ನಟ ಸಂಜಯ್ ಕಪೂರ್ ಮತ್ತು ಟಬು 'ಪ್ರೇಮ್' ಚಿತ್ರದ ಸಮಯದಲ್ಲಿ ಪ್ರೀತಿಸುತ್ತಿದ್ದರು, ಆದರೆ ಸಂಜಯ್ ಅದೇ ಸಮಯದಲ್ಲಿ ಮಹಿಪ್ ಅವರನ್ನು ಭೇಟಿಯಾಗುತ್ತಿದ್ದ ಬಗ್ಗೆ ಮಹಿಪ್ ಕಪೂರ್ ಆಘಾತಕಾರಿ ಸತ್ಯವನ್ನು ಬಹಿರಂಗಪಡಿಸಿದ್ದಾರೆ.

ಮುಂಬೈ: ಬಾಲಿವುಡ್‌ನಲ್ಲಿ ಪ್ರೀತಿ, ಡೇಟಿಂಗ್ ಮತ್ತು ಬ್ರೇಕಪ್‌ಗಳು ಅತಿ ಸಾಮಾನ್ಯ. ಆದರೆ ನಟ ಸಂಜಯ್ ಕಪೂರ್, ನಟಿ ಟಬು ಮತ್ತು ಮಹಿಪ್ ಕಪೂರ್ ನಡುವಿನ ಈ ತ್ರಿಕೋನ ಪ್ರೇಮಕಥೆ ಈಗ ಸೋಷಿಯಲ್ ಮೀಡಿಯಾದಲ್ಲಿ ಮತ್ತೆ ಸಂಚಲನ ಮೂಡಿಸಿದೆ. ತಾನು ಪ್ರೀತಿಸುತ್ತಿದ್ದ ನಟಿ ಟಬುಗೆ ಸಂಜಯ್ ಕಪೂರ್ ಮೋಸ ಮಾಡಿದ್ದರಾ ಎಂಬ ಪ್ರಶ್ನೆಗೆ ಈಗ ಉತ್ತರ ಸಿಕ್ಕಂತಿದೆ.

'ಪ್ರೇಮ್' ಸೆಟ್‌ನಲ್ಲಿ ಶುರುವಾಗಿ ಚಿತ್ರ ಬಿಡುಗಡೆ ಮುನ್ನವೇ ಮುಗಿದ ಪ್ರೇಮಾಯಣ!

1995ರಲ್ಲಿ ಬಿಡುಗಡೆಯಾದ 'ಪ್ರೇಮ್' ಚಿತ್ರದ ಮೂಲಕ ಸಂಜಯ್ ಕಪೂರ್ ಬಾಲಿವುಡ್‌ಗೆ ಎಂಟ್ರಿ ಕೊಟ್ಟರು. ಇದೇ ಚಿತ್ರದ ನಾಯಕಿ ಟಬು ಅವರೊಂದಿಗೆ ಸಂಜಯ್ ಪ್ರೀತಿಯಲ್ಲಿ ಬಿದ್ದಿದ್ದರು. ಚಿತ್ರೀಕರಣದ ಆರಂಭದಲ್ಲಿ ಇಬ್ಬರೂ ಪರಸ್ಪರ ಡೇಟಿಂಗ್ ಮಾಡುತ್ತಿದ್ದರು. ಆದರೆ, ವಿಪರ್ಯಾಸವೆಂದರೆ ಸಿನಿಮಾ ಶೂಟಿಂಗ್ ಮುಗಿದು ಥಿಯೇಟರ್‌ಗೆ ಬರುವಷ್ಟರಲ್ಲಿ ಇವರ ಪ್ರೀತಿ ಹಳಸಿಯಾಗಿತ್ತು. ಸಿನಿಮಾ ಬಿಡುಗಡೆಯಾಗುವ ಹೊತ್ತಿಗೆ ಇಬ್ಬರೂ ಪರಸ್ಪರ ಮಾತನಾಡಿಸುವುದನ್ನೂ ನಿಲ್ಲಿಸಿದ್ದರು ಎಂದು ಸಂಜಯ್ ಕಪೂರ್ ಹಳೆಯ ಸಂದರ್ಶನವೊಂದರಲ್ಲಿ ಒಪ್ಪಿಕೊಂಡಿದ್ದಾರೆ.

ಟಬು ಜೊತೆಗಿದ್ದಾಗಲೇ ಮಹಿಪ್ ಎಂಟ್ರಿ; ಮೋಸದ ಆರೋಪ ನಿಜವೇ?

ಸಂಜಯ್ ಮತ್ತು ಟಬು ಮದುವೆಯಾಗುತ್ತಾರೆ ಎಂದು ಇಡೀ ಬಾಲಿವುಡ್ ನಂಬಿತ್ತು. ಆದರೆ ಅಲ್ಲಿ ನಡೆದಿದ್ದೇ ಬೇರೆ! ಟಬು ಜೊತೆ ಸಂಬಂಧದಲ್ಲಿದ್ದಾಗಲೇ ಸಂಜಯ್ ಕಪೂರ್ ಅವರು ಮಹಿಪ್ (ಈಗಿನ ಪತ್ನಿ) ಅವರನ್ನು ಭೇಟಿಯಾಗುತ್ತಿದ್ದರು ಎನ್ನಲಾಗಿದೆ. ಟಬು ಅವರೇ ಒಂದು ಸಂದರ್ಶನದಲ್ಲಿ, 'ನಾವು ಒಟ್ಟಿಗೆ ಇದ್ದಾಗಲೂ ಅವರು ಮಹಿಪ್ ಅವರನ್ನು ಭೇಟಿಯಾಗುತ್ತಿದ್ದರು' ಎಂದು ಹೇಳುವ ಮೂಲಕ ಸಂಜಯ್ ತಮಗೆ ಮೋಸ ಮಾಡಿದ್ದನ್ನು ಪರೋಕ್ಷವಾಗಿ ಬಿಚ್ಚಿಟ್ಟಿದ್ದರು. ಅಂತಿಮವಾಗಿ ಸಂಜಯ್ ಕಪೂರ್ ಟಬುಗೆ ಬ್ರೇಕಪ್ ನೀಡಿ ಮಹಿಪ್ ಕೈ ಹಿಡಿದರು.

ಮದುವೆ ಹಿಂದಿನ ಶಾಕಿಂಗ್ ಸತ್ಯ: 'ಒನ್ ನೈಟ್ ಸ್ಟ್ಯಾಂಡ್' ನಿಂದ ಶುರುವಾಯ್ತು ಸಂಸಾರ!

ಇತ್ತೀಚೆಗೆ ರೌನಕ್ ರಜನಿ ಶೋನಲ್ಲಿ ಭಾಗವಹಿಸಿದ್ದ ಮಹಿಪ್ ಕಪೂರ್, ತಮ್ಮ ಮದುವೆಯ ಬಗ್ಗೆ ಅತ್ಯಂತ ಆಘಾತಕಾರಿ ವಿಷಯವೊಂದನ್ನು ಹಂಚಿಕೊಂಡಿದ್ದಾರೆ. "ನಮ್ಮ ಪ್ರೇಮಕಥೆ ತುಂಬಾ ವಿಚಿತ್ರವಾಗಿದೆ. ಅಂದು ನಾನು ಪಾರ್ಟಿಯಲ್ಲಿ ಫುಲ್ ಕುಡಿದಿದ್ದೆ, ಅಂತಹ ಸ್ಥಿತಿಯಲ್ಲಿ ಸಂಜಯ್ ಜೊತೆ 'ಒನ್ ನೈಟ್ ಸ್ಟ್ಯಾಂಡ್' (ಒಂದು ರಾತ್ರಿಯ ಸಂಬಂಧ) ಬೆಳೆಸಿದೆ. ಆತನೇ ನನ್ನ ಗಂಡನಾಗುತ್ತಾನೆ ಎಂದು ನಾನು ಕನಸಿನಲ್ಲೂ ಅಂದುಕೊಂಡಿರಲಿಲ್ಲ' ಎಂದು ಮಹಿಪ್ ಹೇಳಿದ್ದಾರೆ.

View post on Instagram

ಟಕಿಲಾ ಶಾಟ್ಸ್ ಮತ್ತು ಸಡನ್ ಮದುವೆ ಪ್ರಸ್ತಾಪ!

ಸಂಜಯ್ ಮತ್ತು ಮಹಿಪ್ ಮದುವೆಯಾಗಲು ಯಾವುದೇ ರೊಮ್ಯಾಂಟಿಕ್ ಪ್ರಪೋಸಲ್ ನಡೆದಿರಲಿಲ್ಲವಂತೆ. 'ದಿ 1900' ಎಂಬ ನೈಟ್‌ಕ್ಲಬ್‌ನಲ್ಲಿ ಇಬ್ಬರೂ ಪಾರ್ಟಿ ಮಾಡುತ್ತಾ ಟಕಿಲಾ ಶಾಟ್ಸ್ ಹೊಡೆಯುತ್ತಿದ್ದಾಗ, ಕುಡಿದ ಅಮಲಿನಲ್ಲಿ ಸಂಜಯ್ ಕಪೂರ್ 'ನಾವು ಮದುವೆಯಾಗೋಣ' ಎಂದು ಹೇಳಿದರಂತೆ. ಮಹಿಪ್ ಕೂಡ ಅಷ್ಟೇ ಅಮಲಿನಲ್ಲಿ 'ಸರಿ ಆಯ್ತು' ಅಂದುಬಿಟ್ಟರಂತೆ! ಹೀಗೆ ಆಕಸ್ಮಿಕವಾಗಿ ಶುರುವಾದ ಈ ಸಂಬಂಧ ಈಗ 30 ವರ್ಷಗಳ ಯಶಸ್ವಿ ಸಂಸಾರವಾಗಿ ಮುಂದುವರಿಯುತ್ತಿದೆ.