ಭಾರ ಎತ್ತಿದ ಸಮಂತಾ ರುಥ್ ಪ್ರಭು ಬರೋಬ್ಬರಿ 80 ಕೆಜಿ ಎತ್ತಿದ್ರು ಪುಷ್ಪಾ ನಟಿ ಐಟಂ ಸಾಂಗ್ ಮಾತ್ರವಲ್ಲ, ಭಾರ ಎತ್ತೋಕು ಸೈ ಅಂತಿದ್ದಾರೆ ನಟಿ

ವಿಚ್ಚೇದನೆ ನಂತರ ಸಮಂತಾ ತಮ್ಮನ್ನು ತಾವು ತುಂಬಾ ಬ್ಯುಸಿಯಾಗಿರಿಸಿಕೊಂಡಿದ್ದಾರೆ. ಟ್ರಾವೆಲ್, ಮೂವಿ, ಡ್ಯಾನ್ಸ್, ಜಿಮ್ ಅಂತ ಎಲ್ಲದರಲ್ಲೂ ತೊಡಗಿಸಿಕೊಂಡಿರೋ ನಟಿ ಹೊಸ ಹೊಸ ಪ್ರಾಜೆಕ್ಟ್‌ಗಳಿಗೆ ಸೈನ್ ಮಾಡುವುದು ಮಾತ್ರವಲ್ಲದೆ ಎಲ್ಲದರಲ್ಲೂ ಸಕ್ಸಸ್ ಕಾಣುತ್ತಿದ್ದಾರೆ. ಟಾಲಿವುಡ್‌ ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ಊ ಅಂಟಾವಾ ಸಾಂಗ್ ಮೂಲಕ ಒಮ್ಮೆಗೇ ಹಿಟ್ ಆದರು ನಟಿ. ಈ ಹಾಡು ಸಮಂತಾಗೆ ಹೊಸ ಖ್ಯಾತಿ ತಂದುಕೊಟ್ಟಿದೆ. ಬಹಳಷ್ಟು ಹೊಸ ಅಭಿಮಾನಿಗಳನ್ನು ತಂದುಕೊಟ್ಟಿದೆ. ನಟಿ ಇತ್ತೀಚೆಗೆ ಬಾಲಿವುಡ್‌ನಿಂದಲೂ ಆಫರ್‌ಗಳನ್ನು ಪಡೆಯುತ್ತಿದ್ದು, ಫಿಟ್ನೆಸ್ ಬಗ್ಗೆಯೂ ಕಾಳಜಿ ವಹಿಸುತ್ತಿದ್ದಾರೆ.

ಹಿಂದಿನಿಂದಲೂ ಫಿಟ್ನೆಸ್ ಫ್ರೀಕ್ ಆಗಿದ್ದ ನಟಿ ಈಗ ಜಿಮ್‌ನಲ್ಲಿ ಇನ್ನಷ್ಟು ಸಮಯ ಕಳೆಯುತ್ತಿದ್ದಾರೆ. ನಟಿ ಸಮಂತಾ ರುತ್ ಪ್ರಭು ಯಾವಾಗಲೂ ತಮ್ಮ ಜೀವನದಲ್ಲಿ ಫಿಟ್‌ನೆಸ್‌ಗೆ ಹೆಚ್ಚಿನ ಆದ್ಯತೆ ನೀಡುವ ಸೆಲೆಬ್ರಿಟಿಗಳಲ್ಲಿ ಒಬ್ಬರು. ನಟಿಯ ಇತ್ತೀಚಿನ Instagram ಪೋಸ್ಟ್‌ಗಳು ನಿಮಗೆ ಅವರ ಫಿಟ್ನೆಸ್ ಗೋಲ್ ಸಾಬೀತುಪಡಿಸುತ್ತವೆ. ಫ್ಯಾಮಿಲಿ ಮ್ಯಾನ್ 2 ನಟಿ ತನ್ನ ತರಬೇತುದಾರರೊಂದಿಗೆ ಜಿಮ್‌ನಲ್ಲಿ ವ್ಯಾಯಾಮ ಮಾಡುವ ವೀಡಿಯೊಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಅವರ ಇತ್ತೀಚಿನ ಪೋಸ್ಟ್‌ಗಳನ್ನು ನೋಡಿದರೆ, ನಟಿ ಮತ್ತೊಂದು ಹಂತವನ್ನು ಅನ್‌ಲಾಕ್ ಮಾಡಿದ್ದಾರೆ ಎಂದು ತೋರುತ್ತದೆ.

ಸಮೋಸ ತಿನ್ನೋ ಆಸೆಗೆ ಭಾರ ಎತ್ತುತ್ತಾರೆ ಸಮಂತಾ

ಜಿಮ್‌ನಲ್ಲಿ ತೂಕವನ್ನು ಡೆಡ್‌ಲಿಫ್ಟಿಂಗ್ ಮಾಡುವ ಹಲವಾರು ವೀಡಿಯೊಗಳನ್ನು ಹಂಚಿಕೊಂಡಿದ್ದಾರೆ ಸಮಂತಾ. ತನ್ನ Instagram ಸ್ಟೋರಿಯಲ್ಲಿ 75 ಕೆಜಿ, 78 ಕೆಜಿ ಮತ್ತು 80 ಕೆಜಿ ತೂಕದ ಬಾರ್ಬೆಲ್ ಅನ್ನು ಎತ್ತುವ ಐದು ವೀಡಿಯೊಗಳ ಸರಣಿಯನ್ನು ಸ್ಟಾರ್ ಪೋಸ್ಟ್ ಮಾಡಿದ್ದಾರೆ. ನಟಿಯ ತರಬೇತುದಾರ ಜುನೈದ್ ಶೇಖ್ ತನ್ನ ಮಿತಿಗಳನ್ನು ತಳ್ಳಿ ಅವರನ್ನು ಹುರಿದುಂಬಿಸಿದ್ದಾರೆ. ಇಂದು ಜಿಮ್‌ಗೆ ಹೋಗಲು ಮತ್ತು ನಿಮ್ಮ ಫಿಟ್‌ನೆಸ್ ದಿನಚರಿಯನ್ನು ಟ್ರ್ಯಾಕ್‌ಗೆ ತರಲು ನಿಮಗೆ ಸ್ವಲ್ಪ ಪ್ರೇರಣೆ ಅಗತ್ಯವಿದ್ದರೆ ಅದನ್ನು ಸಮಂತಾ ಕೊಟ್ಟಿದ್ದಾರೆ.

ಮೊದಲ ವೀಡಿಯೋದಲ್ಲಿ ಸಮಂತಾ ಜಿಮ್‌ನಲ್ಲಿ 75 ಕೆಜಿ ತೂಕವನ್ನು ಡೆಡ್‌ಲಿಫ್ಟಿಂಗ್ ಮಾಡುತ್ತಿರುವುದನ್ನು ಕಾಣಬಹುದು. ಹಲೋ 75... ನಾನು ನಿನ್ನನ್ನು ಕಳೆದುಕೊಂಡಿದ್ದೇನೆ, ಎಂದು ಅವರು ವೀಡಿಯೊಗೆ ಶೀರ್ಷಿಕೆ ನೀಡಿದ್ದಾರೆ. ಅವರ ತರಬೇತುದಾರರನ್ನು ಸಹ ಟ್ಯಾಗ್ ಮಾಡಿದ್ದಾರೆ. ಕಪ್ಪು ಟೀಶರ್ಟ್‌ ಮತ್ತು ಬೂದು ಬಣ್ಣದ ಶಾರ್ಟ್ಸ್ ಧರಿಸಿರುವ ಸಮಂತಾ ತೂಕದ ಬಾರ್ಬೆಲ್ ಅನ್ನು ಡೆಡ್ಲಿಫ್ಟ್ ಮಾಡಲು ಸಿದ್ಧವಾಗುವುದರೊಂದಿಗೆ ವಿಡಿಯೋ ಪ್ರಾರಂಭವಾಗುತ್ತದೆ. ಅವರು ಪೋಸ್ಟ್‌ನಲ್ಲಿ 75 ಕೆಜಿಯೊಂದಿಗೆ ಎರಡು ಸೆಟ್‌ಗಳನ್ನು ಮಾಡುತ್ತಾರೆ.

ಎರಡನೇ ವೀಡಿಯೋದಲ್ಲಿ ಸಮಂತಾ 78 ಕೆ.ಜಿ ತೂಕವನ್ನು ಡೆಡ್‌ಲಿಫ್ಟಿಂಗ್ ಮಾಡುತ್ತಿರುವುದನ್ನು ಕಾಣಬಹುದು. ಅವರು ಅದಕ್ಕೆ ಶೀರ್ಷಿಕೆ ನೀಡಿ 'ಹ ಹ ಹ ನಾನು ಪ್ರತಿದಿನ ಏಳುತ್ತೇನೆ, ಜುನೈದ್ ಶೇಖ್, ನಿಮ್ಮನ್ನು ನಿರಾಶೆಗೊಳಿಸಲು ಬಯಸುವುದಿಲ್ಲ ಎಂದು ಬರೆದಿದ್ದಾರೆ. ನಟಿ ಎರಡು ಡೆಡ್‌ಲಿಫ್ಟ್ ಸೆಟ್‌ಗಳನ್ನು ಯಶಸ್ವಿಯಾಗಿ ಎತ್ತಿದ ನಂತರ, ತನ್ನ ತರಬೇತುದಾರನಿಗೆ ಹೈ-ಫೈವ್ ಮಾಡಿ ಸಂಭ್ರಮಿಸುತ್ತಾರೆ ಸಮಂತಾ.

ಕೊನೆಯದಾಗಿ, ಮೂರನೇ ವಿಡಿಯೋದಲ್ಲಿ ಸಮಂತಾ 80 ಕೆಜಿ ತೂಕದ ಬಾರ್ಬೆಲ್ ಅನ್ನು ಎತ್ತುತ್ತಿರುವುದನ್ನು ಕಾಣಬಹುದು. ಅವರು ನೃತ್ಯ ಮಾಡುವ ವಿನ್ನಿ-ದಿ-ಪೂಹ್ ಸ್ಟಿಕ್ಕರ್‌ನೊಂದಿಗೆ ಕಥೆಯನ್ನು ಹಂಚಿಕೊಂಡಿದ್ದಾರೆ. ಡೆಡ್‌ಲಿಫ್ಟ್‌ಗಳು ಹಿಪ್ ಎಕ್ಸ್‌ಟೆನ್ಸರ್‌ಗಳನ್ನು ಸಕ್ರಿಯಗೊಳಿಸಲು, ಬೆನ್ನು ನೋವನ್ನು ಕಡಿಮೆ ಮಾಡಲು, ಜಂಪ್ ಕಾರ್ಯಕ್ಷಮತೆಯನ್ನು ಸುಧಾರಿಸಲು, ಕೋರ್ ಅನ್ನು ಸ್ಥಿರಗೊಳಿಸಲು ಮತ್ತು ಒಬ್ಬರ ಚಯಾಪಚಯವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಇದು ಮೂಳೆಯ ಖನಿಜ ಸಾಂದ್ರತೆ ಮತ್ತು ಭಂಗಿಯನ್ನು ಸುಧಾರಿಸುತ್ತದೆ. ಕಾಲು ಮತ್ತು ಕೆಳ ಬೆನ್ನಿನ ಸ್ನಾಯುಗಳಿಗೆ ತರಬೇತಿ ನೀಡುತ್ತದೆ.