ಸ್ಯಾಂಡಲ್ ವುಡ್ ತಾರೆಯರನ್ನು ಸೂಕ್ಷ್ಮವಾಗಿ ಗಮನಿಸಿದರೆ ಅವರಲ್ಲಿ ಎರಡು ವರ್ಗ ಇರೋದು ನಿಮ್ಮ ಗಮನಕ್ಕೂ ಬಂದಿರುತ್ತದೆ. ಮೊದಲನೇ ವರ್ಗ ದೇವರನ್ನು ಮನದುಂಬಿ ನಂಬುವವ ಧಾರ್ಮಿಕ ಮನಸ್ಥಿತಿಯವರು. ಅಣ್ಣಾವ್ರ ಫ್ಯಾಮಿಲಿಯ ಎಲ್ಲರೂ, ದರ್ಶನ್, ಧ್ರವ ಸರ್ಜಾ, ಜಗ್ಗೇಶ್ ಮತ್ತಿತರರು ಈ ವರ್ಗದಲ್ಲಿ ಬರುತ್ತಾರೆ. ಮತ್ತೊಂದು ವರ್ಗ ವಿಚಾರವಂತಿಕೆಯನ್ನೇ ಮುಖ್ಯವಾಗಿಟ್ಟುಕೊಂಡು ದೇವರ ಬಗ್ಗೆ ಸಾರ್ವಜನಿಕವಾಗಿ ಅಂಥಾ ಮಮಕಾರ ತೋರದವರು. ಸುದೀಪ್ ಪಬ್ಲಿಕ್‌ನಲ್ಲಿ ದೇವರ ಬಗ್ಗೆ ಭಾವುಕವಾಗಿ ಹೇಳಿಕೆ ನೀಡಿದ್ದನ್ನು ಕಂಡವರಿಲ್ಲ. ಅವರ ಮಾತುಗಳೇನಿದ್ದರೂ ಸಿನಿಮಾ ಬಗ್ಗೆ ಮಾತ್ರ. ಸ್ವಂತ ಶಕ್ತಿಯಲ್ಲಿ ನಂಬಿಕೆ ಇಟ್ಟವರಿವರು ಅನ್ನೋದು ಮೇಲ್ನೋಟಕ್ಕೆ ಸಾಬೀತಾಗುತ್ತದೆ. ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಸಹ ಸುದೀಪ್ ಮನಸ್ಥಿತಿಯನ್ನೇ ಹೋಲುತ್ತಾರೆ.

 

ನಾವು ಸೂಕ್ಷ್ಮವಾಗಿ ಗಮನಿಸಿದರೆ ದೈವಭಕ್ತಿ ಇರುವ ಯಾರೇ ಆದರೂ ಅವರಲ್ಲೊಂದು ವಿನಯ ಇರುತ್ತದೆ. ಅವರು ಸಾಮಾನ್ಯವಾಗಿ ತುಸು ಭಾವುಕರಾಗಿರುತ್ತಾರೆ. ನೀವು ಅಣ್ಣಾವ್ರನ್ನು ಗಮನಿಸಿದರೆ ಅವರು ರಾಘವೇಂದ್ರ ಸ್ವಾಮಿಗಳ ಭಜನೆ ಮಾಡುವಾಗ ಎಷ್ಟು ಭಾವುಕರಾಗುತ್ತಿದ್ದರು ಅಂದರೆ ಅವರ ಅರಿವಿಗೇ ಬಾರದ ಹಾಗೆ ಕಣ್ಣಿಂದ ಧಾರಾಕಾರ ನೀರಿಳಿಯುತ್ತಿತ್ತು. ಅಣ್ಣಾವ್ರು ಅಹಂಗೆ ಎಂದೂ ತಲೆ ಕೊಟ್ಟವರಲ್ಲ. ಅವರ ಪ್ರೀತಿ ಮಗುವಿನಂತೆ ಮುಗ್ಧ ಅನ್ನೋದು ಎಲ್ಲರಿಗೂ ಗೊತ್ತು. ಅವರ ಮೂವರು ಮಕ್ಕಳೂ ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡವರು. ಇಬ್ಬರು ಸ್ಟಾರ್‌ಗಳಾಗಿ ಮೆರೆಯುತ್ತಿರುವವರು. ಶಿವಣ್ಣ ಅವರ ಇತ್ತೀಚೆಗೆ ತಾನೇ ಅಯ್ಯಪ್ಪ ವ್ರತಧಾರಿಯಾಗಿ ಮಾಲೆ ಧರಿಸಿ ಶಬರಿಮಲೆ ಹಾದಿಯಲ್ಲಿದ್ದಾರೆ. ಇದು ಅವರಿಗೆ ಹೊಸತಲ್ಲ. ಆಗಾಗ ಶಿವಣ್ಣ ಶಬರಿಮಲೆ ಯಾತ್ರ ಕೈ ಗೊಳ್ಳುತ್ತಾರೆ.

 

ಕಿರಿಕ್ ಪಾರ್ಟಿಗಳಿಗೆ ಖಡಕ್‌ ಉತ್ತರ ನೀಡುತ್ತಾರೆ ರಕ್ಷಿತ್‌ ಶೆಟ್ಟಿ!

 

ಶಿವಣ್ಣ ದೈವಭಕ್ತಿಯ ಸಿನಿಮಾಗಳಲ್ಲಿ ನಟಿಸಿದ್ದು ಕಡಿಮೆ. ಶಿವ ಮೆಚ್ಚಿದ ಕಣ್ಣಪ್ಪ ದಂಥ ಚಿತ್ರಗಳಲ್ಲಿ ನಟಿಸಿದ್ದು ಬಿಟ್ಟರೆ ಅವರು ಹೆಚ್ಚೇನೂ ದೈವಭಕ್ತಿ ಪ್ರದಾನ ಸಿನಿಮಾಗಳಲ್ಲಿ ನಟಿಸಿಲ್ಲ.

 

ಇತ್ತೀಚೆಗೆ ಶೋ ಒಂದರಲ್ಲಿ ಶಿವಣ್ಣನ ದೈವಭಕ್ತಿ ಮತ್ತೊಮ್ಮೆ ಸಾಬೀತಾಯಿತು. ಅವರಲ್ಲಿ ಅಭಿಮಾನಿಗಳು ನೀನು ಭಕ್ತಿ ಪ್ರದಾನ ಚಿತ್ರಗಳಲ್ಲಿ ಯಾಕೆ ನಟಿಸಬಾರದು, ಸಾಯಿಬಾಬಾ ಅವರ ಬಗ್ಗೆ ಸಿನಿಮಾ ಮಾಡಿ ಅಂದಿದ್ದರು. ಆಗ ಶಿವಣ್ಣ ಸಾಯಿಬಾಬಾ ಅವರ ಮೇಲಿನ ಭಕ್ತಿಯಿಂದ ಚಪ್ಪಲಿ ಕಳಚಿದರು. ಆಮೇಲೆ ನನಗೂ ದೈವಭಕ್ತಿ ಪ್ರದಾನ ಸಿನಿಮಾಗಳಲ್ಲಿ ಮಾಡುವ ಆಸೆ ಇದೆ. ಖಂಡಿತ ಅವಕಾಶ ಕೂಡಿ ಬಂದರೆ ಸಾಯಿಬಾಬ ಬಗೆಗಿನ ಸಿನಿಮಾದಲ್ಲಿ ನಟಿಸುವೆ ಎಂದಿದ್ದಾರೆ. ಶಿವಣ್ಣ ಅವರು ಕಳೆದ ಬಾರಿಯೂ ದೈವಭಕ್ತಿಯ ವಿಷಯ ಬಂದಾಗ ಭಾವುಕವಾಗಿ ಪ್ರತಿಕ್ರಿಯೆ ನೀಡಿದ್ದರು.

 

ಸನ್ನಿ, ಪ್ರಿಯಾಂಕಾ, ಜಾಕ್ವೆಲಿನ್.. ಬಣ್ಣದಲ್ಲಿ ಮಿಂದೆದ್ದ ಬಾಲಿವುಡ್!

 

ಇನ್ನು ದರ್ಶನ ವಿಷಯಕ್ಕೆ ಬಂದರೆ ಅವರು ಇತ್ತೀಚೆಗೆ ಟೆಂಪಲ್ ರನ್ ಮಾಡ್ತಿರೋದು ಎಲ್ಲರಿಗೂ ತಿಳಿದದ್ದೇ. ಅವರು ಇತ್ತೀಚೆಗೆ ರಾಬರ್ಟ್ ಚಿತ್ರದ ಚಿತ್ರೀಕರಣ ಮುಗಿಸಿಕೊಂಡು ಒಂದಿಷ್ಟು ದೇವಸ್ಥಾನಗಳಿಗೆ ಭೇಟಿ ನೀಡಿದರು. ತಮಿಳುನಾಡಿನ ತಿರುನಲ್ಲರ್ ದೇವಾಲಯಕ್ಕೆ ಪತ್ನೀ ಸಮೇತರಾಗಿ ಭೇಟಿ ನೀಡಿದರು. ಈ ಹಿಂದೆಯೂ ಭೇಟಿ ನೀಡಿ ತುಲಾಭಾರ ನಡೆಸಿದ್ದರು. ದರ್ಶನ್ ಅವರು ಮದುವೆಯಾದದ್ದೂ ಧರ್ಮಸ್ಥಳದ ಮಂಜುನಾಥನ ಸನ್ನಿಧಿಯಲ್ಲಿ. ದೈವಭಕ್ತಿಯಲ್ಲೂ ಸೈ ಅನಿಸಿಕೊಂಡಿದ್ದಾರೆ ಈ ಚಾಲೆಂಜಿಂಗ್ ಸ್ಟಾರ್.
 

ಇನ್ನು ಧ್ರುವ ಸರ್ಜಾ ವಿಷಯಕ್ಕೆ ಬಂದರೆ ಅವರು ಹನುಮಂತನ ಮಹಾನ್ ಭಕ್ತ. ಜೊತೆಗೆ ಅವರ ಎಂಗೇಜ್ ಮೆಂಟ್ ನಲ್ಲಿ ಪ್ರೇರಣಾ ಅವರಿಗೆ ತೊಡಿಸಿದ ಉಂಗುರದಲ್ಲೂ ಶಿವ, ಪಾರ್ವತಿ, ಗಣೇಶ, ನಂದಿ ಕೆತ್ತನೆ ಇತ್ತು. ಅವರು ಎಂಗೇಜ್ ಮೆಂಟ್ ಮಾಡಿಕೊಂಡದ್ದೂ ಆಂಜನೇಯ ದೇವಾಲಯದಲ್ಲಿ. ಅವರ ದೈವಭಕ್ತಿ ಅಪರಿಮಿತವಾದದ್ದು.

ಇವರಲ್ಲದೇ ಸ್ಯಾಂಡಲ್ ವುಡ್ ನಲ್ಲಿ ಜಗ್ಗೇಶ್ ಅವರು ಮಹಾನ್ ದೈವಭಕ್ತರಾಗಿ ಗುರುತಿಸಿಕೊಂಡಿದ್ದಾರೆ. ಅವರು ಇತ್ತೀಚೆಗೆ ರಿಯಾಲಿಟಿ ಶೋ ಒಂದಕ್ಕೆ ಬಂದ ಸ್ಪರ್ಧಿಗಳಿಗಾಗಿ ಮನೆಯನ್ನೂ ಕಟ್ಟಿಕೊಟ್ಟಿದ್ದರು. ಅದಕ್ಕೆ ತಮ್ಮ ಕನಸಿನಲ್ಲಿ ಬಂದು ಭಗವಂತ ಪ್ರೇರಣೆ ನೀಡಿದ್ದಾಗಿಯೂ ಹೇಳಿಕೊಂಡಿದ್ದರು. ಇನ್ನು ಜಗ್ಗೇಶ್ ಅವರ ಸೋಷಲ್ ಮೀಡಿಯಾ ವಾಲ್ ನಲ್ಲಿ ನೋಡಿದರೆ ನಿತ್ಯವೂ ದೈವಭಕ್ತಿ ಮೆರೆಯುವ ಸಾಲುಗಳು ಕಾಣುತ್ತವೆ.