ದಕ್ಷಿಣ ನಟ ಅಮರ್ ಶಶಾಂಕ್‌ನನ್ನು ರಾಯ್‌ದುರ್ಗಂ ಪೊಲೀಸರು ಬಂಧಿಸಿದ್ದಾರೆ. ಯುವತಿಯೊಬ್ಬರನ್ನು ನಟ ಕೆಟ್ಟದಾಗಿ ಬೈಯುತ್ತಿರುವ ವಿಡಿಯೋ ಸೋಷಿಲ್ ಮೀಡಿಯಾದಲ್ಲಿ ವೈರಲ್ ಆದ ಹಿನ್ನೆಲೆಯಲ್ಲಿ ನಟನನ್ನು ಪೊಲೀಸರು ಬಂಧಿಸಿದ್ದಾರೆ.

ಬ್ಯುಸಿನೆಸ್ ಸಂಬಂಧ ನಡೆದ ಟ್ರಾನ್ಸಾಕ್ಷನ್ ಬಗ್ಗೆ ಈ ವಾಗ್ವಾದ ನಡೆದಿದೆ ಎನ್ನಲಾಗಿದೆ. ನಟನ ವಿರುದ್ಧ ಕೇಸ್ ದಾಖಲಾದ ಕೂಡಲೇ ಪೊಲೀಶರು ನಟನನ್ನು ಕಸ್ಟಡಿಗೆ ತೆಗೆದುಕೊಂಡಿದ್ದಾರೆ.

ಟಾಪ್ ಟಕ್ಕರ್‌ನಲ್ಲಿ ಬಾದ್ ಶಾ ಜೊತೆ ಕಿರಿಕ್ ಚೆಲುವೆಯ ಬೋಲ್ಡ್ ಲುಕ್..!

ಸೋಷಿಯಲ್ ಮೀಡಿಯಾದಲ್ಲಿ ನಟ ಯುವತಿಯನ್ನು ಬೈಯುವಂತಹ ವಿಡಿಯೋ ವೈರಲ್ ಆಗಿತ್ತು. ನನ್ನನ್ನು ಉದ್ದೇಶಪೂರ್ವಕವಾಗಿ ಈ ವಿಡಿಯೋದಲ್ಲಿ ಫ್ರೇಮ್ ಮಾಡಲಾಗಿದೆ. ಮಾತನಾಡುವಾಗ ನನ್ನ ಭಾಗದ ದೃಶ್ಯವನ್ನಷ್ಟೇ ಶೂಟ್ ಮಾಡಿ ವೈರಲ್ ಮಾಡಲಾಗಿದೆ. ಆ ಕೋಣೆಯಲ್ಲಿ 15 ಜನರಿದ್ದರು. ಅದರಲ್ಲಿ ಎಡಿಟ್ ಮಾಡಿದ ನನ್ನ ವಿಡಿಯೋ ಮಾತ್ರ ವೈರಲ್ ಮಾಡಿದ್ದೇಕೆ ಎಂದು ಪ್ರಶ್ನಿಸಿದ್ದಾರೆ ನಟ.