Asianet Suvarna News Asianet Suvarna News

ಬಿಕಿನಿ ಧರಿಸಿದ್ದ ಶೆರ್ಲಿನ್ ಪಕ್ಕ ಕೂತ ಕುಂದ್ರಾ : ಫೋಟೋಸ್ ವೈರಲ್

  • ಬಿಕಿನಿ ಧರಿಸಿ ರಾಜ್ ಕುಂದ್ರಾ ಪಕ್ಕದಲ್ಲಿ ಕುಳಿತ ಶೆರ್ಲಿನ್ ಚೋಪ್ರಾ
  • ಶೂಟಿಂಗ್‌ನ ಮೊದಲ ದಿನ ಕ್ಲಿಕ್ಕಿಸಿದ ಪೋಟೋ ಎಂದ ನಟಿ
Sherlyn Chopra shares an old picture with Raj Kundra dpl
Author
Bangalore, First Published Aug 12, 2021, 1:36 PM IST
  • Facebook
  • Twitter
  • Whatsapp

ಪೋರ್ನ್ ವಿಡಿಯೋ ಚಿತ್ರೀಕರಿಸಿ ಮಾರಾಟ ದಂಧೆಯಲ್ಲಿ ಜು.19ರಂದು ಬಂಧನಕ್ಕೊಳಗಾದ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಪತಿ ಹಾಗೂ ಉದ್ಯಮಿ ರಾಜ್ ಕುಂದ್ರಾ ಅವರ ಹಳೆಯ ಫೋಟೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಪೋರ್ನ್ ವಿಡಿಯೋ ಸಂಬಂಧಿಸಿ ರಾಜ್ ಕುಂದ್ರಾನ ಮೇಲೆ ಆರೋಪ ಮಾಡಿದ್ದ ನಟಿ ಶೆರ್ಲಿನ್ ಚೋಪ್ರಾ ಹಳೆಯ ಫೋಟೋ ಶೇರ್ ಮಾಡಿದ್ದಾರೆ. ಹಾಗೆಯೇ ಶೂಟಿಂಗ್‌ನ ಮೊದಲ ದಿನದ ಫೋಟೋ ಎಂದು ಅವರು ಹೇಳಿಕೊಂಡಿದ್ದಾರೆ.

ಇನ್‌ಸ್ಟಾಗ್ರಾಂನಲ್ಲಿ ಥ್ರೂಬ್ಯಾಕ್ ಫೋಟೋ ಶೇರ್ ಮಾಡಿದ ಶೆರ್ಲಿನ್ ಬಿಕಿನಿಯಲ್ಲಿ ಕಾಣಿಸಿಕೊಂಡಿದ್ದು ಅವರ ಪಕ್ಕದಲ್ಲಿಯೇ ರಾಜ್ ಕುಂದ್ರಾ ನಗುತ್ತಾ ಪೋಸ್ ಕೊಡುವುದನ್ನು ಕಾಣಬಹುದು. ಎಪ್ಲಿಕೇಷನ್ ಒಂದಕ್ಕೆ ವಿಡಿಯೋ ಶೂಟಿಂಗ್‌ನ ಮೊದಲ ದಿನವಾಗಿತ್ತು ಎಂದೂ ನಟಿ ಹೇಳಿದ್ದಾರೆ. ಮಾರ್ಚ್ 29, 2019. ಶೆರ್ಲಿನ್ ಚೋಪ್ರಾ ಆಪ್‌ನ ಕಂಟೆಂಟ್ ಶೂಟ್. ಆಮ್ಸ್‌ಪ್ರೈಂ ಪ್ರಾಯೋಜಕತ್ವದಲ್ಲಿ ನಡೆದಿತ್ತು. ಯಾವುದೇ ಎಪ್ಲಿಕೇಷನ್‌ಗಾಗಿ ಕೆಲಸ ಮಾಡಿರದ ಕಾರಣ ಅದು ನನ್ನ ಮೊದಲ ಅನುಭವವಾಗಿತ್ತು ಎಂದು ನಟಿ ಹೇಳಿದ್ದಾರೆ. ಅಲ್ಲಿ ವಿಶ್ವಾಸ ಮತ್ತು ಉತ್ಸಾಹದ ವಾತಾವರಣ ಇತ್ತು ಎಂದು ಬರೆದಿದ್ದಾರೆ.

'ಪ್ಯಾಂಟ್‌ನಿಂದ ಶಿಶ್ನ ತೆಗೆದು ಫೀಲ್ ಮಾಡು ಎಂದಿದ್ದ ನಿರ್ದೇಶಕ'

ಪೋರ್ನ್ ಆಪ್ ಪ್ರಕರಣದಲ್ಲಿ ಶೆರ್ಲಿನ್ ಅವರನ್ನು ಮುಂಬೈ ಪೊಲೀಸರು ಸುಮಾರು 8 ಗಂಟೆಗಳ ಕಾಲ ವಿಚಾರಣೆ ನಡೆಸಿದ್ದಾರೆ ಎಂದು ಇತ್ತೀಚೆಗೆ ವರದಿಯಾಗಿದೆ. ತನ್ನ ಇತ್ತೀಚಿನ ಸಂದರ್ಶನದಲ್ಲಿ, ಅರೆ-ನಗ್ನ ಚಿತ್ರೀಕರಣದಲ್ಲಿ ರಾಜ್ ಕುಂದ್ರಾ ತನ್ನ ದಾರಿ ತಪ್ಪಿಸಿದ್ದಾನೆ, ತಪ್ಪು ಭರವಸೆ ಮೂಲಕ ಮನವೊಲಿಸಿದ್ದಾನೆ ಎಂದು ಹೇಳಿಕೊಂಡಿದ್ದಾರೆ. ರಾಜ್ ಕುಂದ್ರಾ ನನಗೆ ಮಾರ್ಗದರ್ಶಕರು. ನಾನು ಅವರು ಹೇಳಿರುವುದನ್ನು ಮಾಡಬೇಕು ಎಂದು ಶೆರ್ಲಿನ್ ಹೇಳಿದ್ದರು.

ಮನೆಗೆ ನುಗ್ಗಿ ಕಿಸ್ ಮಾಡೋಕೆ ಶುರು ಮಾಡಿದ: ಶಿಲ್ಪಾ ಪತಿ ವಿರುದ್ಧ ಲೈಂಗಿಕ ಕಿರುಕುಳ ಆರೋಪ

ಇತ್ತೀಚೆಗೆ ನಟಿ ಶೆರ್ಲಿನ್ ಚೋಪ್ರಾ ರಾಜ್ ಕುಂದ್ರಾ ತನ್ನ ಮನೆಗೆ ಬಂದು ಬಲವಂತವಾಗಿ ಕಿಸ್ ಮಾಡಿದ್ದಾಗಿ ಹೇಳಿದ್ದರು. ಯಾವುದೇ ಮಾಹಿತಿ ಇಲ್ಲದೇ ಏಕಾಏಕಿ ಮನೆಗೆ ನುಗ್ಗಿದ ರಾಜ್ ನನಗೆ ಚುಂಬಿಸಲಾರಂಭಿಸಿದ್ದಾರೆ ಎಂದು ಆರೋಪಿಸಿದ್ದಾರೆ. ನಂತರ ತಾವು ಬಾತ್‌ರೂಂ ಒಳಗೆ ನುಗ್ಗಿ ಬಾಗಿಲು ಹಾಕಿದ್ದು ರಾಜ್ ತಮ್ಮ ಮನೆಯಿಂದ ಹೋದ ಮೇಲೆಯೇ ಹೊರಗೆ ಬಂದಿದ್ದಾರೆ ಎಂದೂ ಹೇಳಿದ್ದರು.

ಹಾಗೆಯೇ ತಮ್ಮನ್ನು ಹೆಚ್ಚು ವಿಡಿಯೋ ಮಾಡುವಂತೆ ಪ್ರೋತ್ಸಾಹಿಸಲು ಶಿಲ್ಪಾ ಶೆಟ್ಟಿ ಅವರೂ ವಿಡಿಯೋ ಅಭಿನಯವನ್ನು ಇಷ್ಟಪಡುತ್ತಿದ್ದಾರೆ ಎಂದು ಶೂಟ್‌ನ ಮಧ್ಯೆ ಕುಂದ್ರಾ ಹೇಳುತ್ತಿದ್ದರು ಎಂದು ಶೆರ್ಲಿನ್ ಚೋಪ್ರಾ ತಿಳಿಸಿದ್ದಾರೆ.

ನಾನು ಮೊದಲ ಬಾರಿಗೆ ರಾಜ್ ಕುಂದ್ರಾ ಅವರನ್ನು ಭೇಟಿಯಾದಾಗ, ಅವರೊಂದಿಗೆ ಕೆಲಸ ಮಾಡುವುದು ನನ್ನ ವೃತ್ತಿಜೀವನದಲ್ಲಿ ಸಕಾರಾತ್ಮಕ ಬದಲಾವಣೆ ತರುತ್ತದೆ ಎಂದು ಭಾವಿಸಿದ್ದೆ. ಅವನೊಂದಿಗೆ ಕೆಲಸ ಮಾಡುವುದು ನನ್ನ ವೃತ್ತಿಜೀವನದಲ್ಲಿ ನನಗೆ ಒಂದು ದೊಡ್ಡ ಬ್ರೇಕ್ ಎಂದು ನಾನು ನಂಬಿದ್ದೆ. ಆದರೆ ನನ್ನ ಜೀವನದಲ್ಲಿ ಎಂದಿಗೂ ಹಾಗಾಗಲಿಲ್ಲ. ಶಿಲ್ಪಾ ಶೆಟ್ಟಿಯ ಗಂಡ ನನ್ನನ್ನು ಬಳಸಿ ಇಂತಹ ಕಾನೂನುಬಾಹಿರ ಕೃತ್ಯಗಳನ್ನು ಮಾಡುತ್ತಾನೆ ಎಂದು ಭಾವಿಸಿರಲಿಲ್ಲ. ಪ್ರತಿ ವೀಡಿಯೊದ ನಂತರ ಶಿಲ್ಪಾ ಶೆಟ್ಟಿಗೆ ನನ್ನ ವಿಡಿಯೋಗಳು ಮತ್ತು ಛಾಯಾಚಿತ್ರಗಳು ಇಷ್ಟವಾಗುತ್ತವೆ ಎಂದು ನನಗೆ ಹೇಳಿದ್ದರು. ಇದನ್ನು ಕೇಳಿದಾಗ ನಾನು ಅಂತಹ ಹೆಚ್ಚಿನ ವೀಡಿಯೊಗಳು ಮತ್ತು ಚಿತ್ರೀಕರಣಗಳನ್ನು ಮಾಡಲು ಪ್ರೇರೇಪಿತಳಾಗುತ್ತಿದ್ದೆ ಎಂದಿದ್ದಾರೆ.

Follow Us:
Download App:
  • android
  • ios