ಆಗ್ರಾದಲ್ಲಿ ಅಕ್ಷಯ್ ಕುಮಾರ್‌ಗೆ ಕಾಟ ಕೊಡ್ತಿದ್ದಾರೆ ಸೈಫ್ ಅಲಿ ಖಾನ್ ಪುತ್ರಿ ಸಾರಾ ಅಲಿ ಖಾನ್. ಆಗ್ರಾದಲ್ಲಿ ಸುಂದರವಾದ ತಾಜ್‌ಮಹಲ್ ಮುಂದೆ ಕೂಲ್ ಆಗಿ ನಿಂತಿರೋ ಅಕ್ಷಯ್ ಕುಮಾರ್‌ಗೆ ಸಾರಾ ಇಷ್ಟೊಂದು ಕಾಟ ಕೊಡೋದ್ಯಾಕಪ್ಪಾ..? ಕಾಟ ತಡ್ಕೊಳೋಕಾಗ್ದೆ ಅಕ್ಷಯ್ ತಲೆ ಮೇಲೆ ಕೈ ಇಟ್ಟಿದ್ದಾರೆ.

ನಟ ಅಕ್ಷಯ್ ಕುಮಾರ್, ಸಾರಾ ಅಲಿ ಖಾನ್, ಧನುಷ್ ಅಟ್ರಾಂಗಿ ರೇ ಸಿನಿಮಾ ಶೂಟಿಂಗ್‌ಗಾಗಿ ಆಗ್ರಾದ ತಾಜ್‌ಮಹಲ್ ಮುಂದೆ ಬೀಡು ಬಿಟ್ಟಿದ್ದಾರೆ. ಅಕ್ಷಯ್ ಕುಮಾರ್‌ನ ತಾಜ್‌ಮಹಲ್ ಲುಕ್ ಅಂತೂ ಸಿಕ್ಕಾಪಟ್ಟೆ ವೈರಲ್ ಆಗಿದೆ.

ಅಕ್ಷಯ್ ಕುಮಾರ್ ಜೊತೆ ಸೈಫ್ ಅಲಿ ಖಾನ್ ಮಗಳ ರೊಮ್ಯಾನ್ಸ್..!

ಫೋಟೋದಲ್ಲಿ ಅಕ್ಷಯ್ ಕುಮಾರ್ ಮೊಘಲ್ ಸ್ಟೈಲ್‌ ಡ್ರೆಸ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಸಾರಾ ಅಲಿ ಖಾನ್ ಬ್ರೈಟ್ ಪಿಂಕ್ ಗಾಗ್ರಾ ಚೋಲಿ ಹಾಕಿದ್ದಾರೆ. ಫೋಟೋದಲ್ಲಿ ಧನುಷ್ ಇದ್ರೂ ಅವರು ಸಿನಿಮಾ ಕಾಸ್ಟ್ಯೂಮ್‌ನಲ್ಲಿರಲಿಲ್ಲ.

ಸಾರಾ ಅಲಿ ಖಾನ್ ವಿಡಿಯೋ ಪೋಸ್ಟ್ ಮಾಡಿದ್ದು, ವಿಡಿಯೋ ತುಂಬಾ ಫನ್ನಿಯಾಗಿದೆ. ಸೈಫ್ ಮಗಳು ಸೆಟ್‌ನಲ್ಲಿ ಅಕ್ಷಯ್ ಕುಮಾರ್ ತಲೆ ತಿಂತಿದ್ದಾಳೆ ಅನ್ನೋ ಹಾಗಿದೆ ಮಾತುಗಳು.

ಪ್ರಾಸಬದ್ಧವಾಗಿ ಮಾತನಾಡಲು ಪ್ರಯತ್ನಿಸೋ ಸಾರಾ ಕಾಲೆಳೆಯುತ್ತಾರೆ ಅಕ್ಷಯ್. ತಾಜ್‌ಮಹಲ್ ಮುಂದೆ ಬಿಂತ ಬೂಂರಂಗ್ ವಿಡಿಯೋ ಶೇರ್ ಮಾಡಿದ ನಟ, ವಾಹ್ ತಾಜ್ ಎಂದು ಕ್ಯಾಪ್ಶನ್ ಕೊಟ್ಟಿದ್ದಾರೆ.