ಬಾಲಿವುಡ್ ಸೆಲೆಬ್ರಿಟಿಗಳು ಲಾಕ್‌ಡೌನ್ ಸಮಯದಲ್ಲಿ ಅನ್‌ಲಾಕ್‌ ನಂತರವೂ ಮಾಯಾನಗರಿ ಮುಂಬೈನಲ್ಲಿ ಮನೆ ಕೊಳ್ತಿದ್ದಾರೆ. ಇದೀಗ ನಟಿ ಸೋನಾಕ್ಷಿ ಸಿನ್ಹಾ ಅವರು ಹೊಸ ಮನೆ ಖರೀದಿಸಿದ್ದಾರೆ.

ಬಾಲಿವುಡ್‌ನ ಪ್ರಮುಖ ಸೆಲೆಬ್ರಟಿಗಳು ಪ್ರಾಪರ್ಟಿ ಮೇಲೆ ಇನ್ವೆಸ್ಟ್ ಮಾಡುತ್ತಿದ್ದಾರೆ. ಹೃತಿಕ್ ರೋಷನ್ ಮತ್ತು ಜಾಹ್ನವಿ ಜುಹುವಿನಲ್ಲಿ ಆಸ್ತಿ ಖರೀದಿಸಿದ್ದಾರೆ. ಆಲಿಯಾ ಭಟ್ ತಮ್ಮ ಬಾಯ್‌ಫ್ರೆಂಡ್ ರಣಬೀರ್ ಕಪೂರ್ ಮನೆಯ ಪಕ್ಕದಲ್ಲಿಯೇ ಬಾಂದ್ರಾದಲ್ಲಿ ಮನೆ ಖರೀದಿಸಿದ್ದಾರೆ.

Add Asianetnews Kannada as a Preferred SourcegooglePreferred

ಜಾಕ್ವೆಲಿನ್ ಫರ್ನಾಂಡೀಸ್ ಮುಂಬೈನಲ್ಲಿ ಹೊಸ ಅಪಾರ್ಟ್‌ಮೆಂಟ್‌ಗೆ ಶಿಫ್ಟ್ ಆಗಿದ್ದಾರೆ. ನಟಿ ಸೋನಾಕ್ಷಿ ಸಿನ್ಹಾ ಕೂಡಾ ಬಾಂದ್ರಾದಲ್ಲಿ ಪ್ರಾಪರ್ಟಿ ಮೇಲೆ ಹೂಡಿಕೆ ಮಾಡಿದ್ದಾರೆ. 4 ಬಿಎಚ್‌ಕೆ ಅಪಾರ್ಟ್‌ಮೆಂಟ್ ಬಾಂದ್ರಾದಲ್ಲಿದೆ.

ಯುವರಾಜ್ ಸಿಂಗ್ ಹೆಂಡತಿ ಹೇಗಾಗಿದ್ದಾರೆ ನೋಡಿ, ಗುರುತೇ ಸಿಗೋಲ್ಲ!

ನಾನು ಕೆಲಸ ಮಾಡಲು ಪ್ರಾರಂಭಿಸಿದಾಗಿನಿಂದ, ನನ್ನ ಕಷ್ಟಪಟ್ಟು ಸಂಪಾದಿಸಿದ ಹಣದಿಂದ ನನ್ನ ಸ್ವಂತ ಮನೆಯನ್ನು ಖರೀದಿಸುವುದು ನನ್ನ ಕನಸಾಗಿತ್ತು. ನಾನು ಆ ಟೈಂ ಲಿಮಿಟ್ ದಾಟಿರಬಹುದು. ಆದರೆ ಅದು ಅಂತಿಮವಾಗಿ ನಿಜವಾಗಿದೆ ಎಂದು ದಬಾಂಗ್ ನಟಿ ಖುಷಿ ಹಂಚಿಕೊಂಡಿದ್ದಾರೆ.

ಅವರು ಪ್ರಸ್ತುತ ತಮ್ಮ ತಂದೆ ನಟ ಶತ್ರುಘನ್ ಸಿನ್ಹಾ ಮತ್ತು ಪೂನಮ್ ಸಿನ್ಹಾ ಅವರೊಂದಿಗೆ ತಮ್ಮ ಜುಹು ಬಂಗಲೆಯಲ್ಲಿ ವಾಸಿಸುತ್ತಿದ್ದಾರೆ ಮತ್ತು ಅದೇ ರೀತಿ ಮುಂದುವರಿಸಲು ಯೋಜಿಸಿದ್ದಾರೆ.