ಟಾಲಿವುಡ್ ರೊಮ್ಯಾಂಟಿಕ್ ಸಿನಿಮಾ ಲವ್ ಸ್ಟೋರಿಯಿಂದ ಸಾಯಿ ಪಲ್ಲವಿ ಅಭಿನಯದ ಬಹುನಿರೀಕ್ಷಿತ ಸಾಂಗ್ ಸರಂಗಾ ದರಿಯಾ ರಿಲೀಸ್ ಆಗಿದೆ. ಸಮಂತಾ ಅಕ್ಕಿನೇನಿ ಟ್ವಿಟರ್ ಮೂಲಕ ಈಗಾಗಲೇ ಹೃದಯಗಳನ್ನು ಗೆದ್ದಿರುವ ಹಾಡನ್ನು ರಿಲೀಸ್ ಮಾಡಿದ್ದಾರೆ.

ಮಾಂಗ್ಲಿ ಹಾಡಿದ್ದು ಸುಡ್ಡಲಾ ಅಶೋಕ್ ತೇಜ ಸಾಹಿತ್ಯ ಬರೆದಿದ್ದಾರೆ. ಸಾರಂಗಾ ದರಿಯಾ ಹಾಡು ಸಾಯಿ ಪಲ್ಲವಿಯ ಡ್ಯಾನ್ಸ್ ಟ್ಯಾಲೆಂಟ್ ಮತ್ತೊಮ್ಮೆ ಸಾಬೀತುಪಡಿಸಿದೆ.

ನಟಿಸೋದಷ್ಟೇ ಅಲ್ಲಾ, ಚಂದಕ್ಕೆ ಮೆಹಂದಿ ಹಚ್ತಾರೆ ಸಾಯಿ ಪಲ್ಲವಿ

ಶೇಖರ್ ವಿ.ಜೆ ನೃತ್ಯ ಸಂಯೋಜನೆ ಮಾಡಿದ್ದು ಮತ್ತೊಂದು ವೆಡ್ಡಿಂಗ್ ಡ್ಯಾನ್ಸ್ ಮೂಲಕ ಮಿಂಚಿದ್ದಾರೆ ಈಕೆ. ಈ ಹಿಂದೆ ಫಿದಾ ಸಿನಿಮಾದಲ್ಲಿ ವಚ್ಚಿಂದೆ ಸಾಂಗ್ ಕೊಟ್ಟ ಸಾಯಿ ಪಲ್ಲವಿ ಇದೀಗ ಮತ್ತೊಂದು ಮದುವೆ ಹಾಡಿಗೆ ಸ್ಟೆಪ್ ಹಾಕಿದ್ದಾರೆ.

ಶೇಖರ್ ಕಮ್ಮುಲಾ ಬರೆದು ನಿರ್ದೇಶಿಸಿದ ಲವ್ ಸ್ಟೋರಿ ಸಿನಿಮಾದ ಮುಖ್ಯ ಪಾತ್ರಗಳಲ್ಲಿ ಸಾಯಿ ಪಲ್ಲವಿ ಮತ್ತು ನಾಗ ಚೈತನ್ಯ ನಟಿಸಿದ್ದಾರೆ. ಇದೇ ಮೊದಲ ಬಾರಿಗೆ ಅವರು ಜೊತೆಯಾಗಿ ತೆರೆ ಹಂಚಿಕೊಳ್ಳುತ್ತಿದ್ದಾರೆ.

ಸಾಯಿ ಪಲ್ಲವಿಯ ಲವ್‌ ಸ್ಟೋರಿಗೆ ಡೇಟ್ ಫಿಕ್ಸ್..!

ಇವರಿಬ್ಬರು ಕೆಮೆಸ್ಟ್ರಿ ನೋಡಲು ಫ್ಯಾನ್ಸ್ ಕಾಯುತ್ತಿದ್ದಾರೆ. ತೆಲುಗು ರೊಮ್ಯಾಂಟಿಕ್ ಚಿತ್ರದಲ್ಲಿ ಪವನ್ ಸಿ.ಎಚ್ ಸಂಗೀತ, ವಿಜಯ್ ಸಿ.ಕುಮಾರ್ ಅವರ ಛಾಯಾಗ್ರಹಣ ಮತ್ತು ಮಾರ್ತಂಡ್ ಕೆ.ವೆಂಕಟೇಶ್ ಅವರ ಸಂಕಲನ ಇದೆ.

ಲವ್ ಸ್ಟೋರಿಯನ್ನು ನಾರಾಯಣ್ ದಾಸ್ ಕೆ ನಾರಂಗ್ ಮತ್ತು ಪುಸ್ಕೂರ್ ರಾಮ್ ಮೋಹನ್ ರಾವ್ ಅವರು ತಮ್ಮ ಬ್ಯಾನರ್ಗಳಾದ ಅಮಿಗೋಸ್ ಕ್ರಿಯೇಷನ್ಸ್ ಮತ್ತು ಶ್ರೀ ವೆಂಕಟೇಶ್ವರ ಸಿನೆಮಾಸ್ ಅಡಿಯಲ್ಲಿ ನಿರ್ಮಿಸಿದ್ದಾರೆ.