ಮದುವೆ ವಿಚಾರ ಗುಟ್ಟಾಗಿ ಇಡೋದು ತುಂಬಾ ಕಷ್ಟ; ಕಿಯಾರಾ ಜೊತೆಗಿನ ವಿವಾಹದ ಬಗ್ಗೆ ಮೌನ ಮುರಿದ ಸಿದ್ಧಾರ್ಥ್
ತನ್ನ ಮದುವೆ ವಿಚಾರದ ಬಗ್ಗೆ ಸಿದ್ಧಾರ್ಥ್ ಮಲ್ಹೋತ್ರಾ ಪ್ರತಿಕ್ರಿಯೆ ನೀಡಿದ್ದಾರೆ. ವಿವಾಹದ ವಿಚಾರಗಳನ್ನು ಗುಟ್ಟಾಗಿ ಇಡುವುದು ತುಂಬಾ ಕಷ್ಟ ಎಂದು ಹೇಳಿದರು.
ಬಾಲಿವುಡ್ ಖ್ಯಾತ ಕಲಾವಿದರಾದ ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ಕಿಯಾರಾ ಅಡ್ವಾಣಿ ಪ್ರೀತಿ ಪ್ರೇಮದ ವಿಚಾರ ಗುಟ್ಟಾಗಿ ಉಳಿದಿಲ್ಲ. ಒಬ್ಬರಿಗೊಬ್ಬರು ಪ್ರೀತಿಸುತ್ತಿರುವ ವಿಷಯ ಈಗಾಗಲೇ ಜಗಜ್ಜಾಹೀರಾಗಿದೆ. ಅಂದಹಾಗೆ ಇಬ್ಬರೂ ತಮ್ಮ ಪ್ರೀತಿ ವಿಚಾರವನ್ನು ಅನೇಕ ಸಮಯದ ವರೆಗೂ ಗೌಪ್ಯವಾಗಿ ಕಾಪಾಡಿಕೊಂಡು ಬಂದಿದ್ದರು. ಆದರೆ ಶೇರ್ಷಾ ಸಿನಿಮಾ ಬಳಿಕ ಇಬ್ಬರ ಪ್ರೀತಿ ವಿಚಾರ ಬಹಿರಂಗವಾಯಿತು. ಈ ಜೋಡಿ ಅಧಿಕೃತವಾಗಿ ಪ್ರೀತಿ ವಿಚಾರವನ್ನು ಎಲ್ಲಿಯೂ ಬಹಿರಂಗ ಪಡಿಸಿಲ್ಲ. ಆದರೆ ಈ ಲವ್ ಬರ್ಡ್ ಬಗ್ಗೆ ಎಲ್ಲರಿಗೂ ಗೊತ್ತಿದೆ.
ಸಿದ್ಧಾರ್ಥ್ ಮತ್ತು ಕಿಯಾರಾ ಇಬ್ಬರೂ ಮುಂದಿನ ವರ್ಷ ಹಸೆಮಣೆ ಏರುತ್ತಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿದೆ. ಈ ಮೂಲಕ ಮತ್ತೊಂದು ಮದುವೆ ಸಂಭ್ರಮಕ್ಕೆ ಸಜ್ಜಾಗುತ್ತಿದೆ ಬಾಲಿವುಡ್. ಮುಂದಿನ ವರ್ಷ ಏಪ್ರಿಲ್‌ನಲ್ಲಿ ಇಬ್ಬರೂ ಅದ್ದೂರಿಯಾಗಿ ಮದುವೆಯಾಗುತ್ತಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದೆ. ಅದ್ದೂರಿ ಮದುವೆಗೂ ಮೊದಲು ಈ ಜೋಡಿ ರಿಜಿಸ್ಟರ್ ಮ್ಯಾರೇಜ್ ಆಗಲಿದ್ದಾರೆ ಎನ್ನಲಾಗುತ್ತಿದೆ.
ಇದೀಗ ತನ್ನ ಮದುವೆ ವಿಚಾರದ ಬಗ್ಗೆ ಸಿದ್ಧಾರ್ಥ್ ಮಲ್ಹೋತ್ರಾ ಪ್ರತಿಕ್ರಿಯೆ ನೀಡಿದ್ದಾರೆ. ಇಂಡಿಯಾ ಟುಡೇಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಸಿದ್ಧಾರ್ಥ್, ಕಿಯಾರಾ ಜೊತೆ ಮದುವೆ ವಿಚಾರವನ್ನು ಗುಟ್ಟಾಗಿ ಇಡಲು ಸಾಧ್ಯವಿಸಲ್ಲ ಎಂದು ಹೇಳಿದರು. 'ನನಗೆ ತೊಂದರೆ ಇಲ್ಲ, ಚಿತ್ರರಂಗದಲ್ಲಿ 10 ವರ್ಷಗಳಾಗಿದೆ. ನನಗೆ ಏನೂ ತೊಂದರೆ ಇಲ್ಲ ಎಂದು ನಾನು ಭಾವಿಸುತ್ತೇನೆ. ನಾನು ಮದುವೆಯಾಗುತ್ತೇನೆ ಹೌದು, ಮದುವೆ ವಿಚಾರವನ್ನು ರಹಸ್ಯವಾಗಿಡುವುದು ತುಂಬಾ ಕಷ್ಟ ಎಂದು ನಾನು ಭಾವಿಸುತ್ತೇನೆ' ಎಂದು ಹೇಳಿದರು.
ಮದುವೆಗೆ ಸಜ್ಜಾದ ಸಿದ್ಧಾರ್ಥ್-ಕಿಯಾರಾ; ಮೊದಲು ರಿಜಿಸ್ಟರ್ ಮ್ಯಾರೇಜ್ ನಂತರ ಅದ್ದೂರಿ ಆರತಕ್ಷತೆ
ಸಿದ್ಧಾರ್ಥ್ ಮತ್ತು ಕಿಯಾರಾ ಇಬ್ಬರೂ ಮುಂದಿನ ವರ್ಷ ಏಪ್ರಿಲ್ ನಲ್ಲಿ ಹಸೆಮಣೆ ಏರಲಿದ್ದಾರೆ. ಚಿತ್ರರಂಗದ ಗಣ್ಯರು ಮತ್ತು ಆಪ್ತರ ಸಮ್ಮುಖದಲ್ಲಿ ಮುದುವೆಯಾಗಲಿದ್ದಾರೆ. ಮೊದಲು ಇಬ್ಬರೂ ರಿಜಿಸ್ಟರ್ ಮ್ಯಾರೇಜ್ ಮಾಡಿಕೊಳ್ಳಲು ನಿರ್ಧರಿಸಿದ್ದಾರೆ. ಬಳಿಕ ಅದ್ದೂರಿ ಆರತಕ್ಷತೆ ಮತ್ತು ಕಾಕ್ಟೇಲ್ ಪಾರ್ಟಿ ನಡೆಯಲಿದೆ. ಈಗಾಗಲೇ ಯಾರನ್ನು ಆಹ್ವಾನಿಸಬೇಕು ಎನ್ನುವ ಲಿಸ್ಟ್ ಸಿದ್ಧವಾಗುತ್ತಿದೆ. ಮದುವೆ ಸಂಭ್ರಮವೆಲ್ಲಾ ದೆಹಲಿಯಲ್ಲಿ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.
ಏರ್ಪೋರ್ಟ್‌ನಲ್ಲಿ ಕಿಯಾರಾ-ಸಿದ್ಧಾರ್ಥ್ ಮಲ್ಹೋತ್ರಾ; ಪಾಪಾರಾಜಿಗಳ ಮೇಲೆ ಸಿಡುಕಿದ ನಟ!
ಸಿದ್ದಾರ್ಥ್ ಮತ್ತು ಕಿಯಾರಾ ಇಬ್ಬರು ಕಳೆದ ಮೂರ್ನಾಲ್ಕು ವರ್ಷಗಳಿಂದ ಪ್ರೀತಿಯಲ್ಲಿದ್ದಾರೆ. ಇಬ್ಬರೂ ಎಲ್ಲು ತಮ್ಮ ಪ್ರೀತಿ ವಿಚಾರವನ್ನು ಬಹಿರಂಗ ಪಡಿಸಿಲ್ಲ. ಈ ಲವ್ ಬರ್ಡ್ಸ್ ಆಗಾಗ ವಿದೇಶಿ ಪ್ರಯಾಣ, ಸಮಾರಂಭಗಳಲ್ಲಿ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದಾರೆ. ಶೇರ್ಷಾ ಸಿನಿಮಾದಲ್ಲಿ ಒಟ್ಟಿಗೆ ಕಾಣಿಸಿಕೊಳ್ಳುವ ಮೂಲಕ ಅಭಿಮಾನಿಗಳ ನೆಚ್ಚಿನ ಜೋಡಿಯಾಗಿದ್ದರು. ಈ ಸಿನಿಮಾದಲ್ಲಿ ಇಬ್ಬರ ಕೆಮಿಸ್ಟ್ರಿ ಅಭಿಮಾನಿಗಳ ಹೃದಯ ಗೆದ್ದಿತ್ತು. ಇಬ್ಬರು ಆದಷ್ಟು ಬೇಗ ಮದುವೆಯಾಗಿ ಎಂದು ಅಭಿಮಾನಿಗಳು ಹಾರೈಸಿದ್ದರು. ಇದೀಗ ಆ ಸಮಯ ಬಂದೇ ಬಿಟ್ಟಿದೆ. ಮುಂದಿನ ವರ್ಷ ಇಬ್ಬರೂ ಪತಿ-ಪತ್ನಿಯರಾಗಲಿದ್ದಾರೆ. ಈ ಬಗ್ಗೆ ಕಿಯಾರಾ ಅಥವಾ ಸಿದ್ಧಾರ್ಥ್ ಕಡೆಯಿಂದ ಅಧಿಕೃತ ಹೇಳಿಕೆಯೊಂದೆ ಬಾಕಿ ಇದೆ.