Sarath Babu Death: ಖ್ಯಾತ ನಟನ ನಿಧನಕ್ಕೆ ಪ್ರಧಾನಿ ಮೋದಿ, ರಜನಿಕಾಂತ್, ಚಿರಂಜೀವಿ ಸೇರಿ ಅನೇಕ ಗಣ್ಯರ ಸಂತಾಪ
Sarath Babu Death: ಖ್ಯಾತ ನಟನ ನಿಧನಕ್ಕೆ ಪ್ರಧಾನಿ ಮೋದಿ, ರಜನಿಕಾಂತ್, ಚಿರಂಜೀವಿ ಸೇರಿ ಅನೇಕ ಗಣ್ಯರ ಸಂತಾಪ ಸೂಚಿಸಿದ್ದಾರೆ.
ಕನ್ನಡದ ಅಮೃತವರ್ಷಿಣಿ ಸೇರಿದಂತೆ ದಕ್ಷಿಣ ಭಾರತದ ಅನೇಕ ಭಾಷೆಯ ಸಿನಿಮಾಗಳಲ್ಲಿ ನಟಿಸಿರುವ ಖ್ಯಾತ ನಟ ಶರತ್ ಬಾಬು ನಿನ್ನೆ (ಮೇ 22) ಕೊನೆಯುಸಿರೆಳೆದಿದ್ದಾರೆ. ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ನಟ ಶರತ್ ಬಾಬು ಅವರನ್ನು ಕಳೆದ ಒಂದು ತಿಂಗಳ ಹಿಂದೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹೈದರಾಬಾದ್ನ ಖಾಸಗಿ ಆಸ್ಪತ್ರೆಯ ಐಸಿಯುನಲ್ಲಿ ಇರಿಸಿ ಶರತ್ ಬಾಬು ಅವರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಸುಮಾರು ಒಂದು ತಿಂಗಳಿಗೂ ಅಧಿಕ ಕಾಲ ಆಸ್ಪತ್ರೆ ಬೆಡ್ ಮೇಲೆ ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ಶರತ್ ಬಾಬು ಚಿಕಿತ್ಸೆ ಫಲಕಾರಿಯಾಗದೆ ಇಂದು ಕೊನೆಯುಸಿರೆಳೆದರು. ಶರತ್ ಬಾಬು ಅವರ ನಿಧನಕ್ಕೆ ಅನೇಕರು ಪ್ರಧಾನಿ ನರೇಂದ್ರ ಮೋದಿ, ರಜನಿಕಾಂತ್, ಚಿರಂಜೀವಿ ಸೇರಿದಂತೆ ಅನೇಕ ಗಣ್ಯರು ಕಂಬನಿ ಮಿಡಿದಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸಂತಾಪ ಸೂಚಿಸುತ್ತಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಸಾಮಾಜಿಕ ಜಾಲತಾಣದಲ್ಲಿ ಸಂತಾಪ ಸೂಚಿಸಿದ್ದಾರೆ. 'ಶರತ್ ಬಾಬು ಅವರು ಬಹುಮುಖ ಮತ್ತು ಸೃಜನಶೀಲ ನಟರಾಗಿದ್ದರು. ಅವರು ಸುದೀರ್ಘ ಸಿನಿ ಜೀವನದಲ್ಲಿ ಹಲವಾರು ಭಾಷೆಗಳಲ್ಲಿ ನಟಿಸಿ ಜನಪ್ರಿಯರಾಗಿದ್ದರು. ಅವರ ನಿಧನದ ಸುದ್ದಿ ಕೇಳಿ ತುಂಬಾ ನೋವಾಗಿದೆ. ಕುಟುಂಬ ಮತ್ತು ಅಭಿಮಾನಿಗಳಿಗೆ ದುಃಖ ಭರಿಸುವ ಶಕ್ತಿ ಕೊಡಲಿ. ಓ ಶಾಂತಿ' ಎಂದು ಹೇಳಿದ್ದಾರೆ.
ರಜನಿಕಾಂತ್ ಪ್ರತಿಕ್ರಿಯೆ ನೀಡಿ ಬೇಸರ ವ್ಯಕ್ತಪಡಿಸಿದ್ದಾರೆ. ಶರತ್ ಬಾಬು ನಿಧನಕ್ಕೆ ತಮಿಳಿನಲ್ಲಿ ಟ್ವೀಟ್ ಮಾಡಿರುವ ರಜನಿಕಾಂತ್, 'ಇಂದು ನಾನು ನನ್ನ ಆತ್ಮೀಯ ಸ್ನೇಹಿತ ಮತ್ತು ಅದ್ಭುತ ವ್ಯಕ್ತಿ ಶರತ್ ಬಾಬು ಅವರನ್ನು ಕಳೆದುಕೊಂಡೆ. ಇದು ತುಂಬಲಾರದ ನಷ್ಟವಾಗಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ' ಎಂದು ಹೇಳಿದ್ದಾರೆ.
ಜೂ.ಎನ್ ಟಿ ಆರ್ ಪ್ರತಿಕ್ರಿಯೆ ನೀಡಿ, 'ಹಿರಿಯ ನಟ ಶರತ್ ಬಾಬು ಅವರ ನಿಧನದ ಸುದ್ದಿ ಕೇಳಿ ತುಂಬಾ ದುಃಖವಾಗಿದೆ. ಭಾರತೀಯ ಚಿತ್ರರಂಗಕ್ಕೆ ಅವರು ನೀಡಿದ ಕೊಡುಗೆ ಶಾಶ್ವತವಾಗಿ ನೆನಪಿನಲ್ಲಿ ಉಳಿಯುತ್ತವೆ. ಅವರ ಕುಟುಂಬ ಮತ್ತು ಸ್ನೇಹಿತರಿಗೆ ದುಃಖ ಭರಿಸುವ ಶಕ್ತಿ ದೇವರು ನೀಡಲಿ. ಓಂ ಶಾಂತಿ' ಎಂದು ಟ್ವೀಟ್ ಮಾಡಿದ್ದಾರೆ.
ಅತಿಯಾದ ಡ್ರಗ್: ಶವವಾಗಿ ಪತ್ತೆಯಾದ ನಟ, ಮಾಡೆಲ್ ಆದಿತ್ಯ ಸಿಂಗ್ ರಜಪೂತ್
ನಟ ಚಿರಂಜೀವಿ ಪ್ರತಿಕ್ರಿಯೆ ನೀಡಿ ಬೇಸರ ವ್ಯಕ್ತಪಡಿಸಿದ್ದಾರೆ. ಇಬ್ಬರೂ ಅನೇಕ ಸಿನಿಮಾಗಳಲ್ಲಿ ಒಟ್ಟಿಗೆ ನಟಿಸಿದ್ದಾರೆ. 'ಬೆಳ್ಳಿತೆರೆಯ 'ಜಮೀಂದಾರ್' ಜನಪ್ರಿಯ ನಟ ಶರತ್ ಬಾಬು ಸಾವಿನ ಸುದ್ದಿ ಆಘಾತ ತಂದಿದೆ. ಸೌಂದರ್ಯ ಮತ್ತು ಸೊಗಸನ್ನು ಸಾರುವ ಅಭಿನಯದಿಂದ ಪ್ರೇಕ್ಷಕರ ಹೃದಯದಲ್ಲಿ ಸ್ಥಾನ ಗಳಿಸಿದ್ದಾರೆ. ಶ್ರೀ ಶರತ್ ಬಾಬು ಮತ್ತು ನನ್ನ ನಡುವೆ ಉತ್ತಮ ಬಾಂಧವ್ಯವಿತ್ತು. ಅವರು ಅನೇಕ ಚಿತ್ರಗಳಲ್ಲಿ ನನ್ನ ಸಹನಟರಾಗಿದ್ದಾರೆ. ಅವರ ಕುಟುಂಬ ಸದಸ್ಯರಿಗೆ, ಎಲ್ಲಾ ಅಭಿಮಾನಿಗಳಿಗೆ ನನ್ನ ಸಂತಾಪಗಳು. ಓಂ ಶಾಂತಿ' ಎಂದು ಹೇಳಿದ್ದಾರೆ.
ನಟ ಪ್ರಕಾಶ್ ರಾಜ್ ಕೂಡ ಪ್ರತಿಕ್ರಿಯೆ ನೀಡಿದ್ದಾರೆ. 'ಸದಾ ನಗುತ್ತಿರುವ ಈ ಆತ್ಮವನ್ನು ಭೇಟಿಯಾಗಿರುವುದು ಅದ್ಭುತ. ನನ್ನ ವೃತ್ತಿಜೀವನದುದ್ದಕ್ಕೂ ಅವರ ಪ್ರೋತ್ಸಾಹವನ್ನು ಪಾಲಿಸುತ್ತೇನೆ. ಎಲ್ಲದಕ್ಕೂ ಪ್ರೀತಿಯ ಶರತ್‌ಬಾಬು ಅವರಿಗೆ ಧನ್ಯವಾದಗಳು' ಂದು ಹೇಳಿದ್ದಾರೆ.
Sarath Babu Death: ಫಲಿಸದ ಪ್ರಾರ್ಥನೆ, 'ಅಮೃತವರ್ಷಿಣಿ' ನಟ ಶರತ್ ಬಾಬು ಇನ್ನಿಲ್ಲ
ಶರತ್ ಬಾಬು ಕೇವಲ ತಮಿಳು ಮತ್ತು ತೆಲುಗು ಮಾತ್ರವಲ್ಲದೇ ಕನ್ನಡದ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ತುಳಸಿದಳ, ರಣಚಂಡಿ, ಶಕ್ತಿ, ಕಂಪನ, ಗಾಯ, ಹೃದಯ-ಹೃದಯ, ನೀಲ, ನಮ್ಮೆಜಮಾನ್ರು, ಅಮೃತವರ್ಷಿಣಿ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಅಮೃತವರ್ಷಿಣಿ ಸಿನಿಮಾದ ಪಾತ್ರವನ್ನು ಕನ್ನಡ ಚಿತ್ರಪ್ರೇಮಿಗಳು ಮರೆಯಲು ಸಾಧ್ಯವೇ ಇಲ್ಲ. ಸಿನಿಮಾ ಮಾತ್ರವಲ್ಲದೇ ಕನ್ನಡದ ಪ್ರೀತಿಗಾಗಿ ಧಾರಾವಾಹಿಯಲ್ಲಿಯೂ ಶರತ್ ಬಾಬು ನಟಿಸಿದ್ದರು.