Asianet Suvarna News

ಪಠಾನ್ ಸಿನಿಮಾಗೆ 4 ಜನ ಆ್ಯಕ್ಷನ್ ಡೈರೆಕ್ಟರ್ಸ್, ಸಖತ್ ಫೈಟ್ ಸೀನ್

  • ಬಹುನಿರೀಕ್ಷಿತ ಬಾಲಿವುಡ್ ಸಿನಿಮಾಗೆ ಸೂಪರ್ ಫೈಟ್ ಸೀನ್
  • ಫೈಟಿಂಗ್ ನಿರ್ದೇಶನ ಮಾಡೋದಕ್ಕೆ ನಾಲ್ವರು ಆ್ಯಕ್ಷನ್ ಡೈರೆಕ್ಟರ್ಸ್
Shah Rukh Khan and John Abraham starrer Pathan to have four action directors dpl
Author
Bangalore, First Published Jun 30, 2021, 9:43 AM IST
  • Facebook
  • Twitter
  • Whatsapp

ಶಾರುಖ್ ಖಾನ್ ಅಭಿನಯದ ಪಠಾಣ್ ಈಗಾಗಲೇ ಸಾಕಷ್ಟು ಕುತೂಹಲ ಸೃಷ್ಟಿಸಿದೆ. ನಿರ್ಮಾಪಕ ಆದಿತ್ಯ ಚೋಪ್ರಾ ನಾಲ್ಕು ಆಕ್ಷನ್ ಸ್ಟಂಟ್ ನಿರ್ದೇಶಕರನ್ನು ನೇಮಿಸಿಕೊಳ್ಳಲು ನಿರ್ಧರಿಸಿದ್ದಾರೆ.

ನಿರ್ಮಾಪಕ ಪ್ರಪಂಚದಾದ್ಯಂತದ ಅತ್ಯುತ್ತಮ ಸ್ಟಂಟ್ ಕಲಾವಿದರನ್ನು ಸೇರಿಸಿ ಸೂಪರ್ ಸೀನ್‌ಗಳನ್ನು ಕ್ರಿಯೇಟ್ ಮಾಡೋ ಸಿದ್ಧತೆಯಲ್ಲಿದ್ದಾರೆ.ಯಾರನ್ನು ನೇಮಿಸಿಕೊಳ್ಳಬೇಕೆಂದು ಇನ್ನೂ ನಿರ್ಧರಿಸಿಲ್ಲ.

ದಕ್ಷಿಣ ಆಫ್ರಿಕಾದ ಸ್ಟಂಟ್ ಕಲಾವಿದ ಕ್ರೇಗ್ ಮ್ಯಾಕ್ರೇ ಅವರು ತಂಡ ಜಾಯಿನ್ ಆಗೋ ಸಾಧ್ಯತೆ ಇದೆ. ಅವರು ಹೆಚ್ಚು ನುರಿತ ಸ್ಟಂಟ್ ಮತ್ತು ಸಮರ ಕಲಾವಿದ. ಮ್ಯಾಡ್ ಮ್ಯಾಕ್ಸ್: ಫ್ಯೂರಿ ರೋಡ್ (2015), ಅವೆಂಜರ್ಸ್: ಏಜ್ ಆಫ್ ಅಲ್ಟ್ರಾನ್ (2015), ಬ್ಲಡ್‌ಶಾಟ್ (2020) ಮತ್ತು ವಾರ್ (2019) ಗಾಗಿ ಅವರು ಫೈಟಿಂಗ್ ಡೈರೆಕ್ಟ್ ಮಾಡಿದ್ದಾರೆ. ಕ್ರೇಗ್ ಅವರ ತಂಡದೊಂದಿಗೆ ಈಗಾಗಲೇ ಮುಂಬೈನಲ್ಲಿರುವ ಚಿತ್ರದ ಸೆಟ್ ತಲುಪಿದ್ದಾರೆ ಎನ್ನಲಾಗಿದೆ.

ಪಠಾಣ್ ಸಿನಿಮಾದಲ್ಲಿ ಶಾರೂಖ್ ಜೊತೆ ಸಲ್ಲು: ಸಂಭಾವನೆ ಬೇಡ ಎಂದ ನಟ

ಕ್ರೇಗ್ ಮ್ಯಾಕ್ರೇ ಅವರು ಕಟ್ಜಾ ಹಾಪ್ಕಿನ್ಸ್ ಅವರೊಂದಿಗೆ ಟೈಟಾನ್ ಸ್ಟಂಟ್ಸ್ ಎಂಬ ಸ್ಟಂಟ್ ಕಂಪನಿಯನ್ನು ನಡೆಸುತ್ತಿದ್ದಾರೆ. ಅವರು ತಮ್ಮ ತಂಡದೊಂದಿಗೆ ಜೂನ್ 8 ರಂದು ಮುಂಬೈಗೆ ಬಂದಿಳಿದಿದ್ದಾರೆ. ಕ್ರೇಗ್ ಅವರ ಮಾರ್ಗದರ್ಶನದಲ್ಲಿ ಎನ್ಕೌಂಟರ್ ದೃಶ್ಯಗಳೊಂದಿಗೆ ಇತ್ತೀಚಿನ ವೇಳಾಪಟ್ಟಿ ಈಗಾಗಲೇ ಪ್ರಾರಂಭವಾಗಿದೆ. ಪ್ರಮುಖ ಹೋರಾಟದ ಸನ್ನಿವೇಶಗಳ ಚಿತ್ರೀಕರಣ ಮುಂದಿನ ತಿಂಗಳು ನಿಗದಿಯಾಗಿದೆ.

Follow Us:
Download App:
  • android
  • ios