Sai Pallavi; ಹುಟ್ಟುಹಬ್ಬದ ದಿನ ಕೆಂಪು ಸೀರೆಯುಟ್ಟು ಬ್ಯಾಗ್ ಹಿಡಿದು ಹೊರಟ 'ಪ್ರೇಮಂ' ಸುಂದರಿ
ಬಹುಭಾಷಾ ನಟಿ, ನ್ಯಾಚುರಲ್ ಸ್ಟಾರ್ ಸಾಯಿ ಪಲ್ಲವಿ(Sai Pallavi) ಹುಟ್ಟುಹಬ್ಬದ(Birthday) ಸಂಭ್ರಮದಲ್ಲಿದ್ದಾರೆ. 30ನೇ ವಸಂತಕ್ಕೆ ಕಾಲಿಟ್ಟಿರುವ ನಟಿ ಸಾಯಿ ಪಲ್ಲವಿ ಅವರಿಗೆ ಅಭಿಮಾನಿಗಳು ಮತ್ತು ಚಿತ್ರರಂಗದ ಅನೇಕ ಗಣ್ಯರು ಶುಭಾಶಯ ತಿಳಿಸುತ್ತಿದ್ದಾರೆ.
ಬಹುಭಾಷಾ ನಟಿ, ನ್ಯಾಚುರಲ್ ಸ್ಟಾರ್ ಸಾಯಿ ಪಲ್ಲವಿ(Sai Pallavi) ಹುಟ್ಟುಹಬ್ಬದ(Birthday) ಸಂಭ್ರಮದಲ್ಲಿದ್ದಾರೆ. 30ನೇ ವಸಂತಕ್ಕೆ ಕಾಲಿಟ್ಟಿರುವ ನಟಿ ಸಾಯಿ ಪಲ್ಲವಿ ಅವರಿಗೆ ಅಭಿಮಾನಿಗಳು ಮತ್ತು ಚಿತ್ರರಂಗದ ಅನೇಕ ಗಣ್ಯರು ಶುಭಾಶಯ ತಿಳಿಸುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ನೆಚ್ಚಿನ ನಟಿಯ ಫೋಟೋ ಶೇರ್ ಮಾಡಿ ವಿಶ್ ಮಾಡುತ್ತಿದ್ದಾರೆ. ಅಂದಹಾಗೆ ಸಾಯಿ ಪಲ್ಲವಿ ಹುಟ್ಟುಹಬ್ಬದ ದಿನವೇ ಕೆಂಪು ಸೀರೆಯುಟ್ಟು ಬ್ಯಾಗ್ ಹಿಡಿದು ಹೊರಟಿದ್ದಾರೆ. ಎಲ್ಲಿಗೆ ಹೊರಟಿದ್ದಾರೆ, ಯಾಕೆ ಹೋಗುತ್ತಾರೆ ಎನ್ನುವುದು ಅಭಿಮಾನಿಗಳಲ್ಲಿ ಮೂಡಿದ ದೊಡ್ಡ ಪ್ರಶ್ನೆಯಾಗಿದೆ. ಸಾಯಿ ಪಲ್ಲವಿ ಅವರ ಈ ಲುಕ್ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಅಂದಹಾಗೆ ಇದು ವಿರಾಟ ಪರ್ವಂ(Virataparvam) ಸಿನಿಮಾದ ಲುಕ್ ಆಗಿದೆ. ಇಂದು (ಮೇ 9) ಸಾಯಿ ಪಲ್ಲವಿ ಹುಟ್ಟುಹಬ್ಬದ ಪ್ರಯುಕ್ತ ಈ ಸಿನಿಮಾದಂದ ಸಾಂಗ್ ರಿಲೀಸ್ ಮಾಡುವ ಮೂಲಕ ಸಾಯಿ ಪಲ್ಲವಿ ಅಭಿಮಾನಿಗಳಿಗೆ ಗಿಫ್ಟ್ ನೀಡಲಾಗಿದೆ. ರಾಣಾ ದಗ್ಗುಬಾಟಿ(Rana Daggubati) ನಾಯಕನಾಗಿ ಕಾಣಿಸಿಕೊಂಡಿರುವ ಈ ಸಿನಿಮಾದಲ್ಲಿ ಸಾಯಿ ಪಲ್ಲವಿ ನಕ್ಸಲೇಟ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಈ ಸಿನಿಮಾದಿಂದ ಬಂದಿರುವ ಲುಕ್‌ಗಳು ವೈರಲ್ ಆಗಿದ್ದವು. ಇದೀಗ ಮತ್ತೊಂದು ಫೋಟೋ ಅಭಿಮಾನಿಗಳ ಮನಗೆದ್ದಿದೆ.
ಗಾಸಿಪ್ ಮಾಡೋರಿಗೆ ಕಾಲು ತೋರಿಸಿದ್ರಾ ಸಾಯಿ ಪಲ್ಲವಿ? ಫೋಟೋ ವೈರಲ್
ಗಾರ್ಗಿ ಸಿನಿಮಾ ಅನೌನ್ಸ್
ಇನ್ನು ಹುಟ್ಟುಹಬ್ಬದ ದಿನ ಸಾಯಿ ಪಲ್ಲವಿ ಅವರ ಮತ್ತೊಂದು ಹೊಸ ಸಿನಿಮಾ ಅನೌನ್ಸ್ ಆಗಿದೆ. ಸಿನಿಮಾಗೆ ಗಾರ್ಗಿ ಎಂದು ಟೈಟಲ್ ಇಡಲಾಗಿದೆ. ಪೋಸ್ಟರ್ ನಲ್ಲಿ ಸಾಯಿ ಪಲ್ಲವಿ ಸೀರೆಯಲ್ಲಿ ಕಾಣಿಸಿಕೊಂಡಿದ್ದಾರೆ. ಜೊತೆಗೆ ಉದ್ದನೆಯ ಬ್ಯಾಗ್ ಹಾಕಿದ್ದಾರೆ. ಬ್ಯಾಕ್ ಡ್ರಾಪ್ ನಲ್ಲಿ ನ್ಯಾಯದೇವತೆ ಫೋಟೋ ಇದೆ. ಈ ಪೋಸ್ಟರ್ ನೋಡಿದ್ರೆ ಗೊತ್ತಾಗುತ್ತದೆ ಸಾಯಿ ಪಲ್ಲವಿ ಈ ಸಿನಿಮಾದಲ್ಲಿ ನ್ಯಾಯಕ್ಕಾಗಿ ಹೋರಾಡುವ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಈ ಸಿನಿಮಾ ಅನೇಕ ಭಾಷೆಯಲ್ಲಿ ತೆರೆಗೆ ಬರುತ್ತಿದೆ. ತಮಿಳು, ತೆಲುಗು, ಮಲಯಾಳಂ ಜೊತೆಗೆ ಕನ್ನಡದಲ್ಲೂ ತಯಾರಾಗುತ್ತಿದೆ. ಅಂದಹಾಗೆ ಸಿನಿಮಾಗೆ ಗೌತಮ್ ರಾಮಚಂದ್ರನ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಮೊದಲು ಸಾಯಿ ಪಲ್ಲವಿ ಮೇ 9ರಂದು ಅಭಿಮಾನಿಗಳಿಗೆ ಸರ್ಪ್ರೈಸ್ ಕೊಡುವುದಾಗಿ ಹೇಳಿದ್ದರು. ಸಾಯಿ ಪಲ್ಲವಿ ಪೋಸ್ಟ್ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಾಗಿತ್ತು. ಇದೀಗ ಸರ್ಪ್ರೈಸ್ ರಿವೀಲ್ ಮಾಡಿದರು.
ಸಾಯಿ ಪಲ್ಲವಿ ಮದುವೆ ವಿಚಾರ ವೈರಲ್; ಶೀಘ್ರದಲ್ಲೇ ಹಸೆಮಣೆ ಏರ್ತಾರಂತೆ 'ಪ್ರೇಮ್' ಬ್ಯೂಟಿ
ಮದುವೆ ವಿಚಾರ ವೈರಲ್
ಸದ್ಯ ಸಾಯಿ ಪಲ್ಲವಿ ವಿರಾಟ ಪರ್ವಂ(Virata Parvam) ಸಿನಿಮಾ ಬಳಿಕ ಯಾವುದೇ ಸಿನಿಮಾಗ ಗ್ರೀನ್ ಸಿಗ್ನಲ್ ನೀಡಿರಲಿಲ್ಲ. ಅನೇಕ ಸಿನಿಮಾಗಳ ಆಫರ್ ಬರುತ್ತಿದ್ದರೂ ಸಾಯಿ ಪಲ್ಲಿ ನೋ ಎನ್ನುತ್ತಿದ್ದಾರಂತೆ. ಹಾಗಾಗಿ ಮದುವೆ ತಯಾರಿಯಲ್ಲಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿತ್ತು. ಸದ್ಯ ಸಿನಿಮಾ ಕಡೆ ಗಮನ ಹರಿಸಲು ಸಾಧ್ಯವಿಲ್ಲ ಎನ್ನುವ ಕಾರಣಕ್ಕೆ ಸಾಯಿ ಯಾವುದೇ ಸಿನಿಮಾ ಒಪ್ಪಿಕೊಳ್ಳುತ್ತಿಲ್ಲ ಎನ್ನಲಾಗುತ್ತಿತ್ತು. ಆದರೆ ಹೊಸ ಸಿನಿಮಾದ ಪೋಸ್ಟರ್ ರಿವೀಲ್ ಮಾಡುವ ಮೂಲಕ ಗಾಸಿಪಿಗರ ಬಾಯಿ ಮುಚ್ಚಿಸಿದ್ದಾರೆ.