ಗುಪ್‌ಚುಪ್ ಆಗಿ ಯಾರೂ ನಿರೀಕ್ಷೆಯೇ ಮಾಡದಿದ್ದ ಸಂದರ್ಭ ದಿನಬೆಳಗಾಗೋದ್ರಲ್ಲಿ ಮದುವೆಯಾಗಿದ್ದ ಸನಾ ಖಾನ್ ಮದ್ವೆ ಬಗ್ಗೆ ಮಾತನಾಡಿದ್ದಾರೆ.

ಮಾಜಿ ನಟಿ ಸನಾ ಖಾನ್ ಅವರು ಅನಸ್ ಸೈಯದ್ ಅವರೊಂದಿಗಿನ ನವೆಂಬರ್ ವಿವಾಹದ ಬಗ್ಗೆ ಎಲ್ಲಾ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ. ಈ ಬಗ್ಗೆ ಮಾತನಾಡಿದ ಸನಾ, ಜನರು ಹೇಳುತ್ತಿರುವಂತೆ ಅನಾಸ್ ಅವರನ್ನು ಮದುವೆಯಾಗುವ ನಿರ್ಧಾರ ರಾತ್ರೋರಾತ್ರಿ ಸಂಭವಿಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ತನ್ನ ಜೀವನದಲ್ಲಿ ಅವನಂತಹ ಪತಿಗಾಗಿ ಬಹಳ ವರ್ಷಗಳಿಂದ ಪ್ರಾರ್ಥಿಸಿದ್ದೇನೆ ಎಂದು ಅವರು ಹೇಳಿದ್ದಾರೆ. ತನ್ನ ಗಂಡನ ಅತ್ಯುತ್ತಮ ವಿಷಯವೆಂದರೆ ಅವನು 'ಶರೀಫ್' ಎಂದು ಭಾವಿಸುತ್ತೇನೆ ಎಂದಿದ್ದಾರೆ.

ಹನಿಮೂನ್‌ಗೆ ಹೋದ ಸನಾಳನ್ನು ಹಿಡಿದು ಕೊರೋನಾ ಟೆಸ್ಟ್ ಮಾಡಿದ್ರು..!

ಅವನು ಜಡ್ಜ್ ಮಾಡುವವನಲ್ಲ. 2017 ರಲ್ಲಿ ಮೆಕ್ಕಾದಲ್ಲಿ ಅನಸ್ ಅವರನ್ನು ಭೇಟಿಯಾಗಿದ್ದೆ. ಅವರು ಧರ್ಮದತ್ತ ತಿರುಗಿದ್ದರು. ನಂತರ 2020 ರಲ್ಲಿ ಮಾತ್ರ ಮರುಸಂಪರ್ಕಿಸಿದರು ಎಂದು ಸನಾ ಹೇಳುತ್ತಾರೆ.

View post on Instagram

ಇದಲ್ಲದೆ, ಇನ್ಸ್ಟಾಗ್ರಾಮ್ನಲ್ಲಿ ತನ್ನ ಮದುವೆಯ ಚಿತ್ರಗಳ ಬಗ್ಗೆ ನಕಾರಾತ್ಮಕ ಪ್ರತಿಕ್ರಿಯೆಗಳನ್ನು ನೀಡುವ ಟ್ರೋಲ್ಗಳ ಬಗ್ಗೆ ಮಾತನಾಡಿದ್ದಾರೆ. ಇದು ಅಸಹ್ಯಕರವಾಗಿದೆ. ಪತಿ ಒಳ್ಳೆಯ ಮನುಷ್ಯ ಮತ್ತು ಅವರು ತನಗೆ ಸುಂದರವಾಗಿ ಕಾಣಿಸುತ್ತಾರೆ ಎಂದು ಹೇಳಿದ್ದಾರೆ ಸನಾ.

View post on Instagram