ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್ ಮೊಮ್ಮಗಳು ನವ್ಯಾ ನವೇಲಿ ಹಾಗೂ ಖ್ಯಾತ ನಟ ಸಿದ್ಧಾಂತ್ ಚತುರ್ವೇದಿ ಡೇಟಿಂಗ್ ಮಾಡುತ್ತಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿದೆ. ಈ ಬಗ್ಗೆ ಸಿದ್ಧಾಂತ್ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ.
ಸಿನಿಮಾರಂಗದಲ್ಲಿ ಡೇಟಿಂಗ್, ಲವ್, ಬ್ರೇಕಪ್ ವಿಚಾರಗಳು ಹೊಸದೇನಲ್ಲ. ಆಗಾಗ ಈ ವಿಚಾರವಾಗಿ ಸಿನಿಮಾರಂಗ ಸದ್ದು ಮಾಡುತ್ತಲೇ ಇರುತ್ತದೆ. ಅದರಲ್ಲೂ ಬಾಲಿವುಡ್ ನಲ್ಲಿ ತುಸು ಹೆಚ್ಚಾಗಿಯೇ ಕೇಳಬರುತ್ತದೆ. ಇದೀಗ ಮತ್ತೊಂದು ಡೇಟಿಂಗ್ ವಿಚಾರ ಚರ್ಚೆಯಾಗುತ್ತಿದೆ. ಅದು ಮತ್ಯಾರು ಅಲ್ಲ ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್ ಮೊಮ್ಮಗಳು ನವ್ಯಾ ನವೇಲಿ ಹಾಗೂ ಖ್ಯಾತ ನಟ ಸಿದ್ಧಾಂತ್ ಚತುರ್ವೇದಿ ಡೇಟಿಂಗ್ ವಿಚಾರ. ಇಬ್ಬರೂ ಪ್ರೀತಿಯಲ್ಲಿದ್ದಾರೆ ಎನ್ನುವ ಸುದ್ದಿ ಕೇಳದ ಕೆಲವು ತಿಂಗಳಿಂದ ಬಾಲಿವುಡ್ ಅಂಗಳದಲ್ಲಿ ಹರಿದಾಟುತ್ತಿದೆ. ಈ ಬಗ್ಗೆ ನವ್ಯಾ ಆಗಲಿ ಅಥವಾ ಸಿದ್ಧಾಂತ್ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ. ಆದರೀಗ ಮೊದಲ ಬಾರಿಗೆ ನಟ ಸಿದ್ಧಾಂತ್ ಈ ವಿಚಾರವಾಗಿ ಮೌರ ಮುರಿದಿದ್ದಾರೆ.
ಸಿದ್ಧಾಂತ್ ಸದ್ಯಾ ಫೋನ್ ಭೂತ್ ಸಿನಿಮಾದ ರಿಲೀಸ್‌ಗೆ ಕಾಯುತ್ತಿದ್ದಾರೆ. ಈ ಸಿನಿಮಾದ ಪ್ರಚಾರ ಕಾರ್ಯ ಜೋರಾಗಿ ನಡೆಯುತ್ತಿದೆ. ಈ ಸಿನಿಮಾದಲ್ಲಿ ಸಿದ್ದಾಂತ್ ನಟಿ ಕತ್ರಿನಾ ಕೈಫ್ ಮತ್ತು ಇಶಾನ್ ಕಟ್ಟರ್ ಜೊತೆ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾದ ಪ್ರಚಾರ ಕಾರ್ಯ ಭರ್ಜರಿಯಾಗಿ ನಡೆಯುತ್ತಿದೆ. ಈ ವೇಳೆ ಸಿದ್ಧಾಂತ್ ಅವರಿಗೆ ಡೇಟಿಂಗ್ ವಿಚಾರವಾಗಿ ಪ್ರಸ್ನೆ ಎದುರಾಗಿದೆ. ತಾನು ಸಿಂಗಲ್ ಎಂದು ಹೇಳಿರುವ ಸಿದ್ಧಾಂತ್ ಡೇಟಿಂಗ್ ಬಗ್ಗೆ ಉತ್ತರಿಸಿದ್ದಾರೆ.
ಮದುವೆ ಆಗದೇ ಮಗು ಪಡೆದರೂ ಸಮಸ್ಯೆ ಇಲ್ಲ; ಮೊಮ್ಮಗಳಿಗೆ ಜಯಾ ಬಚ್ಚನ್ ಡೇಟಿಂಗ್ ಸಲಹೆ
ಪ್ರಚಾರ ವೇಳೆ ಸಿದ್ಧಾಂತ್ ಅವರಿಗೆ ತಮ್ಮ ಬಗ್ಗೆ ಇರುವ ವದಂತಿ ಬಗ್ಗೆ ಹಂಚಿಕೊಳ್ಳುವಂತೆ ಪ್ರಶ್ನೆ ಎದುರಾಯಿತು. ಇದಕ್ಕೆ ಉತ್ತರಿಸಿದ ಸಿದ್ಧಾಂತ್, ನಾನು ಡೇಟಿಂಗ್ ಮಾಡುತ್ತಿದ್ದೀನಿ ಎನ್ನುವ ವದಂತಿ ಇದೆ. ಅದು ನಿಜವಾಗಲಿ ಎಂದು ನಾನು ಬಯಸುತ್ತೇನೆ' ಎಂದು ಹೇಳಿದರು. ಈ ಮೂಲಕ ಸುದ್ದಿ ನಿಜವಲ್ಲ ಎಂದು ಪರೋಕ್ಷವಾಗಿ ಹೇಳಿದರು.
ಆದರೆ ಸಿದ್ದಾಂತ್ ಮತ್ತು ನವ್ಯಾ ಇಬ್ಬರೂ ಇತ್ತೀಚಿಗಷ್ಟೆ ದೀಪಾವಳಿ ಪಾರ್ಟಿಯಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದರು. ಮನೀಶ್ ಮಲ್ಹೋತ್ರಾ ಅವರ ದೀಪಾಳಿ ಪಾರ್ಟಿಗೆ ಹಾಜರಾಗಿದ್ದರು. ಇಬ್ಬರೂ ಪ್ರತ್ಯೇಕವಾಗಿ ಬಂದರೂ ಪಾಪರಾಜಿಗಳು ಪರಸ್ಪರರ ಹೆಸರು ಹೇಳಿ ಕಾಲೆಳೆದಿದ್ದರು. ಸಿದ್ಧಾಂತ್ ಬರ್ತಿದ್ದ ಹಾಗೆ ಪಾಪರಾಜಿಗಳು ನವ್ಯಾ ಕೂಡ ಬರುತ್ತಿದ್ದಾರೆ ಕಾಯಿರಿ ಎಂದಿದ್ದರು. ಬಳಿಕ ನವ್ಯಾ ಎಂಟ್ರಿ ಕೊಟ್ಟಾಗ ನಿಮಗಾಗಿ ಯಾರೋ ಕಾಯುತ್ತಿದ್ದರೂ ಎಂದು ಹೇಳಿ ಕಾಲೆಳೆದಿದ್ದರೂ. ಇಬ್ಬರೂ ನಗುತ್ತಾ ಪಾರ್ಟಿಗೆ ಅಟೆಂಡ್ ಮಾಡಿದ್ದರು.
ಪಿರಿಯಡ್ಸ್ ಬಗ್ಗೆ ತಾತನ ಜೊತೆ ಮುಕ್ತವಾಗಿ ಮಾತಾಡ್ತೀನಿ; ಅಮಿತಾಭ್ ಮೊಮ್ಮಗಳು ನವ್ಯಾ
ಮೊಮ್ಮಗಳಿಗೆ ಜಯಾ ಬಚ್ಚನ್ ಡೇಟಿಂಗ್ ಸಲಹೆ
ಇತ್ತೀಚಿಗಷ್ಟೆ ಜಯಾ ಬಚ್ಚನ್ ಮೊಮ್ಮಗಳು ನವ್ಯಾ ಜೊತೆ ಸಂದರ್ಶನದಲ್ಲಿ ಭಾಗಿಯಾಗಿದ್ದರು. ಈ ವೇಳೆ ಅನೇಕ ವಿಚಾರಗಳ ಬಗ್ಗೆ ಮಾತನಾಡಿದ್ದರು. ಅದರಲ್ಲಿ ಪ್ರಮುಖ ವಿಷಯ ಎಂದರೆ ಸಂಬಂಧಗಳು. ಯುವ ಪೀಳಿಗೆಗೆ ಸಲಹೆ ನೀಡಿದ ಜಯಾ ಬಚ್ಚನ್, ಬೆಸ್ಟ್ ಫ್ರೆಂಡ್ ಅನ್ನೇ ಮದುವೆಯಾಗಿ ಎಂದು ಸಲಹೆ ನೀಡುತ್ತೇನೆ ಎಂದರು. ನಿಮಗೆ ಉತ್ತಮ ಸ್ನೇಹಿತ ಇರಬೇಕು ಅವರ ಜೊತೆ ಎಲ್ಲಾ ವಿಚಾರ ಚರ್ಚಿಸಬೇಕು ಮತ್ತು ನಿನ್ನೊಂದಿಗೆ ಮಗುವನ್ನು ಪಡೆಯಬೇಕು ಯಾಕೆಂದರೆ ನಿನ್ನನ್ನು ತುಂಬಾ ಇಷ್ಟಪಡುತ್ತೇನೆ ಎಂದು ಹೇಳಬೇಕು. ಆದರೆ ಮದುವೆಯಾಗದೆ ಮಗುವನ್ನು ಪಡೆದರೂ ನನಗೇನು ಸಮಸ್ಯೆ ಇಲ್ಲ' ಎಂದು ಜಯಾ ಬಚ್ಚನ್ ಹೇಳಿದರು.
