ಬಾಲಿವುಡ್ ನಟಿಯರೆಂದರೆ ಸಾಕು ಒಂದು ಕೈಯಲ್ಲಿ ಬಿಗ್ ಬ್ಯಾಗ್ ಮತ್ತೊಂದು ಕೈಯಲ್ಲಿ ಫೋನ್ ಇದ್ದೇ ಇರುತ್ತದೆ. ಇನ್ನು ಅಷ್ಟು ದೊಡ್ಡ ಬ್ಯಾಗುಗಳಲ್ಲಿ ಏನಪ್ಪಾ ಇದೆ ಅನ್ನೋ ಕುತುಹಲ ಎಲ್ಲರಿಗೂ ಸಾಮಾನ್ಯವಾಗಿರುತ್ತದೆ. ಆದರೆ ತಮ್ಮ ಬ್ಯಾಗ್ ನಲ್ಲಿ ಏನೇಲ್ಲಾ ಇದೆ ಅಂತ ನಟಿ ಸಾರಾ ಅಲಿ ಖಾನ್ ‘whats in my bag’ ವಿಡಿಯೋವೊಂದರಲ್ಲಿ ಹೇಳಿದ್ದಾರೆ.

ಇನ್ನು ಬ್ಯಾಗ್ ತೆರೆದಿಡುವ ಮುನ್ನ ಸಾರಾ ಕೊಟ್ಟ ಕೌಂಟರ್ ಡೈಲಾಗ್ ಏನು ಗೊತ್ತಾ? ‘ಹೆಣ್ಣು ಮಕ್ಕಳ ಬ್ಯಾಗಿನಲ್ಲಿ ಏನಿದೆ ಎಂದು ನೋಡುವುದು ಕೆಟ್ಟ ಬುದ್ಧಿ ಆದ್ರೆ ಹುಡುಗಿನೇ ಕೆಟ್ಟವಳಾಗಿದ್ರೆ ಏನ್ ಮಾಡುತ್ತೀರಾ’ ಎಂದು ಹೇಳಿಕೊಂಡು ನಕ್ಕರು.

 • ಪರ್ಫೂಮ್
 • ಬಾಯಿ ಫ್ರೆಷ್ ಮಾಡಿಕೊಳ್ಳಲು ಗಮ್
 • ಹಸಿವಾದಾಗ ತಿನ್ನಲು ಬಾದಾಮಿ
 • ಇಯರ್ ಫೋನ್ಸ್ - ವಾಲೆಟ್ (ಪರ್ಸ್)
 • ನೋಟ್ ಬುಕ್
 • ಬಾಚಣಿಗೆ
 • ಟ್ಯಾಂಪೂನ್
 • ಡಾಂಗಲ್
 • ಲೆನ್ಸ್
 • ಫೋನ್
 • ಎಕ್ಸ್ ಟ್ರಾ ಓಲೆಗಳು
 • ಫೋನ್ ಚಾರ್ಜರ್
 • ಲಿಪ್ ಬಾಮ್
 • ಹೇರ್ ಬ್ಯಾಂಡ್
 • ಟೈಡ್

ಯಾರ ಬ್ಯಾಗ್ ಕದಿಯಲು ಇಷ್ಟ ಪಡುತ್ತೀರಾ ಎಂದು ಕೇಳಿದ್ದಕ್ಕೆ ‘ಯಾರ ಹತ್ತಿರ ದುಬಾರಿ ಬ್ಯಾಗ್ ಇರುತ್ತೋ ಅವರದು. ಯಾಕೆಂದರೆ ಕಾಸ್ಟ್ಲಿ ಬ್ಯಾಗ್ ನಾನು ಕೊಂಡುಕೊಳ್ಳುವುದಿಲ್ಲ.. ’ ಎಂದಿದ್ದಾರೆ.

ಬ್ಯಾಗ್‌ನಲ್ಲಿ ಯಾವ ಮೂರು ವ್ಯಕ್ತಿಗಳನ್ನು ಕ್ಯಾರಿ ಮಾಡುತ್ತೀರೆಂದು ಕೇಳಿದ್ದಕ್ಕೆ ಸಿಂಪಲ್ ಆಗಿ‘ ತಂದೆ, ತಾಯಿ ಹಾಗೂ ಅಣ್ಣ...’ ಎಂದಿದ್ದಾರೆ.

ಯಾರೊಂದಿಗೆ ಬ್ಯಾಗ್ ಅದಲು ಬದಲು ಮಾಡಿಕೊಳ್ಳಲು ಇಷ್ಟಪಡುತ್ತೀರಾ ಎಂದಿದ್ದಕ್ಕೆ ‘ಬದಲಿಸುವ ಮೊದಲು ಯಾರ ಬ್ಯಾಗ್ ಎಂದು ನೋಡಬಹುದಾ? ಎಂದರು.

ಬ್ಯಾಗ್ ನಲ್ಲಿ ಯಾವ ವಸ್ತು ಇಲ್ಲದೇ ಬದುಕಲು ಸಾಧ್ಯವಿಲ್ಲ ಎಂದಾಗ ಸಾರಾ, ಹೇಳಿದ್ದೇನು ಗೊತ್ತಾ? ‘ಏನು ಇಲ್ಲ ಅಂದ್ರು ತೊಂದರೆ ಇಲ್ಲ. ಯಾವುದೂ ಅಷ್ಟು ಮುಖ್ಯವಲ್ಲ ಎಂದಿದ್ದಾರೆ.