ಸಂಗೀತ ಕಾರ್ಯಕ್ರಮದಲ್ಲಿ ಸಖತ್ ಸ್ಟೆಪ್ ಹಾಕಿದ ರಾಜ್ ಕುಂದ್ರಾ..! ಪತಿಯ ಎನರ್ಜಿ ನೋಡಿ ಪತ್ನಿ ಶಿಲ್ಪಾ ಶೆಟ್ಟಿ ಫಿದಾ
ಬಾಲಿವುಡ್ ನಟ-ನಿರ್ಮಾಪಕ ಹರ್ಮಾ ಬವೇಜಾ ಅಂತಿಮವಾಗಿ ತಮ್ಮ ಸಶಾ ರಾಮ್‌ಚಂದಾನಿಯನ್ನು ಮದುವೆಯಾಗಿದ್ದಾರೆ. ಕಳೆದ ರಾತ್ರಿ ದಂಪತಿಗಳು ತಮ್ಮ ಸ್ನೇಹಿತರು ಮತ್ತು ಕುಟುಂಬದೊಂದಿಗೆ ಸಂಗೀತ ಸಮಾರಂಭದಲ್ಲಿ ಸಂಭ್ರಮಿಸಿದ್ದಾರೆ.
ಈವೆಂಟ್‌ನ ಹಲವು ಚಿತ್ರಗಳು ಮತ್ತು ವೀಡಿಯೊಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ನಟಿ ಶಿಲ್ಪಾ ಶೆಟ್ಟಿಯ ಉದ್ಯಮಿ ಪತಿ ರಾಜ್ ಕುಂದ್ರಾ ಅವರ ವಿಡಿಯೋ ಎಲ್ಲರನ್ನು ಬೆರಗುಗೊಳಿಸಿದೆ.
ಡ್ಯಾನ್ಸ್ ಮಾಡುವಾಗ ಮುಗ್ಗರಿಸಿ ಬಿದ್ದ ಶಿಲ್ಪಾ ಶೆಟ್ಟಿ, ವಿಡಿಯೋ ವೈರಲ್!
ಅವರು ದಿಲ್ಜಿತ್ ದೋಸಂಜ್ ಅವರ ಗೋಟ್ ಹಾಡಿಗೆ ಭಂಗ್ರಾ ಸ್ಟೆಪ್ ಹಾಕಿ ಪರ್ಫಾರ್ಮೆನ್ಸ್ ನೀಡುವುದನ್ನು ಕಾಣಬಹುದು. ಅಮೀರ್ ಅಲಿ ಮತ್ತು ಆಶಿಶ್ ಚೌಧರಿ ಸೇರಿದಂತೆ ಅನೇಕ ಖ್ಯಾತನಾಮರು ಈ ಕಾರ್ಯಕ್ರಮದಲ್ಲಿದ್ದರು.
ಇನ್ಸ್ಟಾಗ್ರಾಮ್‌ನಲ್ಲಿ ವೀಡಿಯೊವನ್ನು ಹಂಚಿಕೊಂಡಿದ್ದಾರೆ ರಾಜ್. ಪತ್ನಿ ಶಿಲ್ಪಾ ಅವರು ಪತಿಯ ಎನರ್ಜಿ ಮೆಚ್ಚಿ ಹೊಗಳಿದ್ದಾರೆ.
