ಬಾಲಿವುಡ್ ನಟಿ ದೀಪಿಕಾ ಪಡುಕೋಣೆಯ ಪರ್ಸ್ನ್ನು ಮಹಿಳೆಯೊಬ್ಬರು ಎಳೆದ ಘಟನೆ ಮುಂಬೈನಲ್ಲಿ ನಡೆದಿದೆ. ನಟಿ ಮುಂಬೈನ ಖಾರ್ನಲ್ಲಿ ಕಾಣಿಸಿಕೊಂಡ ಮಹಿಳೆಯನ್ನು ನೋಡಿ ಫ್ಯಾನ್ಸ್ ಖುಷ್ ಆಗಿದ್ದಾರೆ.

ವಿಡಿಯೋ ಒಂದು ವೈರಲ್ ಅಗಿದ್ದು, ಟಿಶ್ಯೂ ಮಾರುವ ಸಂದರ್ಭ ಮಹಿಳೆಯೊಬ್ಬರು ದೀಪಿಕಾಳ ಪರ್ಸ್ ಎಳೆದ ಘಟನೆಯ ವಿಡಿಯೋ ವೈರಲ್ ಅಗಿದೆ. ಬ್ಲಾಕ್ ಡೆನಿಮ್ಸ್ ಮತ್ತು ವೈಟ್ ಟಾಪ್ನಲ್ಲಿ ಕಾಣಿಸಿಕೊಂಡ ನಟಿ ಗ್ರೇ ಶ್ರಗ್ ಧರಿಸಿದ್ದರು.

BJP ಸೇರಿದ ಬೆಂಗಾಲಿ ಬ್ಯೂಟಿ: ನಟಿಯ ಹಾಟ್ ಫೋಟೋಸ್ ವೈರಲ್

ಅಷ್ಟೊಂದು ಜನ ಸೇರಿದ್ರೂ ತಲೆ ಕೆಡಿಸಿಕೊಂಡಂತೆ ಕಂಡುಬರಲಿಲ್ಲ ದೀಪಿಕಾ. ಬದಲಾಗಿ ಚಂದದ್ದೊಂದು ಸ್ಮೈಲ್ ಕೊಡ್ತಾ ಬಂದಿದ್ದರು. ಆದ್ರೆ ಪರ್ಸ್ ಎಳೆದಿದ್ದು ಮಾತ್ರ ದೀಪಿಕಾಗೆ ಅನಿರೀಕ್ಷಿತ.

ತಮ್ಮ ಪರ್ಸ್ ಎಳೆದದ್ದು ತಿಳಿಯುತ್ತಲೇ ಶಾಕ್ ಆಗಿದ್ದಾರೆ ನಟಿ. ಅಲ್ಲಿಂದ ಮುಂದೆ ಅವರು ಕಾರು ಹತ್ತುವುದಕ್ಕೂ ಕಷ್ಟಪಟ್ಟಿದ್ದಾರೆ. ಬಹಳಷ್ಟು ಫ್ಯಾನ್ಸ್ ನಟಿಯನ್ನು ಮುತ್ತಿಕೊಂಡಿದ್ದರು.