ರಣಬೀರ್ ಕಪೂರ್ ಜೊತೆ ಚಿತ್ರೀಕರಣ ಮಾಡುತ್ತಿದ್ದ ಶ್ರದ್ಧಾ ಕಪೂರ್ ಮೇಕಪ್ ಆರ್ಟಿಸ್ಟ್‌ಗೆ ಗಂಭೀರ ಗಾಯ. ಸೋಷಿಯಲ್ ಮೀಡಿಯಾದಲ್ಲಿ ಫೋಟೋ ವೈರಲ್...
ರಣಬೀರ್ ಕಪೂರ್ ಮತ್ತು ಶ್ರದ್ಧಾ ಕಪೂರ್ ಮೊದಲ ಬಾರಿಗೆ ಜೋಡಿಯಾಗಿ ಲವ್ ರಂಜನ್ ನಿರ್ದೇಶನ ಮಾಡುತ್ತಿರುವ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ. 2023 ಮಾರ್ಚ್ ಹೋಳಿ ಹಬ್ಬದಂದು ಸಿನಿಮಾ ಬಿಡುಗಡೆಯಾಗುವ ಸಾಧ್ಯತೆಗಳಿದೆ. ಸದ್ಯ ಸ್ಪೇನ್‌ನಲ್ಲಿ ಚಿತ್ರೀಕರಣ ಮಾಡುತ್ತಿರುವ ತಂಡ ಸಮಸ್ಯೆಯಲ್ಲಿ ಸಿಲುಕಿಕೊಂಡಿದೆ. ಶ್ರದ್ಧಾ ಬಣ್ಣದ ಜರ್ನಿ ಆರಂಭಿಸಿದ ದಿನದಿಂದಲ್ಲೂ ಮೇಕಪ್ ಮಾಡುತ್ತಿರುವ ಆರ್ಟಿಸ್ಟ್ ಶ್ರದ್ಧಾ ನಾಯಕ್ ಕಾಲಿಗೆ ಗಂಭೀರವಾಗಿ ಗಾಯವಾಗಿದೆ. ಚಿತ್ರೀಕರಣದ ವಿಡಿಯೋ ಹಂಚಿಕೊಂಡು ಮೇಕಪ್ ಆರ್ಟಿಸ್ಟ್ ಘಟನೆಯನ್ನು ವಿವರಿಸಿದ್ದಾರೆ. 10 ದಿನಗಳ ಕಾಲ ಬೆಸ್ಟ್ ರೆಸ್ಟ್‌ನಲ್ಲಿ ಇರುವುದಾಗಿ ತಿಳಿಸಿದ್ದಾರೆ.
ಶ್ರದ್ಧಾ ನಾಯಕ್ ಇನ್‌ಸ್ಟಾಗ್ರಾಂನಲ್ಲಿ ಅಪ್ಲೋಡ್ ಮಾಡಿರುವ ವಿಡಿಯೋದಲ್ಲಿ ಆಂಬ್ಯುಲೆನ್ಸ್‌ನಲ್ಲಿ ಸ್ಪೇನ್‌ನ ಆಸ್ಪತ್ರೆಗೆ ಸಾಗಿಸಲಾಯಿತು. ಶ್ರದ್ಧಾ ವ್ಯಾನಿಟಿ ಗಾಡಿಯಲ್ಲಿ ನಾಯಕ್ ವಿಶ್ರಾಂತಿಸುತ್ತಿದ್ದರು, ಚೇರ್ ಮೇಲೆ ಕುಳಿತುಕೊಂಡು ನಟಿಗೆ ಮೇಕಪ್ ಕೂಡ ಮಾಡಿದ್ದಾರೆ. ಈ ಮೂಲಕ ಶ್ರದ್ಧಾ ಕಪೂರ್ ವ್ಯಾನಿಟಿ ಹೇಗಿದೆ ಎಂದು ಜನರು ನೋಡಿಕೊಂಡಿದ್ದಾರೆ. 'ನನ್ನ 13 ವರ್ಷಗಳ ಮೇಕಪ್ ಜರ್ನಿಯಲ್ಲಿ ನಾನು ಎಂದಿಗೂ ಚೇರ್ ಮೇಲೆ ಕುಳಿತುಕೊಂಡು ಮೇಕಪ್ ಮಾಡಿರಲಿಲ್ಲ. ಬ್ರೇಕ್ ಅ ಲೆಗ್ ಇನ್ ಸ್ಪೇನ್ ಹೇಳಿಕೆಯನ್ನು ನಾನು ಗಂಭೀರವಾಗಿ ಪರಿಗಣಿಸಿರಬೇಕು' ಎಂದು ಬರೆದುಕೊಂಡಿದ್ದಾರೆ.
Drugs Case: ನಟ ಶಕ್ತಿ ಕಪೂರ್ ಪುತ್ರ ಸಿದ್ದಾಂತ್ ಬೆಂಗಳೂರಿನಲ್ಲಿ ಅರೆಸ್ಟ್
ಮೇಕಪ್ ಆರ್ಟಿಸ್ಟ್‌ಗೆ ಇಷ್ಟೆಲ್ಲಾ ಸಮಸ್ಯೆಗಳಿದ್ದರೂ ಅವರಿಗೆ ಪ್ರೆಶರ್ ನೀಡದೆ ಕೆಲಸ ಮಾಡಿಸಿಕೊಳ್ಳುತ್ತಿರುವ ಇಡೀ ತಂಡಕ್ಕೆ ಧನ್ಯವಾದಳನ್ನು ತಿಳಿಸಿದ್ದಾರೆ. 'ನನ್ನ ಮೇಲೆ ಅತಿ ಹೆಚ್ಚು ಕಾಳಜಿ ವಹಿಸಿ ನೋಡಿಕೊಳ್ಳುತ್ತಿರುವ ತಂಡಕ್ಕೆ ಧನ್ಯವಾದಗಳು. ನಾನು ಬೇಗ ಚೇತರಿಸಿಕೊಳ್ಳಬೇಕೆಂದು ನೀವುಗಳು ಹೇಳುತ್ತಿರುವ ಮಾತು ನನಗೆ ಸ್ಪೂರ್ತಿ ಕೊಡುತ್ತಿದೆ. ಶ್ರದ್ಧಾ ಕಪೂರ್, ನಿಖಿತಾ ಮೆಮನ್, ಮಾಹೇಖ್ ನಾಯರ್‌ಗೆ ನನ್ನಿಂದ ಬಿಗ್ ಹಗ್' ಎಂದಿದ್ದಾರೆ ಶ್ರದ್ಧಾ.
'Spain ಎಂಟರ್ ಆಗಿ ಎರಡೇ ದಿನಕ್ಕೆ ಕಾಲು ಪೆಟ್ಟು ಮಾಡಿಕೊಂಡೆ, ಲಕ್ಷಾಂತರ ಜನರು ತುಂಬಿಕೊಂಡಿರುವ Mallorcaದ ರಸ್ತೆಯಲ್ಲಿ. ತಕ್ಷಣವೇ ಆಂಬ್ಯುಲೆನ್ಸ್‌ಗೆ ಕರೆ ಮಾಡಿ ಆಸ್ಪತ್ರೆಗೆ ಹೋರಟೆವು. ನಗಬೇಕೋ ಅಳಬೇಕೋ ಗೊತ್ತಾಗಲಿಲ್ಲ ಹೀಗಾಗಿ ನಾನು ನಗುವುದಕ್ಕೆ ಶುರು ಮಾಡಿದೆ. x-ray ತೆಗೆದ ವೈದ್ಯರು ನನಗೆ ಲಿಗಮೆಂಟ್ ಟೇರ್ ಆಗಿದೆ ಎಂದು ಹೇಳಿದ್ದರು, 10 ದಿನಗಳ ಕಾಲ ನಾನು ಚೇರ್‌ನಿಂದ ಎದ್ದೇಳುವಂತಿಲ್ಲ. ನನ್ನ ಇಡೀ ತಂಡ ಸುಂದರವಾಗಿರುವ ಬೀಚ್ ನೋಡಲು ಹೋದಾಗ ನಾನು ಕಾರಿನಲ್ಲಿ ಕುಳಿತುಕೊಳ್ಳಬೇಕಿದೆ. ನಾನು ಚೇರ್ ಮೇಲೆ ಕುಳಿತುಕೊಂಡು ಮೇಕಪ್ ಮಾಡುವುದ ತಡವಾಗುತ್ತದೆ ಆದರೆ ಶ್ರದ್ಧಾ ಕಪೂರ್ ತಾಳ್ಮೆಯಿಂದ ನಡೆದುಕೊಂಡರು' ಎಂದು ಶ್ರದ್ಧಾ ನಾಯಕ್ ವಿಡಿಯೋದಲ್ಲಿ ಹೇಳಿದ್ದಾರೆ.
ಅಮಿತಾಭ್ ಮೊಮ್ಮಗಳ ಜೊತೆ 'ಗಲ್ಲಿ ಬಾಯ್' ನಟನ ಲವ್ವಿ-ಡವ್ವಿ: ನವ್ಯಾ-ಸಿದ್ಧಾಂತ್ ಫೋಟೋ ವೈರಲ್
ಲವ್ ರಂಜನ್ ನಿರ್ದೇಶನ ಮಾಡುತ್ತಿರುವ ರೊಮ್ಯಾಂಟಿಕ್ ಕಾಮಿಡಿ ಸಿನಿಮಾದಲ್ಲಿ ಬೋನಿ ಕಪೂರ್ ರಣಬೀರ್ ಕಪೂರ್ ತಂದೆ ಪಾತ್ರದಲ್ಲಿ ಕಾಣಿಸಿಕೊಳ್ಳಿದ್ದಾರೆ. ಈ ಮೂಲಕ ತೆರೆ ಮೇಲೆ ಮೊದಲ ಬಾರಿ ಬೋನಿ ಕಾಣಿಸಿಕೊಳ್ಳುತ್ತಿರುವ ಕಾರಣ ಇದು ಅವರ ಮೊದಲ ಸಿನಿಮಾ ಆಗಲಿದೆ. ಡಿಂಪಲ್ ಕಪಾಡಿಯಾ ರಣಬೀರ್ ತಾಯಿ ಪಾತ್ರದಲ್ಲಿ ಮಿಂಚಲಿದ್ದಾರೆ. ಇದಾದ ನಂತರ ರಣಬೀರ್ ಬ್ರಹ್ಮಸ್ತ್ರ ಸಿನಿಮಾ ಚಿತ್ರೀಕರಣ ಶುರು ಮಾಡಲಿದ್ದಾರೆ.
