ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ ವ್ಯಾಲೆಂಟೈನ್ಸ್ ಡೇ ಸಂದರ್ಭ ತಮ್ಮ ಬೆಡ್‌ರೂಂ ಸೀಕ್ರೆಟ್ ಬಿಚ್ಚಿಟ್ಟಿದ್ದಾರೆ. ಪತಿಯ ಮಾತುಗಳಿಗೆ ಅಕ್ಷರಶಃ ಶಾಕ್ ಆಗಿದ್ದಾರೆ ಶಿಲ್ಪಾ ಶೆಟ್ಟಿ.

ಕಪಲ್ ಹೊಸ ವಿಡಿಯೋ ಶೂಟ್ ಮಾಡಿದ್ದು, ನಟಿ ತಮ್ಮ ಇನ್‌ಸ್ಟಾಗ್ರಾಂನಲ್ಲಿ ವಿಡಿಯೋ ಸ್ನೀಕ್ ಪೀಕ್ ಶೇರ್ ಮಾಡಿದ್ದಾರೆ. ಅಂತೂ ಈ ಜೋಡಿ ಪ್ರೇಮಿಗಳ ದಿನದ ಈ ಸಂದರ್ಭದಲ್ಲಿ ಫುಲ್ ಫನ್ ಮಾಡಿದ್ದಾರೆ.

ಪ್ರಿಯಾಂಕ ಚೋಪ್ರಾ ಹೇಳದೆ ಉಳಿಸಿದ ರಹಸ್ಯಗಳು!

ಶಿಲ್ಪಾ ಶೆಟ್ಟಿಯ ಫೇವರೇಟ್ ಲವ್‌ಸ್ಟೋರಿ ಯಾವುದು ಎಂದು ರಾಜ್‌ಗೆ ಪ್ರಶ್ನಿಸಲಾಗುತ್ತದೆ. ರಾಜ್ ಕುಂದ್ರಾ ಉತ್ತರ ಹೇಳದಿದ್ದಾಗ ಶಿಲ್ಪಾ ಶೆಟ್ಟಿ ಬೇಜಾರಾಗಿ ಜೋರಾಗಿ ಕಿರುಚುತ್ತಾರೆ.

ನಂತರ ಬೇಗನೆ ಫಿಫ್ಟಿ ಶೇಡ್ಸ್ ಆಫ್ ಗ್ರೇ ಅನ್ನುತ್ತಾರೆ, ನಂತರ ಜೋಕ್ ಮಾಡಿ ಸಾರಿ, ಅದು ನಮ್ಮ ಬೆಡ್‌ರೂಂ ಸೀಕ್ರೆಟ್ ಎನ್ನುತ್ತಾರೆ. ನಾಚಿಕೊಂಡ ಶಿಲ್ಪಾ ಶೆಟ್ಟಿ ಜೋರಾಗಿ ನಗೋದನ್ನು ಕಾಣಬಹುದು.