Asianet Suvarna News Asianet Suvarna News

ಕೋವಿಡ್​ ರೋಗಿಗಳಿಗೆ ಜೀವ ನೀಡಿ, ಬ್ರೈನ್​ಸ್ಟ್ರೋಕ್​ಗೊಳಗಾದ ನಟಿ ಶಿಖಾ ಹೇಗಿದ್ದಾರೆ?

ಕೋವಿಡ್​ ರೋಗಿಗಳಿಗೆ ಚಿಕಿತ್ಸೆ ನೀಡಲು ನರ್ಸ್​ ಆಗಿ ಸೇವೆ ಸಲ್ಲಿಸಿದ್ದ ನಟಿ ಶಿಖಾ ಮಲ್ಹೋತ್ರಾ ಬ್ರೈನ್ ಸ್ಟ್ರೋಕ್​ಗೆ ಒಳಗಾಗಿದ್ದ ದಿನಗಳ ಬಗ್ಗೆ ಮಾಹಿತಿ ನೀಡಿದ್ದಾರೆ. 
 

Shikha Malhotra opens up on her battle with brain stroke paralysis suc
Author
First Published Jul 27, 2023, 1:36 PM IST

ಬಾಲಿವುಡ್​ ನಟಿ ಶಿಖಾ ಮಲ್ಹೋತ್ರಾ (shikha Malhotra) ಎಂದಾಕ್ಷಣ ಬಹುತೇಕ ಕಣ್ಣೆದುರಿಗೆ ಬರುವುದು ಆಕೆ ಧರಿಸುವ ಟೂ ಪೀಸ್​ ಬಟ್ಟೆ. ಇಂದು ಬಹುತೇಕ ನಟಿಯರು ಹಣಕ್ಕಾಗಿಯೋ ಅಥವಾ ಪ್ರಚಾರಕ್ಕಾಗಿಯೂ ಬಿಕಿನಿ ಬಟ್ಟೆ ಧರಿಸುವುದು ಮಾಮೂಲಾಗಿದೆ. ಅತ್ಯಂತ ಕನಿಷ್ಠ ಬಟ್ಟೆ ತೊಟ್ಟು ಪ್ರಚಾರ ಗಿಟ್ಟಿಸಿಕೊಳ್ಳುವ ತಂತ್ರವಿದು. ಆದರೆ ಅಸಲಿ ಜೀವನದಲ್ಲಿ ಅವರದ್ದು ಬರಿಯ ದುಡ್ಡು ಮಾಡುವ ಕೆಲಸವಷ್ಟೇ. ಆದರೆ ಸಿನಿಮಾಕ್ಕಾಗಿ ಬಿಕಿನಿ ತೊಟ್ಟು ಅಸಲಿ ಜೀವನದಲ್ಲಿ ನೂರಾರು ಜೀವವನ್ನು ಕಾಪಾಡಿರೋ ನಟಿ ಶಿಖಾ ಮಲ್ಹೋತ್ರಾ ಎಲ್ಲರಿಗಿಂತ ಭಿನ್ನವಾಗಿ ನಿಲ್ಲುತ್ತಾರೆ. ಹೌದು. ಬಹುತೇಕ ಜನರಿಗೆ ಶಿಖಾ ಅವರ ಇನ್ನೊಂದು ಮುಖದ ಪರಿಚಯವಾದದ್ದೇ ಕೋವಿಡ್​ ಟೈಂನಲ್ಲಿ. ನೂರಾರು ಕೋವಿಡ್​ ರೋಗಿಗಳಿಗೆ ಜೀವದಾನ ಮಾಡಿದ್ದಾರೆ ನಟಿ ಶಿಖಾ. ತಮ್ಮ ಚಿತ್ರವನ್ನು ಬಿಟ್ಟು ನರ್ಸ್​ ಆಗಿ ಆಯ್ಕೆ ಮಾಡಿ ಹಲವರ ಜೀವ ಉಳಿಸಲು ನೆರವಾಗಿದ್ದಾರೆ ನಟಿ. ಆದರೆ ಹೀಗೆ ನೆರವಾಗುತ್ತಲೇ ಖುದ್ದು ನರಕ ಅನುಭವಿಸಿದ್ದು ಮಾತ್ರ ಯಾರಿಗೂ ಬೇಡದ ಘಟನೆ!

ಕರೋನವೈರಸ್ ಏಕಾಏಕಿ ಮಧ್ಯೆ ಶಿಖಾ ಸ್ವಯಂಸೇವಕರಾಗಿ ನರ್ಸ್ (Nurse) ಆಗಿ ಕೆಲಸ ಮಾಡಿದ್ದರು. ವರ್ಧಮಾನ್ ಮಹಾವೀರ್ ವೈದ್ಯಕೀಯ ಕಾಲೇಜು ಮತ್ತು ಸಫ್ರ್ದಾರ್ಜಂಗ್ ಆಸ್ಪತ್ರೆಯಲ್ಲಿ ನರ್ಸಿಂಗ್‌ನಲ್ಲಿ ಪದವಿ ಪಡೆದಿರುವ ನಟಿ, ಈ ಮೊದಲು ನರ್ಸ್ ಆಗಿ ಕೆಲಸ ಮಾಡಿರಲಿಲ್ಲ. ಸಿನಿಮಾಕ್ಕೆ ಪ್ರವೇಶಿಸಿ ಅಲ್ಲಿ ಸಾಕಷ್ಟು ಹೆಸರು ಗಳಿಸಿದರು. ಕೊರೋನಾ ಸಮಯದಲ್ಲಿ ಈಕೆಯ ತಾಯಿ ಮುಂಚೂಣಿಯ ಕಾರ್ಯಕರ್ತೆ ಆಗಿದ್ದರು. ತಾಯಿಯಿಂದ ಸ್ಫೂರ್ತಿ ಪಡೆದ ಶಿಖಾ ಕೂಡ ತಮ್ಮ ಸಿನಿಮಾ ವೃತ್ತಿ ಬಿಟ್ಟು ಕೋವಿಡ್​ ರೋಗಿಗಳ ಸೇವೆಗಾಗಿ ನರ್ಸ್​ ಆಗಿ ಸೇವೆಗೆ ಧುಮುಕಿದರು. 

ಪೂಜಾ ಹೆಗ್ಡೆ, ರಶ್ಮಿಕಾ ಮಂದಣ್ಣ ಬುಡಕ್ಕೆ ಬೆಂಕಿ ಇಟ್ರಾ ಈ ಹೊಸ ಬ್ಯೂಟಿಗಳು?

ಆದರೆ ಪರಿಸ್ಥಿತಿ ಅಂದುಕೊಂಡಷ್ಟು ಸುಲಭವಾಗಿರಲಿಲ್ಲ. ಕೋವಿಡ್​ ಸಮಯದಲ್ಲಿ ರೋಗಿಗಳ ಶುಶ್ರೂಷೆ ಮಾಡಿರುವ ಕೆಲ ವೈದ್ಯರು, ದಾದಿಯರು ಜೀವ ಕಳೆದುಕೊಂಡಿರುವುದನ್ನು ನೋಡಿದ್ದೇವೆ. ಹಲವರ ಸ್ಥಿತಿ ಚಿಂತಾಜನಕವೂ ಆಗಿದ್ದಿದೆ. ಅದರಲ್ಲಿ ಒಬ್ಬರು ಶಿಖಾ ಮಲ್ಹೋತ್ರಾ. ಕೋವಿಡ್​ (Covid 19) ರೋಗಿಗಳ ಸಮೀಪದಲ್ಲಿಯೇ ಸೇವೆ ಸಲ್ಲಿಸುತ್ತಿದ್ದ ಶಿಖಾ ಅವರಿಗೆ   ಬಲಭಾಗದಲ್ಲಿ ಪಾರ್ಶ್ವವಾಯು ಹೊಡೆಯಿತು. ಸಾವಿಗೆ ಈಕೆ ಹತ್ತಿರವಾಗಿದ್ದರಂತೆ. ಬದುಕುವ ಆಸೆಯೂ ಇರಲಿಲ್ಲ ಎಂದಿದ್ದಾರೆ ನಟಿ. ಸಾವಿನ ಬಾಯೊಳಗೆ ಹೋಗಿ ಬಂದಿರುವ ಅನುಭವದ ಕುರಿತು ನಟಿ ಮಾತನಾಡಿದ್ದಾರೆ.

ಈಗ ನಟಿ ಸುಧಾರಿಸಿಕೊಳ್ಳುತ್ತಿದ್ದಾರೆ. ಅಂದು ತಾವು ಅನುಭವಿಸಿರುವ ನೋವಿನ ಕುರಿತು ಮಾತನಾಡಿದ್ದಾರೆ.  ಪಾರ್ಶ್ವವಾಯು ಅನುಭವಿಸಿದ ಬಗ್ಗೆ ಹಾಗೂ ಆ ನಂತರ ಹೇಗೆ ಚೇತರಿಸಿಕೊಳ್ಳುತ್ತಿದ್ದೇನೆ  ಎಂಬುದರ ಕುರಿತು ಶಿಖಾ ಮಾತನಾಡಿದ್ದಾರೆ.  ನಾನು ಈಗ ಗುಣಮುಖರಾಗುತ್ತಿರುವುದಾಗಿ ನಟಿ ಬರೆದುಕೊಂಡಿದ್ದಾರೆ. "ನನ್ನ ಆರೋಗ್ಯ ಸುಧಾರಿಸುತ್ತಿದೆ. ಆದರೆ ಪ್ರಕ್ರಿಯೆಯು ನಿಧಾನವಾಗಿದೆ. ನಾನು ಯಾವಾಗ ಮತ್ತೆ ನಡೆಯಲು ಸಾಧ್ಯವಾಗುತ್ತದೆ ಎಂದು ನನಗೆ ಖಚಿತವಿಲ್ಲ ಎಂದು ಈಚೆಗೆ ನಟಿ ಹೇಳಿಕೊಂಡಿದ್ದರು. ಆರಂಭದಲ್ಲಿ ಮುಂಬೈನ ಕೂಪರ್ ಆಸ್ಪತ್ರೆಗೆ ದಾಖಲಿಸಲಾಗಿತ್ತು, ಆಕೆ ಸುಧಾರಣೆಯ ಯಾವುದೇ ಲಕ್ಷಣಗಳನ್ನು ತೋರಿಸದಿದ್ದಾಗ ಕೆಇಎಂ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ಆ ಸಮಯದಲ್ಲಿ ನಟಿ, "ನಾನು ನನ್ನ ದೇಹದಿಂದ ಅಸಹಾಯಕಳಾಗಿದ್ದೇನೆ. ಆದರೆ ನಾನು ಮುಖ್ಯ ಪಾತ್ರದಲ್ಲಿ ನಟಿಸಿರುವ ನನ್ನ ಕಾಂಚ್ಲಿ ಚಿತ್ರದ ಬಗ್ಗೆ ಯೋಚಿಸಿದಾಗ ನನ್ನ ಹೃದಯವು ಉಲ್ಲಾಸಗೊಳ್ಳುತ್ತದೆ ಎಂದಿದ್ದರು.

Anita Bhat: ಉಡುಪಿ ಕಾಲೇಜ್​ ಟಾಯ್ಲೆಟಲ್ಲಿ ಹಿಂದೂ ವಿದ್ಯಾರ್ಥಿನಿಯರ ವಿಡಿಯೋ: ಅನುಭವ ಹೇಳಿದ 'ಟಗರು' ನಟಿ!

 ಆಸ್ಪತ್ರೆಗೆ ದಾಖಲಾಗಿದ್ದ ಸಮಯದಲ್ಲಿ ನಾನು ನನ್ನ ಜೀವನದಲ್ಲಿ ಕಠಿಣ ಹಂತವನ್ನು ಎದುರಿಸುತ್ತಿದ್ದೆ.  ನನಗೆ ಎಲ್ಲರ ಬೆಂಬಲದ ಅಗತ್ಯವಿದೆ ಎನ್ನಿಸಿತ್ತು. ನಾನು ನನ್ನ ಕೆಲಸದ ಬಗ್ಗೆ ಉತ್ಸುಕಳಾಗಿದ್ದೆ ಎಂದಿರುವ ನಟಿ ಶಿಖಾ ಈಗ ಆರೋಗ್ಯವಂತರಾಗುತ್ತಿದ್ದಾರೆ ಎನ್ನುವುದೇ ಸಮಾಧಾನದ ಸಂಗತಿ.  ಕೋವಿಡ್ ಸಮಯದಲ್ಲಿ ಐಸಿಯುನಲ್ಲಿ ಒಂದು ವರ್ಷ ಸೇವೆ ಸಲ್ಲಿಸಿದ್ದ ನಟಿ,  ನಂತರ ಬ್ರೈನ್ ಸ್ಟ್ರೋಕ್​ಗೆ (Brain stoke) ಒಳಗಾಗಿದ್ದರು.  ಈಗ ಅವರು  ಸ್ಟೀರಾಯ್ಡ್‌ಗಳಿಂದಾಗಿ ತುಂಬಾ ತೂಕವನ್ನು ಹೆಚ್ಚಿಸಿಕೊಂಡಿದ್ದಾರೆ. ನಿಧಾನವಾಗಿ ಚೇತರಿಸಿಕೊಳ್ಳುತ್ತಿರುವ ನಟಿ ಶಿಖಾ ಈಗ  ಹೊಸ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಆಸ್ಪತ್ರೆಯಲ್ಲಿ ದಾಖಲಾಗಿದ್ದರಿಂದ ಹಲವು ಚಿತ್ರಗಳು ಈಕೆಯ ಕೈತಪ್ಪಿವೆ. ಆದರೆ ಈಗ ತಾವು  ರಾಕಿಂಗ್ ಆಗಿ ಹಿಂದಿರುಗಿರುವುದಾಗಿ ಶಿಖಾ ಹೇಳಿಕೊಂಡಿದ್ದಾರೆ. ಬಟ್ಟೆಯಲ್ಲಿ ಏನಿದೆ ಎನ್ನುತ್ತಿರುವ ಸಹಸ್ರಾರು ಮಂದಿ, ಶಿಖಾ ಅವರ ಕಾರ್ಯಕ್ಕೆ ಮೆಚ್ಚುಗೆಗಳ ಮಹಾಪೂರನ್ನೇ ಹರಿಸುತ್ತಿದ್ದಾರೆ. 

Follow Us:
Download App:
  • android
  • ios