ಪ್ರೇಮಂ ನಟಿ ಸಾಯಿ ಪಲ್ಲವಿ ಡ್ಯಾನ್ಸ್ ಶೋ ಮೂಲಕ ನಂತರ ಬೆಳ್ಳಿತೆರೆಯಲ್ಲಿ ಮಿಂಚಿದಾಕೆ. ಹಾಗೆಯೇ ಶಿಕ್ಷಣವನ್ನೂ ಮೊಟಕುಗೊಳಿಸದೆ, ಶಿಕ್ಷಣ ಪೂರ್ತಿ ಮಾಡಿ ಜೊತೆ ಜೊತೆಗೂ ಸಿನಿಮಾಗಳನ್ನು ಮಾಡ್ತಾ ಬ್ಯುಸಿ ಇದ್ದಾರೆ ಈಕೆ.

ಸಾಯಿ ಪಲ್ಲವಿ ಚೆನ್ನಾಗಿ ಮೆಹಂಚಿ ಕೂಡಾ ಹಚ್ಚುತ್ತಾರೆ. ಪುಟ್ಟ ಮಕ್ಕಳ ಕೈಗೆ ಚಂದಕ್ಕೆ ಮಹೆಂದಿ ಚಿತ್ತಾರ ಬಿಡಿಸಿದ್ದಾರೆ ಸಾಯಿ ಪಲ್ಲವಿ. ಅದರ ಫೋಟೋ ಮತ್ತು ವಿಡಿಯೋವನ್ನು ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದಾರೆ.

ಸಾಯಿ ಪಲ್ಲವಿಯ ಲವ್‌ ಸ್ಟೋರಿಗೆ ಡೇಟ್ ಫಿಕ್ಸ್..!

ಹ್ಯಾಪಿ ಕ್ಲೈಂಟ್ಸ್, ಪೀಪ್ರಿ ಪಿಳ್ಳಾಸ್ ಎಂದು ಕ್ಯಾಪ್ಶನ್ ಕೊಟ್ಟು ಮಕ್ಕಳ ನಗುಮುಖದ ಫೊಟೋಗಳನ್ನು ಶೇರ್ ಮಾಡಿದ್ದಾರೆ. ಪುಟ್ಟ ಹುಡುಗಿ ಕೈಗೆ ಮೆಹಂದಿ ಹಚ್ಚೋ ವಿಡಿಯೋವನ್ನು ಶೇರ್ ಮಾಡಿದ್ದಾರೆ.