Asianet Suvarna News Asianet Suvarna News

ವಿಮಾನ ದುರಂತ, ಇಬ್ಬರು ಪುತ್ರಿಯರ ಜೊತೆ ಖ್ಯಾತ ನಟ ದಾರುಣ ಸಾವು!

ವಿಮಾನ ಪತನಗೊಂಡು ಮುದ್ದಾ ಇಬ್ಬರು ಹೆಣ್ಣು ಮಕ್ಕಳನ್ನು ಕಳೆದುಕೊಂಡ ನಟ ಕ್ರಿಶ್ಚಿಯನ್ ಆಲಿವರ್.. ಎಲ್ಲೆಡೆ ಫೋಟೋ ವೈರಲ್
 

Speed Racer Hollywood actor Christian Oliver and his 2 daughter passes away in plane crash vcs
Author
First Published Jan 6, 2024, 3:42 PM IST

ಗುಡ್ ಜರ್ಮನ್ ಮತ್ತು ಸ್ಪೀಡ್ ರೇಸರ್ ಖ್ಯಾತಿಯ ಹಾಲಿವುಡ್ ನಟ ಕ್ರಿಶ್ಚಿಯನ್ ಆಲಿವರ್ ಮತ್ತು ಇಬ್ಬರು ಪುತ್ರಿಯರು ಪ್ರೈವೇಟ್ ವಿಮಾನದಲ್ಲಿ ಪ್ರಯಾಣ ಮಾಡುತ್ತಿದ್ದರು. ರಜೆ ಇದ್ದ ಕಾರಣ ಸಣ್ಣ ಟ್ರಿಪ್‌ನಲ್ಲಿದ್ದರು. ಆದರೆ ದುರಂತ ಏನೆಂದರೆ ಟೇಕಾಫ್‌ ವೇಳೆ ಕೆರಿಬಿಯನ್ ಸಮುದ್ರಕ್ಕೆ ಪತನಗೊಂಡಿದೆ. ಈ ವೇಳೆ ಕ್ರಿಶ್ಚಿಯನ್, ಇಬ್ಬರು ಮಕ್ಕಳು ಮತ್ತು ಪೈಲಟ್ ಅಗಲಿದ್ದಾರೆ. 

ಜಾರ್ಜ್ ಕ್ಲೂನಿ ಅವರೊಂದಿಗೆ "ದಿ ಗುಡ್ ಜರ್ಮನ್" ಮತ್ತು 2008 ರಲ್ಲಿ ಆಕ್ಷನ್-ಕಾಮಿಡಿ "ಸ್ಪೀಡ್ ರೇಸರ್" ನಲ್ಲಿ ದೊಡ್ಡ ಪರದೆಯ ಮೇಲೆ ಕಾಣಿಸಿಕೊಂಡಿದ್ದ ಆಲಿವರ್, ಗುರುವಾರ ಖಾಸಗಿ ಒಡೆತನದ ಸಿಂಗಲ್ ಇಂಜಿನ್ ಕ್ರಾಫಟ್ಸ್‌ ವಿಮಾನದಲ್ಲಿ ಪ್ರಯಾಣ ಮಾಡುತ್ತಿದ್ದರು. ಈ ಘಟನೆ ಬಗ್ಗೆ ರಾಯಲ್ ಸೇಂಟ್ ವಿನ್ಸೆಂಟ್ ಮತ್ತು ಗ್ರೆನಡೈನ್ಸ್ ಪೋಲೀಸರು ತಿಳಿಸಿದ್ದಾರೆ. ಸಮುದ್ರದ ಬಳಿ ಇದ್ದ ಮೀನುಗಾರರು, ಡೈವರ್ಸ್‌ ಮತ್ತು ಕೋಸ್ಟಲ್ ಗಾರ್ಡ್‌ಗಳು ತಕ್ಷಣವೇ ನೀರಿಗೆ ಇಳಿದು ನಾಲ್ಕು ಮೃತ ದೇಹವನ್ನು ಹೊರ ತೆಗೆದಿದ್ದಾರೆ.

16,325 ಅಡಿ ಎತ್ತರದಲ್ಲಿ ಹಾರುತ್ತಿದ್ದಾಗ ಕಳಚಿಕೊಂಡ ವಿಮಾನದ ಬಾಗಿಲು: ಫ್ಲೈಟ್ ತುರ್ತು ಲ್ಯಾಂಡಿಂಗ್

51 ವರ್ಷದ ಕ್ರಿಶ್ಚಿಯನ್ ಅಲಿವ್, 12 ವರ್ಷದ ಅನಿಕ್, 10 ವರ್ಷದ ಮಾದಿತ್ ಮತ್ತು ಪೈಲಟ್ ರಾಬರ್ಟ್‌ ಅಗಲಿದ್ದಾರೆ. ಗುರುವಾರ ಮಧ್ಯಾಹ್ನ ವಿಮಾನ ಬೆಕ್ವಿಯಾ, ಗ್ರೆನಡೈನ್ಸ್‌ನ ಸಣ್ಣ ದ್ವೀಪದಿಂದ ಪ್ರಯಾಣ ಮಾಡುತ್ತಿದ್ದರು. ಕೆಲವು ದಿನಗಳ ಹಿಂದೆ ಸೋಷಿಯಲ್ ಮೀಡಿಯಾದಲ್ಲಿ ಆಲಿವ್ ಫೋಟೋ ಹಾಕಿ 'ಗ್ರೀಟಿಂಗ್‌ ಫ್ರಮ್ ಪ್ಯಾರಡೈಸ್‌' ಎಂದು ಬರೆದಿದ್ದರು. ಈ ದುರಂತ ಕೇಳಿ ಇಡೀ ಹಾಲಿವುಡ್ ಮಂದಿ ಶಾಕ್ ಆಗಿದ್ದಾರೆ. ಎಲ್ಲೆಡೆ ಕ್ರಿಶ್ಚಿಯನ್ ಆಲಿವರ್ ಫ್ಯಾಮಿಲಿ ಫೋಟೋ ವೈರಲ್ ಆಗುತ್ತಿದೆ. ಆಲಿವರ್ ಸುಮಾರು 60 ಸಿನಿಮಾ ಮತ್ತು ಟಿವಿ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಿದ್ದಾರೆ. 

Follow Us:
Download App:
  • android
  • ios