Asianet Suvarna News Asianet Suvarna News

ಹಾಡುವಾಗ ತಲೆಗೆ ಬಡಿದ ಡ್ರೋನ್: ವೇದಿಕೆಯಲ್ಲೇ ಕುಸಿದ ಖ್ಯಾತ ಗಾಯಕ ಬೆನ್ನಿ ದಯಾಳ್, ವಿಡಿಯೋ ವೈರಲ್

ವೇದೆಕಯಲ್ಲಿ ಹಾಡುವಾಗ ಗಾಯಕನ ತೆಲೆಗೆ ಡ್ರೋನ್ ಬಂದು ಬಡಿದಿದೆ. ಅಲ್ಲೇ ಕುಸಿದ ಖ್ಯಾತ ಗಾಯಕ ಬೆನ್ನಿ ದಯಾಳ್ ಅವರನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಲಾಯಿತು.  

Singer Benny Dayal Gets Hit By Drone During Live Concert In Chennai sgk
Author
First Published Mar 5, 2023, 5:05 PM IST | Last Updated Mar 5, 2023, 5:05 PM IST

ಸಂಗೀತ, ಡಾನ್ಸ್, ಭಾಷಣ ಯಾವುದೇ ಕಾರ್ಯಮಕ್ರಮಗಳಿರಲಿ ಅಲ್ಲಿ ಡ್ರೋನ್ ಹರ್ತಾ ಇರುತ್ತೆ. ಇನ್ನೇನು ಮುಖಕ್ಕೆ ಬಂದು ಹೊಡೆಯುತ್ತೇನೋ ಎನ್ನುವ ಹಾಗೆ ಅನಿಸುತ್ತದೆ. ಈಗ ಹೆಚ್ಚಾಗಿ ಡ್ರೋನ್ ಕ್ಯಾಮರಾಗಳನ್ನು ಬಳಸಲಾಗುತ್ತದೆ. ಆದರೆ ಕೆಲವೊಮ್ಮೆ ಡ್ರೋಣ್‌ನಿಂದ ಯಾವ ರೀತಿ ಯಡವಟ್ಟು ಆಗುತ್ತದೆ ಎನ್ನುವುದಕ್ಕೆ  ಚೆನ್ನೈ ಘಟನೆ ಸಾಕ್ಷಿ. ಚೆನ್ನೈನಲ್ಲಿ ನಡೆದ ಲೈವ್ ಕನ್ಸರ್ಟ್ ವೇಳೆ ಬಾಲಿವುಡ್ ಗಾಯಕ ಬೆನ್ನಿ ದಯಾಳ್ ಅವರ ತೆಲೆಗೆ ಡ್ರೋಣ್ ಬಡಿದು ಗಾಯಗೊಂಡಿದ್ದಾರೆ. ವೇದಿಕೆಯಲ್ಲಿ ಹಾಡುತ್ತಿದ್ದ ಬೆನ್ನಿ ದಯಾಳ್ ಅವರಿಗೆ ಹಿಂಬದಿಯಿಂದ ಬಂದು ಡ್ರೋಣ್ ತಲೆಗೆ ಬಡಿದಿದೆ. ಬಳಿಕ ಬೆನ್ನಿ ಅಲ್ಲೆ ಕುಸಿದು ಕುಳಿತರು. ವೆಲ್ಲೂರ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಸಾಂಸ್ಕೃತಿಕ ಉತ್ಸವದಲ್ಲಿ ಬೆನ್ನಿ ದಯಾಳ್ ಪ್ರದರ್ಶನ ನೀಡುತ್ತಿದ್ದರು. ಆಗ ಘಟನೆ ಸಂಭವಿಸಿದೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. 

'ಊರ್ವಶಿ ಊರ್ವಶಿ....' ಹಾಡಿಗೆ ವೇದಿಕೆಯಲ್ಲಿ ಪ್ರದರ್ಶನ ನೀಡುತ್ತಿದರು. ಕೆಲವೇ ಸೆಕೆಂಡುಗಳಲ್ಲಿ ಡ್ರೋನ್ ಗಾಯಕ ಬೆನ್ನಿ ಬಳಿಗೆ ಬರುತ್ತದೆ ಮತ್ತು ಅವನು ಒಂದು ಹೆಜ್ಜೆ ಹಿಂದಕ್ಕೆ  ಇಡುತ್ತಿದ್ದಂತೆ ಡ್ರೋನ್ ಅವರ ತಲೆಯ ಹಿಂಭಾಗಕ್ಕೆ ಬಡಿಯಿತು. ಅಲೇಲ ಕುಸಿದು ಕುಳಿತ ಗಾಯಕನ ನೆರವಿಗೆ ಮ್ಯಾನೇಜ್‌ಮೆಂಟ್ ಓಡಿ ಬಂತು. ದಯಾಳ್ ತನ್ನ ತಲೆಯನ್ನು ಎರಡೂ ಕೈಗಳಿಂದ ಹಿಡಿದುಕೊಂಡು ವೇದಿಕೆಯಲ್ಲಿ ಕುಳಿತು ಬಿಟ್ಟರು. ಬೆನ್ನಿ ಅವರ ಕೈಗಳಿಗೆ ಗಾಯಗಳಾಗಿದ್ದು ಚಿಕಿತ್ಸೆ ಪಡೆದುಕೊಂಡಿದ್ದಾರೆ. ಚಿಕಿತ್ಸೆ ಬಳಿಕ ಬೆನ್ನಿ ದಯಾಳ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಶೇರ್ ಮಾಡಿದ್ದಾರೆ.

ದಯಾಳ್ ಅಭಿಮಾನಿಗಳು ಕಾಮೆಂಟ್ ಮಾಡಿ, ಆಯೋಜಕರನ್ನು ತರಾಟೆ ತೆಗೆದುಕೊಂಡಿದ್ದಾರೆ. ಬೆನ್ನಿ ಅವರ ಆರೋಗ್ಯ ವಿಚಾರಿಸುತ್ತಿದ್ದಾರೆ. ಈ ಬಗ್ಗೆ ವಿಡಿಯೋ ಮೂಲಕ ಪ್ರತಿಕ್ರಿಯೆ ನೀಡಿರುವ ಬೆನ್ನಿ ನೇರ ಪ್ರದರ್ಶನದ ಸಮಯದಲ್ಲಿ ಕಲಾವಿದರ ಸುರಕ್ಷತೆಯಿಂದ ಕಟ್ಟುನಿಟ್ಟಾದ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಸಲಹೆ ನೀಡಿದ್ದಾರೆ. 'ಡ್ರೋಣ್ ಅಭಿಮಾನಿಗಳು ತನ್ನ ತಲೆಯ ಹಿಂಭಾಗಕ್ಕೆ ಹೊಡೆದರು. ನನ್ನ ಎರಡು ಬೆರಳುಗಳು ಸಂಪೂರ್ಣವಾಗಿ ಗಾಯಗೊಂಡಿದೆ. ಆದರೂ ನಾನು ಚೆನ್ನಾಗಿಯೇ ಇದ್ದೀನಿ. ಬೇಗ ಚೇತರಿಸಿಕೊಳ್ಳುತ್ತಿದ್ದೀನಿ. ನಿಮ್ಮ ಪ್ರೀತಿ ಮತ್ತು ಪ್ರಾರ್ಥನೆಗೆ ಧನ್ಯವಾದಗಳು' ಎಂದು ಹೇಳಿದ್ದಾರೆ. 

ರ್‍ಯಾಪ್ ಗಾಯಕನಾಗಲು ಕಳ್ಳತನ ಮಾಡ್ದ: ಹಾಡು ಹೇಳಿಯೇ ಜೈಲು ಪಾಲಾದ ಯುವಕ..!

ಡ್ರೋಣ್ ಬಳಸುವಾಗ ಒಂದಿಷ್ಟು ಸೂಚನೆಗಳನ್ನು ಪಾಲಿಸಲು ಗಾಯಕ ದಯಾಳ್ ಸಲಹೆ ನೀಡಿದ್ದಾರೆ. ಕಲಾವಿದರ ಹತ್ತಿರದಲ್ಲಿ ಟ್ರೋಣ್ ಬಿಡಬಾರದು, ಡ್ರೋಣ್ ಬಗ್ಗೆ ಗೊತ್ತಿರುವವರಗೆ ಮಾತ್ರ ಡ್ರೋಣ್ ಬಳಸಲು ಅನುಮತಿ ನೀಡಬೇಕು, ಡ್ರೋಣ್ ಬಗ್ಗೆ ಸರಿಯಾಗಿ ತಿಳಿದುಕೊಂಡ ಎಕ್ಸ್‌ಪರ್ಟ್‌ಗಳನ್ನು ಮಾತ್ರ ಆಯೋಜಿಸಿ ಇಲ್ಲವೆಂದರೆ ಇದು ತುಂಬಾ ಅಪಾಯಕಾರಿ ಎಂದು ಹೇಳಿದ್ದಾರೆ.

ಬಿ-ಟೌನ್‌ ಮಂದಿಗೆ ಶಾಕ್ ಕೊಟ್ಟ ತೇಜಸ್ವಿ; ಕಾಂತಾರ ಚಿತ್ರಕ್ಕೆ ಮತ್ತೊಂದು ಧ್ವನಿ

'ನಾವು ಕಲಾವಿದರು, ನಾವು ಕೇವಲ ವೇದಿಕೆಯಲ್ಲಿ ಹಾಡುತ್ತೇವೆ. ನಾವು ವಿಜಯ್ ಅಥವಾ ಅಜಯ್ ಅಥವಾ ಸಲ್ಮಾನ್ ಖಾನ್ ಅಥವಾ ಪ್ರಭಾಸ್ ಅಥವಾ ಕೆಲವು ಆಕ್ಷನ್ ಹೀರೋ ಅಲ್ಲ ನಾವು. ಈ ಎಲ್ಲಾ ಸಾಹಸಗಳನ್ನು ಮಾಡ ಬೇಡಿ. ಸಾಮಾನ್ಯ ಶೋ ಮಾಡಿ. ನಾವು ನೋಡಲು ಬಯಸುತ್ತೇವೆ. ಚೆನ್ನಾಗಿದೆ. ಲೈವ್ ಪ್ರದರ್ಶನದ ಸಮಯದಲ್ಲಿ ಡ್ರೋನ್‌ಗಳು ಕಲಾವಿದರ ಹತ್ತಿರ ಬರಬಾರದು' ಎಂದು ದಯಾಳ್ ವಿಡಿಯೋದಲ್ಲಿ ಹೇಳಿದ್ದಾರೆ. 
 

Latest Videos
Follow Us:
Download App:
  • android
  • ios