ಬಾಲ್ಯ ನಟಿಯಾಗಿ ಮಾಲಿವುಡ್‌ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ನಟಿ ಶಾಲಿನಿ ನಟ ತಲ ಅಜಿತ್ ಅವರನ್ನು ಮದುವೆಯಾದ ನಂತ ಸಿನಿಮಾದಿಂದ ಸಂಪೂರ್ಣವಾಗು ದೂರ ಸರಿದಿದ್ದರು. ಬರೋಬ್ಬರಿ 20 ವರ್ಷ ಶಾಲಿನಿ ನಟನೆಯಿಂದು ದೂರ ಉಳಿದಿದ್ದರು.

ಶಾಲಿನಿ ಶ್ಯಾಮಿಲಿ ಜೋಡಿ ಭಾರೀ ಪೇಮಸ್ ಆಗಿತ್ತು. ಮುದ್ದು ಮಕ್ಕಳು ಚೈಲ್ಡ್ ಆರ್ಟಿಸ್ಟ್‌ಗಳಾಗಿ ಮಿಂಚಿದ್ದರು. ನಂತರ 2001ರಲ್ಲಿ ರಿಲೀಸ್ ಆದ ಪಿರಿಯಾದ ವರಂ ವೇಣುಂ ಸಿನಿಮಾದಲ್ಲಿ ಕೊನೆಯ ಬಾರಿಗೆ ಕಾಣಿಸಿಕೊಂಡಿದ್ದರು.

ಬೆಡ್‌ರೂಂ ಸೀಕ್ರೆಟ್ ಹೇಳಿದ ರಾಜ್‌ ಕುಂದ್ರಾ: ಶಿಲ್ಪಾ ಶೆಟ್ಟಿ ಶಾಕ್

ಇದೀಗ ನಟಿ ಪೊನ್ನಿಯನ್ ಸೆಲ್ವನ್ ಸಿನಿಮಾ ಮೂಲಕ ಕಂ ಬ್ಯಾಕ್ ಮಾಡಲಿದ್ದಾರೆ ಎಂಬ ಸುದ್ದಿ ವೈರಲ್ ಆಗಿದೆ. ಪೊನ್ನಿಯನ್ ಸೆಲ್ವನ್ ಸಿನಿಮಾ ತಂಡ ಅಧಿಕೃತವಾಗಿ ತನ್ನ ಕಲಾವಿದರ ಪಟ್ಟಿ ಬಿಡುಗಡೆ ಮಾಡದಿದ್ದರೂ, ಐಶ್ವರ್ಯಾ ರೈ, ತ್ರಿಶಾ ಕೃಷ್ಣನ್, ಚಿಯಾನ್ ವಿಕ್ರಂ, ಕಾರ್ತಿ, ಜಯಂ ರವಿ ಮುಖ್ಯ ಪಾತ್ರಗಳಲ್ಲಿ ನಟಿಸುತ್ತಿರುವುದು ಎಲ್ಲರಿಗೂ ಗೊತ್ತು.

ಮಣಿ ರತ್ನಂ ನಿರ್ದೇಶನದ ಪೊನ್ನಿಯನ್ ಸ್ವೆಲ್ವನ್ ಸಿನಿಮಾವನ್ನು ಲಿಕಾ ಪ್ರೊಡಕ್ಷನ್ ಮತ್ತು ಮದ್ರಾಸ್ ಟಾಕೀಸ್ ನಿರ್ಮಿಸುತ್ತಿದೆ. ಸಿನಿಮಾ ಎರಡು ಭಾಗದಲ್ಲಿ ರಿಲೀಸ್ ಆಗಲಿದೆ.