ಗರ್ಭಿಣಿ ಆಲಿಯಾಗೆ ಸ್ಪೆಷಲ್ ಗಿಫ್ಟ್ ಕಳುಹಿಸಿದ ಶಿಲ್ಪಾ ಶೆಟ್ಟಿ; ಫೋಟೋ ಮೂಲಕ ಸಂತಸ ಹಂಚಿಕೊಂಡ ನಟಿ
ಬಾಲಿವುಡ್ ಸ್ಟಾರ್ ನಟಿ ಆಲಿಯಾ ಭಟ್‌ಗೆ ವಿಶೇಷ ಗಿಫ್ಟ್ ಸಿಕ್ಕಿದೆ. ಅದೂ ಬಿ ಟೌನ್ ನ ಮತ್ತೋರ್ವ ಖ್ಯಾತ ನಟಿ ಶಿಲ್ಪಾ ಶೆಟ್ಟಿ ಕಡೆಯಿಂದ. ಈ ಬಗ್ಗೆ ಅಲಿಯಾ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ.
ಬಾಲಿವುಡ್ ಸ್ಟಾರ್ ನಟಿ ಆಲಿಯಾ ಭಟ್ ತಾಯಿಯಾಗುತ್ತಿರುವ ಸಂಭ್ರಮದಲ್ಲಿದ್ದಾರೆ. ಆಲಿಯಾ ತುಂಬು ಗರ್ಭಿಣಿ. ಆಧರೂ ಸಿನಿಮಾ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ಸದಾ ಸಿನಿಮಾ ಪ್ರಮೋಷ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಪತಿ ರಣಬೀರ್ ಮತ್ತು ಅಲಿಯಾ ಇಬ್ಬರು ಇತ್ತೀಚಿಗಷ್ಟೆ ಬ್ರಹ್ಮಾಸ್ತ್ರ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಬ್ರಹ್ಮಾಸ್ತ್ರ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಉತ್ತಮ ಕಲೆಕ್ಷನ್ ಮಾಡಿದೆ. ಸಾಲು ಸಾಲು ಸೋಲಿನಿಂದ ಕಂಗೆಟ್ಟಿದ್ದ ಬಾಲಿವುಡ್‌ಗೆ ಬ್ರಹ್ಮಾಸ್ತ್ರ ಗೆಲುವು ಹೋದಜೀವ ಬಂದಂತೆ ಆಗಿದೆ. ಆಲಿಯಾ ಮತ್ತು ರಣಬೀರ್ ಇಬ್ಬರು ಸಂತಸದಲ್ಲಿ ತೇಲುತ್ತಿದ್ದಾರೆ. ಈ ನಡುವೆ ಆಲಿಯಾ ಗರ್ಭಿಣಿ ಎನ್ನುವುದನ್ನು ಲೆಕ್ಕಿಸದೆ ಪ್ರಚಾರ ಕಾರ್ಯದಲ್ಲಿ ತೊಡಿಸಿಕೊಂಡಿದ್ದಾರೆ.
ಈ ನಡುವೆ ಆಲಿಯಾ ಭಟ್‌ಗೆ ವಿಶೇಷ ಗಿಫ್ಟ್ ಸಿಕ್ಕಿದೆ. ಅದೂ ಬಾಲಿವುಡ್ ಮತ್ತೋರ್ವ ನಟಿ ಶಿಲ್ಪಾ ಶೆಟ್ಟಿ ಕಡೆಯಿಂದ. ಹೌದು ಬಾಲಿವುಡ್ ಸ್ಟಾರ್, ಫಿಟ್ನೆಸ್ ಫ್ರೀಕ್ ಶಿಲ್ಪಾ ಶೆಟ್ಟಿ, ಆಲಿಯಾ ಭಟ್‌ಗೆ ರುಚಿಕರವಾದ ಪೀಜ್ಜಾ ಕಳುಹಿಸಿದ್ದಾರೆ. ಭಾನುವಾರ ಆಲಿಯಾ ಶಿಲ್ಪಾ ಶೆಟ್ಟಿ ಸೆಂಡ್ ಮಾಡಿದ್ದ ಪೀಜ್ಜಾ ತಿಂದು ಸಂತಸ ಪಟ್ಟಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದು ಶಿಲ್ಪಾ ಶೆಟ್ಟಿಗೆ ಧನ್ಯವಾದ ತಿಳಿಸಿದ್ದಾರೆ.
ಶಿಲ್ಪಾ ಕಳುಹಿಸಿದ ಪೀಜ್ಜಾದ ಫೋಟೋವನ್ನು ಆಲಿಯಾ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡು, 'ಈ ರುಚಿಕರವಾದ ಪಿಜ್ಜಾಕ್ಕಾಗಿ ನನ್ನ ಪ್ರೀತಿಯ ಶಿಲ್ಪಾ ಶೆಟ್ಟಿಗೆ ಧನ್ಯವಾದಗಳ' ಎಂದು ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಬರೆದುಕೊಂಡಿದ್ದಾರೆ.
ಪಿಂಕ್ ಕಫ್ತಾನ್ ಧರಿಸಿ ಪತಿ ಜೊತೆ ಸಿಂಪಲ್ ಪೋಸ್ ನೀಡಿದ ಗರ್ಭಿಣಿ ಅಲಿಯಾ; ಫೋಟೋ ವೈರಲ್
ಮೊದಲ ಮಗುವನ್ನು ನಿರೀಕ್ಷಿಸುತ್ತಿರುವ ಆಲಿಯಾ ಈ ಮೊದಲು ಸಾಮಾಜಿಕ ಜಾಲತಾಣದಲ್ಲಿ ತಾನು ಪಿಜ್ಜಾವನ್ನು ತಿನ್ನಬೇಕು ಎಂದು ಬಹಿರಂಗಪಡಿಸಿದ್ದರು. 'ಗೈಸ್, ಮುಂಬೈನಲ್ಲಿರುವ ಅತ್ಯುತ್ತಮವಾದ ಪಿಜ್ಜಾ ಸ್ಥಳ ಯಾವುದು? ನನಗೆ ಬಯಕೆಯಾಗಿದೆ' ಎಂದು ಹೇಳಿಕೊಂಡಿದ್ದರು. ಇದೀಗ ಶಿಲ್ಪಾ ಶೆಟ್ಟಿ ಅತ್ಯುತ್ತಮವಾದ ಫಿಜ್ಜಾ ಕಳುಹಿಸಿಕೊಟ್ಟಿದ್ದಾರೆ. ಅಂದಹಾಗೆ ಫಿಟ್ನೆಸ್ ಫ್ರೀಕ್ ಶಿಲ್ಪಾ ಶೆಟ್ಟಿ ಕುಕ್ಕಿಂಗ್ ನಲ್ಲೂ ಎಕ್ಸ್‌ಪರ್ಟ್. ಹಾಗಾಗಿ ಶಿಲ್ಪಾ ಶೆಟ್ಟಿ ಆಲಿಯಾಗೆ ದಿ ಬೆಸ್ಟ್ ಪಿಜ್ಜಾ ಪಾರ್ಸೆಲ್ ಮಾಡಿದ್ದಾರೆ.
ವಿಶ್ವಾದ್ಯಂತ 400 ಕೋಟಿ ಗಡಿ ದಾಟಿದ 'ಬ್ರಹ್ಮಾಸ್ತ್ರ' , ಆದರೂ ಕೆಜಿಎಫ್ ದಾಖಲೆ ಮುರಿಯಲು ಸಾಧ್ಯವಿಲ್ಲ
ಇನ್ನು ಆಲಿಯಾ ಭಟ್ ಈ ವರ್ಷದ ಏಪ್ರಿಲ್‌ನಲ್ಲಿ ನಟಿ ರಣಬೀರ್ ಕಪೂರ್ ಜೊತೆ ಹಸೆಮಣೆ ಏರಿದರು. ಆಪ್ತರು ಮತ್ತು ಕುಟುಂಬದ ನಡುವೆ ಆಲಿಯಾ ಮತ್ತು ರಣಬೀರ್ ವಿವಾಹವಾಗಿದ್ದರು. ಮದುವೆಯಾಗಿ ಒಂದು ತಿಂಗಳೊಳಗೆ ಆಲಿಯಾ ಭಟ್ ಗರ್ಭಿಣಿ ಆಗಿರುವ ವಿಚಾರ ರಿವೀಲ್ ಮಾಡಿ ಅಚ್ಚರಿ ಮೂಡಿಸಿದ್ದರು. ಸಿಕ್ಕಾಪಟ್ಟೆ ಟ್ರೋಲ್ ಕೂಡ ಆಗಿದ್ದರು. ಆಧರಕೆ ಆಲಿಯಾ ಜೋಡಿ ಯಾವುದಕ್ಕೂ ತಲೆಕೆಡಿಸಿಕೊಂಡಿಲ್ಲ. ಸದ್ಯ ತಾಯಿಯಾಗುತ್ತಿರುವ ಸಂಭ್ರಮವನ್ನು ಎಂಜಾಯ್ ಮಾಡುತ್ತಿದ್ದಾರೆ.