Asianet Suvarna News Asianet Suvarna News

35 ವರ್ಷ 35 ದಿನಗಳಂತೆ ಕಳೆದೋದ್ವು: ಸಲ್ಮಾನ್​ ಖಾನ್​ ಕುತೂಹಲದ ವಿಡಿಯೋ!

ನಟ ಸಲ್ಮಾನ್​ ಖಾನ್​ ಸಿನಿ ಇಂಡಸ್ಟ್ರಿಗೆ ಬಂದು 35 ವರ್ಷಗಳಾಗಿದ್ದು, ಈ ಸಂದರ್ಭದಲ್ಲಿ ಭಾವನಾತ್ಮಕ ವಿಡಿಯೋ ಶೇರ್​ ಮಾಡಿಕೊಂಡಿದ್ದಾರೆ. 

Salman shares video of films completes 35 years in bollywood suc
Author
First Published Aug 27, 2023, 5:44 PM IST | Last Updated Aug 27, 2023, 5:44 PM IST

ಸಲ್ಮಾನ್ ಖಾನ್ (Salman Khan) ಅವರು ಇನ್ನೊಂದೆರಡು ತಿಂಗಳಿನಲ್ಲಿ 58ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳಲಿದ್ದಾರೆ. 23ನೇ ವಯಸ್ಸಿಗೇ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟಿರೋ ಈಗ ದಬಾಂಗ್​ ಖಾನ್​, 35 ವರ್ಷಗಳನ್ನು ಬಿ -ಟೌನ್​ನಲ್ಲಿ ಕಳೆದಿದ್ದಾರೆ.  ಕಳೆದ 35 ವರ್ಷಗಳಿಂದ ಲಕ್ಷಾಂತರ ವೀಕ್ಷಕರನ್ನು ರಂಜಿಸಿದ್ದಾರೆ.  ಇತ್ತೀಚೆಗೆ, ಸಲ್ಮಾನ್ ಖಾನ್ ಅವರು ಉದ್ಯಮದಲ್ಲಿ 35 ವರ್ಷಗಳನ್ನು ಪೂರ್ಣಗೊಳಿಸಿದ ಹೃದಯ ಸ್ಪರ್ಶದ ವಿಡಿಯೋವನ್ನು  ಹಂಚಿಕೊಂಡಿದ್ದು,  ಅಭಿಮಾನಿಗಳು ಸಾಕಷ್ಟು ಪ್ರೀತಿಯನ್ನು ಹರಿಸುತ್ತಿದ್ದಾರೆ.  1988 ರಲ್ಲಿ, ಸಲ್ಮಾನ್ ಖಾನ್ 'ಬಿವಿ ಹೋ ತೋ ಐಸಿ' ಚಿತ್ರದ ಮೂಲಕ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಇಂದು 35 ವರ್ಷಗಳು ಕಳೆದರೂ ಭಾಯಿಜಾನ್‌ನ ಆಕರ್ಷಣೆ ಮಾತ್ರ ಕಡಿಮೆಯಾಗಿಲ್ಲ. ಇತ್ತೀಚೆಗೆ, ನಟ ಅಭಿಮಾನಿಗಳಿಗೆ ಧನ್ಯವಾದ ಹೇಳುವ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.

ಇಂಡಸ್ಟ್ರಿಯಲ್ಲಿ ಸಲ್ಮಾನ್ ಖಾನ್ ಅವರನ್ನು ‘ದಬಾಂಗ್’ ಎಂದೇ ಕರೆಯುತ್ತಾರೆ. ಅವರು ತಮ್ಮ ವೃತ್ತಿಜೀವನದಲ್ಲಿ ಅನೇಕ ಉತ್ತಮ ಚಿತ್ರಗಳನ್ನು ಮಾಡಿದ್ದಾರೆ. ಚಿತ್ರಗಳಲ್ಲಿ ಅವರ ಶಕ್ತಿಶಾಲಿ ಸಂಭಾಷಣೆಗಳು ಬೇರೆಯೇ ಆಗಿರುತ್ತವೆ. ಸಲ್ಮಾನ್ ಸಾಮಾಜಿಕ ಮಾಧ್ಯಮದಲ್ಲಿ (Social Media) ವೀಡಿಯೊವನ್ನು ಹಂಚಿಕೊಂಡಿದ್ದಾರೆ, ಇದು ಅವರ 35 ವರ್ಷಗಳ ವೃತ್ತಿಜೀವನವನ್ನು ಚೆನ್ನಾಗಿ ಪ್ರತಿಬಿಂಬಿಸುತ್ತದೆ. ವೀಡಿಯೋದಲ್ಲಿ ಸಲ್ಮಾನ್ ಅವರ ಪವರ್ ಫುಲ್ ದೃಶ್ಯಗಳ ಜೊತೆಗೆ ಅವರ ಎವರ್ ಗ್ರೀನ್ ಡೈಲಾಗ್ ಗಳು ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸುತ್ತದೆ.

ಸಲ್ಮಾನ್‌ ಖಾನ್‌ಗೂ ಮೊದಲೇ ಐಶ್ವರ್ಯಾ ರೈ ಲವ್ವಲ್ಲಿ ಬಿದ್ದಿದ್ದು ಇವ್ರ ಜೊತೆ!
 
ಈ ವಿಡಿಯೋವನ್ನು ಶೇರ್ ಮಾಡಿರುವ ಸಲ್ಮಾನ್ ಖಾನ್ ತಮ್ಮ ಅಭಿಮಾನಿಗಳಿಗೆ ತುಂಬಾ ಪ್ರೀತಿಯಿಂದ ಧನ್ಯವಾದ ಹೇಳಿದ್ದಾರೆ. '35 ವರ್ಷಗಳು 35 ದಿನಗಳಂತೆ ಕಳೆದವು. ನಿಮ್ಮ ಪ್ರೀತಿಗೆ ಧನ್ಯವಾದಗಳು' ಎಂದು ಅವರು ವಿಡಿಯೋದ ಶೀರ್ಷಿಕೆಯಲ್ಲಿ ಬರೆದಿದ್ದಾರೆ. ಸಲ್ಲು ಮಿಯಾನ್ ಅವರ ಈ ವೀಡಿಯೋ ನೋಡಿ ಅವರ ಅಭಿಮಾನಿಗಳು ತುಂಬಾ ಖುಷಿಪಟ್ಟಿದ್ದಾರೆ ಮತ್ತು ಅವರ ಮೇಲೆ ಸಾಕಷ್ಟು ಪ್ರೀತಿಯನ್ನು ಸುರಿಸುತ್ತಿದ್ದಾರೆ. ನಟನ ಈ ವಿಡಿಯೋ ಇಂಟರ್​ನೆಟ್​ನಲ್ಲಿ ವೈರಲ್ ಆಗಿದೆ.  ಸಲ್ಮಾನ್ ಖಾನ್ ಶೀಘ್ರದಲ್ಲೇ 'ಟೈಗರ್ 3' ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರವನ್ನು ಮನೀಶ್ ಶರ್ಮಾ ನಿರ್ದೇಶಿಸುತ್ತಿದ್ದಾರೆ. ಅವರು  ಕತ್ರಿನಾ ಕೈಫ್ ಅವರೊಂದಿಗೆ ಟೈಗರ್ ಆಗಿ ದೊಡ್ಡ ಪರದೆಯನ್ನು ರಾಕ್ ಮಾಡಲು ಸಿದ್ಧರಾಗಿದ್ದಾರೆ. ಯಶ್ ರಾಜ್ ಫಿಲ್ಮ್ಸ್ (Yash Raj films) ಬ್ಯಾನರ್ ಅಡಿಯಲ್ಲಿ ತಯಾರಾದ 'ಟೈಗರ್ 3 ರಿಲೀಸ್ ಡೇಟ್' ಇದೇ ನವೆಂಬರ್ 10 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಇಮ್ರಾನ್ ಹಶ್ಮಿ ಕೂಡ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿದ್ದಾರೆ.

ಸಲ್ಮಾನ್ ಖಾನ್ ಕೊನೆಯದಾಗಿ ಕಿಸಿ ಕಾ ಭಾಯ್ ಕಿಸಿ ಕಿ ಜಾನ್ (Kisi Ka Bhai Kisi Ki Jaan) ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಈ ವರ್ಷ ಏಪ್ರಿಲ್‌ನಲ್ಲಿ ಈ ಚಿತ್ರ ಬಿಡುಗಡೆಯಾಗಿತ್ತು. ಇತ್ತೀಚೆಗೆ, ಬಾಂಗ್ಲಾದೇಶದಲ್ಲಿ 'ಕಿಸಿ ಕಾ ಭಾಯಿ ಕಿಸಿ ಕಿ ಜಾನ್' ಬಿಡುಗಡೆಯಾಗಿದೆ. ಸಲ್ಮಾನ್ ಹೊರತಾಗಿ, ಪೂಜಾ ಹೆಗ್ಡೆ, ಶಹನಾಜ್ ಗಿಲ್, ಪಾಲಕ್ ತಿವಾರಿ, ಸಿದ್ಧಾರ್ಥ್ ನಿಗಮ್, ವೆಂಕಟೇಶ್ ದಗ್ಗುಬಾಟಿ, ಜಗಪತಿ ಬಾಬು, ಭೂಮಿಕಾ ಚಾವ್ಲಾ, ವಿಜೇಂದರ್ ಸಿಂಗ್, ಅಭಿಮನ್ಯು ಸಿಂಗ್, ರಾಘವ್ ಜುಯಲ್ ಮತ್ತು ಜಸ್ಸಿ ಗಿಲ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಜೈಲಿನಲ್ಲಿ ಟಾಯ್ಲೆಟ್​ಗೆ, ಟೀ ಕುಡಿಯಲು ಒಂದೇ ಮಗ್ ಬಳಸಿ, ಶೌಚಾಲಯ ಕ್ಲೀನ್​ ಮಾಡಿದ್ದ ಸಲ್ಮಾನ್​ ಖಾನ್!

Latest Videos
Follow Us:
Download App:
  • android
  • ios