ಮುಂಬೈ (ಜೂ. 09 )  ಲಾಕ್ ಡೌನ್ ಶುರುವಾದಾಗಿನಿಂದ ವಲಸೆ ಕಾರ್ಮಿಕರ ನೆರವಿಗೆ ನಿಂತಿರುವ ನಟ ಸೋನು ಸೂದ್ ಅವರನ್ನು ಪೊಲೀಸರು ತಡೆದಿದ್ದಾರೆ.  ಸೋನು ಸೂದ್ ಕಾರ್ಮಿಕರನ್ನು ಭೇಟಿಯಾಗದಂತೆ ಬಾಂದ್ರಾ ಟರ್ಮಿನಸ್ ಹೊರಗೆ ಪೋಲೀಸರು ತಡೆದಿದ್ದಾರೆ. 

ಸೋನು ಸೂದ್ ಬಿಜೆಪಿ ರಾಜಕೀಯ ಪ್ರೇರಣೆಯಿಂದ ಈ ಕೆಲಸ ಮಾಡುತ್ತಿದ್ದಾರೆ ಎಂದ ಶಿವಸೇನೆ ಆರೋಪ ಮಾಡಿದ ನಂತರ ಈ ಘಟನೆ ನಡೆದಿದೆ.  ಕಾರ್ಮಿಕರನ್ನು ಭೇಟಿಯಾಗಲು ಸೋಮವಾರ ರಾತ್ರಿ ನಿಲ್ದಾಣಕ್ಕೆ ತಲುಪಿದಾಗ ರೈಲ್ವೆ ಪ್ರೊಟೆಕ್ಷನ್ ಫೋರ್ಸ್ (ಆರ್‌ಪಿಎಫ್) ನಟನಿಗೆ ಒಳಪ್ರವೇಶಿಸಲು ಅನುಮತಿ ನೀಡಿಲ್ಲ.

ಆರತಿ ಬೆಳಗಿ ಸೋನು ಸೂದ್‌ಗೆ ಇಡ್ಲಿ ಮಾರಾಟಗಾರರ ಧನ್ಯವಾದ

ವಲಸೆ ಕಾರ್ಮಿಕರು ಬಾಂದ್ರಾ ಟರ್ಮಿನಸ್‌ನಿಂದ ಉತ್ತರ ಪ್ರದೇಶಕ್ಕೆ ಶ್ರಮಿಕ್ ವಿಶೇಷ ರೈಲಿನಲ್ಲಿ ಪ್ರಯಾಣಿಸಬೇಕಿತ್ತು. ಪೊಲೀಸರು ತಡೆದ ಕಾರಣಕ್ಕೆ ಸೋನು ಅವರಿಗೆ ಕಾರ್ಮಿಕರ ಭೇಟಿ ಮಾಡಲು ಸಾಧ್ಯವಾಗಿಲ್ಲ.

ಆದರೆ ಈ ಬಗ್ಗೆ ಪ್ರಿತಿಕ್ರಿಯೆ ನೀಡಿರುವ ನಟ, ಅಂಥ ಯಾವ ಘಟನೆ ನಡೆದಿಲ್ಲ. ನಾನು ಲಾಕ್ ಡೌನ್ ನಿಯಮ ಪಾಲನೆ ಮಾಡಿದ್ದೇನೆ ಎಂದು ಟ್ವಿಟರ್ ಮೂಲಕ ತಿಳಿಸಿದ್ದಾರೆ.