ಮತ್ತೊಂದು ಸಮಾಜ ಮುಖಿ ಕಾರ್ಯಕ್ಕೆ ಮುಂದಾದ ಸಂಯುಕ್ತಾ ಹೊರನಾಡು, ಹುಲಿ ರಕ್ಷಣೆಗೆ ಮುಂದಾದ ಲೈಫ್ ಇಷ್ಟೆನೆ ನಟಿ
ಸ್ಯಾಂಡಲ್ವುಡ್ ನಟಿ ಸಂಯುಕ್ತಾ ಹೊರನಾಡು ಬನ್ನೇರುಘಟ್ಟ ನ್ಯಾಷನಲ್ ಪಾರ್ಕ್ ನಲ್ಲಿರುವ ಹೆಣ್ಣು ಹುಲಿಯನ್ನು ದತ್ತು ಪಡೆದಿದ್ದಾರೆ. ಸಂಯುಕ್ತಾ, ನರದೌರ್ಬಲ್ಯ ಇರುವ ಸಿಂಚನ ಹೆಸರಿನ ಹೆಣ್ಣು ಹುಲಿಯನ್ನು ದತ್ತು ಪಡೆದುಕೊಂಡಿದ್ದಾರೆ.
ಸ್ಯಾಂಡಲ್ವುಡ್ ನಟಿ ಸಂಯುಕ್ತಾ ಹೊರನಾಡು (Sandalwood actress Samyukta Hornad) ಪ್ರಾಣಿ ಪ್ರೀತಿಯಿಂದ ಮತ್ತೆ ಎಲ್ಲರ ಗಮನ ಸೆಳೆದಿದ್ದಾರೆ. ಸಂಯುಕ್ತಾ ಹೊರನಾಡು, ಬನ್ನೇರುಘಟ್ಟ ನ್ಯಾಷನಲ್ ಪಾರ್ಕ್ (Bannerghatta National Park) ನಲ್ಲಿರುವ ಹೆಣ್ಣು ಹುಲಿಯೊಂದನ್ನು ದತ್ತು ಪಡೆದಿದ್ದಾರೆ. ಸಂಯುಕ್ತಾ, ನರದೌರ್ಬಲ್ಯ ಇರುವ ಸಿಂಚನ ಹೆಸರಿನ ಹೆಣ್ಣು ಹುಲಿ (female tiger) ಯನ್ನು ದತ್ತು ಪಡೆದುಕೊಂಡಿದ್ದಾರೆ. ಸಿಂಚನಾಗೆ 28 ತಿಂಗಳಾಗಿದೆ. ಆರೋಗ್ಯ ಸಮಸ್ಯೆ ಇರುವ ಕಾರಣ, ಅದು ಸ್ವತಂತ್ರ್ಯವಾಗಿ ಕಾಡಿನಲ್ಲಿ ಸುತ್ತಲು ಸಾಧ್ಯವಿಲ್ಲ. ಅದೇ ಕಾರಣಕ್ಕೆ ಬನ್ನೇರುಘಟ್ಟ ಜೈವಿಕ ಉದ್ಯಾನವನ ಅದಕ್ಕೆ ಉದ್ಯಾನವನದಲ್ಲಿ ಆಸರೆ ನೀಡಿದೆ. ಈಗ ಸಂಯುಕ್ತಾ ಅದರ ಜವಾಬ್ದಾರಿಯನ್ನು ವಹಿಸಿಕೊಳ್ಳಲಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಸಂಯುಕ್ತಾ ಹೊರನಾಡು, ಹುಲಿ ಮರಿಯನ್ನು ದತ್ತು ಪಡೆದಿರುವ ಫೋಟೋ ವೈರಲ್ ಆಗಿದೆ. ಸಂಯುಕ್ತಾ ಈ ಕೆಲಸವನ್ನು ಅಭಿಮಾನಿಗಳು ಮೆಚ್ಚಿದ್ದಾರೆ. ವಾಸ್ತವವಾಗಿ ನಟಿ ಸಂಯುಕ್ತಾ ಅವರಿಗೆ ಪ್ರಾಣಿಗಳ ಮೇಲೆ ಅಪಾರ ಪ್ರೀತಿ ಇದೆ. ನಾಯಿ, ಮೊಲವೆಂದ್ರೆ ಅವರಿಗೆ ಅತಿ ಪ್ರೀತಿ. ಈಗ ಸಂಯುಕ್ತಾ ತಮ್ಮ ಸಂಸ್ಥೆಯಾದ ಪ್ರಾಣ ಹಾಗೂ ಟೆಕೆಯಾನ್ ಸಂಸ್ಥೆ (Tekeon Institute) ಜೊತೆ ಕೈಜೋಡಿಸಿ ಹುಲಿ ಮರಿಯನ್ನು ದತ್ತು ಪಡೆದಿದ್ದಾರೆ. ದತ್ತು ಪಡೆದ ನಂತ್ರ ಆ ಪ್ರಾಣಿಯ ಆಹಾರ, ಚಿಕಿತ್ಸೆ ಹಾಗೂ ನಿರ್ವಹಣೆ ವೆಚ್ಚವನ್ನು ದತ್ತು ಪಡೆದವರು ನೋಡಿಕೊಳ್ಳಬೇಕಾಗುತ್ತದೆ.
ಮುದ್ದು ರಾಕ್ಷಸಿ ಪೋಸ್ಟರ್ ನೋಡಿ ಶೆಡ್ ಗೆ ಹೋಗಿ ಎಂದ ಫ್ಯಾನ್ಸ್
ಸಂಯುಕ್ತಾ ಹೊರನಾಡು, ಬರೀ ನಟನೆಗೆ ಮಾತ್ರವಲ್ಲ ಸಮಾಜ ಸೇವೆಗೂ ಹೆಸರುವಾಸಿ. ಅವರು ಪ್ರಾಣ ಅನಿಮಲ್ ಫೌಂಡೇಶನ್ (Prana Animal Foundation) ನಡೆಸುತ್ತಿದ್ದಾರೆ. ಈ ಸಂಸ್ಥೆ ಅಡಿಯಲ್ಲಿ ಪ್ರಾಣಿಗಳ ರಕ್ಷಣೆಗೆ ಆಂಬ್ಯುಲೆನ್ಸ್ ಸೇವೆ (Ambulance Service) ನೀಡ್ತಿದ್ದಾರೆ. ಪ್ರಾಣ ಹಾಗೂ ಟೆಕೆಯಾನ್ ಸಂಸ್ಥೆ ಈವರೆಗೆ 500ಕ್ಕೂ ಹೆಚ್ಚು ಪ್ರಾಣಿಗಳನ್ನು ರಕ್ಷಿಸಿದೆ. ದಿನದ 24 ಗಂಟೆ ಪ್ರಾಣಿ ರಕ್ಷಣೆಗೆ ಮೀಸಲಿಟ್ಟಿರುವ ಸಂಸ್ಥೆಗಳು, ಕನಕಪುರದಲ್ಲಿ ಪ್ರಾಣಿಗಳ ಪುನರ್ ವಸತಿ ಕೇಂದ್ರವನ್ನು ಹೊಂದಿವೆ. ಪ್ರಾಣ ಸಂಸ್ಥೆ ಸಹಾಯವಾಣಿ ನಂಬರ್ ಹೊಂದಿದೆ. ಹಿಂದಿನ ವರ್ಷ ಫೆಬ್ರವರಿಯಲ್ಲಿ ಸಂಯುಕ್ತ, ಪ್ರಾಣ ಸಂಸ್ಥೆಯನ್ನು ಶುರು ಮಾಡಿದ್ದು, ಪ್ರಾಣಿಗಳ ರಕ್ಷಣೆ ಕಾರ್ಯ ಯಶಸ್ವಿಯಾಗಿ ಸಾಗಿದೆ. ಈಗ ಎರಡು ವರ್ಷದ ಹುಲಿಯನ್ನು ದತ್ತು ಪಡೆದಿರುವ ಸಂಯುಕ್ತಾ ಖುಷಿಯಾಗಿದ್ದಾರೆ. ಇದಕ್ಕೆ ಅವಕಾಶ ನೀಡಿದ ಬನ್ನೇರಘಟ್ಟ ಉದ್ಯಾನವನದ ಅಧಿಕಾರಿಗಳಿಗೆ ಧನ್ಯವಾದ ಅರ್ಪಿಸಿದ್ದಾರೆ.
ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದ ದತ್ತು ಕಾರ್ಯಕ್ರಮ : 2007 ರಲ್ಲಿ ಪ್ರಾರಂಭವಾದ ಪ್ರಾಣಿ ದತ್ತು ಕಾರ್ಯಕ್ರಮದ ಮೂಲಕ, BBP ಪ್ರಾಣಿಗಳನ್ನು ದತ್ತು ತೆಗೆದುಕೊಳ್ಳುವ ಅವಕಾಶವನ್ನು ಒದಗಿಸುತ್ತದೆ. ಕಾರ್ಯಕ್ರಮದ ಮೂಲಕ ಸಂಗ್ರಹಿಸಿದ ಹಣವನ್ನು ಆಹಾರ, ನಿರ್ವಹಣೆ ಮತ್ತು ಪಶುವೈದ್ಯಕೀಯ ಆರೋಗ್ಯ ವೆಚ್ಚಗಳನ್ನು ಭರಿಸಲು ಬಳಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕೋವಿಡ್ -19 ಸಾಂಕ್ರಾಮಿಕ ಸಮಯದ ನಂತ್ರ ಪ್ರಾಣಿಗಳು ಮತ್ತು ಪಕ್ಷಿಗಳನ್ನು ದತ್ತು ತೆಗೆದುಕೊಳ್ಳಲು ಆಸಕ್ತಿಯನ್ನು ತೋರಿಸುವ ಜನರ ಸಂಖ್ಯೆಯಲ್ಲಿ ಗಮನಾರ್ಹ ಹೆಚ್ಚಳ ಕಂಡುಬಂದಿದೆ. ಹಿಂದಿನ ವರ್ಷ ಈ ಅವಧಿಯಲ್ಲಿ 400 ಕ್ಕೂ ಹೆಚ್ಚು ಜನರು ವಿವಿಧ ಜಾತಿಯ ಪ್ರಾಣಿಗಳು ಮತ್ತು ಪಕ್ಷಿಗಳನ್ನು ದತ್ತು ಪಡೆದಿದ್ದರು. ಅದರ ಮೂಲಕ 27,65,623 ರೂಪಾಯಿ ಸಂಗ್ರಹಿಸಲಾಗಿತ್ತು.
ನಾಲ್ವರಿಗೆ ಬೆಳಕು ನೀಡಿದ ಪುನೀತ್ ರಾಜ್: ಅಂದು ನಡೆದ ಘಟನೆ ವಿವರಿಸಿದ ಡಾ.ರೋಹಿತ್ ಶೆಟ್ಟಿ
ದತ್ತು ಪಡೆದ ಸ್ಯಾಂಡಲ್ವುಡ್ ಕಲಾವಿದರು : ಸ್ಯಾಂಡಲ್ವುಡ್ ನಲ್ಲಿ ಅನೇಕ ಕಲಾವಿದರು ಪ್ರಾಣಿಗಳನ್ನು ದತ್ತು ಪಡೆದಿದ್ದಲ್ಲದೆ ತನ್ನ ಅಭಿಮಾನಿಗಳಿಗೆ ದತ್ತು ಪಡೆಯುಂತೆ ಪ್ರೋತ್ಸಾಹ ನೀಡ್ತಾ ಬಂದಿದ್ದಾರೆ. ಇದ್ರಲ್ಲಿ ನಟ ದರ್ಶನ್ (Actor Darshan) ಮುಂದಿದ್ದಾರೆ. ಅವರು ಮೈಸೂರಿನಲ್ಲಿ ಅನೇಕ ಪ್ರಾಣಿಗಳನ್ನು ದತ್ತು ಪಡೆದಿದ್ದರು. ಹ್ಯಾಟ್ರಿಕ್ ಹಿರೋ ಶಿವಣ್ಣ (Hattrick Hero Sivanna), ನಟ ಉಪೇಂದ್ರ (Actor Upendra), ವಸಿಷ್ಠ ಸಿಂಹ ಸೇರಿದಂತೆ ಅನೇಕರು ಪ್ರಾಣಿಗಳನ್ನು ದತ್ತು ಪಡೆದಿದ್ದಾರೆ.