Asianet Suvarna News Asianet Suvarna News

ಟಾಯ್ಲೆಟ್ ಬೇಕಾದರೂ ತೊಳೆಯುತ್ತೇನೆ: ಜ್ಯೂಲಿ ಲಕ್ಷ್ಮಿ ಮಗಳು, ಅಂಥದ್ದೇನಾಯ್ತು ಈ ಸ್ಟಾರ್ ನಟಿಗೆ?

ಒಂದು ಕಾಲದಲ್ಲಿ ಮೋಹನ್‌ಲಾಲ್‌ರಂಥಾ ಸೂಪರ್‌ಸ್ಟಾರ್‌ ಜೊತೆ ಹೀರೋಯಿನ್ ಆಗಿದ್ದ ನಟಿ ಇದೀಗ ಟಾಯ್ಲೆಟ್ ತೊಳೆಯೋ ಕೆಲಸವನ್ನಾದರೂ ಕೊಡಿ ಅಂತ ಗೋಗರೆಯುವ ಮಟ್ಟಕ್ಕೆ ಇಳಿದಿದ್ದಾರೆ. ಐಶ್ವರ್ಯಾ ಅಂತ ಹೆಸರಿಟ್ಟುಕೊಂಡು ಖ್ಯಾತ ನಟಿ ಜ್ಯೂಲಿ ಲಕ್ಷ್ಮಿ ಮಗಳಾಗಿದ್ದುಕೊಂಡು ಇಂಥಾ ಕಷ್ಟ ಈ ನಟಿಗೆ ಯಾಕೆ ಬಂತು?

South Indian actress Julie Laxmi Daughter Aishwarya Bhaskar Heartbreaking story
Author
Bengaluru, First Published Jun 18, 2022, 3:41 PM IST

ಐಶ್ವರ್ಯಾ ಭಾಸ್ಕರ್(Aishwarya Bhaskar) ಅನ್ನೋ ನಟಿಯ ಹೆಸರು ಒಂದಿಷ್ಟು ಮಂದಿಗಾದರೂ ನೆನಪಿರಬಹುದು, ಮಲಯಾಳಂ ಸಿನಿಮಾ(Malayalam cinema) ನೋಡುವ ಕೆಲವರಿಗೆ ಎಲ್ಲೋ ಕೇಳಿದ ಹಾಗಿದೆ ಅಂತನಾದ್ರೂ ಅನಿಸಬಹುದು. ಆದರೆ ಇತ್ತೀಚೆಗೆ ಗಲಾಟ್ಟ ಸಂದರ್ಶನ(Galatta Interview)ದಲ್ಲಿ ಈಕೆ ಮಾತನಾಡಿರುವ ವಿಚಾರಗಳು ಇದೀಗ ವೈರಲ್(Viral) ಆಗಿವೆ. ವರ್ಜಿನಿಟಿ(Virginity), ಕಾಸ್ಟ್‌ ಆಫ್ ಕೌಚ್‌ನಂಥ ವಿಚಾರಗಳ ಬಗ್ಗೆ ಮುಕ್ತವಾಗಿ ಮಾತನಾಡಿರುವ ನಟಿ ತನ್ನ ಬದುಕಿನ ಬಗ್ಗೆಯೂ ಇಲ್ಲಿ ಮಾತನಾಡಿದ್ದಾರೆ. ಇಲ್ಲಿ ಈಕೆ ಬಿಚ್ಚಿಟ್ಟ ವಿಚಾರಗಳು ಬೆಚ್ಚಿಬೀಳಿಸುವ ಹಾಗಿದೆ. ತಾನು ಜೀವನ ನಿರ್ವಹಣೆಗೆ ಸೋಪು ತಯಾರಿಸಿ, ಅದನ್ನು ಮಾರಾಟ ಮಾಡಿಬಂದ ಹಣದಿಂದ ಬದುಕುತ್ತಿರುವುದಾಗಿ ಅವರು ಹೇಳಿಕೊಂಡಿದ್ದಾರೆ. ಜೀವನ ನಿರ್ವಹಣೆಗೆ ಟಾಯ್ಲೆಟ್ ಕ್ಲೀನ್(Toilet cleaning) ಮಾಡುವ ಕೆಲಸಕ್ಕೂ ರೆಡಿ ಅಂದಿದ್ದು ವೈರಲ್ ಆಗಿದೆ.

ಸಿನಿಮಾ ನಟ ನಟಿಯರು ಅಂದರೆ ಬಹಳ ಶ್ರೀಮಂತರು, ಅದರಲ್ಲೂ ಸ್ಟಾರ್ ನಟ ನಟಿಯರ ಮಕ್ಕಳ ಲೈಫು ಬಹಳ ಲಕ್ಸೂರಿ(Luxury)ಯಿಂದ ಕೂಡಿರುತ್ತೆ ಅಂತ ಬಹಳ ಜನ ಅಂದುಕೊಂಡಿದ್ದಾರೆ. ಆದರೆ ಜ್ಯೂಲಿ ಲಕ್ಷ್ಮಿ(Julie Laxmi) ಯಂಥಾ ಪ್ರಸಿದ್ಧ ನಟಿಯ ಮಗಳಾಗಿದ್ದು, ತಾನೂ ಒಂದು ಕಾಲದ ಸ್ಟಾರ್ ನಟಿ( Co Star)ಯಾಗಿದ್ದ ಈ ನಟಿ ಇದೀಗ ನಡೆಸುತ್ತಿರುವ ಬದುಕಿನ ಬಗ್ಗೆ ಕೇಳಿದರೆ ಹಲವರಿಗೆ ಆಶ್ಚರ್ಯ ಆಗಬಹುದು.

Virata Parvam Movie Review; ಕಾಡಿನಲ್ಲಿ ಸಾಯಿ ಪಲ್ಲವಿಯ ಹೊಸ ಅವತಾರ

ಐಶ್ವರ್ಯಾ ಭಾಸ್ಕರ್ ಮಲಯಾಳಂ, ತಮಿಳು ಸಿನಿಮಾಗಳಲ್ಲಿ ೯೦ರ ದಶಕದಲ್ಲಿ ಜನಪ್ರಿಯರಾದವರು. ಈಕೆ ಕನ್ನಡ, ತೆಲುಗು, ಹಿಂದಿ ಚಿತ್ರಗಳಲ್ಲೂ ನಟಿಸಿ ತನ್ನ ಅಮ್ಮನಂತೇ ಪಂಚಭಾಷಾ ತಾರೆ ಅಂತ ಕರೆಸಿಕೊಂಡವರು. ಅಮ್ಮನಂಥಾ ರೂಪ, ನಟನೆ ಇಲ್ಲದ ಕಾರಣಕ್ಕೋ ಏನೋ ಅಮ್ಮ ಜೂಲಿ ಲಕ್ಷ್ಮಿ ಲೆವೆಲ್‌ನ ಪ್ರಸಿದ್ಧಿ ಈಕೆಗೆ ಬರಲಿಲ್ಲ. ಆದರೆ ಒಂದು ಮಟ್ಟಿನ ಜನಪ್ರಿಯತೆಯಂತೂ ಬಂದೇ ಬಂತು. ಮೋಹನ್ ಲಾಲ್ ಅವರ ಜೊತೆಗೆ ನಾಯಕಿಯಾಗಿ ನರಸಿಂಹಂ, ಬಟರ್‌ಫ್ಲೈಸ್‌, ಪ್ರಜಾ ಮೊದಲಾದ ಚಿತ್ರಗಳಲ್ಲಿ ಕಾಣಿಸಿಕೊಂಡಾಗ ಈಕೆಯೂ ಅಮ್ಮನಂತೇ ಯಶಸ್ವಿಯಾಗುತ್ತಾರೆ ಅಂತಲೇ ಹಲವರು ಲೆಕ್ಕಾಚಾರ ಹಾಕಿದರು. ಸತ್ಯಮೇವ ಜಯತೇ, ಶಾರ್ಜಾದಂಥಾ ಸಿನಿಮಾಗಳು ಇವರಿಗೆ ಪಾಪ್ಯುಲಾರಿಟಿಯನ್ನೂ ತಂದುಕೊಟ್ಟವು.

Thurthu Nirgamana ಚಿತ್ರದ ಪಾತ್ರಕ್ಕೆ ಬೆಚ್ಚಿಬಿದ್ದ ಸುಧಾರಾಣಿ!

ಕನ್ನಡದಲ್ಲಿ 'ಹೊಸ ಕಾವ್ಯ', 'ಪಾಂಡವರು' ಅನ್ನುವ ಸಿನಿಮಾ, ಪ್ರಕಾಶ್‌ ರಾಜ್ ಜೊತೆಗೆ 'ಒಗ್ಗರಣೆ' ಚಿತ್ರದಲ್ಲಿ ಕಾಣಿಸಿಕೊಂಡರು.

ಈ ವೇಳೆ ಇವರ ಬದುಕಿನಲ್ಲಿ ಒಂದಿಷ್ಟು ಬೆಳವಣಿಗೆಗಳಾಗಿ ಅವರು ಸಿನಿಮಾ ರಂಗದಿಂದ ಹೊರಗುಳಿದರು. ತನ್ವೀರ್ ಅಹಮ್ಮದ್ ಅನ್ನುವವರ ಜೊತೆಗೆ ಇವರ ಮದುವೆಯಾಯ್ತು. ಈ ದಾಂಪತ್ಯದಲ್ಲಿ ಇವರಿಗೊಬ್ಬ ಮಗಳೂ ಹುಟ್ಟಿದಳು. ಆದರೆ ವೈಮನಸ್ಸು ಬಂದು ಮದುವೆಯಾದ ಮೂರೇ ವರ್ಷಗಳಲ್ಲಿ ಈ ದಂಪತಿ ಬೇರ್ಪಟ್ಟರು. ಆಗ ಮಗುವಿಗೆ ಒಂದೂವರೆ ವರ್ಷ. ಸಂದರ್ಶನ(Interview)ದಲ್ಲಿ ಈ ಬಗ್ಗೆ ಹೇಳಿರುವ ಐಶ್ವರ್ಯಾ, 'ಈಗ ನನ್ನ ಮಾಜಿ ಪತಿ ಹಾಗೂ ಅವರ ಪತ್ನಿ ಜೊತೆಗೆ ಒಳ್ಳೆಯ ಸಂಬಂಧ ಇದೆ. ಆದರೆ ಆತನ ಜೊತೆಗಿನ ನನ್ನ ಸಂಬಂಧ ಮದುವೆಯಾದ ಆರು ತಿಂಗಳಲ್ಲೇ ಹಳಸಿತ್ತು. ಒಂದೂವರೆ ವರ್ಷದ ಮಗಳ ಜೊತೆಗೆ ನಾನು ಆತನಿಂದ ಬೇರ್ಪಟ್ಟೆ' ಅಂತಾರೆ.

ಸದ್ಯಕ್ಕೆ ಇವರ ಮಗಳಿಗೆ ಮದುವೆಯಾಗಿ ಆಕೆ ಗಂಡನ ಜೊತೆಗೆ ವಾಸಿಸುತ್ತಿದ್ದಾಳೆ. ಈಕೆ ಒಂಟಿಯಾಗಿದ್ದಾರೆ. ಸದ್ಯಕ್ಕೆ ಕಿರುತೆರೆಯಲ್ಲಾಗಲೀ, ಸಿನಿಮಾದಲ್ಲಾಗಲಿ ಅವಕಾಶ ಸಿಗುತ್ತಿಲ್ಲ. ಹೀಗಾಗಿ ಹಣವೂ ಇಲ್ಲ. ಸೋಪು ಮಾರಿ ಬಂದ ಹಣದಲ್ಲಿ ತಾನು ಜೀವನ ಸಾಗಿಸುತ್ತಿದ್ದೇನೆ ಅಂತ ಅವರು ಹೇಳಿದ್ದಾರೆ. ಇಷ್ಟೆಲ್ಲ ಆದರೂ ಸ್ವತಂತ್ರ ವ್ಯಕ್ತಿಯಾಗಿ ಬದುಕುತ್ತಿರುವುದಕ್ಕೆ ಖುಷಿ ಇದೆ ಅಂತಲೂ ಹೇಳುತ್ತಾರೆ. ಯೋಗ ಸಿದ್ಧಿಯೂ ಇವರಿಗಿದೆ. ಹೀಗಾಗಿ ಒಂದೇ ಹೊತ್ತು ಊಟ ಮಾಡುತ್ತಿದ್ದಾರೆ. ಹೀಗಾಗಿ ಖರ್ಚೂ ಕಡಿಮೆ ಅನ್ನೋದು ಇವರ ಮಾತು.

ಇಷ್ಟೆಲ್ಲ ಆದ ಬಳಿಕವಾದರೂ ಈ ನಟಿಯ ಬದುಕು ಸುಧಾರಿಸುತ್ತಾ, ಅವರಿಗೆ ಅವಕಾಶಗಳು ಸಿಗುತ್ತವಾ ಅಂತ ಕಾದು ನೋಡಬೇಕು.

ಗಾಯಕ, ಸಂಗೀತ ನಿರ್ದೇಶಕ ಗುರುರಾಜ್‌ ಸಂಗೀತ ಪಯಣಕ್ಕೆ 50 ವಸಂತ

Follow Us:
Download App:
  • android
  • ios