Asianet Suvarna News Asianet Suvarna News

Sharukh Khan ಕೂಡ ಮಗನಂತೆ ಜೈಲಿಗೆ ಹೋಗಿ ಬಂದಿದ್ದ, ನಿಮಗೆ ಗೊತ್ತೆ?

ಇಂದು ಶಾರುಕ್ ಖಾನ್ ಜನ್ಮದಿನ. ಶಾರುಕ್ ಕೂಡ ತನ್ನ ಮಗನಂತೆಯೇ ಕೆಲವು ದಿನ ಜೈಲಿಗೆ ಹೋಗಿ ಬಂದಿದ್ದ ಎಂಬುದು ನಿಮಗೆ ಗೊತ್ತೆ? ಶಾರುಕ್ ಬಗ್ಗೆ ಇನ್ನೂ ಹಲವು ವಿಶಿಷ್ಟ ಸಂಗತಿಗಳು ಇಲ್ಲಿವೆ.
 

Sharukh khan birthday unknow facts about Mangalore born actor
Author
Bengaluru, First Published Nov 3, 2021, 5:59 PM IST

ಆರ್ಯನ್ ಖಾನ್ (Aryan Khan) ಡ್ರಗ್ಸ್ ಕೇಸಿನಲ್ಲಿ (Drug Case) ಜೈಲಿಗೆ ಹೋಗಿ ಬಂದ ಹಾಗೆ ಶಾರುಖ್ ಖಾನ್ (Sharukh Khan) ಕೂಡ ಒಮ್ಮೆ ಜೈಲುಪಾಲಾಗಿದ್ದ. ತೆಹಲ್ಕಾದ ಥಿಂಕ್ 2012 ಕಾರ್ಯಕ್ರಮದ ಸಂವಾದದ ಸಂದರ್ಭದಲ್ಲಿ, ಶಾರುಖ್ ಖಾನ್ ಒಮ್ಮೆ ಸಹನಟರೊಂದಿಗಿನ ತನ್ನ ಸಂಬಂಧದ ಬಗ್ಗೆ ಸುದ್ದಿಯನ್ನು ಪ್ರಕಟಿಸಿದ್ದಕ್ಕಾಗಿ ಒಬ್ಬ ಪತ್ರಕರ್ತನಿಗೆ ಕತ್ತಿಯಿಂದ ಇರಿದ ಬಗ್ಗೆ ಮಾತನಾಡಿದ್ದರು. ಗೌರಿ ಖಾನ್ (Gowri khan) ಅವರ ಮದುವೆಯಾದ ಎರಡು ವರ್ಷಗಳ ನಂತರ ಅದು ನಡೆದಿತ್ತು. ಅವರೇ ಹೇಳಿಕೊಂಡದ್ದು ಹೀಗೆ- 'ನಾನು ತುಂಬಾ ಕೆಟ್ಟದಾಗಿ ವರ್ತಿಸಿದೆ. ನನಗೆ ಜೈಲು (Jail) ಶಿಕ್ಷೆಯಾಯಿತು. ಪಂಜಾಬಿ ಮದುವೆಗಳಲ್ಲಿ ಮಾಡುವಂತೆ ನನ್ನ ಮಾವ ನನಗೆ ಕತ್ತಿಯನ್ನು ಕೊಟ್ಟಿದ್ದರು. ನಾನು ಆ ಖಡ್ಗವನ್ನು ಆ ಪತ್ರಕರ್ತನ ಮನೆಗೆ ತೆಗೆದುಕೊಂಡು ಹೋದೆ. ಸೈನ್ಯಾಧಿಕಾರಿಯಾಗಿರುವ ನನ್ನ ಮಾವ, ‘ಮಗನೇ, ನನ್ನ ಮಗಳನ್ನು ನೀನು ರಕ್ಷಿಸಬೇಕು’ ಎಂದಿದ್ದರು. ಈ ಖಡ್ಗ ಭಾರತೀಯ ಸೇನೆಯಿಂದ ಅನುಮತಿ ಪಡೆದ ಅಸ್ತ್ರ ಎಂದು ನಾನು ಭಾವಿಸಿದ್ದೆ. ಆದರೆ ಪತ್ರಕರ್ತನನ್ನು ಬೆದರಿಸಿದ್ದಕ್ಕಾಗಿ ನನಗೆ ಶಿಕ್ಷೆಯಾಯಿತು.'ಶಾರುಖ್‌ಗೆ ಜೈಲಿನಿಂದ ಒಂದು ಫೋನ್ ಕರೆ ಮಾಡಲು ಅವಕಾಶ ನೀಡಿದಾಗಲೂ, ಅವರು ಅದೇ ಪತ್ರಕರ್ತನಿಗೆ ಕರೆ ಮಾಡಿದ್ದರು; ಜೈಲಿನಿಂದ ಹೊರಬಂದ ನಂತರ ನಿನ್ನನ್ನು ನೋಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದರು. 

ಶಾರುಖ್ ನಿಜ ಹೆಸರಲ್ಲ
ದೆಹಲಿಯ ಮುಸ್ಲಿಂ (Muslim) ಕುಟುಂಬದಲ್ಲಿ ಜನಿಸಿದ ಶಾರುಕ್ ತಂದೆ ಮೀರ್ ತಾಜ್ ಅವರು ಭಾರತದ ವಿಭಜನೆಯ ನಂತರ ಲತೀಫ್ ಫಾತಿಮಾ ಅವರನ್ನು 1959ರಲ್ಲಿ ವಿವಾಹವಾದರು. 1965ರಲ್ಲಿ ಶಾರುಕ್ ಹುಟ್ಟಿದ ನಂತರ, ಅವರ ನಾನಿ (ತಾಯಿಯ ಅಮ್ಮ) ಅವರಿಗೆ ಅಬ್ದುಲ್ ರಶೀದ್ ಖಾನ್ ಎಂದು ಹೆಸರಿಟ್ಟರು. ಶಾರುಕ್ ತಮ್ಮ ಜೀವನದ ಮೊದಲ ಐದು ವರ್ಷಗಳನ್ನು ಮಂಗಳೂರಿನಲ್ಲಿ (Mangalore) ತನ್ನ ತಾಯಿಯ ಅಜ್ಜಿಯರೊಂದಿಗೆ ಕಳೆದಿದ್ದರು. ಆದಾಗ್ಯೂ, ಅವರು ದೆಹಲಿಯಲ್ಲಿರುವ ತನ್ನ ಹೆತ್ತವರ ಬಳಿಗೆ ಹಿಂತಿರುಗಿದ ನಂತರ, ಅವರು ಶಾರುಕ್‌ ಖಾನ್ ಎಂದು ಅವರ ಹೆಸರನ್ನು ಬದಲಾಯಿಸಿದರು.

ಮೂರು ಸಲ ವಿವಾಹ! (Marriage) 
ಶಾರುಕ್ ದೆಹಲಿಯಲ್ಲಿ ನೆಲೆಸಿದ್ದಾಗಲೇ ಗೌರಿಯನ್ನು ಪ್ರೀತಿಸುತ್ತಿದ್ದರು. ಅವರು ಗೌರಿಯನ್ನು ಮದುವೆಯಾಗಲು ನಿರ್ಧರಿಸಿದಾಗ, ರಿಜಿಸ್ಟರ್ಡ್ ವಿವಾಹದಲ್ಲಿ ಪತಿ-ಪತ್ನಿ ಎಂದು ನೋಂದಾಯಿಸಿಕೊಂಡಿದ್ದರು. ನಂತರ, ಅವರು ಆಗಸ್ಟ್ 26, 1991ರಂದು ಮುಸ್ಲಿಂ ಸಾಂಪ್ರದಾಯದಂತೆ ವಿವಾಹವಾದ ನಿಕಾಹ್ (nikah) ಅನ್ನು ಮಾಡಿಕೊಂಡರು. ಅದರ ನಂತರ, 25 ಅಕ್ಟೋಬರ್ 1991ರಂದು, ದಂಪತಿ ಹಿಂದೂ ಸಾಂಪ್ರದಾಯಿಕ ವಿವಾಹದ ಶೈಲಿಯಲ್ಲಿ ಮತ್ತೆ ಮದುವೆಯಾಗಲು ನಿರ್ಧರಿಸಿದರು.

ಶಾರುಖ್ ಮಗಳು ಸುಹಾನಾಗೆ ಮನೆಗೆ ಬರುವ ಕಾತುರವಂತೆ!

ಐಸ್‌ಕ್ರೀಂ ಇಷ್ಟವಿಲ್ಲ, ಕುದುರೆ ಸವಾರಿ ಭಯ! (Ice cream)
ಶಾರುಖ್ ಖಾನ್ ಐಸ್ ಕ್ರೀಂ ಅನ್ನು ಹೆಚ್ಚು ಇಷ್ಟಪಡುವುದಿಲ್ಲ ಮತ್ತು ಅದನ್ನು ತಿನ್ನುವುದಿಲ್ಲ. ಅಷ್ಟೇ ಅಲ್ಲ, ತನ್ನ ವರ್ಚಸ್ವಿ ವ್ಯಕ್ತಿತ್ವದಿಂದ ಅನೇಕ ಜನರ ಹೃದಯವನ್ನು ಆಳುವ ಕಿಂಗ್ ಖಾನ್‌ಗೆ ಕುದುರೆ ಸವಾರಿ ಬಗ್ಗೆ ವಿಚಿತ್ರವಾದ ಫೋಬಿಯಾ ಕೂಡ ಇದೆ. ಅದು ಕೂಡ ಕೆಲವು ಸಿನಿಮಾಗಳಲ್ಲಿ ಸಾಕಷ್ಟು ದೃಶ್ಯಗಳನ್ನು ಮಾಡದಂತೆ ತಡೆದಿದೆ.

Sharukh khan birthday unknow facts about Mangalore born actor


ವಾಂಖೆಡೆ ಸ್ಟೇಡಿಯಂಗೆ ನಿಷೇಧ 
ಮೇ 16, 2012ರಂದು ಮುಂಬೈ ಇಂಡಿಯನ್ಸ್ (Mumbai Indians) ಮತ್ತು ಶಾರುಕ್‌ ಖಾನ್ ತಂಡವಾದ ಕೋಲ್ಕತ್ತಾ ನೈಟ್ ರೈಡರ್ಸ್ (Kolkata knight riders) ನಡುವೆ ಐಪಿಎಲ್ (IPL) ಪಂದ್ಯ ನಡೆಯುತ್ತಿತ್ತು. ಆದರೆ, ಆ ಪಂದ್ಯದ ನಂತರ ಅವರು ವಾಂಖೆಡೆ ಸ್ಟೇಡಿಯಂನ ಭದ್ರತಾ ಸಿಬ್ಬಂದಿಯೊಬ್ಬರೊಂದಿಗೆ ಜಗಳವಾಡಿದ್ದರು. ಪರಿಸ್ಥಿತಿಯನ್ನು ನಿಭಾಯಿಸಲು, ಭದ್ರತಾ ಸಿಬ್ಬಂದಿಯ ಜೊತೆ ಅನುಚಿತವಾಗಿ ವರ್ತಿಸಿದ ಆರೋಪದ ಮೇಲೆ ಮುಂದಿನ ಐದು ವರ್ಷಗಳ ಕಾಲ ಎಂಸಿಎ ಅಧಿಕಾರಿಗಳು ಅವರ ಪ್ರವೇಶವನ್ನು ನಿಷೇಧಿಸಿದ್ದರು. ಶಾರುಕ್ ತಮ್ಮ ನಡತೆಗಾಗಿ ಸ್ವಲ್ಪವೂ ವಿಷಾದಿಸಲಿಲ್ಲ. ಹೀಗಾಗಿ ವ್ಯವಸ್ಥಾಪಕ ಸಮಿತಿ ಐದು ವರ್ಷಗಳ ಕಾಲ ನಿಷೇಧ ಹೇರಿತ್ತು.

ಆರವ್ ಕುಮಾರ್ ಆಯ್ತು, ಈಗ ಮಾಧವನ್ ಮಗನ ಜೊತೆ ಆರ್ಯನ್ ಖಾನ್ ಹೋಲಿಕೆ

ದಟುಕ್ ಪದವಿ ಪಡೆದಿದ್ದಾರೆ 
ನೈಟ್ ಆಫ್ ಲೀಜನ್ ಆಫ್ ಆನರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಬಾಲಿವುಡ್‌ನ ಏಕೈಕ ನಟ ಶಾರುಕ್‌ ಖಾನ್. 2001ರ ಒನ್ 2 ಕಾ 4 ಚಿತ್ರದ ಚಿತ್ರೀಕರಣದ ನಂತರ ಮಲಕ್ಕಾದ ಜನಪ್ರಿಯ ರೆಸಾರ್ಟ್‌ನಲ್ಲಿ ಭಾರತದಿಂದ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ ಗಣನೀಯವಾಗಿ ಹೆಚ್ಚಾಯಿತು. ಅವರಿಗೆ ಮಲೇಷಿಯಾದ 'ದಟುಕ್' ಎಂಬ ಬಿರುದನ್ನು ನೀಡಲಾಯಿತು, ಇದು ಬ್ರಿಟಿಷ್ ನೈಟ್‌ಹುಡ್‌ಗೆ ಸಮಾನವಾಗಿದೆ.

ಮೂರು ವಿದೇಶಿ ಡಾಕ್ಟರೇಟ್
ಮೂರು ಪ್ರಸಿದ್ಧ ವಿದೇಶಿ ವಿಶ್ವವಿದ್ಯಾನಿಲಯಗಳಿಂದ ಡಾಕ್ಟರೇಟ್‌ಗಳನ್ನು ಪಡೆದಿರುವ ಬಾಲಿವುಡ್‌ನ ಏಕೈಕ ನಟ ಶಾರುಕ್ ಖಾನ್. 

ಬ್ಯೂಟಿ ಮತ್ತು ಸ್ಟೈಲ್‌ ಎರಡರಲ್ಲೂ ಶಾರುಖ್‌ ಮಗಳಿಗಿಂತ ಪತ್ನಿನೇ ಮುಂದೆ!

Follow Us:
Download App:
  • android
  • ios