ಕರ್ನಾಟಕದಲ್ಲಿ ನಡೆದ ಆರ್ ಆರ್ ಆರ್ ಪ್ರಿ-ರಿಲೀಸ್ ಕಾರ್ಯಕ್ರಮದಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮಾತನಾಡಿ ಕನ್ನಡ ವರ್ಷನ್ ಆರ್ ಆರ್ ಆರ್ ಶೋಗಳನ್ನು ಜಾಸ್ತಿ ಮಾಡಿ ಎಂದು ರಾಜಮೌಳಿ ಬಳಿ ಮನವಿ ಮಾಡಿದರು.
ಬಹುನಿರೀಕ್ಷೆಯ ಆರ್ ಆರ್ ಆರ್(RRR) ಸಿನಿಮಾ ಬಿಡುಗಡೆ ದಿನಗಣನೆ ಪ್ರಾರಂಭವಾಗಿದೆ. ಬಿಡುಗಡೆಗೂ ಮೊದಲು ಸಿನಿಮಾತಂಡ ಅದ್ದೂರಿಯಾಗಿ ಪ್ರಮೋಷನ್ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಮಾರ್ಚ್ 19ರಂದು ಆರ್ ಆರ್ ಆರ್ ಪ್ರಿ ರಿಲೀಸ್ ಕಾರ್ಯಕ್ರಮ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ. ಗ್ರ್ಯಾಂಡ್ ಆಗಿ ನಡೆದ ಈ ಕಾರ್ಯಕ್ರಮದಲ್ಲಿ ಇಡೀ ಸಿನಿಮಾತಂಡ ಭಾಗಿಯಾಗಿತ್ತು. ಸಾವಿರಾರು ಮಂದಿ ಅಭಿಮಾನಿಗಳು ಆರ್ ಆರ್ ಆರ್ ಕಾರ್ಯಕ್ರಮವನ್ನು ಕಣ್ತುಂಬಿಕೊಂಡರು.
ಸಂಜೆ ನಡೆದ ಪ್ರೀ-ರಿಲೀಸ್ ಇವೆಂಟ್(pre release event)ನಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ಸಿಎಂ ಬಸವರಾಜ ಬೊಮ್ಮಾಯಿ, ಆರೋಗ್ಯ ಸಚಿವ ಸುಧಾಕರ್ ಮುಖ್ಯ ಅತಿಥಿಗಳಾಗಿ ಭಾಗಿಯಾಗಿದ್ದರು. ಈ ಕಾರ್ಯಕ್ರಮದಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಗೆ (Puneeth Rajkumar) ಆರ್ ಆರ್ ಆರ್ ತಂಡ ವಿಶೇಷ ನಮನ ಅರ್ಪಿಸಿದೆ. ಇನ್ನು ಚಿತ್ರದ ಬಗ್ಗೆ ಮಾತನಾಡಿದ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್(Shivaraj Kumar) ರಾಜಮೌಳಿ(Rajamouli) ಮತ್ತು ತಂಡದ ಬಗ್ಗೆ ಮೆಚ್ಚುಗೆ ಮಾತುಗಳನ್ನಾಡಿದರು. ರಾಜಮೌಳಿ ಅವರ ದೊಡ್ಡ ಫ್ಯಾನ್ ಎಂದ ಶಿವಣ್ಣ ಎಲ್ಲಾ ಸಿನಿಮಾಗಳನ್ನು ಫಸ್ಟ್ ಡೇ ಫಸ್ಟ್ ಶೋ ನೋಡುತ್ತೇನೆ ಎಂದು ಹೇಳಿದರು.
ಕಾರ್ಯಕ್ರಮದ ಕೊನೆಯಲ್ಲಿ ಮಾತನಾಡಿದ ಶಿವಣ್ಣ, 'ಒಂದು ಕಡೆ ಸಂತೋಷ ಆಗುತ್ತೆ, ಮತ್ತೊಂದು ಕಡೆ ದುಃಖನು ಇದೆ. ಅಪ್ಪು ಕಳೆದುಕೊಂಡ ದುಃಖದಲ್ಲಿದ್ದೇವೆ. ನಮ್ಮ ದುಃಖದಲ್ಲಿ ಇಡೀ ಭಾರತೀಯ ಸಿನಿಮಾರಂಗವಿದೆ, ಸರ್ಕಾರವಿದೆ. ರಾಮ್ ಚರಣ್, ಜೂ ಎನ್ ಟಿ ಆರ್ ಬಂದು ನಾವು ನಿಮ್ಮ ತಮ್ಮ ಎಂದಾಗ ತುಂಬಾ ಸಂತೋಷ ಆಯ್ತು. ಇವರಲ್ಲಿ, ನಿಮ್ಮೆಲ್ಲರಲ್ಲಿ ಕಾಣುತ್ತೀನಿ' ಎಂದು ಶಿವಣ್ಣ ಹೇಳಿದರು.
RRR Movie pre release ಪ್ರೇಕ್ಷಕರ ಮಧ್ಯೆ ಅಪ್ಪು ಭಾವಚಿತ್ರ, ಕನ್ನಡದಲ್ಲಿ ಎನ್‌ಟಿಆರ್ ಭಾಷಣ!
'ನಾನು ಜೂ. ಎನ್ ಟಿ ಆರ್ ಅವರ ಎಲ್ಲಾ ಸಿನಿಮಾಗಳನ್ನು ಫಸ್ಟ್ ಡೇ ಫಸ್ಟ್ ಶೋ ನೋಡ್ತೀನಿ. ರಾಮ್ ಚರಣ್, ಪವನ್ ಕಲ್ಯಾಣ್, ಚಿರಂಜೀವಿ, ಅಜಿತ್, ವಿಜಯ್ ಪ್ರತಿಯೊಬ್ಬರ ಸಿನಿಮಾನೂ ನಾನು ಚಿತ್ರಮಂದಿರಗಳಲ್ಲೇ ನೋಡೋದು. ನನಗೆ ಮನೆಯಲ್ಲೇ ಶೋ ಹಾಕಿಸಿಕೊಂಡು ಸಿನಿಮಾ ನೋಡೋದು ಇಷ್ಟ ಇಲ್ಲ. ನಾನು ಅಭಿಮಾನಿ ತರಹ ಚಿತ್ರಮಂದಿರಕ್ಕೆ ಹೋಗಿ ಸಿನಿಮಾ ನೋಡೋದು' ಎಂದರು.
'ಬಾಹುಬಲಿ ಸಿನಿಮಾವನ್ನು ಫಸ್ಟ್ ಡೇ ನೋಡಿ ರಾಜಮೌಳಿಗೆ ಅದ್ಭುತ ಸಿನಿಮಾ ಮಾಡಿದ್ದೀರಿ ಎಂದು ಫೋನ್ ಮಾಡಿ ಹೇಳಿದ್ದೆ. ಅವರು ಎಲ್ಲಿ ಕರೆದರೂ ಬರ್ತೀನಿ. ನಮ್ಮ ಚಿತ್ರರಂಗದ ಹೆಸರನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ತೆಗೆದುಕೊಂಡು ಹೋಗಬೇಕು ಎಂದರೆ ಅದು ಸಣ್ಣ ಕೆಲಸವಲ್ಲ. ಎಲ್ಲಾ ಕಡೆ ವೈರತ್ವ ಇರುತ್ತೆ. ಆದರೆ ರಾಮ್ ಚರಣ್, ಜೂ ಎನ್ ಟಿ ಆರ್ ಒಟ್ಟಿಗೆ ನಿಂತಿದಾರೆ. ನಮಗೆ ಇಂಡಸ್ಟ್ರಿಯೇ ಫ್ಯಾಮಿಲಿ. ಆರ್ ಆರ್ ಆರ್ ಸಿನಿಮಾವನ್ನು ಫಸ್ಟ್ ಡೇ, ಫಸ್ಟ್ ಶೋ ನೋಡ್ತೀನಿ' ಎಂದು ಹೇಳಿದ್ದಾರೆ. ಜೊತೆಗೆ 'ಕನ್ನಡ ಶೋ ಜಾಸ್ತಿ ಹಾಕಿ' ಎಂದು ಶಿವಣ್ಣ ನಿರ್ದೇಶಕ ರಾಜಮೌಳಿ ಬಳಿ ಮನವಿ ಮಾಡಿದ್ದಾರೆ.
RRR ಸಿನಿಮಾ ಪ್ರಿ ರಿಲೀಸ್ ಕಾರ್ಯಕ್ರಮ, ಸ್ವಾತಂತ್ರ್ಯ ಹೋರಾಟದ ಸತ್ಯ ಹೊರಬರಬೇಕು: ಬೊಮ್ಮಾಯಿ!
ಅಂದಹಾಗೆ ಈ ಮೊದಲು ಬಿಡುಗಡೆಯಾಗಿದ್ದ ಪ್ಯಾನ್ ಇಂಡಿಯಾ ಸಿನಿಮಾವಾಗಿದ್ದ ಪುಷ್ಪ, ರಾಧೆ ಶ್ಯಾಮ್ ಕನ್ನಡಕ್ಕೆ ಡಬ್ ಆಗಿದ್ದರೂ ಕನ್ನಡದಲ್ಲಿ ಹೆಚ್ಚು ಶೋಗಳು ಇರಲಿಲ್ಲ. ಹಾಗಾಗಿ ಆರ್ ಆರ್ ಆರ್ ಚಿತ್ರವನ್ನು ಕನ್ನಡದಲ್ಲಿಯೇ ಹೆಚ್ಚು ಬಿಡುಗಡೆ ಮಾಡಿ ಎಂದು ಶಿವಣ್ಣ ಈ ಮನವಿ ಮಾಡಿದ್ದಾರೆ.
ಇನ್ನು ವೇದಿಕೆ ಮೇಲೆ ನಟ ರಾಮ್ ಚರಣ್ ಮತ್ತು ಜೂ ಎನ್ ಟಿ ಆರ್ ಇಬ್ಬರು ಅಪ್ಪು ಮಾತನಾಡಿದರು. ಅಪ್ಪು ಇಲ್ಲ ಎಂದು ಯಾವತ್ತು ಅಂದಿಕೊಂಡಿಲ್ಲ. ಇಲ್ಲೇ ಇದ್ದಾರೆ, ಸದಾ ನಮ್ಮ ಜೊತೆ ಇರ್ತಾರೆ ಎಂದು ಹೇಳಿದರು. ನಟ ಜೂ ಎನ್ ಟಿ ಆರ್ ಕನ್ನಡದಲ್ಲಿಯೇ ಮಾತನಾಡಿ ಕನ್ನಡ ಅಭಿಮಾನಿಗಳ ಹೃದಯ ಗೆದ್ದರು.
