ಕೆಟ್ಟದಾಗಿ ಕಾಮೆಂಟ್ ಮಾಡಿದ ನಿರ್ಮಾಪಕನಿಗೆ ಕಿವಿ ಕೂದಲಿನ ವ್ಯಂಗ್ಯವಾಡಿ ಸಮಂತಾ ಖಡಕ್ ತಿರುಗೇಟು ನೀಡಿದ್ದಾರೆ. 

ನಟಿ ಸಮಂತಾ ಸೌತ್ ಮಾತ್ರವಲ್ಲದೇ ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದಾರೆ. ಸಿನಿಮಾರಂಗದಲ್ಲಿ ಯಾರ ಸಹಾಯವಿಲ್ಲದೇ, ಸಿನಿಮಾ ಬ್ಯಾಗ್ರೌಂಡ್ ಇಲ್ಲದೇ ತನ್ನದ ಶ್ರಮದ ಮೇಲೆ ಬೆಳೆದ ನಟಿ ಸಮಂತಾ. ತನ್ನ ಅದ್ಭುತ ಪ್ರತಿಭೆಯಿಂದನೇ ದೊಡ್ಡ ಮಟ್ಟದ ಖ್ಯಾತಿಗಳಿಸಿರುವ ಸಮಂತಾ ವೈಯಕ್ತಿಕ ಜೀವನದಲ್ಲಿ ಹಿನ್ನಡೆಗಳಿಸಿದರು. ಜೊತೆಗೆ ಅನಾರೋಗ್ಯ ಅವರನ್ನು ಕಾಡಲು ಪ್ರಾರಂಭಿಸಿದೆ. ಆದರೂ ಸಮಂತಾ ಸಿನಿಮಾ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ ಶೂಟಿಂಗ್, ಪ್ರಮೋಷನ್‌ಗಳಲ್ಲಿ ಭಾಗಿಯಾಗುತ್ತಿದ್ದಾರೆ. ಅನೇಕರು ಸಮಂತಾ ಬಗ್ಗೆ ಕಟುವಾಗಿ ಟೀಕಿಸುತ್ತಿದ್ದಾರೆ. ಸಮಂತಾ ಅವರ ಕರಿಯರ್ ಮುಗಿತು ಆಡಿಕೊಂಡಿದ್ದಾರೆ. ಇತ್ತೀಚೆಗೆ ನಿರ್ಮಾಪಕ ಚಿಟ್ಟಿಬಾಬು ಸಮಂತಾ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದರು. 

ಆದರೀಗ ಸಮಂತಾ, ಆ ನಿರ್ಮಾಪಕನಿಗೆ ಸರಿಯಾಗಿ ತಿರುಗೇಟು ನೀಡಿದ್ದಾರೆ. ಇನ್​ಸ್ಟಾಗ್ರಾಮ್​ ಸ್ಟೋರಿಯಲ್ಲಿ ಒಂದು ಸ್ಕ್ರೀನ್​ ಶಾಟ್​ ಹಂಚಿಕೊಳ್ಳುವ ಮೂಲಕ ಅವರು ವ್ಯಂಗ್ಯ ಮಾಡಿದ್ದಾರೆ. ನೇರವಾಗಿ ಚಿಟ್ಟಿಬಾಬು ಹೆಸರನ್ನು ಸಮಂತಾ ಪ್ರಸ್ತಾಪ ಮಾಡದಿದ್ದರೂ ಕೂಡ ನೆಟ್ಟಿಗರಿಗೆ ಅರ್ಥವಾಗಿದೆ. ಚಿಟ್ಟಿಬಾಬು ಅವರ ಕಿವಿಯಲ್ಲಿ ಸಿಕ್ಕಾಪಟ್ಟೆ ಕೂದಲು ಇದೆ. ಅದರ ರಹಸ್ಯವನ್ನು ಬಹಿರಂಗ ಪಡಿಸುವ ಮೂಲಕ ಸಮಂತಾ ವ್ಯಂಗ್ಯವಾಡಿದ್ದಾರೆ. ಈ ಬಗ್ಗೆ ಗೂಗಲ್ ಮಾಡಿದ್ದು ಅದರ ಸ್ಟ್ರೀನ್ ಶಾಟ್ ಸಿಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. 

ಸಮಂತಾ ಶೇರ್ ಮಾಡಿರುವ ಪೋಸ್ಟ್‌ನಲ್ಲಿ‘ಮನುಷ್ಯರ ಕಿವಿ ಮೇಲೆ ಕೂದಲು ಯಾಕೆ ಬೆಳೆಯುತ್ತದೆ’ ಎಂದು ಸಮಂತಾ ಗೂಗಲ್​ನಲ್ಲಿ ಸರ್ಚ್​ ಮಾಡಿದ್ದಾರೆ. ಅದಕ್ಕೆ ಗೂಗಲ್​ ತೋರಿಸಿದ ಉತ್ತರವನ್ನು ಸ್ಕ್ರೀನ್​ ಶಾಟ್​ ತೆಗೆದುಕೊಂಡು ಇನ್​ಸ್ಟಾಗ್ರಾಮ್​ ಸ್ಟೋರಿಯಲ್ಲಿ ಹಂಚಿಕೊಂಡಿದ್ದಾರೆ. ‘ಲೈಂಗಿಕ ಆಸಕ್ತಿಗೆ ಹೆಚ್ಚಿಸುವ ಟೆಸ್ಟಾಸ್ಟಿರಾನ್​ ಹಾರ್ಮೋನ್​ ಜಾಸ್ತಿ ಇರುವ ಪುರುಷರ ಕಿವಿಯಲ್ಲಿ ಕೂದಲು ಬೆಳೆಯುತ್ತದೆ’ ಎಂಬ ಮಾಹಿತಿ ಈ ಸ್ಕ್ರೀನ್ ಶಾಟ್​ನಲ್ಲಿದೆ. ಇದು ನಿರ್ಮಾಪಕ ಚಿಟ್ಟಿಬಾಬು ಕುರಿತಾಗಿಯೇ ಸಮಂತಾ ಹೇಳಿದ್ದು ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ. ಸಮಂತಾ ಅವರ ಈ ಪೋಸ್ಟ್ ವೈರಲ್ ಆಗಿದ್ದು ಅಭಿಮಾನಿಗಳು ಅವರ ಪರ ನಿಂತಿದ್ದಾರೆ. 

ಚಿಟ್ಟಿ ಬಾಬು ಹೇಳಿದ್ದೇನು?

 'ಆಕೆ ತನ್ನ ಜೀವನೋಪಾಯಕ್ಕಾಗಿ ಐಟಂ ಡಾನ್ಸ್ ಮಾಡಿದಳು. ಸ್ಟಾರ್ ಹೀರೋಯಿನ್ ಪಟ್ಟ ಕಳೆದುಕೊಂಡ ನಂತರ ತನಗೆ ಬರುತ್ತಿರುವ ಆಫರ್ ಗಳನ್ನೆಲ್ಲ ಮಾಡುತ್ತಿದ್ದಾರೆ. ನಾಯಕಿಯಾಗಿ ಆಕೆಯ ವೃತ್ತಿಜೀವನ ಮುಗಿದಿದೆ ಮತ್ತು ಅವರು ಮತ್ತೆ ಸ್ಟಾರ್‌ಡಮ್‌ಗೆ ಮರಳಲು ಸಾಧ್ಯವಿಲ್ಲ. ಅವಳು ಪಡೆಯುವ ಆಫರ್‌ಗಳನ್ನು ಮಾಡುತ್ತಾ ತನ್ನ ಪ್ರಯಾಣವನ್ನು ಮುಂದುವರೆಸಬೇಕು. ಯಶೋದಾ ಪ್ರಚಾರದ ಸಮಯದಲ್ಲಿ ಕಣ್ಣೀರು ಸುರಿಸಿದರು, ಹಿಟ್ ಗಳಿಸಲು ಪ್ರಯತ್ನಿಸಿದರು. ಈಗ ಶಾಕುಂತಲಂಗಾಗಿ ಅದೇ ತಂತ್ರ ಮಾಡಿದ್ದಾಳೆ. ಅವಳು ಸಾಯುವ ಮೊದಲು ಇಂಥ ಪಾತ್ರವನ್ನು ಮಾಡಲು ಯೋಜಿಸಿದ್ದೆ ಎಂದು ಸಹಾನುಭೂತಿ ಪಡೆಯಲು ಪ್ರಯತ್ನಿಸುತ್ತಿದ್ದಾಳೆ' ಎಂದು ಹೇಳಿದ್ದರು. 

ಆಕೆಯ ಕರಿಯರ್ ಮುಗೀತು, ಮತ್ತೆ ಸ್ಟಾರ್ ಆಗಲು ಸಾಧ್ಯವೇ ಇಲ್ಲ; ಸಮಂತಾ ವಿರುದ್ಧ ನಿರ್ಮಾಪಕ ಕಿಡಿ

ಸಮಂತಾ ಬಳಿ ಇರುವ ಸಿನಿಮಾಗಳು 

ಸಮಂತಾ ಸದ್ಯ ಸಿಟಾಡೆಲ್ ಸೀರಿಸ್ ನಲ್ಲಿ ನಟಿಸುತ್ತಿದ್ದಾರೆ. ಪ್ರಿಯಾಂಕಾ ನಟಿಸಿದ್ದ ಸಿಟಾಡೆಲ್ ಸೀರಿಸ್ ನ ಹಿಂದಿ ವರ್ಷನ್ ನಲ್ಲಿ ಸಮಂತಾ ನಟಿಸುತ್ತಿದ್ದಾರೆ. ಸಮಂತಾಗೆ ಜೋಡಿಯಾಗಿ ಬಾಲಿವುಡ್ ಸ್ಟಾರ್ ವರುಣ್ ಧವನ್ ಕಾಣಿಸಿಕೊಂಡಿದ್ದಾರೆ. ಈ ಸೀರಿಸ್ ಜೊತೆಗೆ ಸಮಂತಾ ವಿಜಯ್ ದೇವರಕೊಂಡ ಜೊತೆ ಖುಷಿ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.