Asianet Suvarna News Asianet Suvarna News

ಡ್ರಗ್ಸ್ ಕೇಸಲ್ಲಿ ಸಿಕ್ಕಿಹಾಕಿಕೊಂಡ ಮಗನಿಗೆ ನಯಾ ಪೈಸೆ ಇಲ್ಲ : ಶತಕೋಟಿಗೂ ಹೆಚ್ಚು ಆಸ್ತಿ ದಾನ ಮಾಡಿದ ನಟ

  • ಅತ್ಯಧಿಕ ಸಂಭಾವನೆ ಪಡೆಯೋ ನಟನ ಮಗನಲ್ಲಿ ಡ್ರಗ್ಸ್ ಸಂಗ್ರಹ
  • ನಯಾ ಪೈಸೆ ಕೊಡಲ್ಲ ನಿಂಗೆ ಎಂದ ತಂದೆ
  • ಶತಕೋಟಿಗೂ ಹೆಚ್ಚಿನ ಆಸ್ತಿ ಹೊಂದಿರೋ ನಟನ ನಡೆ ಇದು
  • ಫೋರ್ಬ್ಸ್ ಲಿಸ್ಟ್‌ನಲ್ಲಿ ಬಂದ ಶ್ರೀಮಂತ ನಟನ ಆಸ್ತಿ ಎಲ್ಲವೂ ದಾನ

 

Son arrested in Drugs case Jackie Chan donate his fortune to charity instead of giving it to his son dpl
Author
Bangalore, First Published Oct 5, 2021, 10:54 AM IST
  • Facebook
  • Twitter
  • Whatsapp

ಸ್ಟಾರ್ ಮಕ್ಕಳ ಡ್ರಗ್ಸ್ ಕೇಸ್‌ಗಳು ಇದೇ ಮೊದಲಲ್ಲ. ಇಲ್ಲಿಯೇ ಮೊದಲೂ ಅಲ್ಲ. ವಿಶ್ವದ ಹಲವು ರಾಷ್ಟ್ರಗಳಲ್ಲಿ ಸ್ಟಾರ್ ನಟರ, ಸಿಂಗರ್‌ಗಳು ಬಹಳಷ್ಟು ಸೆಲೆಬ್ರಿಟಿಗಳು ಡ್ರಗ್ಸ್ ಕೇಸ್‌ನಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ. ಹಾಲವುಡ್ ಸ್ಟಾರ್ ಜಾಕಿ ಚಾನ್ ಮಗ ಕೂಡಾ ಇದಕ್ಕೆ ಹೊರತಲ್ಲ. ವಿಶ್ವದಾದ್ಯಂತ ಅಭಿಮಾನಿಗಳನ್ನು ಹೊಂದಿರುವ ಪ್ರತಿಭಾನ್ವಿತ ನಟ ಫೈಟರ್ ಜಾಕಿ ಚಾನ್ ಮಗನೂ ಒಮ್ಮೆ ಡ್ರಗ್ಸ್ ಕೇಸ್‌ನಲ್ಲಿ ಸಿಕ್ಕಿಹಾಕಿಕೊಂಡಿದ್ದ.

ಮಗ ಮಾದಕ ವಸ್ತುಗಳನ್ನು ಇಟ್ಟುಕೊಂಡಿದ್ದು ಆ ಪ್ರಕರಣ ಸುದ್ದಿಯಾಗಿದ್ದೇ ತಡ ಜಾಕಿ ಚಾನ್ ತೆಗೆದುಕೊಂಡ ನಿರ್ಧಾರ, ಆತನ ನಡೆ ಎಲ್ಲರಿಗೂ ಅಚ್ಚರಿ ತಡುವಂತಿತ್ತು. ಹಾಗೆಯೇ ಹಣ, ಜೀವನದ ಕುರಿತು ನಟನ ದೃಷ್ಟಿಕೋನವೂ ಬಹಳಷ್ಟು ಭಿನ್ನವಾಗಿತ್ತು.

ಐಷಾರಾಮಿ ಹಡಗಿನಲ್ಲಿ ಡ್ರಗ್ಸ್ ಪಾರ್ಟಿ: ಶಾರುಖ್ ಪುತ್ರ ಆರ್ಯನ್ ಖಾನ್ NCB ವಶಕ್ಕೆ?

ನಟ ಜಾಕಿ ಚಾನ್ ಏಷ್ಯಾದಲ್ಲಿ ಮಾತ್ರವಲ್ಲ, ಹಾಲಿವುಡ್ ನಲ್ಲೂ ಖ್ಯಾತಿ ಹೊಂದಿರುವ ವಿಶ್ವದ ಅತಿ ಹೆಚ್ಚು ಸಂಭಾವನೆ ಪಡೆಯುವ ನಟರಲ್ಲಿ ಒಬ್ಬರಾಗಿದ್ದಾರೆ. ಅವರು ಜೂನ್ 2019 ಮತ್ತು ಜೂನ್ 2020 ರ ನಡುವೆ $ 40 ಮಿಲಿಯನ್ ಅಂದರೆ ಶತಕೋಟಿಗಳಿಗಿಂತಲೂ ಹೆಚ್ಚು ಗಳಿಸಿದ್ದಾರೆ ಎಂದು ಫೋರ್ಬ್ಸ್ ಅಂದಾಜಿಸಿದೆ.

ಆದರೆ ಒಂದು ದಶಕದ ಹಿಂದೆ ನಟನು ತನ್ನ 350 ದಶಲಕ್ಷ ಡಾಲರ್ ಮೌಲ್ಯವನ್ನು ದಾನ ನೀಡುವುದಾಗಿ ಹೇಳಿದ್ದರು. ಅದನ್ನು ತನ್ನ ಮಗನಾದ ಜೈಸಿಗೆ ನೀಡುವುದಿಲ್ಲ ಎಂದು ಹೇಳಿದ್ದರು.

ಅವನು ಸಮರ್ಥನಾಗಿದ್ದರೆ, ಅವನು ತನ್ನ ಸ್ವಂತ ಹಣವನ್ನು ಸಂಪಾದಿಸಬಹುದು. ಅವನು ಸಮರ್ಥನಲ್ಲದಿದ್ದರೆ ಅವನು ನನ್ನ ಹಣವನ್ನು ವ್ಯರ್ಥ ಮಾಡುತ್ತಾನೆ ಎಂದು 2011 ರಲ್ಲಿ ಜಾಕಿ ಹೇಳಿದ್ದು ಅರ್ಥಪೂರ್ಣವಾಗಿತ್ತು. ಜೇಸಿ ಜಾಕಿ ಮತ್ತು ಅವರ ಪತ್ನಿ ಜೋನ್ ಲಿನ್ ಅವರ ಏಕೈಕ ಪುತ್ರ, ಅವರು 1982 ರಲ್ಲಿ ವಿವಾಹವಾದರು. 2014 ರಲ್ಲಿ, ಜೇಸಿಯನ್ನು ಡ್ರಗ್ಸ್ ಇಟ್ಟುಕೊಂಡಿದ್ದಕ್ಕಾಗಿ ಬಂಧಿಸಲಾಗಿತ್ತು.

ಜಾಕಿ ತನ್ನ ಮಗನ ಪರವಾಗಿ ಕ್ಷಮೆ ಕೇಳಿದ್ದರು. ಈ ಘಟನೆಯ ಬಗ್ಗೆ ತೀವ್ರ ಕೋಪಗೊಂಡಿದ್ದಾರೆ ಎಂದು ಹೇಳಿದ್ದರು. ಯುವಕರು ಜೇಸಿಯನ್ನು ಎಚ್ಚರಿಕೆಯ ಕಥೆಯಾಗಿ ನೋಡುತ್ತಾರೆ. ಮಾದಕವಸ್ತುಗಳಿಂದ ದೂರವಿರುತ್ತಾರೆ ಎಂದು ನಾನು ಭಾವಿಸುತ್ತೇನೆ ಎಂದು ಅವರು ಬರೆದಿದ್ದರು. ನಾನು ನನ್ನ ಮಗನನ್ನು ಸರಿಯಾಗಿ ಬೆಳೆಸುವಲ್ಲಿ ವಿಫಲವಾದೆ. ನಾನು ಕೂಡ ಜವಾಬ್ದಾರಿಯನ್ನು ಹೊತ್ತುಕೊಳ್ಳಬೇಕು. ಜೈಸೀ ಮತ್ತು ನಾನು ಸಮಾಜಕ್ಕೆ ಕ್ಷಮೆಯಾಚಿಸುತ್ತೇವೆ ಎಂದಿದ್ದರು.

ಜೈಲಿನಿಂದ ಬಿಡುಗಡೆಯಾದ ನಂತರ, ಜೇಸಿ ತನ್ನ ತಂದೆ ಅವನಿಗೆ ಕ್ಷೌರ ಮಾಡುವ ಫೊಟೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದ. ಜಾಕಿ ಕೊನೆಯದಾಗಿ 2020 ರಲ್ಲಿ ಬಿಡುಗಡೆಯಾದ ವ್ಯಾನ್ಗಾರ್ಡ್ ಎಂಬ ಆಕ್ಷನ್ ಚಿತ್ರದಲ್ಲಿ ಕಾಣಿಸಿಕೊಂಡರು.

Follow Us:
Download App:
  • android
  • ios