Samantha ಜೀವನ ಎಷ್ಟೇ ಖರಾಬ್ ಆಗಿರಲಿ ಇದನ್ನು ತಲೆಯಲ್ಲಿಟ್ಟುಕೊಳ್ಳಿ: ಮೊದಲ ಬಾರಿ ಮುಖ ತೋರಿಸಿದ ಸ್ಯಾಮ್
ಅಭಿಮಾನಿಗಳ ಆತಂಕ ದೂರ ಮಾಡಲು ಮೊದಲ ಬಾರಿಗೆ ಮುಖ ತೋರಿಸಿದ ಸಮಂತಾ. ಬರೆದಿರುವ ಕ್ಯಾಪ್ಶನ್ ಯಾರಿಗೆ?
ಟಾಲಿವುಡ್ ಬ್ಯೂಟಿ ಸಮಂತಾ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ವಿಚಾರ ಎಲ್ಲರಿಗೂ ಗೊತ್ತಿದೆ. ನಟಿ ಅಂದ್ಮೇಲೆ ಸ್ಕಿನ್, ಹೇರ್, ಬ್ಯೂಟಿ ಆಂಡ್ ಫಿಟ್ನೆಸ್ ಹೆಚ್ಚಿನ ಕಾಳಜಿ ಮತ್ತು ಮಹತ್ವ ಹೊಂದಿರುತ್ತದೆ ಹೀಗಿರುವಾಗ Myositis ಎನ್ನುವ ಕಾಯಿಲೆ ವಕ್ಕರಿಸಿಕೊಂಡಾಗ ಜೀವನವೇ ಉಲ್ಟಾ ಪಲ್ಟಾ ಆಗಿ ಬಿಡುತ್ತದೆ. ಸಮಂತಾ ಹೇಗಿದ್ದಾರೆ? ಬ್ಯೂಟಿ ಹಾಳಾಗಿದ್ಯಾ? ಮತ್ತೆ ಸಿನಿಮಾ ಮಾಡ್ತಾರಾ? ಯಶೋಧ ಪ್ರಚಾರ ಮಾಡುವುದು ಯಾರು ಎಂದು ಪದೇ ಪದೇ ಅಭಿಮಾನಿಗಳು ಕೇಳುತ್ತಿರುವ ಪ್ರಶ್ನೆಗೆ ಪೋಸ್ಟ್ ಮೂಲಕ ಉತ್ತರ ಕೊಟ್ಟಿದ್ದಾರೆ.
ಸಮಂತಾ ಪೋಸ್ಟ್:
'ನನ್ನ ಆಪ್ತ ಸ್ನೇಹಿತ ರಾಜ್ ನಿಡಿಮೋರು ಹೇಳಿರುವ ಪ್ರಕಾರ ನಿಮ್ಮ ದಿನ ಹೇಗೇ ಇರಲಿ ಜೀವನ ಎಷ್ಟೇ ಖರಾಬ್ ಆಗಿರಲಿ ಒಂದು ಮೋಟೋ ತಲೆಯಲ್ಲಿಟ್ಟುಕೊಳ್ಳಿ. ಶವರ್, ಶೇವ್ ಆಂಡ್ ಶೋ ಅಪ್! ನಾನು ಒಂದು ದಿನ ಸಾಲ ಮಾಡಿದೆ. ಯಶೋಧ ಪ್ರಚಾರದಲ್ಲಿ ಭಾಗಿಯಾಗಿರುವೆ. 11ನೇ ನವೆಂಬರ್ ನಿಮ್ಮನ್ನು ನೋಡಲು ಕಾಯುತ್ತಿರುವೆ' ಎಂದು ಸಮಂತಾ ಬರೆದುಕೊಂಡಿದ್ದಾರೆ.
ಬ್ಲ್ಯಾಕ್ ಆಂಡ್ ಬ್ಲ್ಯಾಕ್ ಔಟ್‌ಫಿಟ್‌ಗೆ ಬ್ಲ್ಯಾಕ್ ಗ್ಲಾಸ್ ಧರಿಸಿರುವ ಸಮಂತಾ ಲುಕ್‌ಗೆ ಮೋಹಕ ತಾರೆ ರಮ್ಯಾ ಕೂಡ ಫಿದಾ ಆಗಿದ್ದಾರೆ. ಕಪ್ಪು ಬಣ್ಣ ಹಾರ್ಟ್ ಎಮೋಜಿಯನ್ನು ಪೋಸ್ಟ್ ಮಾಡಿದ್ದಾರೆ. ಈ ಮೂಲಕ ಪರಭಾಷೆ ಸ್ಟಾರ್‌ಗಳ ಜೊತೆಗೂ ನಮ್ ನಟಿ ಚೆನ್ನಾಗಿದ್ದಾರೆ ಅನ್ನೋದು ತಿಳಿದುಕೊಳ್ಳಬಹುದು.
ಯಶೋಧೆ ಸಿನಿಮಾ:
ಹರಿ ಮತ್ತು ಹರೀಶ್ ನಿರ್ದೇಶನ ಮಾಡಿರುವ ಯಶೋಧ ಸಿನಿಮಾದಲ್ಲಿ ಸಮಂತಾ ಸೆರೋಗೆಸಿ ಸ್ಕ್ಯಾಮ್ ಬಗ್ಗೆ ಜನರಿಗೆ ಅರಿವು ಮೂಡಿಸಲಿದ್ದಾರೆ. ತಮಿಳು ಮತ್ತು ಮಲಯಾಳಂ ಭಾಷೆಯಲ್ಲಿ ಸಿನಿಮಾ ರಿಲೀಸ್ ಆಗಲಿದ್ದು ವೀಕ್ಷಕರು ನಿರೀಕ್ಷೆ ವ್ಯಕ್ತ ಪಡಿಸಿದ್ದಾರೆ. ವರಲಕ್ಷ್ಮಿ ಶರತ್ ಕುಮಾರ್, ರಾವ್ ರಮೇಶ್, ಉನ್ನಿ ಮುಕುಂದಾ, ಮುರಳಿ ಶರ್ಮಾ, ಸಂಪತ್ ರಾಜ್,ದಿವ್ಯಾ ಶ್ರೀಪಾದಾ ಸೇರಿದಂತೆ ದೊಡ್ಡ ತಾರಾ ಬಳಗ ಈ ಸಿನಿಮಾದಲ್ಲಿದೆ. ಶಿವಲೆಂಕ ಕೃಷ್ಣ ಪ್ರಸಾದ್ ಬಂಡವಾಳ ಹಾಕಿರುವ ಈ ಚಿತ್ರಕ್ಕೆ ಮನಿ ಶರ್ಮಾ ಸಂಗೀತ ನಿರ್ದೇಶನ ಮಾಡಿದ್ದಾರೆ.
ದೀಪಿಕಾರಿಂದ ಸಮಂತಾರವರೆಗೆ ತಮ್ಮ ಆರೋಗ್ಯ ಸಮಸ್ಯೆಯಿಂದ ಸುದ್ದಿಯಲ್ಲಿರುವ ಸೆಲೆಬ್ರಿಟಿಗಳು
ಹಣ ಸಂಪಾದನೆ ಮಾಡಲು ಸಮಂತಾ ಸರೋಗೆಟ್ ತಾಯಿ ಆಗಲು ನಿರ್ಧರಿಸುತ್ತಾಳೆ. ಈ ಪ್ರಾಸೆಸ್‌ನಲ್ಲಿ ನಡೆಯುವ ಅಕ್ರಮಗಳ ಬಗ್ಗೆ ತಿಳಿದುಕೊಂಡು ಸರೋಗೆಟ್‌ಗೆ ಮುಂದಾಗುವ ಹೆಂಗಸರಿಗೆ ನ್ಯಾಯ ಕೊಡಿಸಲು ಮುಂದಾಗುತ್ತಾರೆ.
ಏನಿದು Myositis ಕಾಯಿಲೆ:
ತ್ತೀಚಿಗಷ್ಟೇ ಅಪರೂಪದ ಕಾಯಿಲೆಯಿಂದ ಬಳಲುತ್ತಿರುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿಕೊಂಡಿದ್ದರು. ನಟಿ ಸಮಂತಾ ಪ್ರಭು ಮಯೋಸಿಟಿಸ್ ಕಾಯಿಲೆ ಹಲವು ಕಾಯಿಲೆಗಳ ಗುಂಪಾಗಿದ್ದು,ಇದಕ್ಕೆ ಕೇವಲ ಚಿಕಿತ್ಸೆ (Treatment) ನೀಡಬಹುದು. ಗುಣಪಡಿಸೋಕೆ ಆಗಲ್ಲ ಎಂದು ತಜ್ಞರು ತಿಳಿಸಿದ್ದಾರೆ.
ಸವಾಲುಗಳು ಬರುತ್ತವೆ, ನೀವು ಗೆದ್ದು ಬರುತ್ತೀರಿ ಎನ್ನುವ ಖಾತ್ರಿ ಇದೆ; ಸಮಂತಾಗೆ ಚಿರಂಜೀವಿ ಪತ್ರ
ಮೈಯೋಸಿಟಿಸ್ ಸ್ವಯಂ ನಿರೋಧಕ ಅಸ್ವಸ್ಥತೆಯಾಗಿದೆ. ಆದರೆ ಇದು ಒಂದೇ ರೋಗವಲ್ಲ, ಆದರೆ ಅನೇಕ ರೋಗಗಳ ಗುಂಪು. ಇದು ದೇಹವನ್ನು (Body) ನಿಧಾನವಾಗಿ ಒಡೆಯುತ್ತದೆ ಮತ್ತು ದೊಡ್ಡ ಸಮಸ್ಯೆ ಎಂದರೆ ವೈದ್ಯರು ಇದಕ್ಕೆ ಯಾವುದೇ ನಿರ್ಧಿಷ್ಟ ಚಿಕಿತ್ಸೆಯನ್ನು ಹೊಂದಿಲ್ಲ. ಮೈಯೋಸಿಟಿಸ್, ಇದು ನಿಮ್ಮ ರೋಗನಿರೋಧಕ ವ್ಯವಸ್ಥೆಯು ಸ್ನಾಯುಗಳ ಮೇಲೆ ದಾಳಿ ಮಾಡುವ ಸ್ಥಿತಿಯಾಗಿದೆ. ಸ್ನಾಯುಗಳಲ್ಲಿ ಉರಿಯೂತಕ್ಕೆ ಕಾರಣವಾಗುವ ಒಂದು ಅಥವಾ ಹೆಚ್ಚಿನ ಬಹು ಪರಿಸ್ಥಿತಿಗಳಿಂದ ಈ ರೋಗವು ಉಂಟಾಗಬಹುದು. ಇದರ ಮುಖ್ಯ ಲಕ್ಷಣಗಳು ಸ್ನಾಯು ನೋವು ಮತ್ತು ದೌರ್ಬಲ್ಯ, ಇದು ಕಾಲಾನಂತರದಲ್ಲಿ ಪರಿಸ್ಥಿತಿ ಕೆಡುಕಾಗುತ್ತಾ ಹೋಗುತ್ತದೆ. ಈ ಲಕ್ಷಣಗಳನ್ನು ಹೊಂದಿದವರು ಸಾಕಷ್ಟು ಮುಗ್ಗರಿಸಬಹುದು ಅಥವಾ ಬೀಳಬಹುದು ಅಥವಾ ನಡೆದಾಡಿದ ನಂತರವೂ ಸುಸ್ತಾಗಬಹುದು.