ಬಾಲಿವುಡ್ ಸ್ಟಾರ್ ಕಿಂಗ್ ಖಾನ್ ಶಾರುಖ್ ಖಾನ್‌ಗೆ ಅಪಘಾತವಾಗಿದ್ದು ಅಮೆರಿಕಾದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಶಾರುಖ್ ಖಾನ್ ಮೂಗಿಗೆ ಗಾಯವಾಗಿದ್ದು ತೀವ್ರ ರಕ್ತಸ್ರಾವ ಆಗಿದೆ.

ಬಾಲಿವುಡ್ ಸ್ಟಾರ್ ಕಿಂಗ್ ಖಾನ್ ಶಾರುಖ್ ಖಾನ್‌ಗೆ ಅಪಘಾತವಾಗಿದ್ದು ಅಮೆರಿಕಾದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಶಾರುಖ್ ಖಾನ್ ಮೂಗಿದೆ ಗಾಯವಾಗಿದ್ದು ಶಸ್ತ್ರ ಚಿಕಿತ್ಸೆ ಮಾಡಲಾಗಿದೆ. ಶಾರುಖ್ ಖಾನ್ ಅಮೆರಿಕಾದ ಲಾಸ್ ಏಂಜಲೀಸ್‌ನಲ್ಲಿ ಶೂಟಿಂಗ್‌ನಲ್ಲಿ ನಿರತರಾಗಿದ್ದರು. ಶೂಟಿಂಗ್ ಸೆಟ್ ನಲ್ಲೇ ಈ ಅವಘಡ ಸಂಭವಿಸಿದ್ದು ಶಾರುಖ್ ಖಾನ್ ಅವರಿಗೆ ಗಾಯವಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ತಕ್ಷಣ ಅವರನ್ನು ಲಾಸ್ ಏಂಜಲೀಸ್‌ನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ತೀವ್ರ ರಕ್ತಸ್ರಾವ ಆಗುತ್ತಿದ್ದ ಕಾರಣ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದಾರೆ. 

 ಶಾರುಖ್ ಖಾನ್‌ಗೆ ಅಪಘಾತ ಎನ್ನುವ ಸುದ್ದಿ ವೈರಲ್ ಆಗುತ್ತಿದ್ದಂತೆ ಅಭಿಮಾನಿಗಳಲ್ಲಿ ಆತಂಕ ಹೆಚ್ಚಾಗಿದೆ. ನೆಚ್ಚಿನ ಸ್ಟಾರ್‌ಗೆ ಏನಾಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಆದರೆ ಶಾರುಖ್ ಸದ್ಯ ಆರಾಮಾಗಿ ಇದ್ದಾರೆ, ವಿಶ್ರಾಂತಿ ಪಡೆಯುತ್ತಿದ್ದಾರೆ, ಅಭಿಮಾನಿಗಳು ಆತಂಕ ಪಡಬೇಕಾಗಿಲ್ಲ ಎಂದು ಮೂಲಗಳು ಮಾಹಿತಿ ನೀಡಿದೆ ಎಂದು ಆಂಗ್ಲ ಮಾಧ್ಯಮಗಳು ವರದಿ ಮಾಡಿವೆ. 

'ಎಸ್‌ಆರ್‌ಕೆ ಲಾಸ್ ಏಂಜಲೀಸ್‌ನಲ್ಲಿ ಚಿತ್ರೀಕರಣ ನಡೆಸುತ್ತಿದ್ದರು. ಶೂಟಿಂಗ್ ಸೆಟ್ನಲ್ಲಿ ನಡೆದ ಅವಘಡದಲ್ಲಿ ಅವರ ಮೂಗಿಗೆ ಗಾಯವಾಗಿದ್ದು ತೀವ್ರ ರಕ್ತಸ್ರಾವವಾಗಲು ಪ್ರಾರಂಭಿಸಿತು. ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಆತಂಕ ಪಡುವ ಅಗತ್ಯವಿಲ್ಲ ಮತ್ತು ರಕ್ತಸ್ರಾವವನ್ನು ನಿಲ್ಲಿಸಲು ಕಿಂಗ್ ಖಾನ್‌ ಸಣ್ಣ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ' ಎಂದು ಆಪ್ತ ಮೂಲಗಳು ಮಾಹಿತಿ ನೀಡಿವೆ ಎಂದು ವರದಿಯಾಗಿದೆ. ಆದರೆ ಅಪಘಾತವಾಗಿದ್ದು ಹೇಗೆ ಎನ್ನುವ ಬಗ್ಗೆ ಮಾಹಿತಿ ಬಹಿರಂಗ ಪಡಿಸಿಲ್ಲ.

ಸದ್ಯ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು ಶಾರುಖ್ ಖಾನ್ ಭಾರತಕ್ಕೆ ಮರಳಿದ್ದಾರೆ ಎನ್ನಲಾಗಿದೆ. ಮೂಗಿಗೆ ಬ್ಯಾಂಡೇಜ್ ಹಾಕಿರುವುದನ್ನು ಕೆಲವರು ನೋಡಿದ್ದಾರೆ ಎಂದು ವರದಿಯಾಗಿದೆ. ಸದ್ಯ ಶಾರುಖ್ ಮುಂಬೈ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಕೆಲವು ದಿನಗಳು ಶೂಟಿಂಗ್‌ಗೆ ಗೈರಾಗಲಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಈ ಬಗ್ಗೆ ಶಾರುಖ್ ಕಡೆಯಿಂದ ಯಾವುದೇ ಅಧಿಕೃತ ಮಾಹಿತಿ ಬಹಿರಂಗವಾಗಿಲ್ಲ. 

Don-3 ನಿಂದ ಶಾರುಖ್​ ಔಟ್​? ಫ್ಯಾನ್ಸ್​ಗೆ ಶಾಕ್, ಕಿಂಗ್‌ ಖಾನ್‌​ ಜಾಗಕ್ಕೆ ಬಂದವರ್ಯಾರು?

ಅಂದಹಾಗೆ ಶಾರುಖ್ ಗಾಯಗೊಂಡಿರುವುದು ಇದೇ ಮೊದಲ್ಲ. 31 ವರ್ಷಗಳ ವೃತ್ತಿ ಜೀವನದಲ್ಲಿ ಶಾರುಖ್ ಅನೇಕ ಬಾರಿ ಗಾಯಗೊಂಡಿದ್ದಾರೆ. 2017ರಲ್ಲಿ ಶಾರುಖ್ ಸಣ್ಣ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ರಯೀಸ್ ಚಿತ್ರೀಕರಣದ ವೇಳೆ ಮೊಣಕಾಲಿನ ಗಾಯದಿಂದ ಶಾರುಖ್ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದರು. 2013 ರಲ್ಲಿ ಚೆನ್ನೈ ಎಕ್ಸ್‌ಪ್ರೆಸ್ ಚಿತ್ರೀಕರಣ ಮುಗಿದ ನಂತರ ಶಾರುಖ್ ಕೂಡ ಶಾರಿಖ್ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. 2009ರಲ್ಲೂ ಶಾರುಖ್ ಶಸ್ತ್ರಿ ಚಿಕಿತ್ಸೆ ಮಾಡಿಸಿಕೊಂಡಿದ್ದರು. ಶಾರುಖ್ ಹಿಂದಿ ಚಿತ್ರರಂಗದಲ್ಲಿ 31 ವರ್ಷಗಳನ್ನು ಪೂರೈಸಿದರು. 

ಕತ್ರಿನಾ ಕೈಫ್ ಜೊತೆ ಬಲವಂತದ ಕಿಸ್ ಅನುಭವ ಹೇಳಿಕೊಂಡ ನಟ ಶಾರುಖ್ ಖಾನ್​​!

ಪಠಾಣ್ ಸಿನಿಮಾ ಮೂಲಕ ಸೂಪರ್ ಸಕ್ಸಸ್ ಕಂಡಿರುವ ಶಾರುಖ್ ಸದ್ಯ ಎರಡು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಅಟ್ಲೀ ಕುಮಾರ್ ನಿರ್ದೇಶನದ ಜವಾನ್ ಸಿನಿಮಾ ಹಾಗೂ ರಾಜ್ ಕುಮಾರ್ ಹಿರಾನಿ ಅವರ ಜೊತೆ ಡಂಕಿ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಎರಡು ಸಿನಿಮಾಗಳ ಚಿತ್ರೀಕರಣ ನಡೆಯುತ್ತಿದೆ. ಈ ಎರಡು ಸಿನಿಮಾಗಳು ಭಾರಿ ನಿರೀಕ್ಷೆ ಮೂಡಿಸಿದ್ದು ಮತ್ತೆ ದೊಡ್ಡ ಸಕ್ಸಸ್ ಕಾಣುವ ನಿರೀಕ್ಷೆಯಲ್ಲಿದ್ದಾರೆ.