Asianet Suvarna News Asianet Suvarna News

Vijay Sethupathi: ನಟ ವಿಜಯ್ ಮೇಲೆ ಅನಾಮಿಕನಿಂದ ದಾಳಿ, ಶಾಕಿಂಗ್ ವಿಡಿಯೋ

  • ಸೌತ್ ನಟನ ಮೇಲೆ ಅನಾಮಿಕನಿಂದ ದಿಢೀರ್ ದಾಳಿ
  • ನಟ ವಿಜಯ್ ಸೇತುಪತಿ(Vijay Sethupathi)ಮೇಲೆ ಎಗರಿಬಿದ್ದಿದ್ಯಾರು ?
South actor Vijay Sethupathi attacked brutally by mystery man at Airport Shocking video dpl
Author
Bangalore, First Published Nov 3, 2021, 6:55 PM IST
  • Facebook
  • Twitter
  • Whatsapp

ಕಾಲಿವುಡ್‌ನ ಸೆನ್ಸೇಷನಲ್ ಸ್ಟಾರ್ ವಿಜಯ್ ಸೇತುಪತಿ(Vijay Sethupathi) ಅವರ ಮೇಲೆ ಅನಾಮಿಕನೊಬ್ಬ ಏಕಾಏಕಿ ದಾಳಿ ನಡೆಸಿದ್ದು ಘಟನೆಯ ವಿಡಿಯೋ ಈಗ ಇಂಟರ್‌ನೆಟ್‌ನಲ್ಲಿ ವೈರಲ್(Viral) ಆಗಿದೆ. ಬಹು ಭಾಷೆಗಳಲ್ಲಿ ಹಲವು ಸಿನಿಮಾ ಚಿತ್ರೀಕರಣದಲ್ಲಿ ನಿರತರಾಗಿರುವ ನಟ ಸದ್ಯ ಸೌತ್‌ನಲ್ಲಿ ಬ್ಯುಸಿಯಾಗಿರೋ ನಟರಲ್ಲಿ ಒಬ್ಬರು. ವಿಮಾನ ನಿಲ್ದಾಣದಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ವಿಜಯ್ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿರುವ ಆಘಾತಕಾರಿ ವಿಡಿಯೋ ವೈರಲ್ ಆಗಿದ್ದು, ನಟನ ಅಭಿಮಾನಿಗಳಲ್ಲಿ ಭಾರೀ ಆತಂಕ ಮೂಡಿಸಿದೆ.

"

ವೀಡಿಯೋದಲ್ಲಿ ವಿಜಯ್ ಸೇತುಪತಿ ನಿರ್ಗಮನದ ಕಡೆಗೆ ನಡೆದುಕೊಂಡು ಹೋಗುತ್ತಿರುವಾಗ, ಎತ್ತರದ ವ್ಯಕ್ತಿ ಇದ್ದಕ್ಕಿದ್ದಂತೆ ಹಿಂದಿನಿಂದ ಓಡಿ ಬಂದು ದಾಳಿ ಮಾಡಿದ್ದಾನೆ. ತಕ್ಷಣ ಭದ್ರತಾ ಸಿಬ್ಬಂದಿ(Security) ಅವರನ್ನು ತಡೆದಿದ್ದಾರೆ.

ರಾಮಗರದಲ್ಲಿ ಮಾಸ್ಟರ್ ಚೆಫ್ ಕಾರ್ಯಕ್ರಮಕ್ಕೆ ಚಾಲನೆ ಕೊಟ್ಟ ವಿಜಯ್ ಸೇತುಪತಿ!

ವಿಜಯ್ ಸೇತುಪತಿ ಪ್ರಸ್ತುತ ಲೋಕೇಶ್ ಕನಕರಾಜ್ ನಿರ್ದೇಶನದ ಕಮಲ್ ಹಾಸನ್ ಅಭಿನಯದ 'ವಿಕ್ರಮ್', ವೆಟ್ರಿಮಾರನ್ ಅವರ 'ವಿಡುತಲೈ'ಮತ್ತು ಸಮಂತಾ ಮತ್ತು ನಯನತಾರಾ ಅಭಿನಯದ 'ಕಾತುವಕ್ಕುಲ ರಂಡ್ ಕಾದಲ್' ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ.

ಈಗಷ್ಟೇ ತಮಿಳು ಚಿತ್ರರಂಗದಲ್ಲಿ ಹೆಸರು ಮಾಡುತ್ತಿರುವ ಕೃತಿ ಶೆಟ್ಟಿ ಮತ್ತು ವಿಜಯ್ ಸೇತುಪತಿ ಕಾಂಬಿನೇಷನ್‌ನಲ್ಲಿ ಚಿತ್ರಕತೆ ತಯಾರಿ ಮಾಡಲಾಗಿದೆ.  ನಿರ್ದೇಶಕರು ನಿರ್ಮಾಪಕರು ವಿಜಯ್‌ಗೆ ಕಥೆ ಒಪ್ಪಿಸಿದ್ದಾರೆ. ಆದರೆ ನಟಿ ಯಾರು ಎಂದು ತಿಳಿದ ಕೂಡಲೇ ವಿಜಯ್ ಬೇಡ ಈ ಸಿನಿಮಾ ಬೇಡವೇ ಬೇಡ ಎಂದಿದ್ದಾರೆ. ಇದು ಭಾರೀ ಸುದ್ದಿಯಾಗಿತ್ತು.

' ಪ್ರೊಡಕ್ಷನ್ ಸಂಸ್ಥೆಯವರು ಚಿತ್ರಕತೆ ಜೊತೆಗೆ ನಟಿ ಕೃತಿ ಫೋಟೋ ಕಳುಹಿಸಿದ್ದಾರೆ. ಇವರೇ ನಾಯಕಿ ಎಂದು ಹೇಳಿದ್ದರು. ನಾನು ಈಗಷ್ಟೆ ಆಕೆಯ ತಂದೆಯ ಪಾತ್ರದಲ್ಲಿ ನಟಿಸಿದ್ದೀನಿ. ನನಗೆ ಆಕೆಯನ್ನು ನನ್ನ ನಾಯಕಿ ಎಂದುಕೊಳ್ಳಲು ಆಕೆಯೊಂದಿಗೆ ರೊಮ್ಯಾನ್ಸ್ ದೃಶ್ಯಗಳಲ್ಲಿ ನಟಿಸಲು ಸಾಧ್ಯವಿಲ್ಲ ಎಂದು ತಿಳಿಸಿರುವೆ. ಈಗ ಮಾತ್ರವಲ್ಲ ಮುಂದೆಯೂ ಸಹ ನಾನು ಕೃತಿಯ ಬಾಯ್‌ಫ್ರೆಂಡ್ ಅಥವಾ ಪತಿ ಪಾತ್ರದಲ್ಲಿ ನಟಿಸಲಾರೆ ಏಕೆಂದರೆ ನಾನು ಆಕೆಯನ್ನು ಮಗಳ ರೀತಿ ಕಂಡಾಗಿದೆ' ಎಂದು ವಿಜಯ್ ಸೇತಪತಿ ಹೇಳಿದ್ದಾರೆ.

ನಟ ವಿಜಯ್‌ ಸೇತುಪತಿ ಕನ್ನಡಕ್ಕೂ ಬರಲಿದ್ದಾರೆಯೇ ಎನ್ನುವ ಕುತೂಹಲಕ್ಕೆ ಹೌದು ಎಂದಿರೋ ‘ಹೆಡ್‌ ಬುಷ್‌’ ಚಿತ್ರತಂಡ ಸಿನಿಪ್ರಿಯರಿಗೆ ಸಿಹಿ ಸುದ್ದಿ ಕೊಟ್ಟಿತ್ತು. ಧನಂಜಯ್‌ ನಾಯಕನಾಗಿ ನಟಿಸುತ್ತಿರುವ, ಅಗ್ನಿ ಶ್ರೀಧರ್‌ ಕತೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿರುವ, ಅಶು ಬೆದ್ರ ನಿರ್ಮಾಣದ, ಶೂನ್ಯ ನಿರ್ದೇಶಿಸುತ್ತಿರುವ ಈ ಚಿತ್ರಕ್ಕಾಗಿ ವಿಜಯ್‌ ಸೇತುಪತಿ ಅವರನ್ನು ಕರೆತರುವ ಪ್ಲಾನ್‌ ನಡೆಯುತ್ತಿದೆ. ಹೊಸ ಮಾಹಿತಿ ಪ್ರಕಾರ ಡಾಲಿ ಧನಂಜಯ್‌ ಅವರ ಜೊತೆ ಮಕ್ಕಳ್‌ ಸೆಲ್ವನ್‌ ವಿಜಯ್‌ ಸೇತುಪತಿ ನಟಿಸುವ ಸಾಧ್ಯತೆ ಹೆಚ್ಚಿದೆ.

ನಟ ವಿಜಯ್ ಅಪ್ರಾಪ್ತ ಮಗಳ ಮೇಲೆ ರೇಪ್ ಬೆದರಿಕೆ

ಎಲ್ಲ ಭಾಷೆಗಳಲ್ಲೂ ಅಪಾರ ಅಭಿಮಾನಿಗಳನ್ನು ಹೊಂದಿರೋ ವಿಜಯ್ ಸೇತುಪತಿ ಕಾಲಿವುಡ್‌ನಲ್ಲಿ ಸಖತ್ ಫೇಮಸ್ ನಟ. ವಿಲನ್ ಹಾಗೆಯೇ ಹೀರೋ ಪಾತ್ರಗಳಲ್ಲಿ ಮಿಂಚಿರೋ ವಿಜಯ್ ಸೇತುವಪತಿ ನ್ಯಾಚುರಲ್ ಅಭಿನಯವನ್ನು ಸಿನಿಪ್ರಿಯರು ಮೆಚ್ಚಿ ಪ್ರೋತ್ಸಾಹಿಸಿದ್ದು ಈಗ ನಟನಿಗೆ ಬಾಲಿವುಡ್‌ನಲ್ಲಿಯೂ ಅವಕಾಶಗಳ ಬಾಗಿಲು ತೆರೆಯುತ್ತಿದೆ.

ಈಗ ನಟನ ಮೇಲೆ ದಿಢೀರ್ ದಾಳಿಯಾಗಿರುವುದು ಬಹಳಷ್ಟು ಅಭಿಮಾನಿಗಳಲ್ಲಿ ಆತಂಕ ಮೂಡಿಸಿದೆ. ಏರ್ಪೋರ್ಟ್‌ನಂತಹ ಪ್ರದೇಶದಲ್ಲಿಯೇ ನಟನ ಮೇಲೆ ಬಹಿರಂಗ ದಾಳಿ ಮಾಡಿರುವುದು ಆತಂಕ ಸೃಷ್ಟಿಸಿದೆ. ಈ ಹಿಂದೆ ವಿಜಯ್ ಸೇತುಪತಿ ಮಗಳ ಮೇಲೆ ಅತ್ಯಾಚಾರ ಬೆದರಿಕೆ ಕೇಳಿ ಬಂದಿತ್ತು.

Follow Us:
Download App:
  • android
  • ios