ಖ್ಯಾತ ನಟ ಶಿವಾಜಿ ಗಣೇಶನ್ ಮೊಮ್ಮಗ ದುಶ್ಯಂತ್, ಈಶಾನ್ ಪ್ರೊಡಕ್ಷನ್ಸ್ ಮೂಲಕ ಧನಭಾಗ್ಯಂ ಎಂಟರ್ಪ್ರೈಸಸ್‌ನಿಂದ 3.74 ಕೋಟಿ ಸಾಲ ಪಡೆದಿದ್ದರು. ಸಿನಿಮಾ ಅರ್ಧಕ್ಕೆ ನಿಂತ ಕಾರಣ ಸಾಲ ಮರುಪಾವತಿ ಸಾಧ್ಯವಾಗಲಿಲ್ಲ. ಧನಭಾಗ್ಯಂ ಸಂಸ್ಥೆ ನ್ಯಾಯಾಲಯದ ಮೊರೆ ಹೋದ ಕಾರಣ, ದುಶ್ಯಂತ್‌ಗೆ ತಾತನಿಂದ ಬಂದ ಆಸ್ತಿಯನ್ನು ಜಪ್ತಿ ಮಾಡಲು ಮದ್ರಾಸ್ ಹೈಕೋರ್ಟ್ ಆದೇಶಿಸಿದೆ. ಈ ತೀರ್ಪು ಶಿವಾಜಿ ಗಣೇಶನ್ ಅಭಿಮಾನಿಗಳಿಗೆ ಬೇಸರ ತಂದಿದೆ.

ಖ್ಯಾತ ನಟ, ನಿರ್ಮಾಪಕ ನಡಿಗರ್ ತಿಲಗಂ ಶಿವಾಜಿ ಗಣೇಶನ್ ಅವರ ಮನೆಯನ್ನ ಜಪ್ತಿ ಮಾಡೋಕೆ ಹೈಕೋರ್ಟ್ ಒಂದು ದೊಡ್ಡ ತೀರ್ಪು ಕೊಟ್ಟಿದೆ. ಚೆನ್ನೈನಲ್ಲಿರುವ ಅವರ ವಿಶಾಲವಾದ ಮನೆಯ ಒಂದು ಭಾಗವನ್ನು ಮುಟ್ಟುಗೋಲು ಹಾಕಿಕೊಳ್ಳಲು ಆದೇಶಿಸಿದೆ. ಈಗ ಇದು ತಮಿಳುನಾಡಲ್ಲಿ ದೊಡ್ಡ ಸುದ್ದಿ ಆಗ್ತಿದೆ. ಅವರ ಮನೆ ಯಾಕೆ ಜಪ್ತಿ ಮಾಡ್ಬೇಕಾಯಿತು? ಏನ್ ನಡೀತು?

ಶಿವಾಜಿ ಗಣೇಶನ್ ಅವರ ಮೊಮ್ಮಗ, ನಟ ದುಶ್ಯಂತ್ ಮತ್ತು ಅವರ ಪತ್ನಿ ಅಭಿರಾಮಿ ಪಾಲುದಾರರಾಗಿರುವ ಈಸನ್ ಪ್ರೊಡಕ್ಷನ್ಸ್, ನಟ ವಿಷ್ಣು ವಿಶಾಲ್, ನಟಿ ನಿವೇತಾ ಪೇತುರಾಜ್ ಮತ್ತು ಇತರರು ನಟಿಸಿರುವ ಜಗಜಾಲ ಕಿಲ್ಲಾಡಿ ಚಿತ್ರವನ್ನು ನಿರ್ಮಿಸಿದೆ. ಚಿತ್ರದ ನಿರ್ಮಾಣಕ್ಕಾಗಿ, ಅವರು ಧನಭಾಗ್ಯಂ ಎಂಟರ್ಪ್ರೈಸಸ್ ಅನ್ನೋ ಕಂಪನಿಯಿಂದ 3.74 ಕೋಟಿ ರೂ. ಸಾಲ ಪಡೆದರು. ಈ ಸಾಲವನ್ನು 30 ಪ್ರತಿಶತ ವಾರ್ಷಿಕ ಬಡ್ಡಿಯೊಂದಿಗೆ ಮರುಪಾವತಿಸಲಾಗುವುದು ಎಂದು ಭರವಸೆ ನೀಡಲಾಯಿತು. ಆಗ್ಲೇ ನಷ್ಟದಲ್ಲಿದ್ದಾಗ, ಒಂದು ಸಿನಿಮಾ ಮಾಡಿ ಸಾಲ ತೀರಿಸೋಣ ಅಂತ ಧನಭಾಗ್ಯಂ ಎಂಟರ್ಪ್ರೈಸಸ್ ಅನ್ನೋ ಕಂಪನಿಯಿಂದ ತೆಗೆದ ಸಾಲ ತೀರಿಸಲಾಗಲಿಲ್ಲ. 'ಜಗಜಾಲ ಕಿಲಾಡಿ' ಸಿನಿಮಾ ಅರ್ಧಕ್ಕೆ ನಿಂತು ಹೋಯ್ತು, ಬಡ್ಡಿ ಮಾತ್ರ ಜಾಸ್ತಿ ಆಯ್ತು. ಸಾಲ ಮತ್ತೆ ಬಡ್ಡಿ ಎರಡೂ ಕಟ್ಟೋಕೆ ಆಗ್ಲಿಲ್ಲ.

ಈ ಕಾರಣಕ್ಕೆ, ದುಶ್ಯಂತ್ ಸಾಲ ಕಟ್ಟಿಲ್ಲ ಅಂತ ಧನಭಾಗ್ಯ ಸಂಸ್ಥೆ ಮದ್ರಾಸ್ ಹೈಕೋರ್ಟ್ಗೆ ಹೋಯ್ತು. ಕೋರ್ಟ್ ಮಧ್ಯವರ್ತಿಗಳ ಮೂಲಕ ಸಮಸ್ಯೆ ಸರಿ ಮಾಡ್ಕೊಳ್ಳಿ ಅಂತ ಹೇಳಿತು. ಮಧ್ಯವರ್ತಿಗಳು ಸಿನಿಮಾ ಮಾಡಿ ಧನಭಾಗ್ಯ ಸಂಸ್ಥೆಗೆ ಕೊಟ್ಟುಬಿಡಿ ಅಂತ ಹೇಳಿದ್ರು.

ಆದ್ರೆ ದುಶ್ಯಂತ್ ಸಿನಿಮಾ ಪೂರ್ತಿ ಮಾಡಿಲ್ಲ, ಸಾಲ ತಗೊಂಡು ಹಳೆ ಬಾಕಿ ತೀರಿಸಿದೆ ಅಂತ ಹೇಳಿದ್ರು. ಅದಕ್ಕೆ ಕೋರ್ಟ್ ರೇಗಾಡಿತ್ತು. ದುಶ್ಯಂತ್‌ಗೆ ತಾತ ಶಿವಾಜಿ ಗಣೇಶನ್ ಕಡೆಯಿಂದ ಬಂದ ಆಸ್ತಿಯನ್ನ ಜಪ್ತಿ ಮಾಡೋಕೆ ಕೋರ್ಟ್ ಆರ್ಡರ್ ಮಾಡಿತು. ಮನೆಗೆ ಬೀಗ ಹಾಕೋಕೆ ಅಧಿಕಾರಿಗಳಿಗೆ ಹೇಳಿತು. ಇದು ಗೊತ್ತಾದ ಮೇಲೆ ಶಿವಾಜಿ ಗಣೇಶನ್ ಅಭಿಮಾನಿಗಳು ಬೇಜಾರು ಮಾಡ್ಕೊಂಡಿದ್ದಾರೆ. ಸದ್ಯ ಪ್ರಕರಣವನ್ನು ಪ್ರಕರಣವನ್ನು ಮಾರ್ಚ್ 5 ಕ್ಕೆ ಮುಂದೂಡಲಾಗಿದೆ.

ದಕ್ಷಿಣ ಭಾರತದ ಚಲನಚಿತ್ರೋದ್ಯಮದ ಅವಿಭಾಜ್ಯ ಅಂಗವಾಗಿರುವ ಈ ಮನೆ, ಚೆನ್ನೈನ ಟಿ ನಗರದಲ್ಲಿರುವ ಸೌತ್ ಬೋಗ್ ರಸ್ತೆಯಲ್ಲಿದೆ, ಪ್ರಸ್ತುತ ಚೆವಲಿಯರ್ ಶಿವಾಜಿ ಗಣೇಶನ್ ರಸ್ತೆಯಲ್ಲಿದೆ. ನಟ ಮತ್ತು ನಿರ್ಮಾಪಕ ರಾಮ್‌ಕುಮಾರ್ ಗಣೇಶನ್ ಅವರ ಮಗ ಆರ್.ಜಿ. ದುಶ್ಯಂತ್. ಶಿವಾಜಿ ಗಣೇಶನ್ ತಮಿಳು ಚಿತ್ರರಂಗದ ಒಬ್ಬ ಪ್ರತಿಭಾನ್ವಿತ ವ್ಯಕ್ತಿಯಾಗಿದ್ದರು, ಅವರು 2001 ರಲ್ಲಿ ತಮ್ಮ 72 ನೇ ವಯಸ್ಸಿನಲ್ಲಿ ನಿಧನರಾದರು. ಅವರು ಸಾಯುವವರೆಗೂ ಚೆನ್ನೈನ ಹೃದಯಭಾಗದಲ್ಲಿರುವ ಈ ಬಂಗಲೆಯಲ್ಲಿ ವಾಸಿಸುತ್ತಿದ್ದರು. 

ರಾಮ್‌ಕುಮಾರ್ ಅವರ ತಂದೆ ಶಿವಾಜಿಯವರ ಮನೆ 22 ಗ್ರೌಂಡ್‌ ಮತ್ತು 440 ಚದರ ಅಡಿಗಳಲ್ಲಿ ಹರಡಿಕೊಂಡಿರುವ ಬಂಗಲೆಯ ನಾಲ್ಕನೇ ಒಂದು ಭಾಗವನ್ನು ಮುಟ್ಟುಗೋಲು ಹಾಕಿಕೊಳ್ಳಲು ಆದೇಶವಿದೆ.

ನ್ಯಾಯಾಲಯದ ಈ ಆದೇಶದ ನಂತರ, ಸಬ್-ರಿಜಿಸ್ಟ್ರಾರ್ ಒಟ್ಟು ಸುಮಾರು 53,240 ಚದರ ಅಡಿ ವಿಸ್ತೀರ್ಣದಲ್ಲಿ 13,310 ಚದರ ಅಡಿ ಆಸ್ತಿಯ ಎನ್ಕಂಬರೆನ್ಸ್ ಪ್ರಮಾಣಪತ್ರವನ್ನು ನಮೂದಿಸಲಾಗಿದೆ. ಈ ಇಡೀ ಆಸ್ತಿಯು ₹ 88.50 ಕೋಟಿ ಬೆಲೆಬಾಳುತ್ತದೆ. ಆಸ್ತಿಯ ನಾಲ್ಕನೇ ಒಂದು ಭಾಗದ ಪಾಲು ಅಂದರೆ ಸುಮಾರು ₹ 22.15 ಕೋಟಿ ಮೌಲ್ಯ ಇದ್ದು, ಇದು ಬಾಕಿ ಬಾಕಿಗಳನ್ನು ವಸೂಲಿ ಮಾಡಲು ಸಾಕಾಗುತ್ತದೆ ಎಂದು ಹೇಳಿದೆ.