ಕೇವಲ 35 ರೂಪಾಯಿಗೆ 2 ಇಡ್ಲಿ ಹಾಗೂ ವಡೆ ನೀಡುವ ಬೀದಿ ಬದಿ ಮಹಿಳೆ ವ್ಯಾಪಾರಿ ಅಂಗಡಿಗೆ ಬಾಲಿವುಡ್ ನಟ ಸೋನು ಸೂದ್ ದಿಢೀರ್ ಭೇಟಿ ನೀಡಿದ್ದಾರೆ. ಅಚ್ಚರಿ ಮೇಲೆ ಅಚ್ಚರಿ ನೀಡಿದ ಸೂದ್.
ಚೆನ್ನೈ(ಮಾ.01) ಬಾಲಿವುಡ್ ಸೇರಿ ದಕ್ಷಿಣ ಭಾರತದ ಸಿನಿಮಾಗಳಲ್ಲಿ ಸೋನು ಸೂದ್ ಭಾರಿ ಜನಪ್ರಿಯ ಹೆಸರು. ಸಿನಿಮಾಗಳಲ್ಲಿ ಹೆಚ್ಚು ಖಳನಾಯಕ ಪಾತ್ರ ಮಾಡಿರುವ ಸೋನು ಸೂದ್ ನಿಜ ಜೀವನದಲ್ಲಿ ರಿಯಲ್ ಹೀರೋ. ಕೊರೋನಾ ಸಮಯದಲ್ಲಿ ಹಾಗೂ ಅದರ ಬಳಿಕವೂ ಸೋನು ಸೂದ್ ಹಲವರಿಗೆ ನೆರವು ನೀಡಿದ್ದಾರೆ. ಹಲವರ ಪ್ರಾಣ ಉಳಿಸಿದ್ದಾರೆ. ವಿದ್ಯಾಭ್ಯಾಸಕ್ಕೆ ನೆರವಾಗಿದ್ದಾರೆ. ಈಗಲೂ ಸೋನು ಸೂದ್ ತಮ್ಮ ಸಾಮಾಜಿಕ ಕಾರ್ಯಗಳನ್ನು ನಿರಂತರವಾಗಿ ಮಾಡುತ್ತಲೇ ಇದ್ದಾರೆ. ಇದರ ನಡುವೆ ಇದೀಗ ಸೋನು ಸೂದ್ ಬೀದಿ ಬದಿ ವ್ಯಾಪಾರಿ ಅಂಗಡಿಗೆ ಬೇಟಿ ನೀಡಿ ಅಚ್ಚರಿ ನೀಡಿದ್ದಾರೆ. 15 ರೂಪಾಯಿಗೆ ದೋಸೆ, 35 ರೂಪಾಯಿಗೆ ಇಡ್ಲಿ ಮಾರುವ ಮಹಿಳೆ ಅಂಗಡಿಗೆ ಭೇಟಿ ನೀಡಿದ ಸೋನು ಸೂದ್ ಅಚ್ಚರಿ ನೀಡಿದ್ದಾರೆ.
ಚೆನ್ನೈ ನಗರದಲ್ಲಿ ಬೀದಿ ಬದಿ ಬೆಳಗಿನ ಉಪಾಹಾರವನ್ನು ಕೈಯಾರೆ ಮಾಡಿ ತಂದು ಸಣ್ಣ ಅಂಗಡಿಯಲ್ಲಿ ಮಾರಾಟ ಮಾಡುವ ಶಾಂತಿ ಅನ್ನೋ ಮಹಿಳೆ ಅಂಗಡಿಗೆ ಸೋನು ಸೂದ್ ಭೇಟಿ ನೀಡಿದ್ದಾರೆ. ಶಾಂತಿ ಅವರ ಖಾದ್ಯಗಳು ಸ್ಥಳೀಯ ಮಟ್ಟದಲ್ಲಿ ಭಾರಿ ಜನಪ್ರಿಯತೆ ಪಡೆದಿದೆ. ಚೆನ್ನೈ ಭೇಟಿ ವೇಳೆ ಸೋನು ಸೂದ್ ಈ ಬೀದಿ ಬದಿಯಲ್ಲಿರುವ ಶಾಂತಿ ಅವರ ಅಂಗಡಿಗೆ ತೆರಳಿದ್ದಾರೆ. ಬಳಿಕ 2 ಇಡ್ಲಿ ಹಾಗೂ ವಡೆ ಸವಿದಿದ್ದಾರೆ. 35 ರೂಪಾಯಿ ಬೆಲೆಯಲ್ಲಿ ಡಿಸ್ಕೌಂಟ್ ಇದೆಯಾ ಎಂದು ತಮಾಷೆ ಮಾಡಿದ್ದಾರೆ. ಇದಕ್ಕೆ ಮಹಿಳೆ ಮತ್ತೆ 5 ರೂಪಾಯಿ ಡಿಸ್ಕೌಂಟ್ ಮಾಡಿ 30 ರೂಪಾಯಿ ಎಂದಿದ್ದಾರೆ.
ಸೋನು ಸೂದ್ ವ್ಯಾಟ್ಸ್ಆ್ಯಪ್ ಖಾತೆ ಬ್ಲಾಕ್,ಸಂಕಷ್ಟದಲ್ಲಿರುವವರಿಗೆ ಸ್ಪಂದಿಸಲು ಸಾಧ್ಯವಾಗದೆ ನಟನ ಆಕ್ರೋಶ!
ಈ ಕುರಿತ ವಿಡಿಯೋವನ್ನು ಸೋನು ಸೂದ್ ಹಂಚಿಕೊಂಡಿದ್ದಾರೆ. ಶಾಂತಿ ಅನ್ನೋ ಮಹಿಳೆಯ ಅಂಗಡಿಯಲ್ಲಿರುವ ಇಡ್ಲಿ, ವಡೆ, ದೋಸೆ, ಚಟ್ನಿ, ಸಾಂಬಾರ್ ಸೇರಿದಂತೆ ಇತರ ತನಿಸುಗಳನ್ನು ವಿಡಿಯೋ ಮೂಲಕ ಪರಿಚಯಿಸಿದ್ದರೆ. ರುಚಿ ರುಚಿಯಾದ ಉಪಾಹರ ಇಲ್ಲಿ ಲಭ್ಯವಿದೆ ಎಂದು ಸೋನು ಸೂದ್ ಹೇಳಿದ್ದಾರೆ. ಶಾಂತಿ ಅವರ ಸಣ್ಣ ಹೊಟೆಲ್‌ನಲ್ಲಿ ಉಪಹಾರ ಸವಿದ ಸೋನು ಸೂದ್ ಮತ್ತೊಂದು ಅಚ್ಚರಿ ನೀಡಿದ್ದಾರೆ.
ಸೋನು ಸೂದ್ ತಂಡದಲ್ಲಿದ್ದವರಿಗೆ ಶಾಂತಿ ಅವರ ಹೊಟೆಲ್‌ನಲ್ಲಿ ಖದ್ದು ದೋಸೆ ಮಾಡಿ ನೀಡಿದ್ದಾರೆ. ಶಾಂತಿ ಅವರಿಂದ ಹಿಟ್ಟುಪಡೆದು ದೋಸೆ ಮಾಡಿ ತಂಡದವರಿಗೆ ನೀಡಿದ್ದಾರೆ. ದೋಸೆ ಬೆಲೆ ಕೇವಲ 15 ರೂಪಾಯಿ ಮಾತ್ರ. ಬಳಿಕ ಕೈಯಾರೆ ದೋಸೆ ರೆಡಿ ಮಾಡಿ ಸೋನು ಸೂದ್ ತಮ್ಮ ತಂಡದವರಿಗೆ ವಿತರಿಸಿದ್ದಾರೆ. ತಾವು ಸೇವಿಸಿದ ಇಡ್ಲಿ ವಡೆ, ತಂಡದವರು ಪಡೆದ ದೋಸೆಯ ಒಟ್ಟು ಮೊತ್ತವನ್ನು ಶಾಂತಿ ಅವರಿಗೆ ನೀಡಿದ್ದಾರೆ. ಸೋನು ಸೂದ್ ಭೇಟಿಯಿಂದ ಇದೀಗ ಶಾಂತಿ ಅವರ ಹೊಟೆಲ್ ಇದೀಗ ಭಾರಿ ಜನಪ್ರಿಯತೆ ಪಡೆದುಕೊಂಡಿದೆ. ಹಲವರು ಇದೀಗ ಶಾಂತಿ ಅವರ ಹೊಟೆಲ್‌ಗೆ ಬೇಟಿ ನೀದಿ ಉಪಾಹರ ಸೇವಿಸುತ್ತಿದ್ದಾರೆ.
ಸೋನು ಸೂದ್ ಈ ರೀತಿ ಬೀದಿ ಬದಿಯ ವ್ಯಾಪಾರಿಗ ಅಂಗಡಿಗೆ ಅಚ್ಚರಿ ಬೇಟಿ ನೀಡುವುದು ಇದೇ ಮೊದಲಲ್ಲ. ಹಲವು ಬಾರಿ ಈ ರೀತಿ ಮಾಡಿದ್ದಾರೆ. ಕಳೆದ ವರ್ಷ ಹೈದರಾಬಾದ್‌ನ ಕುಮಾರಿ ಆಂಟಿ ಅವರ ಬೀದಿ ಬದಿಯಲ್ಲಿರುವ ಅಂಗಡಿಗೆ ಬೇಟಿ ನೀಡಿದ್ದರು. ಊಟ ಸೇರಿದಂತೆ ಹಲವು ಖಾದ್ಯಗಳನ್ನು ಸೋನು ಸೂದ್ ಸವಿದಿದ್ದರು.
ಜನರ ಕಷ್ಟ ನೋಡಿಯೂ ನೋಡದಂತೆ ಸುಮ್ಮನೆ ಇರಲಾರೆ; ಬಹುಭಾಷಾ ನಟ ಸೋನು ಸೂದ್
