ಸೋನು ಸೂದ್ ತಮ್ಮ ಕೆಲಸಗಳಿಂದ ಜನರ ಮನಸು ಗೆಲ್ಲುತ್ತಿದ್ದಾರೆ. ತಮ್ಮಷ್ಟಕ್ಕೇ ತಾವು ತಮ್ಮಿಂದಾಗುವ ಸಹಾಯಗಳನ್ನು ಮಾಡುತ್ತಿದ್ದಾರೆ ಸೋನು ಸೂದ್. ಇದೀಗ ನಟ ಪೆಟಾ ಇಂಡಿಯಾದಿಂದ ಹಾಟೆಸ್ಟ್ ವೆಜಿಟೇರಿಯನ್ ಆಗಿ ಆಯ್ಕೆಯಾಗಿದ್ದಾರೆ.

ನಟ ಟ್ವಿಟರ್‌ನಲ್ಲಿ ಗ್ಲಾಸ್ ಟ್ರೋಫಿ ಫೋಟೋ ಶೇರ್ ಮಾಡಿಕೊಂಡಿದ್ದಾರೆ. ನಟ ಈ ಟ್ರೋಫೀಗಾಗಿ ಥ್ಯಾಂಕ್ಸ್ ಹೇಳಿ ವೆಜಿಟೇರಿಯನ್ ಪ್ರೋತ್ಸಾಹಿಸಿದ್ದಕ್ಕಾಗಿ ಥ್ಯಾಂಕ್ಸ್ ಹೇಳಿದ್ದಾರೆ. ಲಾಕ್‌ಡೌನ್ ನಂತರ ನಟ ತಮ್ಮ ಮಾನವೀಯ ಕಾರ್ಯಗಳಿಂದ ಎಲ್ಲೆಡೆ ಗುರುತಿಸಲ್ಪಡುತ್ತಿದ್ದಾರೆ.

ಅಮಿತಾಭ್‌ ಬಚ್ಚನ್‌ನನ್ನು ಹಿಂದಿಕ್ಕಿದ ಸೋನು ಸೂದ್ ನಂ.1 ಸೌತ್ ಏಷ್ಯನ್ ಸೆಲೆಬ್ರಿಟಿ

ಇತ್ತೀಚೆಗಷ್ಟೇ ನಟ ಬಡ ಜನರಿಗೆ ನೆರವಾಗುವುದಕ್ಕಾಗಿ ತಮ್ಮ ಫ್ಲಾಟ್‌ಗಳನ್ನು ಅಡವಿರಿಸಿದ್ದು, ಸುದ್ದಿಯಾಗಿತ್ತು. ಬಡ ಜನರಿಗೆ ನೆರವಾಗಲು ಸುಮಾರು 10 ಕೋಟಿ ಸಂಗ್ರಹಿಸುವುದಕ್ಕೆ ನಟ ಮುಂಬೈನ ಜುಹುವಿನಲ್ಲಿರುವ 8 ಪ್ರಾಪರ್ಟಿ ಅಡವಿರಿಸಿದ್ದರು.

ನಟ ವಿದ್ಯಾರ್ಥಿ, ವ್ಯಾಪಾರಿಸ ಏರಿ ಬಹಳಷ್ಟು ಜನರಿಗೆ ನೆರವಾಗುತ್ತಿದ್ದಾರೆ. ಇದೀಗ ನಟನನ್ನು ರಿಯಲ್ ಹೀರೋ ಎಂದು ಕೊಂಡಾಡುತ್ತಿದ್ದಾರ ಜನ. ಲಾಕ್‌ಡೌನ್ ಸಂದರ್ಭ ಜನರು ಊರಿಗೆ ಮರಳಲು ನೆರವಾಗಿದ್ದು ಎಲ್ಲೆಡೆ ಮೆಚ್ಚುಗೆಗೆ ಪಾತ್ರವಾಗಿತ್ತು.