Asianet Suvarna News Asianet Suvarna News

ರಜನೀಕಾಂತ್​ ಅಭಿಮಾನಿಗಳಿಗೆ ಬಿಗ್​ ಶಾಕ್​! 'ಸೂಪರ್​ಸ್ಟಾರ್'​ ಪಟ್ಟ ಕಿತ್ತುಕೊಂಡ​ ರಾಜಕಾರಣಿ

ನಟ ರಜನೀಕಾಂತ್​ ಅವರು ಏನಿದ್ದರೂ ಮಾಜಿ ಸೂಪರ್​ಸ್ಟಾರ್​ ಅಷ್ಟೇ, ಹಾಲಿ ಅಲ್ಲ ಎನ್ನುವ ಮೂಲಕ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದ್ದಾರೆ ರಾಜಕಾರಣಿ ಸೀಮನ್​
 

seeman slams rajinikanth fans for threatening journalist says vijay is the top superstar of tamil
Author
First Published Jan 4, 2023, 1:25 PM IST

ಹಲವು ದಶಕಗಳವರೆಗೆ ತಮಿಳು ಚಿತ್ರರಂಗದಲ್ಲಿ ಮಾತ್ರವಲ್ಲದೇ ಭಾರತೀಯ ಚಿತ್ರರಂಗದಲ್ಲಿಯೇ 'ಸೂಪರ್​ಸ್ಟಾರ್'​ ಎಂದೇ ಖ್ಯಾತಿ ಪಡೆದಿರುವ ನಟನೆಂದರೆ ಅದು ರಜನೀಕಾಂತ್. ಆದರೆ​ ಅವರ 'ಸೂಪರ್​ಸ್ಟಾರ್'​ ಪಟ್ಟವನ್ನು ರಾಜಕಾರಣಿಯೊಬ್ಬರು ಕಿತ್ತುಕೊಂಡಿದ್ದು, ಇದೀಗ ಭಾರಿ ಕೋಲಾಹಲವನ್ನೇ ಸೃಷ್ಟಿಸಿದೆ. ಅಭಿಮಾನಿಗಳಿಗೆ ಇದು ನುಂಗಲಾಗದ ತುತ್ತಾಗಿದೆ.

ನಾಮ್ ತಮಿಳರ್ ಪಕ್ಷದ ಸಂಚಾಲಕ ಸೀಮನ್ ಅವರು, ರಜನೀಕಾಂತ್​ ಹಾಲಿ ಸೂಪರ್​ಸ್ಟಾರ್​ (Super Star) ಅಲ್ಲ ಎಂದಿದ್ದಾರೆ. ರಜನಿ ಅವರನ್ನು ಸೂಪರ್​ಸ್ಟಾರ್​ ಎಂದು ಕರೆಯುತ್ತಿರುವವರ ಮೇಲೆ ಕಿಡಿ ಕಾರಿರುವ ಸೀಮನ್​, ಯಾವುದೇ ಕಾರಣಕ್ಕೂ ಇವರೇ ಈ ಪಟ್ಟದಲ್ಲಿ ಮುಂದುವರಿಯಬೇಕು ಎನ್ನುವುದು ಸರಿಯಲ್ಲ. ಬದಲಿಗೆ ನಿಜವಾಗಿ ಸೂಪರ್​ಸ್ಟಾರ್​ ಎನ್ನಬೇಕಾದದ್ದು ನಟ ವಿಜಯ್​ಗೆ ಎಂದಿದ್ದಾರೆ. 

ಚಿರಂಜೀವಿ ಪುತ್ರಿ ಬಾಳಲ್ಲಿ ಮೂರನೆಯವ ಎಂಟ್ರಿ? ಕುತೂಹಲ ಮೂಡಿಸಿದ ಇನ್​ಸ್ಟಾ ಪೋಸ್ಟ್​

ಅಷ್ಟಕ್ಕೂ ಆಗಿದ್ದೇನೆಂದರೆ, ಕಾರ್ಯಕ್ರಮವೊಂದರಲ್ಲಿ ತಮಿಳುನಾಡಿನ ಸಿನಿಮಾ ಪತ್ರಕರ್ತ ಬಿಸ್ಮಿ ಎನ್ನುವವರು ರಜನೀಕಾಂತ್ ಅವರ ಬಗ್ಗೆ ಹೇಳುತ್ತಿರುವಾಗ  'ಮಾಜಿ ಸೂಪರ್ ಸ್ಟಾರ್ ರಜನೀಕಾಂತ್​' ಎಂದಿದ್ದಾರೆ. ಇದು ಅವರ ಅಭಿಮಾನಿಗಳನ್ನು ಕೆರಳಿಸಿದೆ. ಮಾಜಿ ಎಂಬ ಶಬ್ದ ಕೇಳುತ್ತಲೇ ಅಭಿಮಾನಿಗಳು ಆ ಪತ್ರಕರ್ತನಿಗೆ ಮುತ್ತಿಗೆ ಹಾಕಿ ಅಲ್ಲಿಯೇ ಜಗಳ ಶುರು ಮಾಡಿದ್ದರು. ಇದು ಕೆಲ ಸಮಯ ಜಟಾಪಟಿಗೆ ಕಾರಣವಾಗಿತ್ತು. 

ಪತ್ರಕರ್ತ ಬಿಸ್ಮಿ ಅವರನ್ನು ಸುತ್ತುವರಿದು ನಡೆಸಿದ  ಗಲಾಟೆ ಭಾರಿ ಸುದ್ದಿಯಾಗುತ್ತಲೇ ಈ ಗಲಾಟೆಯನ್ನು ನಾಮ್ ತಮಿಳರ್ ಪಕ್ಷದ ಸಂಚಾಲಕ ಸೀಮನ್ (Seeman) ಖಂಡಿಸಿದ್ದಾರೆ. ಈ ಕುರಿತು ಅವರು ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ್ದು, ಅದೀಗ ಮತ್ತಷ್ಟು ಸಂಚಲನ ಸೃಷ್ಟಿಸಿದೆ.

 ಸೀಮನ್​ ಅವರು ಹೇಳಿದ್ದೇನೆಂದರೆ, 'ರಜನೀಕಾಂತ್​ ಅವರು ಹಿಂದೊಮ್ಮೆ ಸೂಪರ್​ಸ್ಟಾರ್​ ಇದ್ದಿರಬಹುದು. ಆದರೆ ಆ ಪಟ್ಟ ಈಗ ಕಳಚಿದೆ. ಈಗ ಏನಿದ್ದರೂ  ಸೂಪರ್​ಸ್ಟಾರ್​ ಆಗಿರುವುದು ನಟ ವಿಜಯ್​ ಅವರೇ. ಬಿಸ್ಮಿ ಹೇಳಿರುವುದರಲ್ಲಿ ಯಾವುದೇ ಸಂಶಯವಿಲ್ಲ. ಮಾಜಿ ಆಗಿದ್ದರೆ ಅವರನ್ನು ಮಾಜಿ ಎಂದೇ ಅಭಿಮಾನಿಗಳೂ ಒಪ್ಪಿಕೊಳ್ಳಬೇಕು' ಎಂದಿದ್ದಾರೆ.

ರಾಘವೇಂದ್ರ ಸ್ವಾಮಿ ಶಕ್ತಿಯ ಬಗ್ಗೆ ರಜನಿಕಾಂತ್ ಹೇಳಿದ್ದೇನು?: ರಿಷಬ್'ಗೆ ತಲೈವಾ ಕಿವಿಮಾತು

'ನಟ ವಿಜಯ್ ಅವರನ್ನು  ತಮಿಳಿನ ಜನರು ಪ್ರೀತಿಯಿಂದ ಪೂಜಿಸುತ್ತಿದ್ದಾರೆ. ಅವರನ್ನು ತಮ್ಮ ಹೃದಯದಲ್ಲಿ ಇರಿಸಿಕೊಂಡಿದ್ದಾರೆ. ಆದರೆ ಈ ಸತ್ಯವನ್ನು ಕೆಲವರಿಗೆ ಅರಗಿಸಿಕೊಳ್ಳಲು ಆಗುತ್ತಿಲ್ಲ. ವಿನಾಕಾರಣ ಪತ್ರಕರ್ತನ ವಿರುದ್ಧ ಕಿಡಿ ಕಾರುತ್ತಿದ್ದಾರೆ. ಸತ್ಯವನ್ನು ಎಲ್ಲರೂ ಒಪ್ಪಿಕೊಳ್ಳಬೇಕಿದೆ. ಈಗ ರಜನೀಕಾಂತ್​  ಏನಿದ್ದರೂ ಮಾಜಿ ಸೂಪರ್​ಸ್ಟಾರ್​ ಅಷ್ಟೇ'' ಎಂದು ಒತ್ತಿ ಒತ್ತಿ ಹೇಳಿದ್ದಾರೆ. ಇದು ರಜನೀಕಾಂತ್ (Rajinikanth) ಅಭಿಮಾನಿಗಳನ್ನು ಮತ್ತಷ್ಟು ಕೆರಳಿಸಿದೆ.

ಇದಕ್ಕೆಲ್ಲಾ ಕಾರಣ ಪತ್ರಕರ್ತ (Journalist) ಬಿಸ್ಮಿ ಎಂದು ಅಭಿಮಾನಿಗಳು ಪತ್ರಕರ್ತ ಬಿಸ್ಮಿ ಅವರ ಕಚೇರಿಗೂ ಮುತ್ತಿಗೆ ಹಾಕಿ ವಾಗ್ವಾದ ನಡೆಸಿದ್ದಾರೆ. ಈ ಗಲಾಟೆ ಅಲ್ಲಿಗೇ ತಣ್ಣಗಾದರೂ ತಮ್ಮ ಆರಾಧ್ಯ ದೈವ ರಜನೀ ಅವರನ್ನು ಮಾಜಿ ಸೂಪರ್​ಸ್ಟಾರ್​ ಮಾಡಿರುವುದನ್ನು ಅರಗಿಸಿಕೊಳ್ಳಲು ಅವರಿಗೆ ಆಗುತ್ತಿಲ್ಲ.

ಅಭಿಮಾನಿಗಳು ಈ ಮಾತನ್ನು ಇಲ್ಲಿಗೆ ಬಿಡುತ್ತಿದ್ದರೇನೋ.  ಆದರೆ ಇಷ್ಟಕ್ಕೆ ಸುಮ್ಮನಾಗದ ರಾಜಕಾರಣಿ ಸೀಮನ್​ ಅವರು, 'ಯಾರಿಗೂ ಉಚ್ಛ ನಚ್ಚರಿತ್ತಮ್ (ಸೂಪರ್ ಸ್ಟಾರ್) ಪಟ್ಟ  ಶಾಶ್ವತ ಅಲ್ಲ. ಅದನ್ನು ಎಲ್ಲರೂ ಅರಿತುಕೊಳ್ಳಬೇಕು. ತಾವು ಮೆಚ್ಚುವ ನಟ ಶಾಶ್ವತವಾಗಿ ಸೂಪರ್​ಸ್ಟಾರ್​ ಆಗಿರಬೇಕು ಎನ್ನುವುದು ಅರ್ಥಹೀನ. ಕಾಲ ಬದಲಾದಂತೆ ಎಲ್ಲಾ ಪಟ್ಟಗಳೂ ಬದಲಾಗುತ್ತವೆ. ಚಿತ್ರ ತಾರೆಯರ ಮೇಲೆ ಜನರ ದೃಷ್ಟಿಕೋನ ಬದಲಾಗುತ್ತಲೇ ಇರುತ್ತದೆ. ಹೊಸಬರು ಬಂದಾಗ ಅವರಿಗೆ ಪಟ್ಟ ಬಿಟ್ಟುಕೊಡಬೇಕು. ಅದನ್ನು ಬಿಟ್ಟು ಈ ರೀತಿ ಕಿತ್ತಾಟ ಮಾಡುವುದು ಸರಿಯಲ್ಲ. ಹೀಗೆ ಕಿತ್ತಾಡುವುದನ್ನು ಖುದ್ದು ರಜನೀಕಾಂತ್​ ಅವರೂ ಒಪ್ಪಿಕೊಳ್ಳುವುದಿಲ್ಲ' ಎನ್ನುವ ಮೂಲಕ ಅಭಿಮಾನಿಗಳ  ಆಕ್ರೋಶದ ಕಿಡಿಗೆ ತುಪ್ಪ ಸುರಿದಿದ್ದಾರೆ.

ಅಂದಹಾಗೆ,   ಸೂಪರ್‌ಸ್ಟಾರ್‌ ಪಟ್ಟ ರಜನೀಕಾಂತ್​ ಅವರಿಗಿಂತ ಮುಂಚಿತವಾಗಿ  ತ್ಯಾಗರಾಜ ಭಾಗವತರಿಗೆ ಇತ್ತು. ನಂತರ  ಎಂಜಿಆರ್​ಗೆ ಈ ಪಟ್ಟ ಬಂತು. ಅವರು ರಾಜಕೀಯದಲ್ಲಿ ಸಕ್ರಿಯರಾದ ಮೇಲೆ ಸೂಪರ್​ಸ್ಟಾರ್​ ಪಟ್ಟ ರಜನೀಕಾಂತ್ ಅವರ ಹೆಗಲಿಗೇರಿತು. ಈಗ ವಿಜಯ್​ ಅಭಿಮಾನಿಗಳು ವಿಜಯ್​ (Vijay) ಅವರೇ ಸೂಪರ್​ಸ್ಟಾರ್​ ಎನ್ನುತ್ತಿದ್ದು, ಸೀಮನ್​ ಇದಕ್ಕೆ ಪುಷ್ಟಿ ನೀಡುತ್ತಿದ್ದಾರೆ. ರಜನೀಕಾಂತ್​ ಅವರ 'ಉಚ್ಛ ನಚ್ಚರಿತ್ತಮ್' ಪಟ್ಟ ಕಿತ್ತುಕೊಂಡಿದ್ದಾರೆ. 

 


 

Follow Us:
Download App:
  • android
  • ios