ಗಾಸಿಪ್ ಮಾಡೋರಿಗೆ ಕಾಲು ತೋರಿಸಿದ್ರಾ ಸಾಯಿ ಪಲ್ಲವಿ? ಫೋಟೋ ವೈರಲ್
ಸಾಯಿ ಪಲ್ಲವಿ ಹೊಸ ಪೋಸ್ಟ್ ಶೇರ್ ಮಾಡುವ ಮೂಲಕ ಗಾಸಿಪಿಗರ ಬಾಯಿ ಮುಚ್ಚಿಸಿದ್ದಾರೆ. ಸಾಯಿ ಪಲ್ಲವಿ ಪೋಸ್ಟ್ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ. ಮಹಿಳೆಯೊಬ್ಬರು ಓಡುತ್ತಿರುವ ಪೋಸ್ಟ್ ಹಂಚಿಕೊಂಡಿದ್ದಾರೆ. ಬರೀ ಕಾಲು ಮಾತ್ರ ಫೋಟೋದಲ್ಲಿ ತೋರಿಸಲಾಗಿದ್ದು ಅಭಿಮಾನಿಗಳಲ್ಲಿ ನಿರೀಕ್ಷೆ ಹೆಚ್ಚಾಗಿದೆ.
ಬಹುಭಾಷಾ ನಟಿ, ನ್ಯಾಚುರಲ್ ಸ್ಟಾರ್ ಸಾಯಿ ಪಲ್ಲವಿ(Sai Pallavi) ಮದುವೆ ವಿಚಾರ ಸಿಕ್ಕಾಪಟ್ಟೆ ವೈರಲ್ ಆಗಿದೆ. ಬ್ಯೂಟಿ ಜೊತೆಗೆ ಪ್ರತಿಭೆಯಿಂದನೂ ಅಭಿಮಾನಿಗಳ ಮನ ಗೆದ್ದಿರುವ ನಟಿ ಸಾಯಿ ಪಲ್ಲವಿ ಸೌತ್ ಸಿನಿರಂಗದ ಸಿಕ್ಕಾಪಟ್ಟೆ ಬೇಡಿಕೆಯ ನಟಿ. ಸಾಲು ಸಾಲು ಸಿನಿಮಾಗಳಿಗೆ ಆಫರ್ ಬರುತ್ತಿರುವಾಗಲೇ ಸಾಯಿ ಪಲ್ಲವಿ ಹಸೆಮಣೆ ಏರೋಕೆ ಸಜ್ಜಾಗಿದ್ದಾರೆ ಎನ್ನುವ ಸುದ್ದಿ ಗುಲ್ಲಾಗಿದೆ. ದಕ್ಷಿಣ ಭಾರತದ ಚಿತ್ರರಂಗದಲ್ಲಿ ಅನೇಕ ಸೂಪರ್ ಹಿಟ್ ಸಿನಿಮಾಗಳನ್ನು ನೀಡುವ ಮೂಲಕ ತನ್ನದೇ ಆದ ಛಾಪು ಮೂಡಿಸಿರೋ ನಟಿ ಸಾಯಿ ಪಲ್ಲವಿ ಕೊನೆಯದಾಗಿ ಶ್ಯಾಮ್ ಸಿಂಗ ರಾಯ್ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು.
ಸದ್ಯ ಸಾಯಿ ಪಲ್ಲವಿ ವಿರಾಟ ಪರ್ವಂ(Virata Parvam) ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ರಾಣಾ ದಗ್ಗುಬಾಟಿ(rana daggubati) ನಾಯಕನಾಗಿ ನಟಿಸಿರುವ ಈ ಸಿನಿಮಾದಲ್ಲಿ ಸಾಯಿ ಪಲ್ಲವಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಈ ಸಿನಿಮಾ ಬಳಿಕ ಸಾಯಿ ಪಲ್ಲವಿ ಯಾವುದೇ ಸಿನಿಮಾಗೂ ಗ್ರೀನ್ ಸಿಗ್ನಲ್ ನೀಡಿಲ್ಲ. ಅನೇಕ ಸಿನಿಮಾಗಳ ಆಫರ್ ಬರುತ್ತಿದ್ದರೂ ಸಾಯಿ ಪಲ್ಲಿ ನೋ ಎನ್ನುತ್ತಿದ್ದಾರಂತೆ. ಹಾಗಾಗಿ ಮದುವೆ ತಯಾರಿಯಲ್ಲಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿದೆ. ಸದ್ಯ ಸಿನಿಮಾ ಕಡೆ ಗಮನ ಹರಿಸಲು ಸಾಧ್ಯವಿಲ್ಲ ಎನ್ನುವ ಕಾರಣಕ್ಕೆ ಸಾಯಿ ಯಾವುದೇ ಸಿನಿಮಾ ಒಪ್ಪಿಕೊಳ್ಳುತ್ತಿಲ್ಲ ಎನ್ನಲಾಗುತ್ತಿದೆ.
ಇದೀಗ ಸಾಯಿ ಪಲ್ಲವಿ ಹೊಸ ಪೋಸ್ಟ್ ಶೇರ್ ಮಾಡುವ ಮೂಲಕ ಗಾಸಿಪಿಗರ ಬಾಯಿ ಮುಚ್ಚಿಸಿದ್ದಾರೆ. ಸಾಯಿ ಪಲ್ಲವಿ ಪೋಸ್ಟ್ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ. ಮಹಿಳೆಯೊಬ್ಬರು ಓಡುತ್ತಿರುವ ಪೋಸ್ಟ್ ಹಂಚಿಕೊಂಡಿದ್ದಾರೆ. ಬರೀ ಕಾಲು ಮಾತ್ರ ಫೋಟೋದಲ್ಲಿ ತೋರಿಸಲಾಗಿದ್ದು ಅಭಿಮಾನಿಗಳಲ್ಲಿ ನಿರೀಕ್ಷೆ ಹೆಚ್ಚಾಗಿದೆ. ಅಂದಹಾಗೆ ಇದು ಸಾಯಿ ಪಲ್ಲವಿ ಹೊಸ ಸಿನಿಮಾದ ಪೋಸ್ಟ್ ಎನ್ನಲಾಗಿದೆ. ನಾಳೆ ಮೇ 9 ಸಾಯಿ ಪಲ್ಲವಿ ಹುಟ್ಟುಹಬ್ಬ. ಆ ಪ್ರಯುಕ್ತ ಹೊಸ ಸಿನಿಮಾದ ಬಗ್ಗೆ ಮಾಹಿತಿ ಹಂಚಿಕೊಳ್ಳಲಿದ್ದಾರೆ ಸಾಧ್ಯತೆ ಇದೆ. ಮುಂದಿನ ಸಿನಿಮಾದ ಬಗ್ಗೆ ರಿವೀಲ್ ಮಾಡುವ ಮೊದಲು ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿಸಿದ್ದಾರೆ ಸಾಯಿ ಪಲ್ಲವಿ.
ಸಾಯಿ ಪಲ್ಲವಿ ಮದುವೆ ವಿಚಾರ ವೈರಲ್; ಶೀಘ್ರದಲ್ಲೇ ಹಸೆಮಣೆ ಏರ್ತಾರಂತೆ 'ಪ್ರೇಮ್' ಬ್ಯೂಟಿ
ಓಡುತ್ತಿರುವ ಮಹಿಳೆಯ ಫೋಟೋ ಜೊತೆಗೆ 'ಅವಳೊಂದು ಅಚ್ಚರಿ..ಸ್ವಲ್ಪ ಸಮಯ ಬಚ್ಚಿಟ್ಟುಕೊಂಡಿದ್ದಳು. ಈ ಸೋಮವಾರ ನಿಮ್ಮನ್ನು ನೋಡಲು ಸಿದ್ಧಳಾಗಿದ್ದಾಳೆ. ಎಂದು ಕ್ಯಾಪ್ಷನ್ ನೀಡಿದ್ದಾರೆ. ಸಾಯಿ ಪಲ್ಲವಿ ಹೊಸ ಪೋಸ್ಟ್‌ಗೆ ಅಭಿಮಾನಿಗಳು ತರಹೇವಾರಿ ಕಾಮೆಂಟ್ ಮಾಡುತ್ತಿದ್ದಾರೆ. ಅನೇಕ ಅಭಿಮಾನಿಗಳು ಮುಂಚಿತವಾಗಿಯೇ ಬರ್ತಡೇ ವಿಶ್ ಮಾಡುತ್ತಿದ್ದಾರೆ.
ಕೃಷಿಯಲ್ಲಿ ಬ್ಯುಸಿಯಾದ ಸಾಯಿ ಪಲ್ಲವಿ; ನಟನೆಯಿಂದ ದೂರ ಸರಿತಾರಾ 'ಪ್ರೇಮಂ' ಬ್ಯೂಟಿ?
ಲವ್ ಸ್ಟೋರಿ ಸಿನಿಮಾ ದೊಡ್ಡ ಮಟ್ಟದ ಹಿಟ್ ನೀಡಿತ್ತು. ನಾಗ ಚೈತನ್ಯ ಜೊತೆ ಕಾಣಿಸಿಕೊಂಡಿದ್ದ ಸಾಯಿ ಪಲ್ಲವಿಗೆ ಅಭಿಮಾನಿಗಳಿಂದ ಬಾರಿ ಮೆಚ್ಚುಗೆವ್ಯಕ್ತವಾಗಿತ್ತು. ಶ್ಯಾಮ್ ಸಿಂಗ್ ರಾಯ್ ಕೂಡ ಅಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆ ಗೆಟ್ಟಿಸಿಕೊಂಡಿತ್ತು. ಇದೀಗ ಯಾವ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬರಲು ಸಜ್ಜಾಗಿದ್ದಾರೆ. ಯಾವ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವುದು ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಾಗಿದೆ.