚೆನ್ನಾಗಿ ಓಡ್ತಿದ್ರೂ 'ಪಠಾಣ್'​ಗೆ ಯಾಕಪ್ಪಾ ಈ ಕಂತ್ರಿ ಬುದ್ಧಿ ಅಂತಿದ್ದಾರೆ ಜನ...

ಹೀಗೆ ದೇಶದಲ್ಲಿ ಮಾತ್ರವಲ್ಲ, ವಿದೇಶದಲ್ಲಿಯೂ ಪ್ರಖ್ಯಾತರಾಗಿದ್ದಾರೆ ರಾಜಮೌಳಿ. ಹೈ ಎಮೋಷನ್ (High Emotional) ಹಾಗೂ ಆ್ಯಕ್ಷನ್ (action) ಸಿನಿಮಾಗಳನ್ನು ಮಾಡುವಲ್ಲಿ ಇವರದ್ದು ಎತ್ತಿದ ಕೈ. ಈ ಚಿತ್ರಗಳು ಭರ್ಜರಿ ಹಿಟ್ ಆಗಿವೆ. ಒಂದಾದ ಮೇಲೊಂದರಂತೆ ಹಿಟ್​ ಸಿನಿಮಾಗಳನ್ನು (Cinema) ನೀಡುವ ರಹಸ್ಯವನ್ನು ಅವರು ಬಿಚ್ಚಿಟ್ಟಿದ್ದಾರೆ. ತಮ್ಮ ಸಿನಿಮಾಗಳನ್ನು ಹೇಗೆ ಜಡ್ಜ್ (Judge) ಮಾಡುತ್ತೇನೆ ಎನ್ನುವುದನ್ನು ರಿವೀಲ್​ (Reveal)  ಮಾಡಿದ್ದಾರೆ. ಕೆಲವರು ಸಿನಿಮಾಗಳ ಬಗ್ಗೆ ಕೇಳಿದಾಗ ಅದನ್ನು ಶಬ್ದಗಳಲ್ಲಿ ವಿವರಿಸಲು ವಿಫಲರಾಗುತ್ತಾರೆ. ಹಾಗಾಗಿ ಥಿಯೇಟರ್​ಗೆ ಹೋಗಿ ಜನರು ಸಿನಿಮಾಗೆ ಕೊಡುವ ಪ್ರತಿಕ್ರಿಯೆಗಳನ್ನು ಅವರು ಗಮನಿಸುತ್ತಾರೆ ಎನ್ನುವುದಾಗಿ ರಾಜಮೌಳಿ ಅವರು ಅಭಿಪ್ರಾಯ ಪಟ್ಟಿದ್ದಾರೆ.
 
'ನನ್ನ ಸಿನಿಮಾ ಬಗ್ಗೆ ಪ್ರೇಕ್ಷಕರು ಹೇಗೆ ಪ್ರತಿಕ್ರಿಯಿಸುತ್ತಾರೆ ಎನ್ನುವುದನ್ನು ತಿಳಿಯುವುದು ನನಗೆ ತುಂಬಾ ಮುಖ್ಯ. ಆದರೆ ಅದನ್ನು ವಿವರಿಸಲು ಕೇಳಿದರೆ ಅವರು ತುಂಬಾ ಸಲ ಫೇಲ್ (Fail) ಆಗುತ್ತಾರೆ. ಇದೇ  ಕಾರಣಕ್ಕೆ ನಾನು ಬೇರೆ ಮಾರ್ಗವನ್ನು ಅನುಸರಿಸಿದ್ದೇನೆ' ಎನ್ನುವ ರಾಜಮೌಳಿ ಅವರು, ಆ ಗುಟ್ಟನ್ನು ರಟ್ಟು ಮಾಡಿದ್ದಾರೆ. ಅದೇನೆಂದರೆ, ಅವರು ತಮ್ಮದೇ ಚಿತ್ರವನ್ನು ಕನಿಷ್ಠ ನೂರು ಬಾರಿ ನೋಡುತ್ತಾರಂತೆ!

Swara Bhaskar ಮದುವೆ ಅಸಿಂಧು ಎಂದ ಧರ್ಮಗುರು: ರಕ್ಷಣೆಗೆ ಬಂದ ಆರ್​ಜೆ ಸಯೇಮಾ

'ನಾನು ಕೆಲವೊಮ್ಮೆ ನನ್ನ ಸಿನಿಮಾಗಳನ್ನು ಬಾರಿ ಬಾರಿ ನೋಡುತ್ತೇನೆ. 100 ಸಲ ಕೂಡಾ ನೋಡುತ್ತೇನೆ. ಹಾಗಾಗಿ ನನ್ನ ಸಿನಿಮಾ ಜಡ್ಜ್ ಮಾಡಲು ಸರಿಯಾದ ಮಾರ್ಗ ಎಂದರೆ ಪ್ರೇಕ್ಷಕರ ಜೊತೆ ಕುಳಿತು ಸಿನಿಮಾ ನೋಡುವುದು ಎಂದಿದ್ದಾರೆ. ಈ ಮೂಲಕ ತಮ್ಮ ಚಿತ್ರಗಳನ್ನು ಹೇಗೆ ತಾವೇ ನಿರ್ಣಯಿಸುತ್ತಿದ್ದೇವೆ ಎನ್ನುವ ವಿಧಾನವನ್ನು ಹೇಳಿದ್ದಾರೆ. ತಮ್ಮ ಚಿತ್ರವನ್ನು ಹೆಚ್ಚೆಚ್ಚು ನೋಡಿದಷ್ಟು ಅದರಲ್ಲಿನ ಲೋಪ ತಿಳಿದು ಮುಂದಿನ ಚಿತ್ರದಲ್ಲಿ ಯಶಸ್ಸು ಕಾಣಬಹುದು ಎನ್ನುವುದು ಅವರ ಅನಿಸಿಕೆ. ಇಷ್ಟೆಲ್ಲಾ ಸೂಪರ್​ಹಿಟ್​ ಚಿತ್ರಗಳನ್ನು ನೀಡಿದ್ದರೂ ರಾಜಮೌಳಿ ಅವರು ಇಂದಿಗೂ ಇದೇ ವಿಧಾನವನ್ನು ಅನುಸರಿಸುವ ಕಾರಣ, ಅವರ ಬಹುತೇಕ ಚಿತ್ರಗಳು ಯಶಸ್ಸಿನ (success) ಹಾದಿ ಹಿಡಿಯುತ್ತಿವೆ. 

Latest Videos
Follow Us:
Download App:
  • android
  • ios