ಜನವರಿ 19ರಂದು ನಟ ಕಮಲ್ ಹಾಸನ್‌ ಚೆನ್ನೈನ ಖಾಸಗಿ ಆಸ್ಪತ್ರೆಗೆ ದಾಖಲಾಗಿ, ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡಿದ್ದಾರೆ. ಚಿಕಿತ್ಸೆ ಯಶಸ್ವಿಯಾಗಿರುವ ವಿಚಾರದ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಮಕ್ಕಳಾದ ಶ್ರುತಿ ಹಾಗೂ ಅಕ್ಷರಾ ಅಪ್‌ಡೇಟ್ ನೀಡಿದ್ದಾರೆ. 

ಹೊಸ ಲುಕ್‌ನಲ್ಲಿ ಸೂಪರ್‌ ಸ್ಟಾರ್‌ ಕಮಲ್‌ ಹಾಸನ್‌ ! 

ಶ್ರುತಿ ಪತ್ರ:
'ನಿಮ್ಮೆಲ್ಲರ ಸಹಕಾರ, ಪ್ರಾರ್ಥನೆ ಹಾಗೂ ಪ್ರೀತಿಯಿಂದ ನಮ್ಮ ತಂದೆ ಆರೋಗ್ಯವಾಗಿದ್ದಾರೆ. ಚಿಕಿತ್ಸೆ ಯಶಸ್ವಿಯಾಗಿದೆ.  ಶ್ರೀ ರಾಮಚಂದ್ರ ಆಸ್ಪತ್ರೆಯ ಆರ್ಥೋಪೆಡಿಕ್ ಸರ್ಜನ್ ಡಾ. ಮೋಹನ್ ಕುಮಾರ್ ಹಾಗೂ ಜೆಎಸ್‌ಎನ್‌ ಮೂರ್ತಿ ಅವರಿಗೆ ಧನ್ಯಾವದಗಳು.  ವೈದ್ಯರು ಹಾಗೂ ಆಸ್ಪತ್ರೆ ಸಿಬ್ಬಂದಿ ಸಹಾಯದಿಂದ ತಂದೆ ಬೇಗ ಗುಣ ಮುಖರಾಗುತ್ತಾರೆ,' ಎಂದು ಶ್ರುತಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. 

'ನಾಲ್ಕೈದು ದಿನಗಳ ಕಾಲ ತಂದೆ ಆಸ್ಪತ್ರೆಯಲ್ಲಿಯೇ ವಿಶ್ರಾಂತಿ ಪಡೆಯಲಿದ್ದಾರೆ. ಅನಂತರ ಎಲ್ಲರೊಟ್ಟಿಗೆ ಮಾತನಾಡುತ್ತಾರೆ.  ಈ ಕ್ಷಣದಲ್ಲಿ ನೀವೆಲ್ಲರೂ ತೋರಿಸುತ್ತಿರುವ ಪ್ರೀತಿಗೆ ನಾನು ಆಭಾರಿ,' ಎಂದಿದ್ದಾರೆ.

ಏಪ್ರಿಲ್ ಅಥವಾ ಮೇನಲ್ಲಿ ನಡೆಯುವ ಚುನಾವಣೆಗೂ ಮುನ್ನ ಸಂಪೂರ್ಣವಾಗಿ ಗುಣಮುಖರಾಗಿ ಬರುವುದಾಗಿ ಕಮಲ್ ಹಾಸನ್ ಭರವಸೆ ನೀಡಿದ್ದಾರೆ. ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವ ಕಮಲ್ ಚಿಕಿತ್ಸೆಗೂ ಮುನ್ನ 15 ದಿನದಲ್ಲಿ 5 ಸಾವಿರ ಕಿಲೋಮೀಟರ್‌ ಓಡಾಡಿರುವುದರ ಬಗ್ಗೆ ಮಾಹಿತಿ ಹಂಚಿಕೊಂಡಿದ್ದರು.