ಲಾಕ್‌ಡೌನ್‌ ಟೈಮಲ್ಲಿ ತೆಲುಗು ಹೀರೋ ಅಲ್ಲು ಅರ್ಜುನ್‌ ಏನ್ಮಾಡ್ತಾ ಇದಾರೆ? ತಮ್ಮ ಮುದ್ದು ಮಗಳು ಅಲ್ಲು ಅರ್ಹಾಳನ್ನು ಮುದ್ದು ಮಾಡುವುದೇ ಕೆಲಸ. ಅರ್ಹಾ ಅಷ್ಟೊಂದು ಮುದ್ದು ಮುದ್ದಾಗಿದ್ದಾಳೆ. ಅವರ ಇನ್‌ಸ್ಟಾಗ್ರಾಮ್‌ ಖಾತೆಯಂತೂ ಮುದ್ದು ಮಗಳ ಫಟೋಗಳಿಂದ ತುಂಬಿಹೋಗಿವೆ. ಇಂದು ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡ ಫೋಟೋ ಎಷ್ಟು ಮುದ್ದಾಗಿದೆ ಅಂದ್ರೆ, ಸೋ ಕ್ಯೂಟ್‌. ಅರ್ಹಾ ಮೆಟ್ಟಿಲುಗಳ ಮೇಲೆ ಕೂತಿರುವ ಈ ಫೋಟೊ ತುಂಬಾ ಮುದ್ದು ಉಕ್ಕಿಸುವಂತಿದೆ. ಲೆಮನ್‌ ಯೆಲ್ಲೋ ಫ್ರಾಕ್‌ ತೊಟ್ಟುಕೊಂಡಿರುವ ಅರ್ಹಾ ತಲೆಕೂದಲು ಬಿಟ್ಟುಕೊಂಡು ಇದ್ದಾಳೆ. ಇದರ ಜೊತೆಗೆ ಅಲ್ಲು ಅರ್ಜುನ್‌ ಬರೆದುಕೊಂಡಿರುವುದು ಹೀಗೆ- ಹ್ಯಾಪಿನೆಸ್‌ ಲೈಸ್‌ ಇನ್‌ ಬೇಬಿ ಸ್ಟೆಪ್ಸ್- ಮಗುವಿನ ಹೆಜ್ಜೆಗಳಲ್ಲಿ ಸಂತಸ ಅಡಗಿದೆ.

ಫ್ಯಾನ್‌ಗಳು ಈ ಫೋಟೋದಿಂದ ಕಣ್ಣು ಕೀಳಲು ಶಕ್ತರಾಗಿಲ್ಲ. ಸಾಕಷ್ಟು ಲೈಕುಗಳೂ ಕಮೆಂಟುಗಳೂ ಇದಕ್ಕೆ ಹರಿದುಬಂದಿವೆ. 

ಅಲ್ಲು ಮಗ ಅಯಾನ್‌. ಪತ್ನಿ ಸ್ನೇಹಾ ಆಗಾಗ ಇನ್‌ಸ್ಟಗ್ರಾಮ್‌ನಲ್ಲಿ ಈ ಮೂವರ ಆಟಗಳ ವಿಡಿಯೋ ಹಾಗೂ ಫೋಟೋಗಳನ್ನೂ ಶೇರ್‌ ಮಾಡುತ್ತ ಅಭಿಮಾನಿಗಳ ಮನ ತಣಿಸುತ್ತ ಇರುತ್ತಾರೆ. ಒಮ್ಮೆ ಅಲ್ಲು ಅರ್ಜುನ್‌ ಅವರ ತಂದೆ ಅಲ್ಲು ಅರವಿಂದ ಭಾಗವಹಿಸಿದ್ದ ಕಾರ್ಯಕ್ರಮವೊಂದರಲ್ಲಿ ತಾತನನ್ನು ಅರ್ಹಾ ಮುದ್ದು ಮಾಡುವ ವಿಡಿಯೋ ಒಂದನ್ನು ಹಾಕಿದ್ದರು. ಹಾಗೇ ಅಲ್ಲು ತಮ್ಮ ಮಗಳನ್ನು ಮುದ್ದಾಡುವ ವಿಡಿಯೋ ಅಂತೂ ನಗು ಮತ್ತು ಮುದ್ದನ್ನು ಒಟ್ಟಿಗೇ ಉಕ್ಕಿಸುವಂತೆ ಇದೆ. ಫ್ಯಾಮಿಲಿ ಲೈಫ್‌ ಈಸ್‌ ವೆರಿ ಪ್ರೆಶಿಯಸ್‌ ಎಂದು ತಿಳಿಸುವ ಕ್ಷಣಗಳನ್ನು ಅಲ್ಲು ಹೀಗೆ ಅಪ್‌ಲೋಡ್‌ ಮಾಡುತ್ತಲೇ ಇರುತ್ತಾರೆ.

ಹೆಚ್ಚಾಯ್ತು ಅಲ್ಲು ಅರ್ಜುನ್ ಸಂಭಾವನೆ; ಇದಕ್ಕೆ ಕಾರಣವೇನು ಗೊತ್ತಿದ್ಯಾ? .

ಇತ್ತೀಚೆಗೆ ಒಂದು ಸಲ ಹೀಗಾಯ್ತು- ಪಿಂಕ್‌ ಡ್ರೆಸ್‌ನಲ್ಲಿ ಕ್ಯೂಟ್‌ ಆಗಿ ಕಾಣುವ ಮಗಳನ್ನು ಅಲ್ಲು ಕೇಳ್ತಾರೆ- ನಾನು ಆಯ್ಕೆ ಮಾಡೋ ಹುಡುಗನ್ನ ಮದುವೆ ಆಗ್ತೀಯಾ ಅಂತ. ಅದಿಕ್ಕೆ ಅರ್ಹಾ ಉತ್ತರ ಏನು ಗೊತ್ತಾ? ""ನೋ!'' ಹಾಗೆ ಹೇಳಿ ಆಕೆ ಓಡಿಹೋಗುತ್ತಾಳೆ. ಈ ವಿಡಿಯೋವನ್ನು ಅಲ್ಲು ಅಪ್‌ಲೋಡ್‌ ಮಾಡಿದ್ದಾರೆ. ಇದರಲ್ಲಿ ಅರ್ಹಾ ಎಕ್ಸ್‌ಪ್ರೆನ್‌ ಎಂಥವರಿಗಾದರೂ ನಗೆ ಉಕ್ಕಿಸುವಂತೆ ಇದೆ. ಇದಕ್ಕೆ ಅಲ್ಲು ಕೊಟ್ಟಿರುವ ಕ್ಯಾಪ್ಷನ್‌- ಅಟೆಂಪ್ಟ್‌ ನಂಬರ್‌ ೩೭೧!
ಅರ್ಹಾ ಜನಿಸಿದ್ದು ೨೦೧೬ ನವೆಂಬರ್‌ನಲ್ಲಿ. ಅವಳಿಗೀಗ ನಾಲ್ಕು ವರ್ಷ. 

 

 
 
 
 
 
 
 
 
 
 
 
 
 

Happiness lies in baby steps 💛

A post shared by Allu Arjun (@alluarjunonline) on Jul 4, 2020 at 2:41am PDT

ದಕ್ಷಿಣ ಭಾರತೀಯ ಸೂಪರ್‌ ಸ್ಟಾರ್‌ಗಳ ಸ್ಟೈಲಿಶ್‌ ಬಿಯರ್ಡ್‌ ಲುಕ್‌ 

ಇತ್ತೀಚೆಗೆ ತಾನೇ ಅಲ್ಲು ಅರ್ಜುನ್‌ ಅವರ ಇನ್‌ಸ್ಟಗ್ರಾಮ್‌ ಫಾಲೋವರ್ಸ್ ಸಂಖ್ಯೆ ೭೦ ಲಕ್ಷ ರೀಚ್‌ ಆಗಿತ್ತು. ತೆಲುಗಿನ ನಟರಲ್ಲೆಲ್ಲ ಅತಿ ಹೆಚ್ಚು ಫಾಲೋವರ್ಸ್ ಹೊಂದಿರುವ ನಟ ಇವರು. ಅವತ್ತು ಅವರು ತಮ್ಮ ಖಾತೆಯಲ್ಲಿ ಅಭಿಮಾನಿಗಳಿಗೆ ಧನ್ಯವಾದ ಅರ್ಪಿಸಿದ್ದರು. ತಮ್ಮ ನಟನೆಯಿಂಧ ಬಂದ ಹಣವನ್ನು ಸಾಮಾಜಿಕ ಸೇವೆಗೂ ಬಳಸುವ ರೂಢಿ ಅಲ್ಲು ಇಟ್ಟುಕೊಂಡಿದ್ದಾರೆ. ಇತ್ತೀಚೆಗೆ ಆಂದ್ರಪ್ರದೇಶ, ಕೇರಳ ಮತ್ತು ತೆಲಂಗಾಣಗಳ ಕೋವಿಡ್‌ ಪರಿಹಾರ ನಿಧಿಗೆ ೧.೨೫ ಕೋಟಿ ರೂಪಾಯಿ ಮತ್ತು ಚಲನಚಿತ್ರ ಕಲಾವಿದರ ಸಂಘದ ಕೋವಿಡ್‌ ಫಂಡ್‌ಗೆ ೨೦ ಲಕ್ಷ ರೂಪಾಯಿ ಕೊಟ್ಟಿದ್ದರು. ಹೀಗೆ ಆಗಾಗ ಮಾಡುವ ಅಲ್ಲು ಅರ್ಜುನ್‌ ಅಂದರೆ ಅಭಿಮಾನಿಗಳಿಗೂ ಒಂದು ಬಗೆಯ ಅಭಿಮಾನ.

ಟಾಲಿವುಡ್‌ನಲ್ಲಿ ಇವರೇ ನಂಬರ್ 1, ಸಖತ್ ಸ್ಟೈಲಿಶ್ ಸ್ಟಾರ್..! 

ಅಲ್ಲು ಅರ್ಜುನ್‌ ಅವರ ಮುಂದಿನ ಚಿತ್ರ ನಿರ್ದೇಶಕ ಸುಕುಮಾರ್‌ ಅವರ ಪುಷ್ಪ ಸಿನೆಮಾ. ವಿಜಯ್‌ ಸೇತುಪತಿ ಹಾಗೂ ಕನ್ನಡದ ನಟಿಯಾದ ರಶ್ಮಿಕಾ ಮಂದಣ್ಣ ಲೀಡ್‌ ರೋಲ್‌ಗಳಲ್ಲಿ ಇದ್ದಾರೆ. ಇದು ಐದು ಭಾಷೆಗಳಲ್ಲಿ ರಿಲೀಸ್‌ ಆಗಲಿದೆ- ತೆಲುಗು, ತಮಿಳು, ಕನ್ನಡ, ಮಲಯಾಳ ಮತ್ತು ಹಿಂದಿ. ಕಳೆದ ವರ್ಷದ ಬ್ಲಾಕ್‌ಬಸ್ಟರ್‌ ಫಿಲಂ ಅಲಾ ವೈಕುಂಠಪುರಮುಲೂದಲ್ಲಿ ಅಲ್ಲು ಲೀಡ್‌ ಕ್ಯಾರೆಕ್ಟರ್‌ ಮಾಡಿದ್ದರು.