Asianet Suvarna News Asianet Suvarna News

ರಶ್ಮಿಕಾ ಆಯ್ತು, ಈಗ ವಿಜಯ್ ದೇವರಕೊಂಡ ಸಿನಿಮಾದಲ್ಲಿ ರುಕ್ಮಿಣಿ ವಸಂತ್!

ಸಪ್ತಸಾಗರದಾಚೆ ಎಲ್ಲೋ ಸಿನಿಮಾ ಸಕ್ಸಸ್ ಬಳಿಕ ರುಕ್ಮಿಣಿ ವಸಂತ್ ಲೆವೆಲ್ಲೇ ಚೇಂಜ್ ಆಗಿದೆ. ಈ ಹಿಂದೆ ರಕ್ಷಿತ್ ಶೆಟ್ಟಿ ಕಿರಿಕ್ ಪಾರ್ಟಿ ಸಿನಿಮಾ ಬಳಿಕ ರಶ್ಮಿಕಾ ವಿಜಯ್ ದೇವರಕೊಂಡ ಸಿನಿಮಾದಲ್ಲಿ ನಟಿಸಿದ್ದರು, ಈಗ ಈ ನಟಿ ಕಾಣಿಸಿಕೊಳ್ಳಲಿದ್ದಾರ?

Sapta Sagaradacheyello fame Rukmini vasanth may act in Vijay devarakonda movie after Rashmika Mandanna bni
Author
First Published Jan 22, 2024, 2:20 PM IST

ಸಪ್ತಸಾಗರದಾಚೆ ಎಲ್ಲೋ ಸಿನಿಮಾ ರುಕ್ಮಿಣಿ ವಸಂತ್ ಅನ್ನೋ ಉದಯೋನ್ಮುಖ ನಟಿಗೆ ತಂದುಕೊಟ್ಟ ಹೆಸರು ಅಷ್ಟಿಷ್ಟಲ್ಲ. ರಾತ್ರಿ ಕಳೆದು ಬೆಳಗಾಗೋದ್ರೊಳಗೆ ಈ ಕನ್ನಡದ ಹುಡುಗಿ ಎಲ್ಲರ ಪ್ರೀತಿಯ 'ಪುಟ್ಟಿ' ಆಗಿಬಿಟ್ಟರು. ಎಸ್ ಎಸ್ ಇ ಸಿನಿಮಾದ ಪ್ರಿಯಾ ಅನ್ನೋ ಇವರ ಪಾತ್ರ, ಪುಟ್ಟಿ ಅನ್ನೋ ಅಡ್ಡ ಹೆಸರು ಜನರ ನಾಲಗೆ ಮೇಲೆ ಹರಿದಾಡ್ತನೇ ಇತ್ತು. ಇವತ್ತಿಗೂ ರುಕ್ಮಿಣಿ ಎಲ್ಲೇ ಹೋದ್ರೂ 'ಪುಟ್ಟೀ' ಅಂತ ಕರೆಯೋರಿಗೇನೂ ಕಮ್ಮಿ ಇಲ್ಲ. ಇಂತಿರೋ ಪುಟ್ಟಿಗೆ ಇದೀಗ ದಕ್ಷಿಣ ಭಾರತ ಮಟ್ಟದಲ್ಲಿ ಸಖತ್ ಬೇಡಿಕೆ ಬಂದಿದೆ. ಮೊನ್ನೆ ತಾನೇ ವಿಜಯ್ ಸೇತುಪತಿ ಅವರ ಹೊಸ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿ ಆ ಶೂಟಿಂಗ್ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಹಾಕಿದ್ರು ರುಕ್ಮಿಣಿ. ಇದೀಗ ವಿಜಯ್ ದೇವರಕೊಂಡ ಜೊತೆ ಡ್ಯುಯೆಟ್ ಹಾಕೋದಕ್ಕೆ ರುಕ್ಮಿಣಿ ಎದುರು ನೋಡ್ತಿದ್ದಾರೆ.

ಯೆಸ್ ವಿಜಯ ದೇವರಕೊಂಡ ಅವರ ಸಿನಿಮಾದಲ್ಲಿ ಎಲ್ಲ ಅಂದುಕೊಂಡೇ ಆಗಿದ್ದರೆ ಕಿಸ್ ಬೆಡಗಿ ಶ್ರೀಲೀಲಾ ನಟಿಸಬೇಕಿತ್ತು. ಆದರೆ ಈಕೆ ಸಾಲು ಸಾಲು ಸಿನಿಮಾಗಳ ಸೋಲಿನ ಬಳಿಕ ಚಿತ್ರರಂಗದಿಂದ ಕೊಂಚ ಕಾಲ ವಿರಾಮ ಪಡೆಯಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಸೋ ಈ ಪಾತ್ರಕ್ಕೋ ಬೇರೆ ಪಾತ್ರಕ್ಕೋ ಚಿತ್ರತಂಡ ರುಕ್ಮಿಣಿಗೆ ಆಹ್ವಾನ ನೀಡಿದೆ ಎನ್ನಲಾಗಿದೆ.

ಮಾಲಾಶ್ರೀ ಜತೆ ಬಡಿದಾಡಿದ್ದ ನಟ ಅರ್ಧ ಸೆಂಚುರಿಗೂ ಮೊದಲೇ ಯಾಕೆ ವಿಧಿವಶರಾಗ್ಬಿಟ್ರು!

ಹಾಗೆ ನೋಡಿದರೆ ಈ ವಿಜಯ್ ದೇವರಕೊಂಡಗೂ ರಕ್ಷಿತ್ ಶೆಟ್ಟಿಗೂ ಅದ್ಯಾವ ರೀತಿಯ ದುಷ್ಮನಿನೋ ಗೊತ್ತಿಲ್ಲ ಗುರೂ, ರಕ್ಷಿತ್ ಸಿನಿಮಾದ ಹುಡುಗೀರನ್ನೆಲ್ಲ ದೇವರಕೊಂಡ ಬುಟ್ಟಿಗೆ ಹಾಕ್ಕೊಳ್ತಿದ್ದಾನೆ ಅನ್ನೋ ಮಾತು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡ್ತಿದೆ. ಹಾಗೆ ನೋಡಿದರೆ ಹಿಂದೆ ರಕ್ಷಿತ್ ಜೊತೆಗೆ ರಶ್ಮಿಕಾ ಕಿರಿಕ್ ಪಾರ್ಟಿ ಮೂಲಕ ಹತ್ತಿರವಾದರು. ಅವರ ಲೈಫ್ ಪಾರ್ಟನರ್ (Life partner) ಆಗೋದ್ರಲ್ಲಿದ್ದರು. ಅಷ್ಟರಲ್ಲಿ ವಿಜಯ ದೇವರಕೊಂಡ ಸಿನಿಮಾಕ್ಕೆ ಕಾಲ್ ಬಂತು. ನಮ್ಮಯ ಹಕ್ಕಿ ಬಿಟ್ಟೇ ಬಿಟ್ಟೇ... ಅಂತ ರಕ್ಷಿತ್ ಹೇಳೋ ಹೊತ್ತಿಗೆ ರಶ್ಮಿಕಾ ದೇವರಕೊಂಡ ಜೊತೆಗೆ 'ಗೀತಗೋವಿಂದಂ' ನಲ್ಲಿ ಡ್ಯುಯೆಟ್ ಹಾಡಲು ಶುರು ಮಾಡಿದರು. ಇದೀಗ ರುಕ್ಮಿನಿ ಸರದಿ. ಎಸ್‌ಎಸ್‌ಇ ಸಿನಿಮಾ ಬಳಿಕ ಬಹಳ ಮಂದಿ ರಕ್ಷಿತ್ ಶೆಟ್ಟಿಗೂ ರುಕ್ಮಿಣಿಗೂ ಕನೆಕ್ಷನ್ ಹಣೆಯಲಾರಂಭಿಸಿದರು. ಇದೀಗ ರುಕ್ಮಿಣಿಯೂ ದೇವರಕೊಂಡ ಸಿನಿಮಾಕ್ಕೆ ನಾಯಕಿಯಾಗುವ ಎಲ್ಲ ಸಾಧ್ಯತೆ ಕಾಣುತ್ತಿದೆ.

ನಟ ವಿಜಯ್ ದೇವರಕೊಂಡ ಅವರ ಮುಂಬರುವ ಚಿತ್ರವನ್ನು (Movie) ಘೋಷಿಸಲಾಗಿದ್ದು, ಸಿನಿಮಾಗೆ ತಾತ್ಕಾಲಿಕವಾಗಿ VD12 ಎಂದು ಹೆಸರಿಸಲಾಗಿದೆ. ಈ ಸಿನಿಮಾಕ್ಕೆ ಇಬ್ಬರು ನಾಯಕಿಯರ ಹೆಸರು ಕೇಳಿಬರುತ್ತಿದೆ. ರುಕ್ಮಿಣಿ ವಸಂತ್ ಒಬ್ಬರಾಗಿದ್ದರೆ, ಮತ್ತೊಬ್ಬರು ಅನಿಮಲ್ ಖ್ಯಾತಿಯ ತ್ರಿಪ್ತಿ ದಿಮ್ರಿ. ವಿಜಯ್ ದೇವರಕೊಂಡ ಅವರ ಮುಂಬರುವ ಚಿತ್ರವು ರೋಮಾಂಚಕಾರಿ (Romantic) ಸ್ಪೈ ಥ್ರಿಲ್ಲರ್ ಎಂದು ಹೇಳಲಾಗುತ್ತದೆ. ನಟ ನಾನಿ ಅವರ 'ಜರ್ಸಿ' ಚಿತ್ರದಲ್ಲಿನ ಕೆಲಸಕ್ಕಾಗಿ ಹೆಸರುವಾಸಿಯಾದ ಪ್ರತಿಭಾವಂತ ನಿರ್ದೇಶಕ ಗೌತಮ್ ತಿನ್ನಾನೂರಿ ನಿರ್ದೇಶಿಸಲಿದ್ದಾರೆ. ಸಿತಾರಾ ಎಂಟರ್ಟೈನ್ಮೆಂಟ್ಸ್ ಬ್ಯಾನರ್ ಅಡಿಯಲ್ಲಿ ನಾಗ ವಂಶಿ ನಿರ್ಮಾಣ ಮಾಡಲಿದ್ದಾರೆ. ಇದೇ ಸಿನಿಮಾಕ್ಕೆ 'ಸಪ್ತ ಸಾಗರದಾಚೆ ಎಲ್ಲೋ: ಸೈಡ್ ಎ ಮತ್ತು ಸೈಡ್ ಬಿ' ನಟಿ ರುಕ್ಮಿಣಿ ವಸಂತ್ ಅವರನ್ನೂ ಈ ಚಿತ್ರದಲ್ಲಿ ಒಂದು ಪಾತ್ರಕ್ಕೆ ಪರಿಗಣಿಸಲಾಗುತ್ತಿದೆ ಎಂದು ಸುದ್ದಿಯಾಗುತ್ತಿದೆ. ಚಿತ್ರದ ಶೂಟಿಂಗ್ ಮಾರ್ಚ್ 2024 ರಲ್ಲಿ ಮತ್ತೆ ಆರಂಭಗೊಳ್ಳಲಿದೆ.

ಮುಂಬೈನಲ್ಲಿ ಕಷ್ಟಪಟ್ಟಿದ್ದು ಅಷ್ಟಿಷ್ಟಲ್ಲ; ಬಾಲಿವುಡ್ ಸ್ಟಾರ್ ನಟಿಯಾಗಿ ಮೆರೆದ ಸೌತ್ ಕಪ್ಪು ಸುಂದರಿ!

ಸದ್ಯಕ್ಕೀಗ ರುಕ್ಮಿಣಿ ದಕ್ಷಿಣ ಭಾರತೀಯ ಮಟ್ಟದ ಬ್ಯುಸಿ ನಟಿಸಿ ಎನಿಸಿಕೊಂಡಿದ್ದಾರೆ. ಸ್ಟಾರ್ ನಟರ (stars) ಸಿನಿಮಾಗಳಲ್ಲಿ ಈಕೆ ಬ್ಯುಸಿ ಆಗ್ತಿದ್ದಾರೆ. 'ನಮ್ ಪುಟ್ಟಿ ಯಾವತ್ತೂ ಚೆನ್ನಾಗಿರ್ಬೇಕು' ಅಂತ ಕನ್ನಡಿಗರು ಹಾರೈಸುತ್ತಿದ್ದಾರೆ.

Follow Us:
Download App:
  • android
  • ios