ಆಸ್ಟ್ರೇಲಿಯಾದಲ್ಲಿ ಸೋನಾಕ್ಷಿ- ಜಹೀರ್​ ಹನಿಮೂನ್​ಗೆ ಭಂಗ ತಂದ ಸಿಂಹ! ಶಾಕಿಂಗ್​ ವಿಡಿಯೋ ವೈರಲ್​

ಆಸ್ಟ್ರೇಲಿಯಾದಲ್ಲಿ ಸೋನಾಕ್ಷಿ ಸಿನ್ಹಾ- ಜಹೀರ್​ ಇಕ್ಬಾಲ್​ ಹನಿಮೂನ್​ಗೆ ಭಂಗ ತಂದ ಸಿಂಹ! ಶಾಕಿಂಗ್​ ವಿಡಿಯೋ ವೈರಲ್​
 

Sonakshi Sinha Records Roaring Lion Outside Her Hotel Room In Australia suc

 ಬಾಲಿವುಡ್‌ ನಟ ಶತ್ರುಘ್ನ ಸಿನ್ಹಾ ಪುತ್ರಿ, ನಟಿ  ಸೋನಾಕ್ಷಿ ಸಿನ್ಹಾ ಮತ್ತು  ಜಹೀರ್ ಇಕ್ಬಾಲ್ ಮದುವೆಯ ಲೈಫ್​ ಎಂಜಾಯ್ ಮಾಡುತ್ತಿದ್ದಾರೆ. ಆದರೂ ಹಿಂದೂ-ಮುಸ್ಲಿಂ ಮದುವೆಯಾದ್ದರಿಂದ ಜೊತೆಗೆ ಅಪ್ಪನಿಗೆ ತಿಳಿಸದೇ ನಟಿ ಮದುವೆಯಾಗಿದ್ದರಿಂದಲೂ ಇವರ ಬಗ್ಗೆ ಇನ್ನೂ ಸುದ್ದಿಯಾಗುತ್ತಲೇ ಇದೆ. ಹೋದಲ್ಲಿ, ಬಂದಲ್ಲಿ ಇವರ ಮೇಲೆ ಕ್ಯಾಮೆರಾ ಕಣ್ಣು ನೆಟ್ಟಿರುತ್ತದೆ. ಅಷ್ಟಕ್ಕೂ ಇವರೇನೂ ದಿಢೀರ್‌ ಮದುವೆಯಾಗಿದ್ದಲ್ಲ. ಆರೇಳು ವರ್ಷ ಒಟ್ಟಿಗೇ ಇದ್ದು, ಡೇಟಿಂಗ್‌ ಮಾಡಿದ ಬಳಿಕ ಮದುವೆಯಾಗಿದ್ದಾರೆ. ಇವರು ಡೇಟಿಂಗ್‌ ಮಾಡುತ್ತಿದ್ದ ವಿಷಯ ಅಷ್ಟೊಂದು ಬೆಳಕಿಗೆ ಬಂದಿರದ ಹಿನ್ನೆಲೆಯಲ್ಲಿ ಮದುವೆಯಾದ ಮೇಲೆ ದಿಢೀರನೆ ಸಾಕಷ್ಟು ಚರ್ಚೆಗಳಿಗೆ ಗ್ರಾಸವಾಗಿದೆ. ಈ ಮದುವೆ ಲವ್‌ ಜಿಹಾದ್‌ ಎನ್ನುವ ಮಟ್ಟಕ್ಕೂ ಚರ್ಚೆಯಾಗಿ ಬಿಟ್ಟಿತು. ಸಾಲದು ಎನ್ನುವುದಕ್ಕೆ ಸೋನಾಕ್ಷಿ ತಮ್ಮ ತಂದೆಗೇ ತಿಳಿಸದೇ ಈ ಮದುವೆಯಾಗಿರುವುದು ಮತ್ತಷ್ಟು ವಿವಾದಕ್ಕೆ ಈಡಾಗಿತ್ತು. ಈಗ ಎಲ್ಲವೂ ಒಂದು ಹಂತಕ್ಕೆ ಬಂದಿದ್ದರೂ, ಸೋನಾಕ್ಷಿ ಮದುವೆಯ ವಿಷಯವನ್ನು ಕೆದಕುವುದು  ನೆಟ್ಟಿಗರಿಗೆ ಇನ್ನಿಲ್ಲದ ಖುಷಿ ಎನ್ನಿಸುತ್ತಿದೆ.

ಇದೀಗ ಈ ಜೋಡಿ ಆಸ್ಟ್ರೇಲಿಯಾದಲ್ಲಿ ಎಂಜಾಯ್​ ಮಾಡುತ್ತಿದೆ. ಮೆಲ್ಬೋರ್ನ್‌ನಲ್ಲಿ ನಡೆದ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ರೋಮಾಂಚಕ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದಲ್ಲಿಯೂ ಇವರು ಭಾಗವಹಿಸಿದ್ದರು. ಇದಕ್ಕೆ ಸಂಬಂಧಿಸಿದ ಹಲವು ಚಿತ್ರ, ವಿಡಿಯೋಗಳನ್ನು ಅವರು ನಟಿ ಸೋಷಿಯಲ್​  ಮೀಡಿಯಾದಲ್ಲಿ ಶೇರ್​ ಮಾಡಿದ್ದರು.  ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್ (MCG) ನಲ್ಲಿ ದಂಪತಿ ಭಾರತೀಯ ಧ್ವಜವನ್ನು ಬೀಸುತ್ತಾ "ಭಾರತ, ಭಾರತ, ಭಾರತ," ಎಂದು ಘೋಷಣೆ ಕೂಗುವ ವಿಡಿಯೋ ಶೇರ್​ ಮಾಡಿಕೊಂಡಿದ್ದರು. ಇದೀಗ ಹೋಟೆಲ್​ ಹೊರಗೆ ಸಿಂಹವೊಂದು ಘರ್ಜಿಸುತ್ತಿರುವ ವಿಡಿಯೋ ಅನ್ನು ನಟಿ ಶೇರ್​ ಮಾಡಿಕೊಂಡಿದ್ದಾರೆ. 

ಜಹೀರ್ ಇಕ್ಬಾಲ್ ಜೊತೆಗಿನ ರಹಸ್ಯ ಸಂಬಂಧದ ಕುರಿತು ಮೊದಲ ಬಾರಿಗೆ ನಟಿ ಸೋನಾಕ್ಷಿ ಸಿನ್ಹಾ ಓಪನ್​ ಮಾತು

ಈ ವಿಡಿಯೋದಲ್ಲಿ ಮಲಗುವ ಕೋಣೆಯ ಬಳಿ ಇರುವ ಗ್ಲಾಸ್​ ಕಿಟಕಿಯ ಹೊರಗೆ ಸಿಂಹ ಘರ್ಜಿಸುವುದನ್ನು ನೋಡಬಹುದು. ಇದನ್ನು ನಟಿ ಸೋನಾಕ್ಷಿ ವಿಡಿಯೋ ಮಾಡಿ ಶೇರ್​ ಮಾಡಿದ್ದಾರೆ. ಇದನ್ನು ನೋಡಿದರೆ ಭಯ ಬೀಳಿಸುವಂತಿದೆ. ಬೆಳಿಗ್ಗೆ ಆಲಾರಾಂ ರೀತಿಯಲ್ಲಿ ಸಿಂಹದ ಘರ್ಜನೆ ಕೇಳಿಸಿತು ಎಂದು ನಟಿ ಬರೆದುಕೊಂಡಿದ್ದಾರೆ. ಈ ವಿಡಿಯೋದಲ್ಲಿ ಸೋನಾಕ್ಷಿ ಅವರು, ತಮ್ಮ  ಹೋಟೆಲ್ ಕೋಣೆಯ ಹಾಸಿಗೆಯ ಮೇಲೆ ಕುಳಿತು, ಸಿಂಹದ ಘರ್ಜನೆಯ ವಿಡಿಯೋ ಮಾಡುವುದನ್ನು ನೋಡಬಹುದು.  "ಇಂದಿನ ಅಲಾರಾಂ ಗಡಿಯಾರ" ಎಂದು ಕ್ಯಾಪ್ಷನ್​ ಕೊಟ್ಟು ಅದನ್ನು ಅವರು ಇನ್​ಸ್ಟಾಗ್ರಾಮ್​ನಲ್ಲಿ ಶೇರ್​ ಮಾಡಿದ್ದಾರೆ.    

ಇದಕ್ಕೆ ಥರಹೇವಾರಿ ಕಮೆಂಟ್ಸ್​ ಸುರಿಮಳೆಯಾಗಿದೆ. ನಿಮ್ಮ ಹನಿಮೂನ್​ ಭಂಗಗೊಳಿಸಲು ಸಿಂಹ ಬಂದಿದೆ ಎಂದು ಹೇಳಿದರೆ, ನಿಮಗೆ ಹುಟ್ಟುವ ಮಗು ಸಿಂಹದ ರೀತಿ ಇರಲಿ ಎಂಬ ಸೂಚನೆ ಇದಾಗಿದೆ ಎಂದು ಮತ್ತೆ ಕೆಲವರು ಬರೆದಿದ್ದಾರೆ. ಇನ್ನು ಕೆಲವರು ಈ ವಿಡಿಯೋಗೂ ಹಿಂದೂ-ಮುಸ್ಲಿಂ ಮಾತನ್ನು ಎಳೆದು ತಂದಿದ್ದಾರೆ. ಇನ್ನು ನಟಿಯ ಸಿನಿಮಾ ಪಯಣದ ಕುರಿತು ಹೇಳುವುದಾದರೆ,  ಸೋನಾಕ್ಷಿ ಅವರ  ಕಕುಡಾ ಕಳೆದ ಜುಲೈನಲ್ಲಿ ತೆರೆ ಕಂಡಿದೆ.  ಆದಿತ್ಯ ಸರ್ಪೋತದಾರ್ ನಿರ್ದೇಶನದ ಈ ಚಿತ್ರವು ಹಾರರ್​ ಹಾಗೂ ಹಾಸ್ಯ ಮಿಶ್ರಿತ ಈ ಸಿನಿಮಾದಲ್ಲಿ  ರಿತೇಶ್ ದೇಶ್‌ಮುಖ್, ಸೋನಾಕ್ಷಿ ಸಿನ್ಹಾ ಮತ್ತು ಸಾಕಿಬ್ ಸಲೀಮ್ ಮುಖ್ಯ ಭೂಮಿಕೆಯಲ್ಲಿದ್ದಾರೆ. ಮದುವೆಯಾಗಲು ಬಯಸುವ ಯುವ ಜೋಡಿಗಳಾದ ಇಂದಿರಾ (ಸೋನಾಕ್ಷಿ ಸಿನ್ಹಾ) ಮತ್ತು ಸನ್ನಿ (ಸಾಕಿಬ್ ಸಲೀಂ) ಹಲವಾರು  ಅಡೆತಡೆಗಳನ್ನು ಎದುರಿಸುತ್ತಾರೆ.  ಸಂಪ್ರದಾಯಕ್ಕೆ ಅಂಟಿಕೊಂಡಿರುವ ಇಂದಿರಾ ಅವರ ತಂದೆಗೆ ಇಂಗ್ಲಿಷ್ ಮಾತನಾಡುವ ಅಳಿಯ ಬೇಕು. ಸನ್ನಿ ಭಾಷಾ ಪರೀಕ್ಷೆಯಲ್ಲಿ ವಿಫಲವಾದಾಗ, ಅವನು ಮತ್ತು ಇಂದಿರಾ ಓಡಿಹೋಗಲು ನಿರ್ಧರಿಸುತ್ತಾರೆ.  ಆದರೆ ವಿಧಿಯಾಟ ಬೇರೆಯಾಗುತ್ತದೆ. ಮುಂದೇನಾಗುತ್ತದೆ ಎನ್ನುವ ಚಿತ್ರ ಇದಾಗಿದೆ.

ಸೋನಾಕ್ಷಿ ಕೂಲಿಂಗ್​ ಗ್ಲಾಸ್​ ತೆಗೆಸಿದ ಏರ್​ಪೋರ್ಟ್​ ಸಿಬ್ಬಂದಿ! ಇದಕ್ಕೂ ಮದ್ವೆಗೂ ಏನಪ್ಪಾ ಸಂಬಂಧ?

Latest Videos
Follow Us:
Download App:
  • android
  • ios