ಉತ್ತರ ಭಾರತದಲ್ಲಿ ನವರಾತ್ರಿ ಸಂದರ್ಭ ಅದ್ಧೂರಿಯಾಗಿ ದುರ್ಗಾ ಪೂಜೆ ನಡೆಯುತ್ತಿದ್ದು, ಈ ಬಾರಿ ಪೆಂಡಾಲ್‌ಗಳಲ್ಲಿ ಬಾಲಿವುಡ್ ನಟ ಸೋನು ಸೂದ್ ಪ್ರತಿಮೆಗಳು ಕಂಗೊಳಿಸಿವೆ.

ಕೊರೋನಾ ಸಂದರ್ಭ ಭಾರತದಲ್ಲಾದ ಲಾಕ್‌ಡೌನ್, ಕಾರ್ಮಿಕರ ಸಂಕಷ್ಟ, ನೆರವಿಗೆ ಬಂದ ನಟ ಸೋನು ಕೊಲ್ಕತ್ತಾದ ದುರ್ಗಾಪೂಜೆಯ ಪೆಂಡಾಲ್‌ಗಳ ಥೀಮ್. ಲಾಕ್‌ಡೌನ್‌ನಲ್ಲಿ ಕಾರ್ಮಿಕರಿಗೆ ಊರು ಸೇರಲು ನೆರವಾದ ಸೋನು ಸೂದ್‌ಗೆ ಗೌರವ ಸೂಚಿಲಸಾಗಿದ್ದು, ನಟನ ಪ್ರತಿಮೆಯನ್ನು ಸ್ಥಾಪಿಸಿದ್ದಾರೆ.

ಕ್ಯಾನ್ಸರ್ ಗೆದ್ದ 'ಅಧೀರ' ಅಭಿಮಾನಿಗಳಿಗೆ ಹೇಳಿದ್ದು ಒಂದೇ ಮಾತು!

ನಾವು ಈ ಬಾರಿ ಸೋನು ಸೂದ್ ಪ್ರತಿಮೆ ಸ್ಥಾಪಿಸಿದ್ದೇವೆ. ಈ ಮೂಲಕ ಜನರಿಗೆ ಕಷ್ಟದಲ್ಲಿರುವವರಿಗೆ ನೆರವಾಗಲು ಸ್ಫೂರ್ಥಿಯಾಗಲಿ ಎಂದು ಕೊಲ್ಕತ್ತಾದ ಪ್ರಫುಲ್ಲ ವೆಲ್ಫೇರ್ ಅಸೋಸಿಯೇಷನ್‌ನ ಸದಸ್ಯ ಶ್ರಿಂಜಯ್ ದತ್ತ ಆವರು ಹೇಳಿದ್ದಾರೆ.

ಕೊರೋನಾ ಲಾಕ್‌ಡೌನ್ ಸಂದರ್ಭದಲ್ಲಿ ಸಾವಿರಾರು ಕಾರ್ಮಿಕರಿಗೆ ತಮ್ಮ ಊರು ಸೇರಿಕೊಳ್ಳಲು ಸೋನು ಸೂದ್ ನೆರವಾಗಿದ್ದರು. ಆ ನಂತರ ಬಹಳಷ್ಟು ಜನರಿಗೆ ಹಲವು ರೀತಿಯಲ್ಲಿ ನಟ ನೆರವಾಗುತ್ತಲೇ ಇದ್ದಾರೆ.