* ಬೇಕಾದಷ್ಟು ಧಂ, ಡ್ರಿಂಕ್ಸ್‌, ಸೆಕ್ಸ್‌, ಡ್ರಗ್ಸ್‌ ಮಾಡು ಎಂದಿದ್ದ ನಟ* ಈ ಹೇಳಿಕೆ ನಿಜವಾಗಿ ಪರಿಣಾಮ ಅನುಭವಿಸುತ್ತಿರುವ ಬಾದ್‌ಷಾ* ಮಕ್ಕಳಲ್ಲಿ ಡ್ರಗ್ಸ್‌ ಪ್ರೋತ್ಸಾಹಿಸಿದ್ದ ಶಾರುಖ್‌ ವಿಡಿಯೋಗೆ ಭಾರೀ ಟೀಕೆ

ಮುಂಬೈ(ಅ.04): ಮಾದಕ ವಸ್ತು ಕೇಸಲ್ಲಿ ಆರ್ಯನ್‌(Aryan Khan) ಬಂಧನದ ಬೆನ್ನಲ್ಲೇ, 24 ವರ್ಷಗಳ ಹಿಂದೆ ಪ್ರಸಾರವಾಗಿದ್ದ ಸಂದರ್ಶನವೊಂದರಲ್ಲಿ ತಮ್ಮ ಪುತ್ರನ ಬಗ್ಗೆ ಶಾರುಖ್‌ ಖಾನ್‌(Shah Rukh Khan) ಆಡಿದ್ದ ಮಾತುಗಳ ವಿಡಿಯೋ ಇದೀಗ ಭಾರೀ ವೈರಲ್‌ ಆಗಿದೆ.

"

ಅಂದು ವೀಡಿಯೋದಲ್ಲಿ ಮಗನಿಗೆ ಡ್ರಗ್ಸ್‌(Drugs) , ಡ್ರಿಂಕ್ಸ್‌(Drinks) ಸೇವಿಸು ಎಂದು ಶಾರೂಖ್‌ ಹೇಳಿದ್ದರು. ಈಗ ಈ ಹೇಳಿಕೆ ನಿಜವಾಗಿದ್ದು ತಾವು ಆಡಿದ ಮಾತುಗಳನ್ನು ಇದೀಗ ಸ್ವತಃ ಶಾರುಖ್‌(Shah Rukh Khan) ಅನುಭವಿಸಬೇಕಾಗಿ ಬಂದಿದೆ. ಮಕ್ಕಳಲ್ಲಿ ಇಂಥ ಕೆಟ್ಟಚಟಗಳನ್ನು ಪ್ರೋತ್ಸಾಹಿಸುವ ಕುರಿತು ಅವರು ಆಡಿದ ಮಾತುಗಳಿಗೆ ಸಾಮಾಜಿಕ ಜಾಲತಾಣದಲ್ಲಿ(Social Media) ಭಾರೀ ಟೀಕೆ ವ್ಯಕ್ತವಾಗಿದೆ.

Scroll to load tweet…

ಹಳೆ ವಿಡಿಯೋ:

1997ರಲ್ಲಿ ಆಗಷ್ಟೇ ಶಾರುಖ್‌, ಗೌರಿ ದಂಪತಿಗೆ ಮೊದಲ ಮಗು ಜನನವಾಗಿತ್ತು. ಈ ಸುದ್ದಿಯನ್ನು ಅವರು ಖ್ಯಾತ ಪತ್ರಕರ್ತೆ ಸಿಮಿ ಗರೇವಾಲ್‌ ಅವರ ಜೊತೆಗಿನ ಸಂದರ್ಶನದ ವೇಳೆ ಬಹಿರಂಗಪಡಿಸಿದ್ದರು. ಈ ಕಾರ್ಯಕ್ರಮದಲ್ಲಿ ನಿಮ್ಮ ಮಗನ ಬಗ್ಗೆ ಏನೇನು ಯೋಜನೆ ಹೊಂದಿದ್ದೀರಿ ಎಂಬ ಸಿಮಿ ಪ್ರಶ್ನೆಗೆ ‘ಆತ ತನ್ನಂತೆ ಉದ್ದುದ್ದ ಕೂದಲು ಬಿಟ್ಟು, ಹಾರ್ಲೆ ಡೇವಿಡ್‌ಸನ್‌ ಬೈಕ್‌ನಲ್ಲಿ ಮುಂಬೈ ಸುತ್ತಾಡಲಿ, ಎಲ್ಲಾ ಹುಡುಗಿಯರನ್ನು ತನ್ನತ್ತ ಸೆಳೆದುಕೊಳ್ಳಲಿ ಎಂದು ಆಶಿಸುತ್ತೇನೆ.

Scroll to load tweet…

ಜೊತೆಗೆ 3-4 ವರ್ಷ ಆಗುವಷ್ಟರಲ್ಲಿ ನೀನು ಹುಡುಗಿಯರ ಹಿಂದೆ ಬೇಕಾದಷ್ಟು ಸುತ್ತಾಡು, ಬೇಕಾದಷ್ಟು ಧಂ ಹೊಡಿ, ಡ್ರಿಂಕ್ಸ್‌ ಮಾಡು, ಸೆಕ್ಸ್‌ ಮಾಡು ಮತ್ತು ಮಾದಕ ವಸ್ತು ಸೇವನೆ ಮಾಡು ಎಂದು ಆತನಿಗೆ ಹೇಳಿದ್ದೇನೆ. ಆತ ಬದುಕನ್ನು ಸವಿಯಬೇಕು. ನಾನು ಮಾಡದ್ದನ್ನೆಲ್ಲಾ ಮಾಡಬೇಕು’ ಎಂದು ಶಾರುಖ್‌ ಲಘು ದಾಟಿಯಲ್ಲಿ ಹೇಳಿದ್ದರು.

ಇದೀಗ ಮತ್ತೆ ಆ ಹಳೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು ಶಾರೂಖ್‌ ವಿರುದ್ಧ ಟೀಕೆಗಳ ಸುರಿಮಳೆ ಕೇಳಿಬಂದಿದೆ. ಅಂದು ಮಕ್ಕಳಲ್ಲಿ ಕೆಟ್ಟಚಟಗಳನ್ನು ಪ್ರೋತ್ಸಾಹಿಸಿದ್ದಕ್ಕೆ ಇಂದು ಅದು ನಿಜವಾಗಿ ಅದರ ಪರಿಣಾಮಗಳನ್ನು ಅನುಭವಿಸುವಂತಾಗಿದೆ ಎಂದು ಜರೆದಿದ್ದಾರೆ.